Homeಕರ್ನಾಟಕಸದಾಶಿವ ಆಯೋಗದ ವರದಿಗೆ ಅಲೆಮಾರಿಗಳ ವಿರೋಧವೆಂದು ಅಪಪ್ರಚಾರ: ಅನಂತ್ ನಾಯ್ಕ್ ಹೇಳಿಕೆಗೆ ಸಮುದಾಯದ ಮುಖಂಡರ ಸ್ಪಷ್ಟನೆ

ಸದಾಶಿವ ಆಯೋಗದ ವರದಿಗೆ ಅಲೆಮಾರಿಗಳ ವಿರೋಧವೆಂದು ಅಪಪ್ರಚಾರ: ಅನಂತ್ ನಾಯ್ಕ್ ಹೇಳಿಕೆಗೆ ಸಮುದಾಯದ ಮುಖಂಡರ ಸ್ಪಷ್ಟನೆ

- Advertisement -
- Advertisement -

ಜಸ್ಟಿಸ್ ಎ.ಜೆ.ಸದಾಶಿವ ಆಯೋಗದ ವರದಿ ಅನ್ವಯ ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ ಜಾರಿಗೊಳಿಸಬೇಕು ಎಂಬ ಹೋರಾಟ ತೀವ್ರವಾಗಿರುವ ಬೆನ್ನಲ್ಲೇ, ಈ ಆಯೋಗದ ವರದಿಯನ್ನು ಕೇಂದ್ರಕ್ಕೆ ತರಾತುರಿಯಲ್ಲಿ ಶಿಫಾರಸ್ಸು ಮಾಡಬಾರದೆಂದು ಒಂದು ವರ್ಗ ಆಗ್ರಹಿಸುತ್ತಿದೆ.

ಲಂಬಾಣಿ, ಬೋವಿ ಮುಖಂಡರು ಮುಂಚೂಣಿಯಲ್ಲಿರುವ ‘ಕರ್ನಾಟಕ ಮೀಸಲಾತಿ ಸಂರಕ್ಷಣ ಒಕ್ಕೂಟ’ವು ಆಯೋಗದ ವರದಿಯನ್ನು ವಿರೋಧಿಸಿ ಜನವರಿ 10ರಂದು ಬೆಂಗಳೂರಿನಲ್ಲಿ ಬೃಹತ್ ಹೋರಾಟವನ್ನೂ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ವಿಡಿಯೊ ಬಿಡುಗಡೆ ಮಾಡಿರುವ ಒಕ್ಕೂಟದ ಮುಖಂಡರಾದ ಅನಂತ್ ನಾಯ್ಕ್, “ನ್ಯಾಯಮೂರ್ತಿ ಸದಾಶಿವ ವರದಿಯಲ್ಲಿರುವ ಅವೈಜ್ಞಾನಿಕ, ಅವಾಸ್ತವಿಕ ಅಂಶಗಳನ್ನು ಸರ್ಕಾರ ಸಾರ್ವಜನಿಕವಾಗಿ ಚರ್ಚೆಗೆ ಒಳಪಡಿಸದೆ ಏಕಪಕ್ಷೀಯವಾಗಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂಬ ಷಡ್ಯಂತ್ರವನ್ನು ಮಾಡುತ್ತಿದೆ. ಇದರ ವಿರುದ್ಧ ಬಲವಾದಂತಹ ಹೋರಾಟವನ್ನು ಕಟ್ಟಬೇಕೆಂಬ ಕಾರಣಕ್ಕಾಗಿ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಲಂಬಾಣಿ, ಭೋವಿ, ಕೊರಚ, ಕೊರಮ, ಅಲೆಮಾರಿ, ಅರೆ ಅಲೆಮಾರಿ, ಹಂದಿಜೋಗಿ, ಶಿಳ್ಳೇಕ್ಯಾತ ಬೇಡ/ಬುಡ್ಗ ಜಂಗಮ ಈ ಸೂಕ್ಷ್ಮ ಸಮುದಾಯಗಳು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಾಗೂ ಸಂಕಲ್ಪ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ” ಎಂದಿದ್ದಾರೆ. ಇದಕ್ಕೆ ಅಲೆಮಾರಿ ಸಮುದಾಯದ ಮುಖಂಡರು ಟೀಕಿಸಿದ್ದಾರೆ.

ಬೇಡ/ಬುಡ್ಗ ಜಂಗಮ ಮತ್ತು ಸುಡುಗಾಡ ಸಿದ್ಧ ಸಮುದಾಯದ ರಾಜ್ಯ ಮುಖಂಡರಾದ ಮಾಂತೇಶ್ ಸಂಕಲ್ ಗಬ್ಬೂರ್ ಪ್ರತಿಕ್ರಿಯಿಸಿ ಅನಂತ್ ನಾಯ್ಕ್ ಅವರ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ.

“ಜಸ್ಟೀಸ್ ಸದಾಶಿವ ಆಯೋಗದ ವರದಿಯ ಪರ ಮತ್ತು ವಿರೋಧದ ಹೋರಾಟ ನಡೆಯುತ್ತಿದೆ. ಅಲೆಮಾರಿ ಸಮುದಾಯದಲ್ಲಿ ಬರುವ ಬೇಡ/ಬುಡ್ಗ ಜಂಗಮ ಮತ್ತು ಸುಡುಗಾಡು ಸಿದ್ಧಸಮುದಾಯ ಸದಾಶಿವ ಆಯೋಗದ ವರದಿ ವಿರೋಧಿಸಿ ಹೋರಾಟದಲ್ಲಿ ಭಾಗಿಯಾಗಲಿದೆ ಎಂದು ಮೀಸಲಾತಿ  ಸಂರಕ್ಷಣಾ ಸಮಿತಿಯ ಮುಖಂಡರಾದ ಅನಂತ್ ನಾಯ್ಕ್‌ ಹೇಳಿಕೆ ನೀಡಿದ್ದಾರೆ. ಸಮುದಾಯದ ಮುಖಂಡರೊಂದಿಗೆ ಯಾವುದೇ ಚರ್ಚೆಯನ್ನು ನಡೆಸದೆ ಮಾತನಾಡಿದ್ದಾರೆ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

“ಅಲೆಮಾರಿ ಸಮುದಾಯದವರಾದ ನಾವು ಒಳಮೀಸಲಾತಿಯನ್ನು ವಿರೋಧಿಸಿಲ್ಲ. ಸದಾಶಿವ ಆಯೋಗದ ವರದಿಗೆ ನಮ್ಮ ವಿರೋಧವಿಲ್ಲ. ಒಳಮೀಸಲಾತಿ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಒಳಮೀಸಲಾತಿ ವಿರೋಧಿ ಚಟುವಟಿಕೆಯಲ್ಲಿ ನಾವು ಯಾವತ್ತೂ ಭಾಗಿಯಾಗಿಲ್ಲ. ಅಲೆಮಾರಿ ಸಮುದಾಯಗಳಿಗೆ ಶೇ. 1ರಷ್ಟು ಮೀಸಲಾತಿಯನ್ನು ನೀಡಬೇಕೆಂದು ಸದಾಶಿವ ಆಯೋಗದ ವರದಿ ಹೇಳುತ್ತಿದೆ. ಅದರ ಪರವಾಗಿ ನಾವು ಇದ್ದೇವೆ. ದಲಿತ ಸಮುದಾಯದ ಸಹೋದರರ ಜೊತೆ ನಾವಿದ್ದೇವೆ. ಒಡೆದು ಆಳುವ ನೀತಿಯ ಭಾಗವಾಗಿ, ಅಲೆಮಾರಿಗಳ ಹೆಸರನ್ನು ಬಳಸಲಾಗುತ್ತಿದೆ. ಜನವರಿ 10ರಂದು ನಡೆಯುವ ಹೋರಾಟದಲ್ಲಿ ನಾವು ಯಾವುದೇ ಕಾರಣಕ್ಕೂ ಪಾಲ್ಗೊಳ್ಳುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

‘ನಾನುಗೌರಿ.ಕಾಂ’ ಜೊತೆಯಲ್ಲಿ ಅಲೆಮಾರಿ ಬೇಡ/ಬುಡ್ಗ ಜಂಗಮ ಸಮುದಾಯದ ಮುಖಂಡರಾದ ಶಿವರಾಜ್ ರುದ್ರಾಕ್ಷಿ ಮಾತನಾಡಿ, “ಸದಾಶಿವ ಆಯೋಗದ ವರದಿ ಜಾರಿಯಾದರೆ ಅಲೆಮಾರಿ ಸಮುದಾಯಕ್ಕೆ ಅನುಕೂಲವಾಗಲಿದೆ. ಶೇ.1ರಷ್ಟಿರುವ ಅಲೆಮಾರಿ ಸಮುದಾಯ ಅಭಿವೃದ್ಧಿಯಾಗಿಲ್ಲ. ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ನಮ್ಮ ಸಮುದಾಯದಿಂದ ಒಬ್ಬನೇ ಒಬ್ಬ ಎಂಎಲ್‌ಎ ಆಗಿಲ್ಲ, ಜಿಪಂ ಸದಸ್ಯನಾಗಿಲ್ಲ, ಉದ್ಯೋಗಗಳಂತೂ ಸಿಗುತ್ತಲೇ ಇಲ್ಲ. ಸದಾಶಿವ ಆಯೋಗದ ವರದಿ ಜಾರಿಯಾದರೆ ನಮ್ಮಲ್ಲಿ ಒಂದಿಷ್ಟು ಜನ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

“ನಮ್ಮ ಮಕ್ಕಳಿಗೆ ಶಿಕ್ಷಣ ಕನಸಿನ ಮಾತಾಗಿದೆ. ಶಿಕ್ಷಣವನ್ನು ಖಾಸಗೀಕರಣ ಮಾಡಿ, ನಮ್ಮ ಮಕ್ಕಳು ಓದಲು ಸಾಧ್ಯವಾಗುತ್ತಿಲ್ಲ. ಅಲೆಮಾರಿಗಳ ಸಮೀಕ್ಷೆ ನಡೆಸಿ ನಮಗೆ ಶೇ. 1ರಷ್ಟು ಮೀಸಲಾತಿಯನ್ನು ಆಯೋಗ ನೀಡಿದೆ. ಇದನ್ನು ಸ್ವಾಗತ ಮಾಡುತ್ತೇವೆ” ಎಂದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಅಲೆಮಾರಿ ಸಮುದಾಯಗಳಿಗೆ, ಹಾಗೂ ಬಹುಸಂಖ್ಯಾತ ಎಡಗೈ, ಬಲಗೈ ಸಮುದಾಯಕ್ಕೆ ನ್ಯಾಯ ಸಿಗುವುದು ಬಹುಶಃ ಕೊಲಂಬೊ ಸಮುದಾಗಳಿಗೆ ಇಷ್ಟವಿಲ್ಲ ಅನ್ನಸುತ್ತೇ ಇಷ್ಟುದಿನ ಬಲಗೈ ಸೋದರರನ್ನು ಕಣ್ಣಿಗೆ ಬಟ್ಟೆ ಕಟ್ಟಿರುವವರು ಅವರು ಎಚ್ಚರಿಕೆ ಗೊಂಡ ಕೂಡಲೇ ಅಲೆಮಾರಿ ಭುಜದ ಮೇಲೆ ಬೆಟ್ಟು ತೋರಿಸುವ ನೀಚತನ ಬಿಡ ಬೇಕು ಅಂಬೇಡ್ಕರ್ ರವರ ಆಶಯದಂತೆ ಸರ್ವರಿಗೂ ಸಮಾನ ಅವಕಾಶ ಸಿಗಲಿ, ಜೊತೆಗೆ ಕೊಲಂಬೊ ಸಮುದಾಯಗಳು ಎಷ್ಟು ಬಾರಿ ಅಂಬೇಡ್ಕರ್ ವಿಚಾರ ಧಾರೆಗಳಿಗೆ ಧಕ್ಕೆ ಬಂದಾಗ , ದಲಿತರ ಮೇಲೆ ದೌರ್ಜನ್ಯ, ಅತ್ಯಾಚಾರ ವೆಸಗಿದಾಗ, ಬಾಬಾ ಸಾಹೇಬರ ಸಿದ್ದಾಂತಗಳ ಪರ ಅದೆಷ್ಟು ಬಾರಿ ಬೀದಿಗಿಳಿದು ಹೋರಾಟ ಮಾಡಿದ್ದೀರಿ, ಮೀಸಲು ತೆಗೆಯುತ್ತೇವೆ, ಸಂವಿಧಾನ ಬದಲಾಯಿಸುತ್ತೇವೆ ಎಂದಾಗ ನೀವು ಎಷ್ಟು ಬಾರಿ ಎಷ್ಟು ಹೋರಾಟಗಳನ್ನು ಮಾಡಿದ್ದೀರಿ ನಿಯತ್ತಿನಿಂದ ಹೇಳಿ…
    ಸುಪ್ರೀಂ ಕೋರ್ಟ್ 2020ಫೆ 14 ರಂದು ನೀಡಿದ ತಿರ್ಪಿನಂತೆ ಸ್ಪೃಶ್ಯ ಜಾತಿಗಳನ್ನು ಎಸ್ಸಿ ಪಟ್ಟಿಯಿಂದ ತೆಗೆಯಿರಿ ಎಂದು ಹೇಳಿದಾಗ ನಾವು ಕೊಲಂಬೊ ಸಮುದಾಗಳು ನಮ್ಮ ಸೋದರ ಸಮುದಾಯಗಳು ಎಂದೂ ಸುಮ್ಮನೆ ಅದರ ಪರ ಧ್ವನಿ ಎತ್ತದಿರುವುದು ನಿಮ್ಮ ಈ ಉಪಟಳಕ್ಕೆ ಕಾರಣವಾಗಿರಬಹುದು.
    ಬಹುಸಂಖ್ಯಾತ ಎಡಗೈ ಬಲಗೈ ಅಸ್ಪೃಶ್ಯ ಸಮುದಾಗಳು ಇರುವಕಡೆ ಕೇವಲ ಐದರಿಂದ ಹತ್ತು ಸಾವಿರ ಜನ ಇರುವವರು ಅಧಿಕಾರ ಪಡೆದು ಅಸ್ಪೃಶ್ಯ ಸಮುದಾಗಳ ಪಾಲು ಕದ್ದು ತಿಂದು ಕೊಬ್ಬಿದವರಿಗೆ ಒಳ ಮೀಸಲಾತಿ ಯೇ ಸೂಕ್ತ ಉತ್ತರ……..
    ಶ್ರೀಕಾಂತ್ ಪಾವಗಡ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...