Homeಮುಖಪುಟಚೀನಾ ಪಡೆಗಳಿಂದಲೇ ಪ್ರಚೋದನೆ- ಗಾಳಿಯಲ್ಲಿ ಗುಂಡು ಹಾರಿಸಿದ್ದವು: ಭಾರತದ ಪ್ರತ್ಯುತ್ತರ

ಚೀನಾ ಪಡೆಗಳಿಂದಲೇ ಪ್ರಚೋದನೆ- ಗಾಳಿಯಲ್ಲಿ ಗುಂಡು ಹಾರಿಸಿದ್ದವು: ಭಾರತದ ಪ್ರತ್ಯುತ್ತರ

ಉನ್ನತ ಮಟ್ಟದಲ್ಲಿ ರಾಜತಾಂತ್ರಿಕ ಮಾತುಕತೆಗಳು ಮುಂದುವರೆಯುತ್ತಿರುವ ಸಮಯದಲ್ಲಿಯೂ ಕೂಡ ಚೀನಾದ ಸೈನ್ಯವು ನಿರ್ದಯವಾಗಿ ಒಪ್ಪಂದಗಳನ್ನು ಉಲ್ಲಂಘಿಸುತ್ತಿದೆ ಎಂದು ಭಾರತ ದೂರಿದೆ. 

- Advertisement -
- Advertisement -

ಪೂರ್ವ ಲಡಾಖ್‌ನ ಪಾಂಗೋಂಗ್ ಸರೋವರದ ದಕ್ಷಿಣ ದಂಡೆಯ ನೈಜ ನಿಯಂತ್ರಣ ರೇಖೆ ದಾಟಿ ಭಾರತೀಯ ಸೇನೆಯು ಸೋಮವಾರ ರಾತ್ರಿ ಎಚ್ಚರಿಕೆಯ ಫೈರಿಂಗ್ ನಡೆಸಿದೆ ಎಂಬ ಚೀನಾದ ಆರೋಪವನ್ನು ಭಾರತ ತಳ್ಳಿಹಾಕಿದೆ. ಭಾರತದ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಹೆಸರು ತರಲು ಚೀನಾ ಪ್ರಯತ್ನಿಸುತ್ತಿದೆ ಎಂದು ಭಾರತ ಆರೋಪಿಸಿದೆ.

ಉನ್ನತ ಮಟ್ಟದಲ್ಲಿ ರಾಜತಾಂತ್ರಿಕ ಮಾತುಕತೆಗಳು ಮುಂದುವರೆಯುತ್ತಿರುವ ಸಮಯದಲ್ಲಿಯೂ ಕೂಡ ಚೀನಾದ ಸೈನ್ಯವು ನಿರ್ದಯವಾಗಿ ಒಪ್ಪಂದಗಳನ್ನು ಉಲ್ಲಂಘಿಸುತ್ತಿದೆ ಎಂದು ಭಾರತ ದೂರಿದೆ.

ಸೆಪ್ಟಂಬರ್ 7 ರಾತ್ರಿ ಚೀನಾದ ಸೈನ್ಯವು ಭಾರತದ ಸ್ಥಾನಗಳನ್ನು ಮುಚ್ಚಲು ಬೆದರಿಕೆಯೊಡ್ಡಿದೆ. ಗಾಳಿಯಲ್ಲಿ ಗುಮಡು ಹಾರಿಸುವ ಮೂಲಕ ಪ್ರಚೋದನೆ ನೀಡಿದೆ. ಆದರೂ ಭಾರತೀಯ ಪಡೆಗಳು ಸಂಯಮದಿಂದ ನಡೆದುಕೊಂಡಿವೆ. ಪ್ರಬುದ್ಧ ಮತ್ತು ಜವಾಬ್ದಾರಿಯುವ ನಡವಳಿಕೆಯ ಮೂಲಕ ಗಡಿ ಸಂಘರ್ಷ ಉಲ್ಬಣಗೊಳ್ಳದಂತೆ ಭಾರತದ ಪಡೆಗಳು ಎಚ್ಚರಿಕೆ ವಹಿಸಿದೆ ಎಂದು ಸರ್ಕಾರ ಹೇಳಿದೆ.

ಇದಕ್ಕೂ ಮೊದಲು ಚೀನಾ ಲಿಬರೇಷನ್ ಆರ್ಮಿಯ ಪಶ್ಚಿಮ ಕಮಾಂಡರ್ ಕರ್ನಲ್ ಝಾಂಗ್ ಸುಯಿಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ನೈಜ ನಿಯಂತ್ರಣ ರೇಖೆ ದಾಟಿ ಭಾರತದ ಪಡೆಗಳಿಂದ ಏಕಾಏಕಿ ದಾಳಿ ನಡೆಸಲಾಯಿತು. ಇದನ್ನು ತಡೆಯಲು ಚೀನಾ ಸಹ ಪ್ರತಿ ದಾಳಿ ನಡೆಸಿದೆ. ಭಾರತದ ನಡೆಯು ಗಡಿ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳುವ ಪರಸ್ಪರ ಒಪ್ಪಂದದ ಗಂಭೀರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದರು.

ಇದು ತೀವ್ರ ಗಂಭೀರ ನಡೆಯಾಗಿದೆ. ಈ ಕೂಡಲೇ ಭಾರತದ ಮುಂಚೂಣಿ ಪಡೆಗಳು ಹಿಂದೆ ಸರಿಯುವಂತೆ ನಿರ್ದೇಶನ ನೀಡಬೇಕೆಂದು ಭಾರತದ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಫೈರಿಂಗ್‌ಗೆ ಕಾರಣರಾದವರ ಮೇಲೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು. ಇದು ಮತ್ತೆ ಪುನಾರಾವರ್ತನೆ ಆಗದಂತೆ ತಡೆಯಬೇಕು ಎಂದು ಚೀನಾದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿತ್ತು.

ಮೇ ತಿಂಗಳಿನಲ್ಲಿ ಗಡಿ ಸಮಸ್ಯೆ ಉದ್ಬವವಾದಾಗಿನಿಂದ ಹಲವು ಮಾತುಕತೆಗಳು ನಡೆದರೂ ದೊಡ್ಡ ಮಟ್ಟದಲ್ಲಿ ಸೆಪ್ಟಂಬರ್ 5 ರಂದು ಮಾಸ್ಕೋದಲ್ಲಿ ನಡೆಸ ಶಾಂಘೈ ಸಹಕಾರ ಸಭೆಯಲ್ಲಿ ಭಾರತ ಚೀನಾ ಈ ಕುರಿತು ಮಾತುಕತೆ ನಡೆಸಿದ್ದವು. ಆದರೆ ಮೂರೇ ದಿನದಲ್ಲಿ ಮತ್ತೆ ಗಡಿ ಉದ್ವಿಗ್ನತೆ ಆರಂಭವಾಗಿದ್ದು ಆತಂಕ ಮೂಡಿಸಿದೆ.


ಇದನ್ನೂ ಓದಿ: ಪಾಂಗೋಂಗ್ ತ್ಸೋ ಎಲ್‌ಎಸಿ ಬಳಿ ಭಾರತದ ಪಡೆಗಳಿಂದ ಫೈರಿಂಗ್: ಚೀನಾ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ; ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು...