Homeಮುಖಪುಟದುಬೆ ಹತ್ಯೆ ಪ್ರಕರಣದ ತನಿಖಾ ತಂಡವನ್ನು ಅಂಗೀಕರಿಸಿದ ಸುಪ್ರೀಂ ಕೋರ್ಟ್

ದುಬೆ ಹತ್ಯೆ ಪ್ರಕರಣದ ತನಿಖಾ ತಂಡವನ್ನು ಅಂಗೀಕರಿಸಿದ ಸುಪ್ರೀಂ ಕೋರ್ಟ್

ಯುಪಿ ಸರ್ಕಾರ ಸೂಚಿಸಿದ ಹೆಸರುಗಳನ್ನು ಅನುಮೋದಿಸಿದ ಸುಪ್ರೀಂ ಕೋರ್ಟ್, ನಿವೃತ್ತ ನ್ಯಾಯಾಧೀಶ ಚೌಹಾನ್ ನೇತೃತ್ವದ ವಿಚಾರಣೆಯಲ್ಲಿ, ದುಬೆ ಅವರ ವಿರುದ್ಧದ 64 ಕ್ರಿಮಿನಲ್ ಪ್ರಕರಣಗಳ ಹೊರತಾಗಿಯೂ ಜಾಮೀನು ಅಥವಾ ಪೆರೋಲ್ ಪಡೆಯಲು ಹೇಗೆ ಸಾಧ್ಯವಾಯಿತು ಎಂಬುದನ್ನು ಪರಿಶೀಲಿಸಬೇಕು ಎಂದು ಹೇಳಿದೆ.

- Advertisement -
- Advertisement -

ದರೋಡೆಕೋರ ವಿಕಾಸ್ ದುಬೆ ಹತ್ಯೆ ಪ್ರಕರಣದ ತನಿಖೆಗಾಗಿ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಬಿ. ಎಸ್. ಚೌಹಾನ್ ಮತ್ತು ಮಾಜಿ ಡಿಜಿಪಿ ಕೆ. ಎಲ್. ಗುಪ್ತಾ ಅವರ ಹೆಸರನ್ನು ಶಿಫಾರಸು ಮಾಡುವ ಉತ್ತರ ಪ್ರದೇಶ ಸರ್ಕಾರ ಕರಡು ಅಧಿಸೂಚನೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಅಂಗೀಕರಿಸಿದೆ.

ಯುಪಿ ಸರ್ಕಾರ ಸೂಚಿಸಿದ ಹೆಸರುಗಳನ್ನು ಅನುಮೋದಿಸಿದ ಸುಪ್ರೀಂ ಕೋರ್ಟ್, ನಿವೃತ್ತ ನ್ಯಾಯಾಧೀಶ ಚೌಹಾನ್ ನೇತೃತ್ವದ ವಿಚಾರಣೆಯಲ್ಲಿ, ದುಬೆ ಅವರ ವಿರುದ್ಧದ 64 ಕ್ರಿಮಿನಲ್ ಪ್ರಕರಣಗಳ ಹೊರತಾಗಿಯೂ ಜಾಮೀನು ಅಥವಾ ಪೆರೋಲ್ ಪಡೆಯಲು ಹೇಗೆ ಸಾಧ್ಯವಾಯಿತು ಎಂಬುದನ್ನು ಪರಿಶೀಲಿಸಬೇಕು ಎಂದು ಹೇಳಿದೆ.

“ಇದನ್ನು ಏಕೈಕ ಪ್ರಮುಖ ಅಂಶವೆಂದು ನಾವು ಪರಿಗಣಿಸುತ್ತೇವೆ. ಈ ತನಿಖೆಯಲ್ಲಿ ರಾಜ್ಯ ಅಧಿಕಾರಿಗಳ ಪಾತ್ರವನ್ನು ಒಳಗೊಂಡಿರಬೇಕು” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೊಬ್ಡೆ ನೇತೃತ್ವದ ನ್ಯಾಯಮೂರ್ತಿಗಳು ಮತ್ತು ನ್ಯಾಯಮೂರ್ತಿಗಳಾದ ಎ. ಎಸ್. ಬೋಪಣ್ಣ ಮತ್ತು ವಿ. ರಾಮಸುಬ್ರಮಣ್ಯನ್ ಒಳಗೊಂಡ ನ್ಯಾಯಪೀಠವು ಹೇಳಿದೆ.

ದುಬೆ ಪ್ರಕರಣದ ಬಗ್ಗೆ ಇಂಡಿಯಾ ಟುಡೆ ಟಿವಿ ಚರ್ಚೆಯಲ್ಲಿ ತನಿಖಾ ತಂಡದ ಸಧಸ್ಯರಾದ ಮಾಜಿ ಡಿಜಿಪಿ ಗುಪ್ತಾ ಅವರನ್ನು ಕೇಳಿದಾಗ “ಒಮ್ಮೆ ನಾವು ವಿಚಾರಣೆಯ ಭಾಗವಾದ ನಂತರ, ನಾವು ಈ ಪ್ರಕ್ರಿಯೆಯ ಬಗ್ಗೆ ಹೆಚ್ಚು ಮಾತನಾಡಬಾರದು. ಈಗ ನಾವು ಹೆಚ್ಚು ಕೆಲಸ ಮಾಡಬೇಕು ಮತ್ತು ಕಡಿಮೆ ಮಾತನಾಡಬೇಕು. ನಾವು ವಿಚಾರಣೆಗೆ ವಸ್ತುನಿಷ್ಠ ಮತ್ತು ನ್ಯಾಯಯುತವಾಗಿರುತ್ತೇವೆ” ಎಂದು ಹೇಳಿದ್ದರು.

ಅಷ್ಟಾಗಿಯು ವಿಚಾರಣೆ ನಡೆಯಲಿದೆ ಮತ್ತು ಏನಾಯಿತು ಎಂದು ಪೊಲೀಸರು ವಿವರಿಸಬೇಕಾಗಿದೆ. ಪೊಲೀಸರು ಸರ್ವೋಚ್ಚ ಅಲ್ಲ ಎಂದು ಗುಪ್ತಾ ಹೇಳಿದ್ದಾರೆ. ಹಾಗೆಯೇ ದುಬೆ ತನಿಖಾ ಸಮಿತಿಗೆ ನೇಮಕ ಮಾಡುವ ಯಾವುದೇ ಲಿಖಿತ ಆದೇಶವನ್ನು ಇನ್ನೂ ಪಡೆದಿಲ್ಲ ಎಂದು ಹೇಳಿದ್ದಾರೆ.


ಇದನ್ನೂ ಓದಿ: ವಿಕಾಸ್ ದುಬೆ ಹತ್ಯೆ ತನಿಖೆಗೆ ವಿಶೇಷ ತಂಡ: ವಿವಾದಾತ್ಮಕ ಎನ್ ಕೌಂಟರ್ ಆರೋಪಿ ರವೀಂದರ್ ಗೌಡ್ ಸದಸ್ಯ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪೂಂಚ್‌ನ ನ್ಯಾಷನಲ್ ಕಾನ್ಫರೆನ್ಸ್‌ ರ‍್ಯಾಲಿಯಲ್ಲಿ ಚಾಕುವಿನಿಂದ ದಾಳಿ; 3 ಮಂದಿಗೆ ಗಾಯ

0
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾನುವಾರ ನ್ಯಾಚನಲ್ ಕಾನ್ಫರೆನ್ಸ್‌ ಪಕ್ಷದ ರೋಡ್ ಶೋ ವೇಳೆ ಅಪರಿಚಿತ ದುಷ್ಕರ್ಮಿಗಳ ಚಾಕು ದಾಳಿಯಲ್ಲಿ ಮೂವರು ಗಾಯಗೊಂಡಿದ್ದಾರೆ. ಮೆಂಧರ್ ಪ್ರದೇಶದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ...