ಕನಿಷ್ಠ ಕಚೇರಿಯನ್ನೂ ಕಟ್ಟಿಕೊಳ್ಳದೆ ಧರ್ಮಕಾರಣದ ಕೊಚ್ಚೆಯಲ್ಲಿ ನಿಂತು ಕಂಡ-ಕಂಡವರಿಗೆ ಸೆಡ್ಡು ಹೊಡೆದು ಕಿಚಾಯಿಸುವ ಕೇಂದ್ರದ ಪುಟಗೋಸಿ ಮಂತ್ರಿ ಅನಂತ್ಮಾಣಿ ಯಾನೆ ಅನಂತಕುಮಾರ್ ಹೆಗಡೆ ಮಂಗಾಟಕ್ಕೆ ಮರ್ಯಾದಸ್ಥರ್ಯಾರು ಪ್ರತಿಕ್ರಿಯಿಸಲು ಹೋಗುವುದಿಲ್ಲ. ಸಗಣಿ ಮೇಲೆ ಕಲ್ಲು ಎಸೆದರೆ ಅದು ತಮ್ಮ ಮೈಗೆ ಸಿಡಿಯುತ್ತದೆಂಬ ಹೇಸಿಗೆಯಿಂದ ಮಾಣಿ ಉಸಾಬರಿಗೆ ಯಾರೂ ಹೋಗುವುದಿಲ್ಲ. ಎದುರಾಳಿಗಳ ಸೌಜನ್ಯವನ್ನೇ ದೌರ್ಬಲ್ಯವೆಂದು ಅರ್ಥೈಸಿಕೊಂಡಿರುವ ಈ ಅರೆಶಿಕ್ಷಿತ  ಹುಂಬ ತನಗೆಲ್ಲರೂ ಹೆದರುತ್ತಾರೆಂದೇ ನಂಬಿಕೊಂಡಿದ್ದಾನೆ. ತಾನೊಬ್ಬ ಹಿಂದೂತ್ವದ ಪ್ರಶ್ನಾತೀತ ಉಗ್ರಪ್ರತಾಪಿ ಎಂಬ ಭ್ರಮೆಯಲ್ಲಿ ಅಟ್ಟಹಾಸಗೈಯ್ಯುತ್ತಿರುವ ಅನಂತ್ಮಾಣಿಗೆ ಅಷ್ಟೇ ಅಸಡ್ಡಾಳವಾಗಿ ಎಡವಟ್ಟು ಪುಢಾರಿ ಆನಂದ ಅಸ್ನೋಟಿಕರ್ ಕೆಣಕಿ ಸುದ್ದಿ-ಸದ್ದು ಮಾಡುತ್ತಿದ್ದಾನೆ. ಅಧಿಕ ಪ್ರಸಂಗಿ ಅನಂತ್ಮಾಣಿ ಮೇಲೆ ಏಕ್‍ದಮ್ ಅಸ್ನೋಟಿಕರ್ ಮುಗಿಬಿದ್ದಿರುವ ರಭಸಕ್ಕೆ ಉತ್ತರ ಕನ್ನಡ ರಾಜಕೀಯ ಪಡಸಾಲೆಯಲ್ಲಿ ಚಿತ್ರವಿಚಿತ್ರ ಕಂಪನಗಳು ಏಳತೊಡಗಿದೆ….
ಅನಂತ್ಮಾಣಿ ಹುಟ್ಟಿನಿಂದ ಹವ್ಯಕ ಬ್ರಾಹ್ಮಣ. ಆದರೆ, ಬ್ರಾಹ್ಮಣರ ಸಂಸ್ಕಾರ-ಸಂಸ್ಕøತಿ-ಸದಾಚಾರ-ಸೌಜನ್ಯ ಯಾವುದೂ ಈತನಲ್ಲಿ ಇಲ್ಲ. ಬ್ರಾಹ್ಮಣಿಕೆ ನಂಜು ಮೈತುಂಬಾ ತುಂಬಿಕೊಂಡಿರುವ ಈ ಮನುವಾದಿ ಮಾಣಿಗೆ ದಲಿತ ಅಂಬೇಡ್ಕರ್ ಬರೆದ ಸಂವಿಧಾನ ಕಂಡರಾಗದು. ಈ ಬುದ್ಧಿಗೇಡಿಯ ಎರಡು ದಶಕದ ಎಡಬಿಡಂಗಿ ರಾಜಕೀಯ, ಸಾಮಾಜಿಕ, sಸಾಂಸ್ಕøತಿಕ ಅಪಸತ್ಯ ಕಂಡಿರುವ ಉತ್ತರ ಕನ್ನಡಿಗರು ಆತನೊಬ್ಬ ಪಕ್ಕಾ ಆಶಾಢಭೂತಿ ಎಂದು ಖಾತ್ರಿಪಡಿಸಿಕೊಂಡಿದ್ದಾರೆ. ತಾನು ಹಿಂದೂ ಸಂರಕ್ಷ ಅಂತಾನೆ; ಎದುರಿಗೆ ಸಿಕ್ಕ ಹಿಂದೂ ಶಾಸಕ-ವೈದ್ಯ-ಅಧಿಕಾರಿ-ಜನಸಾಮಾನ್ಯ ಹೊಡೆದು ಬಡಿದು ಮೋಕಳಿಕ್ ಆಗ್ತಾನೆ!
ಸೂಟು-ಬೂಟು-ಬಂಗಾರ-ಸಿಂಗಾರ ತೊಟ್ಟುಕೊಟ್ಟು ಸನಾತನ ಪ್ರವಚನ ಬಿಗಿತಾನೆ. ಡಾರ್ವಿನ್ ಸಿದ್ಧಾಂತ, ನ್ಯೂಟನ್ ಲಾ, ಆಧುನಿಕ ತಂತ್ರಜ್ಞಾನ ಗೇಲಿ ಮಾಡುತ್ತಲೇ ವಾಚು-ಮೊಬೈಲು-ಐಷಾರಾಮಿ ವಾಹನದಲ್ಲಿ ಮಜಾ ಮಾಡ್ತಾನೆ. ಈ ಸ್ವಯಂಘೋಷಿತ ದೇಶಭಕ್ತ ದೇಶದ ಸಂಪತ್ತಾದ ಅಪಾರ ಅರಣ್ಯ ಕಬಳಿಸಿ ಅಡಿಕೆ ತೋಟ ಮಾಡಿಕೊಂಡಿದ್ದಾನೆ. ಇಸ್ಲಾಮ್-ಮುಸ್ಲಿಮರನ್ನು ಬಾಯಿಗೆಬಂದಂತೆ ಬೈಯುವ ಮಾಣಿ ಅರಬ್ ರಾಷ್ಟ್ರದ ಶುದ್ಧ ಸಾಬರೊಂದಿಗೆ ವ್ಯವಹಾರ ಕುದುರಿಸಿ ತನ್ನ “ಕದಂಬ” ಟ್ರಸ್ಟ್‍ನಿಂದ ಲೇವಾದೇವಿ ಮಾಡುತ್ತಾನೆ, ಸರ್ಕಾರದ ಸೌಲತ್ತಿಗೆ ಹಪಗುಡುವ ಈತ ಹೆಂಡತಿಯನ್ನೇ ಪಿಎ ಎಂದು ತೋರಿಸಿ ಸರ್ಕಾರಿ ಸಂಬಳ ತಿನ್ನುತ್ತಿದ್ದಾನೆ. ಇವತ್ತು ಕೋಟಿ ಕೋಟಿ ತೂಗುವ ಒಂದು ಕಾಲದ ಆರೆಸೆಸ್‍ನ ಬುತ್ತಿ ಮಾಣಿಯ ಹಿಂಸಾಚಾರದ ತಾಂಡವ ನೃತ್ಯವಂತೂ ಹೇಳತೀರದು.
ಇಂಥ ಇತಿಹಾಸ-ಭೂಗೋಳದ ಅನಂತ್ಮಾಣಿ ಐದು ಬಾರಿ ಲೋಕಸಭೆಗೆ ಆಯ್ಕೆಯಾದರೂ ಐದು ಬಿಲ್ಲಿ ಪ್ರಯೋಜನ ಉತ್ತರ ಕನ್ನಡಕ್ಕೆ ಆಗಿಲ್ಲ. ಈ ಖಾಲಿ ಬುರುಡೆಯ ಭೂಪನಲ್ಲಿ ಜಿಲ್ಲೆಯ ಅಭಿವೃದ್ಧಿಯ ಯಾವ ಕನಸು-ಕಲ್ಪನೆಯೂ ಇಲ್ಲ. ಈತ ಸಂಸದ-ಮಂತ್ರಿ ಆಗಿರುವುದೆಲ್ಲ “ಯೋಗ”ದಿಂದಲೇ ಹೊರತು ಯೋಗ್ಯತೆಯಿಂದಲ್ಲವೆಂದು ಬಿಜೆಪಿಗರೇ ಮೂಗು ಮುರಿಯುತ್ತಾರೆ. ಹಾಗಂತ ಮಾಣಿಯ ಧಗಾ, ಧೋಖಾಗಳ ಬಗ್ಗೆ ಬಿಜೆಪಿಯವರಷ್ಟೇ ಅಲ್ಲ, ವಿರೋಧ ಪಕ್ಷದ ಪರಾಕ್ರಮಿಗಳೂ ಸೊಲ್ಲೆತ್ತುತ್ತಿಲ್ಲ. ಮಾಣಿಯ ಗೂಂಡಾಗಿರಿ ಖದರಿಗೆ ಇಡೀ ಜಿಲ್ಲೆ ಕಂಗಾಲಾಗಿಕೂತಿದೆ. ಮೋದಿಮಾಮ ಮಾಣಿಗೆ ಮಂತ್ರಿ ಮಾಡಿರುವುದು ಮರ್ಕಟಕ್ಕೆ ಮದ್ಯ ಕುಡಿಸಿದಂತಾಗಿದೆ! ಈಗೀತನ ಬುರ್ನಾಸ್ ಬೊಬ್ಬೆ ಉತ್ತರ ಕನ್ನಡದ ಪರಿಧಿ ಮೀರಿ ರಾಜ್ಯ-ರಾಷ್ಟ್ರಮಟ್ಟಕ್ಕೆ ಮುಟ್ಟಿಬಿಟ್ಟಿದೆ.
ಗ್ರಾಮಪಂಚಾಯತಿ ಮೆಂಬರಿಕೆಗೂ ಅರ್ಹತೆಯಿಲ್ಲದ ಈ ಎಡಬಿಡಂಗಿ ಮುಖ್ಯಮಂತ್ರಿಗಿರಿ ಗುಂಗಿಗೆ ಬಿದ್ದು ಈ ನಾಡಿನ ಹಿರಿಯ-ಪ್ರಬುದ್ಧ ರಾಜಕಾರÀಣಿ ಸಿದ್ದರಾಮಯ್ಯರಿಗೆ ಬಾಯಿಗೆ ಬಂದಂತೆ ಬೈದು ತೀಟೆ ತೀರಿಸಿಕೊಂಡಿದ್ದ. ಬೇವರ್ಸಿ-ಬಿಕನಾಸಿ-ರಾಕ್ಷಸ-ಪಾಪದ ಪಿಂಡ-ಸಾಬರ ಬೂಟು ನೆಕ್ಕೋನು…… ಮುಂತಾದ ಅಣಿಮುತ್ತು ಈ ಪವಿತ್ರ ಹಿಂದೂ ಧರ್ಮದ ಹರಿಕರನ ಬಾಯಿಂದ ಪುಂಖಾನು ಪುಂಖವಾಗಿ ಉದುರಿತ್ತು. ಸಂವಿಧಾನ ಬದಲಿಸಲಿಕ್ಕೆ ಬಿಜೆಪಿ ಅಧಿಕಾರಕ್ಕೆ ಎಂದು ಹಾರಾಡಿದ್ದ ಅನಂತ್ಮಾಣಿ  ಲೆಕ್ಕದಲ್ಲಿ ಜಾತ್ಯತೀತರೆಂದರೆ ಅಪ್ಪ-ಅಮ್ಮ ಇಲ್ಲದೋರು; ಸಾಹಿತಿ-ಬುದ್ಧಿಜೀವಿಗಳೆಂದರೆ ಗಂಜಿ ಗಿರಾಕಿಗಳು. ಮಂತ್ರಿಯಾಗಿ ಜಿಲ್ಲೆಗೆ ಬಂದ ಮೊದಲದಿನವೇ “ಮಾಧ್ಯಮದವರು ನಂದೇನು ಹರ್ಕೋತಾರೋ ನಾನೂ ನೋಡ್ತೇನೆ” ಎಂದು ಅಸಹ್ಯ ಹಾವ-ಭಾವದಿಂದ ಸಭಾವೇದಿಕೆಯಲ್ಲಿ ಸ್ವಯಂಪ್ರೇರಿತವಾಗಿ ಎಗರಾಡಿದ್ದಾನೆ. ಈತನ ಅಶ್ಲೀಲ ಮಾತು ಕೇಳಿ ಅಲ್ಲಿದ್ದ ಅಸಂಖ್ಯ ಮಹಿಳಾ ಬಿಜೆಪಿ ಕಾರ್ಯಕರ್ತೆಯರು ನಾಚಿ ತಲೆತಗ್ಗಿಸಿ ಹಣೆ ಹಣೆ ಚಚ್ಚಿಕೊಂಡಿದ್ದಾರೆ. ತೀರಾ ಮೊನ್ನೆ ಮೊನ್ನೆ ಶಿರಸಿಯಲ್ಲಿ ಗ್ರಾಪಂ ಸದಸ್ಯೆಯೊಬ್ಬರು ಸಾರ್ವಜನಿಕ ಕೆಲಸಕ್ಕೆ ಬೇಡಿಕೆ ಇಟ್ಟಾಗ “ನಿಮ್ಮ ಎಮ್ಮೆಲ್ಲೆ ಸತ್ತÀು ಹೋಗಿದ್ದಾನಾ?” ಎಂದು ಬೈದಾಡಿದ್ದಾನೆ. ಮಜಾ ಎಂದರೆ, ಈತ ಅಪಮಾನಿಸಿದ್ದು ಸ್ವ-ಪಕ್ಷದ ಕಾಗೇರಿಯನ್ನು ಮನಸ್ಸಿನಲ್ಲಿಟ್ಟುಕೊಂಡಾಗಿತ್ತು; ಆದರೆ ತಾಗಿದ್ದು ಕಾಂಗ್ರೆಸ್ ಶಾಸಕ ಹೆಬ್ಬಾರ್‍ಗೆ!!
ಅನಂತ್ಮಾಣಿಯ ಅನಾಗರಿಕ ಶಬ್ದಭಂಡಾರ ಯಥಾವತ್ ಇಲ್ಲಿ ಬರೆದಿದ್ದಕ್ಕೆ ಓದುಗರ ಕ್ಷಮೆಯಿರಲಿ. ಮೋದಿ ಮಾಮನ ಛೋಟಾ ಮಂತ್ರಿಯ ಪಾತ್ರ ಪರಿಚಯ ಮಾಡಲು ಆತನ ಅಸಲಿ ಮಾತುಗಾರಿಕೆ ದಾಖಲಿಸಬೇಕಾಗಿಬಂದಿದ್ದು ನಮ್ಮ ಅನಿವಾರ್ಯ ಕರ್ಮವಷ್ಟೇ. ಅನಂತ್ಮಾಣಿಯ ದುರಾಚಾರ-ದುರಹಂಕಾರ-ಮತಾಂಧ ಮಸಲತ್ತು-ಗಲೀಜು ಬಾಷೆ-ಭಾಷನಕ್ಕೆ ಲಗಾಮು ಹಾಕುವವರೇ ಇಲ್ಲವೆಂಬಂಥ ಅಸಹಾಯಕ ಪರಿಸ್ಥಿತಿಯಲ್ಲಿ ಕಾರವಾರದ ಮಾಜಿ ಶಾಸಕ ಆನಂದ ಅಸ್ನೋಟಿಕರ್ ತಿರುಗಿಬಿದ್ದಿರುವುದು ಜಿಲ್ಲೆಯ ಜನರಲ್ಲಿ ಒಂಥರಾ ರೋಮಾಂಚನ ಮೂಡಿಸಿದೆ! ಅನಂತ್‍ಮಾಣಿಯ ಶೈಲಿಯಲ್ಲೇ ಅಸ್ನೋಟಿಕರ್ ಆತನ ಜನ್ಮ ಜಾಲಾಡಿದ್ದಾರೆ. ಆತ ಬಳಸಿರುವ ಕೆಲವು ಪದಪುಂಜಗಳು ಸರಿಯಿಲ್ಲ ನಿಜ. ಆದರೆ ಕತ್ತೆಗೆ ಲತ್ತೆ ಪೆಟ್ಟೇ ಯೋಗ್ಯವೆಂದು ಜಿಲ್ಲೆಯ ಜನರು ಅಸ್ನೋಟಿಕರ್‍ನ ಬೈಗುಳ ದಾಳಿಯಿಂದ ಮಜಾ ತಗೋತಿದ್ದಾರೆ.
ಮೂರುದಿನದಂತರದಲ್ಲಿ ಎರಡೆರಡು ಪತ್ರಿಕಾಗೋಷ್ಠಿ ಕರೆದು ಅಸ್ನೋಟಿಕರ್ ಮಂತ್ರಿ ಅನಂತ್ಮಾಣಿ ಮೇಲೆ ಮಾಡಿರುವ ಟೀಕೆ-ಆರೋಪಗಳಲ್ಲಿ ಶೇಕಡಾ ತೊಂಬತ್ತೊಂಭತ್ತು ಸರಿ ಮತ್ತು ಸತ್ಯ. ಒಂದು ಪರ್ಸೆಂಟ್ ತಪ್ಪಿರುವುದು ಆತ ಪ್ರಯೋಗಿಸಿರುವ ಒಂದೆರಡು ಪದಗಳಷ್ಟೇ. ಆನಂದ್ ಎಬ್ಬಿಸಿರುವ ಪುಕಾರೆಲ್ಲ ಜಿಲ್ಲೆಯ ಒಳಗಿನ ಹೊರಗಿನ ಮಂದಿಗೆಲ್ಲ ಗೊತ್ತಿರುವ ಪರಮಸತ್ಯವೇ. ಆದರೆ ಇದನ್ನು ಬಹಿರಂಗವಾಗಿ ಹೇಳುವ ತಾಕತ್ತು ಯಾರೂ ಈವರೆಗೆ ಮಾಡಿರಲಿಲ್ಲ. ಹಾಗಂತ “ಗೌರಿ ಲಂಕೇಶ್” ಪತ್ರಿಕೆ ಮಾತ್ರ ಅನಂತನ ಈ ಅನಾಹುತಕಾರಿ ಅವಾಂತರದ ಬಗ್ಗೆ ಆಗಾಗ ಬರೆಯುತ್ತಲೇ ಇತ್ತು. ಆಗ ಯಾರೂ ಎಚ್ಚೆತ್ತಿರಲಿಲ್ಲ. ಈಗ ಅಸ್ನೋಟಿಕರ್ ಧೈರ್ಯ ಪ್ರದರ್ಶಿಸಿ ಪ್ರಶಂಸೆಗೆ ಪಾತ್ರನಾಗಿದ್ದಾನೆ.
ಹಿಂದುಳಿದ ವರ್ಗದ ಬಗೆಗಿನ ಕಳಕಳಿ, ಧರ್ಮ ಸಹಿಷ್ಣುತೆಯ ಕಾಳಜಿಯ ಲೇಪದೊಂದಿಗೆ ಆನಂದ್ ಅಸ್ನೋಟಿಕರ್ ಅನಂತ್ಮಾಣಿಗೆ ಕೊಟ್ಟಿರುವ ಒಂದೊಂದು ಏಟು ಮುಟ್ಟಿನೋಡಿಕೊಳ್ಳುವಷ್ಟು ಬಿರುಸಾಗಿದೆ. ಕಳೆದ ಎಂಟೊಂಬತ್ತು ವರ್ಷ ಬಿಜೆಪಿಯಲ್ಲಿದ್ದ ಅಸ್ನೋಟಿಕರ್ ಅನಂತ್ಮಾಣಿಯ ದಾದಾಗಿರಿ-ದಗಲ್ಬಾಜಿ ಹತ್ತಿರದಿಂದ ಕಂಡವನು. ಹಾಗಾಗಿ ಆತನ ಮಾತಿಗೀಗ ವಿಶೇಷ ಅರ್ಥ ಬಂದುಬಿಟ್ಟಿದೆ. ಇಪ್ಪತ್ತು ವರ್ಷ ಸಂಸದನಾಗಿದ್ದರೂ ಅನಂತ್ಮಾಣಿ ಜಿಲ್ಲೆಯ ಯಾವ ಸಮಸ್ಯೆ ಪರಿಹಾರಕ್ಕೂ ಪ್ರಯತ್ನಿಸದ ನಾಲಾಯಕ್. ಮುಸ್ಲಿಮರ ಬಗ್ಗೆ ದ್ವೇಷದ ಮಾತಾಡುವ ಈತ ನೀಚ. ಮಂತ್ರಿಯಾಗಿದ್ದ ಕಾಗೇರಿಗೆ ಬಿಜೆಪಿ ಕಚೇರಿಯಲ್ಲೇ ಚಪ್ಪಲಿಯಿಂದ ಹೊಡೆದಿದ್ದ ಈ ಅನಂತ್ಮಾಣಿ ಶಿರಸಿಯ ಡಾಕ್ಟರ್‍ಗಳಿಗೆ ಹೊಡೆದು ರಕ್ತ ಹರಿಸಿದ ಲೋಫರ್. ಹಿಂದೂತ್ವದ ಮತ ದೃವೀಕರಣ ಬಿಟ್ಟರೆ ಈತನಿಗೆ ಬೇರೇನೂ ಗೊತ್ತಿಲ್ಲ. ಸಂಸದ ನಿಧಿಯನ್ನು ಬಳಸಲು ಬಾರದ ಈತ ಪರಮ ನೀಚ. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಯಾರೋ ಭಗವಾಧ್ವಜ ಹಾರಿಸಿದರೆ, ಅದು ತಾನೆ ಹಾರಿಸಿದ್ದೆಂದು ಅರೆಸೆಸ್‍ನವರಿಗೆ ಯಾಮಾರಿಸಿ ಸಂಸದ ಆಗುತ್ತಿದ್ದಾನೆ [ಸುರತ್ಕಲ್‍ನ ಹಿಂದುಳಿದ ಬಿಲ್ಲವ ಸಮುದಾಯದ ಸತ್ಯಜಿತ್ ಈದ್ಗಾದಲ್ಲಿ ಕೆಸರಿದ್ವಜ ಹಾರಿಸಿದ್ದೆಂಬುದು ಸಂಘಪರಿವಾರದ ರಹಸ್ಯ ಸತ್ಯ]. ಬಿಜೆಪಿಯಲ್ಲೇ ಅನಂತ್ಹೆಗ್ಡೆ ಬಗ್ಗೆ ಸದಾಭಿಪ್ರಾಯವಿಲ್ಲ. ಮುಂದಿನ ಲೋಕಸಭೆ ಎಲೆಕ್ಷನ್‍ನಲ್ಲಿ ಹಿಂದುಳಿದವರ ದಾರಿ ತಪ್ಪಿಸುತ್ತಿರುವ ಅನಂತ ಹೆಗಡೆಯನ್ನು ಸೋಲಿಸಬೇಕು….. ಹೀಗೆ ಒಂದೇಸಮನೆ ಅಸ್ನೋಟಿಕರ್ ಒದರುತ್ತಾ ಮಾಣಿ ಬಣ್ಣ ಬಯಲಾಗಿಸಿದ್ದಾನೆ.
ನಾಲಾಯಕ್, ನೀಚ, ಲೋಫರ್, ನಿಷ್ಪ್ರಯೋಜಕ, ದೇಶ ಒಡೆಯುವ ಮತಾಂಧನೇ ಮುಂತಾದ ವಿಶೇಷಣಗಳಿಂದ ಅಸ್ನೋಟಿಕರ್ ಅನಂತ್ಮಾಣಿಯನ್ನು ಅಲಂಕರಿಸಿದ್ದೇ ತಡ, ಆತ ಒಂದಿಷ್ಟು ಬುದ್ಧಿಗೇಡಿ ಚೇಲಾಗಳು ಕೌಂಟರ್ ಪತ್ರಿಕಾಗೋಷ್ಠಿ ನಡೆಸಿ ಬಾಸ್‍ಗಾದ ಕ್ಯಾಮೇಜು ಕಂಟ್ರೋಲ್‍ಗೆ ತಿಪ್ಪರಲಾಗಹಾಕಿದರು. ಆನಂದ ಅಸ್ನೋಟಿಕರ್ ಕ್ಷಮೆ ಕೇಳಬೇಕೆಂದು ಬೊಬ್ಬಿರಿದರು. ಅತನ ವೈಯಕ್ತಿಕ ಚಾರಿತ್ರ್ಯ ಕೆದಕಿದರು. ಹಳಿಯೋದ ಮಾಜಿ ಶಾಸಕ ಸುನೀಲ್ ಹೆಗಡೆ ಮತ್ತು ಕುಮಟಾದ ನವಚೆಡ್ಡಿ ಶಾಸಕ ದಿನಕರ ಶೆಟ್ಟಿ ಆನಂದನನ್ನು “ಪರಮನೀಚ” ಎಂದರು. ಗೋವಾ ಕ್ಯಾಸಿನೋ ಜೂಜು ಅಡ್ಡೆಯಲ್ಲಿ ಬೌನ್ಸರ್‍ಗಳಿಂದ ಇಕ್ಕಿಸಿಕೊಂಡವನೆಂದು ಜರಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಪೆದ್ದು ಕೆ.ಜಿ.ನಾಯ್ಕ ಅಸ್ನೊಟಿಕರ್ ಅನಂತ ಸಹೇಬರ ಕ್ಷಮೆ ಕೆಳದಿದ್ರೆ ಪ್ರತಿಭಟನೆ ಮಾಡ್ತೇವೆ ಎಂದು ಭೋಂಗು ಬಿಟ್ಟ.
ಬಿಜೆಪಿ ಭಟ್ಟಂಗಿಗಳ ಹೇಳಿಕೆ-ಮೂದಲಿಕೆ ಕೇಳಿದ್ದೇ ತಡ, ಅಸ್ನೋಟಿಕರ್ ಕೆರಳಿ ಮತ್ತೆ ಪತ್ರಿಕಾಗೊಷ್ಠಿ ಕರೆದು ಅನಂತ್ಮಾಣಿ ಅಳಿದುಳಿದ ಮಾನವನ್ನೂ ಹರಾಜು ಹಾಕಿಬಿಟ್ಟ! ತಾನು ಅನಂತ್ಮಾಣಿ ಬಗ್ಗೆ ಆಡಿದ ಪ್ರತಿ ಮಾತಿಗೂ ಬದ್ಧನಾಗಿದ್ದೇನೆ. ಕ್ಷಮೆ ಕೇಳುವ ಪ್ರಮೇಯವೇ ಇಲ್ಲ, ಸಂವಿಧಾನ ಬದಲಿಸಬೇಕು, ಸಾಹಿತಿಗಳು-ಬುದ್ಧಿಜೀವಿಗಳು ಗಂಜಿಗಿರಾಕಿಗಳು, ಜಾತ್ಯತೀತರಿಗೆ ಅಪ್ಪ-ಅಮ್ಮ ಇಲ್ಲವೆಂದ ಅನಂತ್ಮಾಣಿಗೆ ಏನೆನ್ನಬೇಕು? ಸಂವಿಧಾನ ಬದಲಿಸಬೇಕು ಎಂದಿರುವ ಕೇಂದ್ರ ಮಂತ್ರಿ ಮಾಣಿ ನೀಚನಲ್ಲವಾ? ಲೋಕಸಭೆ ಎಲೆಕ್ಷನ್ ಹತ್ತಿರ ಬರುತ್ತಿದೆ ಅನಂತ್ಮಾಣಿ ಮುಸ್ಮಿಮರ ಮತ ಬೇಡವೆಂದು ಹೇಳಿ ಹಿಂದೂಗಳ ಕೆರಳಿಸಿ ಓಟು ಪಡೆಯುವ ಹಿಕಮತ್ತು ಮಾಡೋದಿದೆ. ಹಿಂದೂತ್ವದ ಹೆಸರಿನಲ್ಲಿ ಸಮಾಜ ಒಡೆಯುವ ಈತ ಬ್ರಿಟಿಷರಿಗಿಂತ ಕಡೆ. ಮುಸ್ಲಿಮರನ್ನು ದೇಶದಿಂದ ಹೊರಹಾಕಬೇಕೆನ್ನುವ ಅನಮತ್ಮಾಣಿ ಅದ್ಯಾಕೆ ಮುಸ್ಲಿಮರ ದೇಶ ಇರಾನ್‍ದಿಂದ ಬಿಟಮಿನ್ ಮತ್ತು ಆಸ್ಪಾಲ್ಟ್(ಡಾಂಬರ್) ತರಿಸಿ ದಂಧೆ ಮಾಡ್ತಾರೆ? ಎಂಪಿ ಫಂಡ್ ಸರಿಯಾಗಿ ವಿನಿಯೋಗಿಸದ-ಸಮಸದ ಕರ್ತವ್ಯ ನಿಭಾಯಿಸಲಾಗದ ಅನಂತ್ಮಾಣಿ ಸೀಬರ್ಡ್ ಸಮಸ್ಯೆ ಬಗ್ಗೆ ಎಂದೂ ಬಾಯಿಬಿಟ್ಟಿದ್ದೇ ಇಲ್ಲ. ಕೈಗಾ ಅಣುಸ್ಥಾವರದಲ್ಲಿ ಯುವಕರಿಗೆ ನೌಕರಿ ಕೊಡಿಸಲು ಪ್ರಯತ್ನಿಸಲಿಲ್ಲ. ಈ ಚುನಾವಣೆ ಎದುರಾಗಿರುವುದರಿಂದ ಪ್ರಗತಿ ಪರಿಶೀಲನೆ ನಾಟಕ ನಡೆಸಿದ್ದಾನೆ. ಕಾರವಾರ ಮೂಲದ ವಕೀಲರೊಬ್ಬರ ನ್ಯಾಯಾಂಗ ಹೋರಾಟದಿಂದ ಸೀಬರ್ಡ್ ನಿರಾಶ್ರಿತರಿಗೆ ಹೆಚ್ಚಿನ ಪರಿಹಾರ ಸಿಕ್ಕಿದೆ. ಇದು ತನ್ನ ಪ್ರಯತ್ನ ಎಂದು ಹೇಳುವ ಅನಂತ್ಮಾಣಿ ನಾಲಾಯಕ್ ಅಲ್ಲವಾ? ಎಂದು ಅಸ್ನೋಟಿಕರ್ ಗೆರಿಲ್ಲಾ ದಾಳಿ ಚಡ್ಡಿ ಬಳಗದ ಮೇಲೆ ಮಾಡಿದ್ದಾನೆ.
ನಾನು ಹೋಗಿದ್ದು ಗೋವಾದ ಕ್ಯಾಸಿನೋ ಅಡ್ಡೆಗೆ ಕುಮುಟಾದ ದಿನಕರಶೆಟ್ಟಿ-ಹಳಿಯಾಳದ ಸುನಿಲ್ ಹೆಗಡೆ ಸಂಸಾರದ ಸಮೇತ ಬಂದಿದ್ದರು. ಡ್ಯಾನ್ಸ್ ಮಾಡುತ್ತಿದ್ದರು. ಹಾಗಾಗಿ ಅವರಿಗೆ ಬೌನ್ಸರ್‍ಗಳು ನಂಗೆ ಹೊಡಿಲಿಕ್ಕೆ ಬಂದಿದ್ದು ಗೊತ್ತಾಗಿದೆ. ಪಾಪ ಅವರೇ ನಂಗೆ ಹೊಡೆತ ಬೀಳದಂತೆ ತಡೆದರು ಎಂದು ಮುದಲಿಸಿರುವ ಅಸ್ನೋಟಿಕರ್ ಆರ್ಭಟಕ್ಕೆ ಅನಂತ್ಮಾಣಿ ಮತ್ತವನ ಬಳಗ ಕಕ್ಕಾಬಿಕ್ಕಿಯಾಗಿ ಕಣ್‍ಕಣ್ ಬಿಡುತ್ತಿದೆ. ಮೆರೆದವರು ಉರಿದು ಬೀಳಲೇಬೇಕೆಂಬುದು ನೈಸರ್ಗಿಕ ನ್ಯಾಯತತ್ವ! ಅನಾಹುತಕಾರಿ ಅನಂತ್ಮಾಣಿ ಅವಸಾನ ಅಸ್ನೋಟಿಕರ್ ಮೂಲಕ ಆರಂಭವಾಯ್ತಾ? ಇಂಥದೊಂದು ಜಿಜ್ಞಾಸೆ ಈಗ ಶುರುವಾಗಿದೆ.
ಅಸ್ನೋಟಿಕರ್ ಅನಂತ್ಮಾಣಿ ಬಾಲಕ್ಕೆ ಬೆಂಕಿ ಹಚ್ಚಲು ಬಂದು ಸ್ವ-ಹಿತಾಸಕ್ತಿಯ ಕಾರಣವೂ ಇದೆ. ಕಳೆದ ಅಸೆಂಬ್ಲಿ ಇಲೆಕ್ಷನ್ ವೇಳೆ ಕಾರವಾರದಲ್ಲಿ ಬಿಜೆಪಿ ಕ್ಯಾಂಡಿಡೇಟಾಗಲು ಹವಣಿಸಿದ್ದ ಅಸ್ನೋಟಿಕರ್‍ಗೆ ಅಡಿಗಡಿಗೆ ಅಡೆತಡೆ ಮಾಣಿ ಹಾಕಿದ್ದ. ಅಸ್ನೋಟಿಕರ್ ನಾಗಪುರದ ಅರೆಸ್ಸೆÉಸ್ ಅಡ್ಡೆಯಿಂದ ಯಡ್ಡಿ-ಈಶ್ವರಪ್ಪರ ಅಂಗಳದ ತನÀಕ, ಅಲ್ಲಿಂದ ಕೇಂದ್ರ ಮಂತ್ರಿ ಗಡ್ಕರಿ ಸನ್ನಿಧಿವರೆಗೆ ಅಲೆದಾಡಿದ್ದರೂ ಅನಂತ್ಮಾಣಿ ಆತ ಬಿಜೆಪಿ ನುಸುಳದಂತೆ ನೋಡಿಕೊಂಡಿದ್ದ. ಈ ಸಿಟ್ಟಿನಿಂದ ಅಸ್ನೋಟಿಕರ್ ಬೆಂಕಿಯಾಗಿದ್ದಾನೆ. ಆದರೆ ಒಂದಂತೂ ಖರೆ; ಅಸ್ನೋಟಿಕರ್ ಬಳಸಿದ ಕೆಲವು ಕೆಟ್ಟ ಶಬ್ದ ಬಿಟ್ಟರೆ, ಆತ ಪ್ರಸ್ತಾಪಿಸಿರುವ ಸಂಗತಿಗಳೆಲ್ಲ ಯಾವುದೂ ಸುಳ್ಳಿಲ್ಲ. ಢೋಂಗಿ ದೇಶಭಕ್ತ ಅನಂತ್ಮಾಣಿಯ ಮುಖವಾಡ ಹರಿದುಹಾಕಿರುವ ಅಸ್ನೋಟಿಕರ್ ಆತನ ಅಸಲಿ ಅವತಾರ ತೋರಿಸಿದ್ದಾನೆ.
ಇದು ಸಂಘಪರಿವಾರದ ಕಣ್ಕಟ್ಟಿಗೆ ಮರುಳಾಗಿ ಹಿಂದೂತ್ವದ ಕಾಲಾಳಾಗಿರುವ ಶೂದ್ರರ ಕಣ್ಣು ತೆರೆಸೀತಾ? ಚಿಂತನೆಗೆ ಹಚ್ಚೀತಾ?
– ವರದಿಗಾರ

LEAVE A REPLY

Please enter your comment!
Please enter your name here