Homeಮುಖಪುಟಗಂಭೀರ ಸವಾಲುಗಳತ್ತ ದೃಷ್ಟಿಹರಿಸದ ಬಜೆಟ್

ಗಂಭೀರ ಸವಾಲುಗಳತ್ತ ದೃಷ್ಟಿಹರಿಸದ ಬಜೆಟ್

- Advertisement -
- Advertisement -

| ಪ್ರಭಾತ್ ಪಟ್ನಾಯಕ್ |
ವಿಶ್ರಾಂತ ಅರ್ಥಶಾಸ್ತ್ರ ಪ್ರಾಧ್ಯಾಪಕರು
ಜೆಎನ್‍ಯೂ, ದೆಹಲಿ

ಕನ್ನಡಕ್ಕೆ: | ಅನಿಲ್ ಚಿಕ್ಕದಾಳವಟ್ಟ |
ಕೃಪೆ -ಸಾಕ್ಷಿ ದಿನ ಪತ್ರಿಕೆ

ಅರ್ಥಶಾಸ್ತ್ರವನ್ನು ಎನ್‍ಡಿಎ ಸರ್ಕಾರ ಎಂದಿಗೂ ಪ್ರಬಲವಾದ ಅಂಶವಾಗಿ ಭಾವಿಸಿಯೇ ಇಲ್ಲ. ಮೊದಲ ಸಲ ಆಡಳಿತದಲ್ಲಿ ಅದು ತಂದ ನಿರ್ಣಾಯಕ ಆವೃತ್ತಿಗಳು ನೋಟುರದ್ದತಿ, ಜಿಎಸ್ಟಿ ಎಷ್ಟು ವಿನಾಶಕಾರಿಯಾಗಿ ಪರಿಣಮಿಸಿವೆಯೋ ಎಲ್ಲರಿಗೂ ಗೊತ್ತಿದೆ. ಆದ್ದರಿಂದ 2019-20 ಕೇಂದ್ರ ಬಡ್ಜೆಟ್ ನಮಗೆ ಏನೋ ತಂದುಕೊಡುತ್ತದೆಂದು ಭಾವಿಸುವುದು ಅರ್ಥರಹಿತ. ಇಂತಹ ಸಂದರ್ಭದಲ್ಲಿಯೂ ಸಹ ದೇಶದ ಅರ್ಥವ್ಯವಸ್ಥೆ ಎದುರಿಸುತ್ತಿರುವ ತೀವ್ರ ಸಮಸ್ಯೆಗಳನ್ನು ಹೇಗೆ ಪರಿಷ್ಕರಿಸಬೇಕು ಎನ್ನುವ ಸ್ಪೂರ್ತಿಯೂ ಸಹ ಕೇಂದ್ರ ಬಡ್ಜೆಟ್‍ನಲ್ಲಿ ಕೊರತೆಯಾಗಿರುವುದು ನೋಡಿದರೆ ಆಶ್ಚರ್ಯವಾಗುತ್ತಿದೆ. ಆರ್ಥಿಕ ಚಟುವಟಿಕೆ ನಿಧಾನಿಸಿರುವುದು, ವ್ಯವಸಾಯರಂಗದ ಬಿಕ್ಕಟ್ಟು, ತೀವ್ರಸ್ಥಾಯಿಯ ನಿರುದ್ಯೋಗ, ವಿದೇಶಿ ಮೌಲ್ಯಮಾಪನಗಳ ಹೊರೆಯಂತಹ ಗಂಭೀರ ಸಮಸ್ಯೆಗಳ ಮೇಲೆ ಕೂಡ ಬಡ್ಜೆಟ್ ದೊಡ್ಡದಾಗಿ ದೃಷ್ಟಿ ಕೇಂದ್ರಿಕರಿಸಿದ ಹಾಗಿಲ್ಲ.

ಮುಖ್ಯವಾಗಿ ಆದಾಯ ಬೆಳವಣಿಗೆಯ ದರ ಕಡಿಮೆಯಾಗುತ್ತಿದೆ. ಆರ್ಥಿಕ ಚಟುವಟಿಕೆ ಕಡಿಮೆಯಾಗಿರುವುದು ಒಂದು ಕಾರಣವಾಗಿಯೂ, ಕಳಪೆಮಟ್ಟದ ಜಿಎಸ್ಟಿ ವಸೂಲಿಗಳು ಪ್ರಧಾನ ಕಾರಣ. 2018-19ಕ್ಕಾಗಿ ತಿದ್ದುಪಡಿಯ ಸಂಗ್ರಹ ಅಂದಾಜನ್ನು ಪ್ರಸ್ತುತ ಆರ್ಥಿಕ ಮಂತ್ರಿ ಉಲ್ಲೇಖಿಸಿದ್ದಾರೆ. ಇವು ಕಳೆದ ವರ್ಷದ ಬಡ್ಜೆಟ್ ಅಂದಾಜಿಗೆ ಹತ್ತಿರದಲ್ಲಿವೆ. ಆದರೆ ಹೊಸದಾಗಿ ಸಿಎಜಿ ಪ್ರಕಟಿಸಿದ ಅಂಕಿಅಂಶಗಳಿಗಿಂತ ಇವು ಸ್ವಲ್ಪ ಹೆಚ್ಚಾಗಿ ಇರುವುದು ಗಮನಾರ್ಹ. ಸಿಎಜಿ ವರದಿಯ ಪ್ರಕಾರ 2018-19 ವರ್ಷದಲ್ಲಿ ಕೇಂದ್ರ ಸರ್ಕಾರ ಬಡ್ಜೆಟ್ ಅಂದಾಜನ್ನು ಹೋಲಿಸಿದರೆ ಜಿಎಸ್‍ಟಿ ಆದಾಯದಲ್ಲಿ ರೂ1.6 ಲಕ್ಷ ಕೋಟಿ ಕಡಿಮೆ ನಮೂದಾಗಿದೆ. ಇನ್ನು 1019-20 ಆರ್ಥಿಕ ವರ್ಷದಲ್ಲಿ ಪರಿಸ್ಥಿತಿ ಇನ್ನೂ ಉತ್ತಮವಾಗಿ ಇರುತ್ತದೆಂದು ಆಶಾಭಾವನೆ ವ್ಯಕ್ತಪಡಿಸಿದರೂ ಸಹ ವಾಸ್ತವದಲ್ಲಿ ಹಾಗೆ ಕಾಣಿಸುತ್ತಿಲ್ಲ.

ಬಡ್ಜೆಟ್ ಪ್ರಕಾರ ಮಾಡಿದ ವೆಚ್ಚದಲ್ಲಿಯೂ ಸಹ ಬೆಳವಣಿಗೆ ಕಾಣಿಸುತ್ತಿಲ್ಲ. ಒಟ್ಟು ವೆಚ್ಚ, ಪ್ರಜೆಗಳ ಮೇಲೆ ಪ್ರಭಾವಿಸುತ್ತಿರುವ ವಲಯಗಳಲ್ಲಿ ಇಟ್ಟಂತಹ ವೆಚ್ಚದ ವಿಷಯದಲ್ಲಿಯೂ ಸಹ ಬೆಳವಣಿಗೆ ಕಾಣಿಸುತ್ತಿಲ್ಲ. ಬಹಳಷ್ಟು ಬೆಳೆದ ವೆಚ್ಚಗಳು ಸಾಧಾರಣ ಜಿಡಿಪಿಯಲ್ಲಿ ಅಂದಾಜು ಮಾಡಿದ ದರದ ಪ್ರಕಾರವಾಗಿಯೇ ನಡೆಯುತ್ತಾ ಬಂದಿವೆ. ಮತ್ತಷ್ಟು ಆಸಕ್ತಿಕರವಾದ ವಿಷಯವೇನೆಂದರೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಕ್ಕೆ ಆಹಾರ ಯೋಜನೆ ವಿಷಯದಲ್ಲಿ 2018-19ಕ್ಕಾಗಿ ಮಾರ್ಪಡಿಸಿದ ನಿರಿಕ್ಷೆಗಳಿಂದ ಹೋಲಿಸಿದರೆ ಇಳಿಮುಖವಾಗಿದೆ. ದೇಶವ್ಯಾಪ್ತಿಯಾಗಿ ತೀವ್ರವಾದ ನಿರುದ್ಯೋಗ ಸಮಸ್ಯೆ ಆವರಿಸಿರುವ ಸಮಯದಲ್ಲಿಯೇ ಉದ್ಯೋಗಕ್ಕೆ ಆಹಾರ ಯೋಜನೆ ಹಿಮ್ಮುಖಗೊಳಿಸುವುದು ಪ್ರಮಾದದ ಘಂಟೆ ಮೊಳಗುಸುತ್ತಿದೆ.

ಮಾಡಿದ ವ್ಯಯಗಳಿಗೆ ಸಂಬಂಧಿಸಿದ ಅಂಕಿಅಂಶಗಳು ಕೂಡ 2018-19ಕ್ಕಾಗಿ ತಿದ್ದುಪಡಿ ಮಾಡಿದ ಅಂದಾಜುಗಳ ಆಧಾರದ ಮೇಲೆ ಎಂಬೆಂಡಿಂಗ್ ಮಾಡಲಾಗಿದೆ. ಮಾರ್ಪಡಿಸಿದ ಅಂದಾಜುಗಳಿಗಿಂತ ವಾಸ್ತವ ಅಂದಾಜು ಇಳಿಮುಖ ಹಿಡಿದಿದ್ದರಿಂದ 2019-20ರಲ್ಲಿ ಕೂಡ ಈ ಪತನ ಮುಂದುವರೆಯುತ್ತಿದೆ ಎಂದು ಸ್ಪಷ್ಟವಾಗುತ್ತಿದೆ. ಜಾಗತೀಕರಣದ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ವಿತ್ತಿಯ ವ್ಯವಸ್ಥೆಯ ಒತ್ತಡಗಳನ್ನು ಸಂತೃಪ್ತಿಗೊಳಿಸಬೇಕಿದೆ ಎಂದು ಎನ್‍ಡಿಎ ಭಾವಿಸುತ್ತಿರುವುದರಿಂದ ಅಂದಾಜು ಮಾಡಿದ ಈ ವ್ಯಯಗಳನ್ನಾದರೂ ಕೇಂದ್ರಸರ್ಕಾರ ಖರ್ಚುಮಾಡಲಾಗುತ್ತದೆಯಾ ಎನ್ನುವುದೇ ಸಂದೇಹ. ಜೋರಾಗುತ್ತಿರುವ ನಿರುತ್ಸಾಹ ಕಾರ್ಮೋಡಗಳ ಪರಿಸ್ಥಿತಿಗಳಲ್ಲಿ ವ್ಯಯಕ್ಕೆ ಸಂಬಂಧಿಸಿದಂತೆ ಹಾಕಿಕೊಂಡಿರುವ ಗುರಿಗಳನ್ನೂ ಸಹ ಮುಂದುವರೆಸಬೇಕಿರುವದು ಕಷ್ಟವೇ ಆಗಬಹುದು.

ಈ ಪರಿಸ್ಥಿತಿಯಲ್ಲಿ ದೇಶಕ್ಕೆ ಅವಶ್ಯಕತೆ ಇರುವುದು ಆದಾಯ, ಖರ್ಚುಗಳ ಅಂಕಿ ಅಂಶಗಳನ್ನು ತೋರಿಸುವ ಬಡ್ಜೆಟ್ ಮೇಲೆ ಕೇವಲ ಚರ್ಚೆಯಲ್ಲ. ಹಣಕಾಸು ವ್ಯವಸ್ಥೆಯನ್ನು ತ್ವರಿತಗೊಳಿಸಿ ಹೆಚ್ಚುವರಿ ಆದಾಯ ಮೂಲಗಳನ್ನು ತಕ್ಷಣವೇ ದೃಷ್ಟಿ ಸಾಧಿಸಬೇಕಿದೆ. ಆದರೆ ಈ ಧಾಟಿಯಲ್ಲಿ ಎಂತಹ ಸೃಜನಾತ್ಮಕ ಆಲೋಚನೆಗಳನ್ನು ತೆಗೆದುಕೊಳ್ಳಲು ಎನ್‍ಡಿಎ ಸರ್ಕಾರ ತಿರಸ್ಕರಿಸುವುದು ಗಮನಾರ್ಹ. ಪ್ರಸ್ತುತ ಕೇಂದ್ರಕ್ಕೆ ಬರುತ್ತಿರುವ ಆದಾಯದ ಟ್ರೆಂಡ್ಸಿಯನ್ನು ಭವಿಷ್ಯತ್ತಿಗೂ ಕೂಡ ಮುನ್ಸೂಚನೆಯಾಗಿ ಹಾಗೇ ಪ್ರಸ್ತಾಪಿಸುವುದು ಹೊರತುಪಡಿಸಿದರೆ ಹೊಸ ಬಡ್ಜೆಟ್ ದೊಡ್ಡದಾಗಿ ಮಾಡಿದ್ದೇನಿಲ್ಲ.

ಈ ಬಾರಿ ಬಡ್ಜೆಟ್ಟಿನಲ್ಲಿ ಗಮನಾರ್ಹವಾಗಿ ಗುರುತಿಸಬೇಕಾದ ವಿಷಯವೇನೆಂದರೆ ಸಂಪತ್ತಿನ ಮೇಲಿನ ತೆರಿಗೆ ಏರಿಸಿದ್ದು. ದೇಶದಲ್ಲಿನ ಬಿಲೇನಿಯರ್‍ಗಳ ಒಟ್ಟು ಆದಾಯ ರೂ.560 ಲಕ್ಷ ಕೋಟಿ ಎಂದು ಅಂದಾಜು. ಇವರ ಮೇಲೆ ಕನಿಷ್ಟ 1%ರಷ್ಟು ಸಂಪತ್ತಿನ ಮೇಲಿನ ತೆರಿಗೆ ಏರಿಸಿದರೂ ಸರಿ ಕೇಂದ್ರ ಸರ್ಕಾರಕ್ಕೆ ರೂ.5.6 ಲಕ್ಷ ಕೋಟಿ ಆದಾಯ ಬರುವ ಅವಕಾಶ ಇದೆ. ಇನ್ನು ಅವರ ಉತ್ತರಾಧಿಕಾರ ಆಸ್ತಿಗಳ ಮೇಲೆ ಕೂಡ ತೆರೆಗೆ ಹೆಚ್ಚಿಸಿದ್ದಾರೆ ಮತ್ತೂ ರೂ.9.3 ಲಕ್ಷ ಕೋಟಿ ಆದಾಯ ಬರುವ ಅವಕಾಶವಿದೆ. ಈ ಎರಡು ರೀತಿಯ ತೆರಿಗೆಗಳನ್ನು ದೇಶಿಯ ಬಿಲೇನಿಯರ್‍ಗಳ ಮೇಲೆ ವಿಧಿಸಿದ್ದಾದರೆ ರೂ.15 ಲಕ್ಷ ಕೋಟಿ ಆದಾಯ ಕೇಂದ್ರ ಖಜಾನೆಗೆ ಬಂದು ಸೇರಲಿದೆ. ದೇಶದಲ್ಲಿ ಕಣ್ಮರೆಯಾಗುತ್ತಿರುವ ಕಲ್ಯಾಣ ಯೋಜನೆಗಳಿಗೆ ಈ ಭಾರಿ ಮೊತ್ತ ಸ್ವಲ್ಪ ಜೀವ ನೀಡುವ ಅವಕಾಶವಿದೆ. ಇಷ್ಟು ಆದಾಯ ಬಂದಿದ್ದೇ ಆದರೆ, ಪ್ರತಿ ಭಾರತಿಯನಿಗೆ ಐದು ಪ್ರಾಥಮಿಕ ಹಕ್ಕುಗಳನ್ನು ಖಾತರಿಪಡಿಸಬಹುದು. ಅವು ಏನೆಂದರೆ ಆಹಾರ ಹಕ್ಕು, ಉದ್ಯೋಗ ಹಕ್ಕು , ಪದವಿ ಪೂರ್ವ ತರಗತಿಗಳ ವರೆಗೂ ಗುಣಮಟ್ಟದ ಶಿಕ್ಷಣವನ್ನು ಹೊಂದುವ ಹಕ್ಕು, ಸರ್ಕಾರ ನಿರ್ವಹಿಸುವ ರಾಷ್ಟ್ರೀಯ ಅರೋಗ್ಯ ಸೇವೆಯ ಮೂಲಕ ಗುಣಮಟ್ಟದ ಆರೋಗ್ಯ ಸಂರಕ್ಷಣೆಯ ಹಕ್ಕು, ವೃದ್ಯಾಪ್ಯದಲ್ಲಿ ಇರುವ ಪ್ರತಿಯೊಬ್ಬರಿಗೂ ತಿಂಗಳಿಗೆ 2000 ರೂಪಾಯಿಗಳ ವೃದ್ಧಾಪ್ಯ ವೇತನ (ಈಗ ತಿಂಗಳಿಗೆ ಕೇವಲ 200ರೂ ಮಾತ್ರವೇ ಕೊಡುತ್ತಿದ್ದಾರೆ) ಹಕ್ಕಿನೊಂದಿಗೆ ಅಂಗವಿಕಲರಿಗೆ ಪ್ರಯೋಜನಗಳು ಸಹ ಕಲ್ಪಿಸಬಹದು.

ನಿಜಕ್ಕೂ, ಬಡ್ಜೆಟ್ ಮಂಡಿಸುವ ಮುನ್ನ, ಸಂಪತ್ತಿನ ಮೇಲೆ ಉತ್ತರಾಧೀಕಾರಿತ್ವದ ತೆರಿಗೆ ವಿಧಿಸುತ್ತಾರೆಂದು ಭಾವಿಸಿದ್ದಾರೆ. ಆಶ್ಚರ್ಯಕರವಾಗಿ ಪ್ರಸ್ತುತ ಬಡ್ಜೆಟ್ ಅದರ ಪ್ರಸ್ತಾವನೆ ಕೂಡ ತರಲಿಲ್ಲ. ಮತ್ತೊಂದು ಕಡೆ, ವಿದೇಶಿ ಪ್ರತ್ಯಕ್ಷ ಹೂಡಿಕೆಗಳ ಬಗ್ಗೆ ಉದುರಿಸುತ್ತಿದ್ದಾರೆ. ಹೊಸ ಬಡ್ಜೆಟ್‍ನಲ್ಲಿ ಏನಾದರೂ ಕಾರ್ಯತಂತ್ರದ ಅಂಶ ಇದೆಯೆಂದರೆ, ದೇಶದಲ್ಲಿನ ಎಪ್.ಡಿ.ಐಗಳನ್ನು ಆಕರ್ಷಿಸುವುದು ಮಾತ್ರವೇ. ಇದು ಸಹ ಕಾರ್ಮಿಕರ ಹಕ್ಕುಗಳನ್ನು ಹತ್ತಿಕ್ಕುವುದು, ಭೂಮಿಯನ್ನು ಇನ್ನಷ್ಟು ಸುಲಭವಾಗಿ ಸ್ವಾಧೀನಪಡಿಸಿಕೊಳ್ಳುವ ಮೂಲಕ ಜಾರಿಯಾಗುತ್ತದೆ. ಈ ರೀತಿಯಾದ ಅಭಿವೃದ್ಧಿ ಸಾಧಿಸುವುದೇ ಆದರೆ ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಾಗಲು ದಾರಿಯಾಗುತ್ತದೆ. ಸರ್ಕಾರ ತಾನೇ ಖರ್ಚು ಮಾಡುವುದು, ಸರ್ಕಾರಿ ಕಲ್ಯಾಣ ಯೋಜನೆಗಳಗೆ ಅನುದಾನ ಭರಿಸುವುದು ಎನ್ನುವ ಅಂಶಗಳನ್ನು ದೇಶದ ಆರ್ಥಿಕ ವ್ಯವಸ್ಥೆ ಚಾಲಕ ಶಕ್ತಿಯಾಗಿ ಬದಲಿಸುವ ಬದಲಾಗಿ ವಿದೇಶಿ ನೇರ ಹೂಡಿಕೆಗಳಿಗೆ ಮತ್ತಷ್ಟು ಬಾಗಿಲು ವಿಶಾಲವಾಗಿ ತೆಗೆಯುವುದು ಎನ್ನುವುದು ಜನಸಾಮಾನ್ಯರ ಮೇಲೆ ಸರ್ಕಾರ ಆಯುಧವಾಗಿ ಮಾರ್ಪಡುತ್ತದೆ. ಜಾಗತಿಕ ಆರ್ಥಿಕ ವ್ಯವಸ್ಥೆ ನಿಧಾನಗತಿಗೆ ಜಾರುತ್ತಿರುವ ವೇಳೆ, ಬಹುರಾಷ್ಟ್ರೀಯಾ ಸಂಸ್ಥೆಗಳು ಆಯಾ ದೇಶಗಳಲ್ಲಿ ಹೂಡಿಕೆ ಮಾಡುವುದಕ್ಕೆ ಆಸಕ್ತಿ ಕಳೆದುಕೊಳ್ಳುತ್ತಿರುವ ಸಮಯದಲ್ಲಿ ಸರ್ಕಾರವೇ ಖರ್ಚುಮಾಡುವುದರ ಮೂಲಕ ಅಭಿವೃದ್ಧಿಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುವುದು ಜನೋಪಯೋಗಿ ಕಾರ್ಯಗಳಿಗೆ ಪ್ರಾಧಾನ್ಯತೆ ಕೊಟ್ಟ ಹಾಗೆ ಆಗುತ್ತದೆ. ನರೇಂದ್ರ ಮೋದಿ ಪ್ರತಿಷ್ಟಾತ್ಮಕವಾಗಿ ತೆಗೆದುಕೊಂಡು ಬಂದ ಮೇಕ್ ಇನ್ ಇಂಡಿಯಾ ನಿನಾದದ ಗುರಿಯೇ ಇದು. ಆದರೆ ಆ ದಾರಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ ಎಲ್ಲಿಯವರೆಗೂ ನಡೆಯಿತು?

ಕೇಂದ್ರ ಸರ್ಕಾರ ಕೆಲವು ಸಿಹಿ ಮಾತುಗಳನ್ನು ಹೇಳುತ್ತಾ ಸ್ವಲ್ಪಮಟ್ಟಿಗೆ ಹೂಡಿಕೆಗಳನ್ನು ತರಲಾಗಿದೆಯೆಂದು ಹೇಳಿಕೊಳ್ಳುವುದು ನಿಜವೆಂದು ಭಾವಿಸಿದರೂ ಸಹ. ಅದು ಕಳೆದ ಐದು ವರ್ಷಗಳಲ್ಲಿ ಎಷ್ಟು ಉದ್ಯೋಗಗಳನ್ನು ಸೃಷ್ಟಿ ಮಾಡಿದೆ ಎಂಬುದು ಪ್ರಶ್ನೆ. ಒಂದು ಕಡೆ ಬಹುರಾಷ್ಟ್ರೀಯ ಕಂಪನಿಗಳು, ಮತ್ತೊಂದು ಕಡೆ ದೇಸೀಯ ದೊಡ್ಡ ವಾಣಿಜ್ಯೋದ್ಯಮಿಗಳು ಸಾಧಿಸಿದ ಬೆಳವಣಿಗೆಯ ದರ ಅಧಿಕವಾಗಿದೆಯೆಂದು ಪ್ರಚಾರ ನಡೆಯುತ್ತಿದ್ದರೂ, ಏರಿಸಿ ಹೇಳುತ್ತಿರುವ ಇಂತಹ ಭಾರಿ ಜಿಡಿಪಿ ದರಗಳು ಸಹ ದೇಶದ ಶ್ರಮಜೀವಿ ವರ್ಗಕ್ಕೆ ಅವಶ್ಯವಾದ ಸಹಜವಾದ ಉದ್ಯೋಗಗಳನ್ನು ಬೆಳೆಸಲಾಗದಿರುವುದು ಗಮನಾರ್ಹ. ಈ ರೀತಿಯಾದ ಬೆಳವಣಿಗೆಯ ಧೋರಣೆಗಳಿಂದ ದೇಸೀಯ ನಿರುದ್ಯೋಗ ಸಮಸ್ಯೆಯನ್ನು ತೊಲಗಿಸುತ್ತೇವೆಂದು ಹೇಳುವುದು ಸಂಪೂರ್ಣವಾಗಿ ಅವಸ್ತಾವಿಕತೆಯೇ ಆಗುತ್ತದೆ. ಇದೆಲ್ಲಾ ಎಲ್ಲರಿಗೂ ಅನುಭವವೇದ್ಯವಾದ ವಿಷಯವೇ ಆದರೂ ಮೋದಿ ಸರ್ಕಾರವು ಸಹ ಮಧ್ಯಯುಗದ ಪ್ರಾನ್ಸ್ ಬರ್ಬನ್ ರಾಜರುಗಳ ಹಾಗೆ ‘ ಕಲಿತದ್ದೂ ಇಲ್ಲ..ಮರೆತುಹೋಗಿದ್ದು ಇಲ್ಲ’ ಎನ್ನುವ ಧೋರಣೆಯಲ್ಲಿ ನಿಂತಿರುವುದು ವಿಶೇಷ.

ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಹೊಸ ಬಡ್ಜೆಟ್‍ನಲ್ಲಿ ಸೇರಿಸಿರುವ ಎರಡು ಅಂಶಗಳು ಭವಿಷ್ಯತ್ತಿನಲ್ಲಿ ತೀವ್ರ ಪರಿಣಾಮಗಳಿಗೆ ದಾರಿಯಾಗಲಿದೆ. ಒಂದು, ಸರ್ಕಾರ ಸಾಲಗಳಿಗಾಗಿ ಅಂತಾರಾಷ್ಟ್ರೀಯ ದ್ರವ್ಯ ಮಾರುಕಟ್ಟೆಗಳನ್ನು ಸಂಪರ್ಕಿಸಿರುವುದು, ಇದರ ಹಿಂದೆ ಯಾವುದೇ ಅಮೂಲ್ಯವಾದ ಕಾರಣವು ಸಹ ಕಾಣಿಸುತ್ತಿಲ್ಲ. ಏಕೆಂದರೆ ಸರ್ಕಾರದ ಸಾಲಗಳ ಮೇಲೆ ಮಿತಿ ಎನ್ನುವುದು ದ್ರವ್ಯಕೊರತೆಯ ಮೇಲೆ ಸ್ವಯಂ ಉಂಟುಮಾಡಿದ ಸಿಲಿಂಗ್ ಮೇಲೆ ಆಧಾರಪಟ್ಟಿರುತ್ತದೆಯೇ ಹೊರತು ದೇಶದ ಮಾರುಕಟ್ಟೆಯಲ್ಲಿ ಸಾಲಗಳನ್ನು ಸಾಧಿಸದ ಸರ್ಕಾರದ ಅಸಮರ್ಥತೆಯ ಮೇಲೆ ಆಧಾರಪಟ್ಟಿರುವುದಿಲ್ಲ. ಸರ್ಕಾರ ವಿದೇಶಗಳಿಂದ ಸಾಲಗಳಿಗೆ ಪ್ರಯತ್ನಿಸುವ ಬೆಳವಣಿಗೆಯೆಂದರೆ , ಭಾರತ ಸರ್ಕಾರದ ಮೇಲೆ ಅಂತಾರಾಷ್ಟ್ರೀಯ ದ್ರವ್ಯಸಂಸ್ಥೆಗಳ ಹಿಡಿತವನ್ನು ಮತ್ತಷ್ಟು ಹೆಚ್ಚಿಸುವುದೇ ಆಗುತ್ತದೆ ಎಂದು ಮರೆಯುವ ಹಾಗಿಲ್ಲ. ಇಂತಹ ಹಿನ್ನಲೆಯಲ್ಲಿ ಸಾಲಗಳನ್ನು ತರುವುದರಲ್ಲಿ ಅವುಗಳನ್ನು ತೀರಿಸುವುದರಲ್ಲಿ ಏನಾದರೂ ವಿಳಂಬವಾದರೆ ದೇಶದ ಮೇಲೆ ನಿರಂಕುಶವಾಗಿ ಮಿತವ್ಯಯವನ್ನು ಹೇರುವುದಕ್ಕೆ ಅವಕಾಶವಿರುತ್ತದೆ ಮತ್ತು ಬಡ್ಜೆಟ್ ವಿದೇಶಿ ಮಾರಕ ಮಾರುಕಟ್ಟೆಯನ್ನು ದ್ರವ್ಯ ಮಾರುಕಟ್ಟೆಯ ಜೊತೆ ಜೋಡಿಸಲಾಗಿದೆ. ಇದರಿಂದ ರೂಪಾಯಿ ಕುಸಿತ ಮತ್ತಷ್ಟು ಬೆಳೆದು ಸರ್ಕಾರ ಸಾಲದಹೊರೆ ಗಗನ ಮುಟ್ಟುತ್ತದೆ. ಅಂತಿಮವಾಗಿ ಕೇಂದ್ರ ಸರ್ಕಾರ ವಿದೇಶಿ ಒತ್ತಡಗಳಿಗೆ ಪೂರ್ತಿಯಾಗಿ ಒಳಗೊಳ್ಳಬೇಕಾದ ಪರಿಸ್ಥಿತಿ ಏರ್ಪಡದಿರುವುದಿಲ್ಲ.

ಇನ್ನು ಎರಡನೇ ಅಂಶ ಒಕ್ಕೂಟ ತತ್ವಕ್ಕೆ ಸೇರಿದ್ದು. ಜಿಎಸ್ಟಿಯನ್ನು ತನಗೆ ತಾನು ಭಾರತ ಸಂವಿಧಾನದೊಳಗಡೆ ಒಕ್ಕೂಟ ಕಾನೂನಿನ ಮೇಲೆ ಮಾಡಿದ ಭಾರಿ ದಾಳಿಯೆಂದು ಹೇಳಬೇಕು. ರಾಜ್ಯ ಸರ್ಕಾರಗಳು ಯಾವುದೇ ವಿವೇಚನೆ ಇಲ್ಲದೆ ಈ ಒಂದು ದೇಶ ಒಂದೆ ತೆರಿಗೆ ವಿಧಾನವನ್ನು ಕುರುಡಾಗಿ ಅನುಮೋದಿಸಿವೆ. ಆದರೆ ಆಶಿಸಿದ ಆದಾಯದಲ್ಲಿ ಜಿಎಸ್ಟಿ ವಿಫಲವಾಗಿರುವದು ರಾಜ್ಯ ಸರ್ಕಾರದ ಆದಾಯದ ಮೇಲೆ ಧಾರುಣ ಪ್ರಭಾವ ಬೀರಿದೆ. ಇದಕ್ಕೂ ಮಿಗಿಲಾಗಿ ಪ್ರಸ್ತುತ ಕೇಂದ್ರ ಬಡ್ಜೆಟ್‍ನಲ್ಲಿ, ಕೇಂದ್ರಸರ್ಕಾರ ತನ್ನ ಆದಾಯವನ್ನು ಏರಿಸಿಕೊಳ್ಳುವುದಕ್ಕಾಗಿ ಸೆಸ್ಸುಗಳು,ಸರ್ಚಾರ್ಜುಗಳನ್ನು ನವೀಕೃತಗೊಳಿಸಿದೆ. ಅಂದರೆ ಹೀಗೆ ಗಳಿಸಿದ ಆದಾಯದಲ್ಲಿ ರಾಜ್ಯ ಸರ್ಕಾರಗಳಿಗೆ ಮಾತ್ರ ಪಾಲು ಇರುವುದಿಲ್ಲ. ಒಂದು ಮಾತಿನಲ್ಲಿ ಹೇಳುವುದಾದರೆ ಆರ್ಥಿಕ ಮೂಲಗಳನ್ನು ಕೇಂದ್ರ ಸರ್ಕಾರ ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುವುದಕ್ಕಾಗಿ ಇದು ಸಲೀಸಾಗಿ ಉಪಯೋಗವಾಗಲಿದೆ. ಇದು ತುಂಬಾ ಅಪಾಯಕರವಾದ ಪರಿಣಾಮ. ಏಕೆಂದರೆ ರಾಜ್ಯಗಳು ಒಂದು ಮೂಲೆಗೆ ತಳ್ಳಲ್ಪಟ್ಟು ಕೇಂದ್ರದ ಸಹಾಯಕ್ಕಾಗಿ ಬೇಡುವಂತಾಗುತ್ತದೆ. ಕೇಂದ್ರವು ಸಹ ತನಗೆ ಅನುಕೂಲಕರವಾಗಿರುವ ರಾಜ್ಯಗಳಿಗೆ ಪ್ರೋತ್ಸಾಹ ನೀಡುವುದು, ವಿರೋಧಿಯಾಗಿರುವ ರಾಜ್ಯ ಸರ್ಕಾರಗಳನ್ನು ಉಪೇಕ್ಷಿಸುವುದು ರೂಢಿ ಮಾಡಿಕೊಳ್ಳುವ ಸ್ಥಿತಿ ಉಂಟಾಗುತ್ತದೆ. ಭಾರತ ಒಕ್ಕೂಟ ತತ್ವಕ್ಕೆ, ಪ್ರಜಾಪ್ರಭುತ್ವಕ್ಕೆ ಇದು ಕೊಡಲಿ ಪೆಟ್ಟಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...