Homeಅಂತರಾಷ್ಟ್ರೀಯಪನ್ನೂನ್‌ ಹತ್ಯೆ ಸಂಚು: ವಾಷಿಂಗ್ಟನ್ ಪೋಸ್ಟ್ ವರದಿಗೆ ಅಮೆರಿಕ ಪ್ರತಿಕ್ರಿಯೆ

ಪನ್ನೂನ್‌ ಹತ್ಯೆ ಸಂಚು: ವಾಷಿಂಗ್ಟನ್ ಪೋಸ್ಟ್ ವರದಿಗೆ ಅಮೆರಿಕ ಪ್ರತಿಕ್ರಿಯೆ

- Advertisement -
- Advertisement -

ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂನ್‌ ಹತ್ಯೆಯ ಸಂಚಿಗೆ ಸಂಬಂಧಿಸಿದ ‘ದಿ ವಾಷಿಂಗ್ಟನ್ ಪೋಸ್ಟ್ ವರದಿ’ ಬೆನ್ನಲ್ಲಿ ಆರೋಪಗಳ ಬಗ್ಗೆ ತನಿಖೆಗೆ ಭಾರತ ಸರ್ಕಾರದೊಂದಿಗೆ ನಿಯಮಿತವಾಗಿ ಕೆಲಸ ಮಾಡುತ್ತಿದೆ ಎಂದು ಅಮೆರಿಕ ಹೇಳಿದೆ.

ಹೆಸರಿಸದ ಮೂಲಗಳನ್ನು ಉಲ್ಲೇಖಿಸಿ ದಿ ವಾಷಿಂಗ್ಟನ್ ಪೋಸ್ಟ್ ಕಳೆದ ವರ್ಷ ಅಮೆರಿಕದ ನೆಲದಲ್ಲಿ ಪನ್ನೂನ್‌ ಹತ್ಯೆಗೆ ಸಂಚು ರೂಪಿಸಿದ್ದಕ್ಕೆ ಸಂಬಂಧಿಸಿದಂತೆ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ (ರಾ) ಅಧಿಕಾರಿಯನ್ನು ಆರೋಪಿ ಎಂದು ಹೇಳಿದೆ. ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಪ್ರಧಾನ ಉಪ ವಕ್ತಾರ ವೇದಾಂತ್ ಪಟೇಲ್ ವರದಿ ಕುರಿತು ಪ್ರತಿಕ್ರಿಯಿಸಿದ್ದು,  ಭಾರತೀಯ ವಿಚಾರಣಾ ಸಮಿತಿಯ ಫಲಿತಾಂಶಗಳ ಆಧಾರದ ಮೇಲೆ ನಾವು ಭಾರತ ಸರ್ಕಾರದಿಂದ ಉತ್ತರದಾಯಿತ್ವವನ್ನು ನಿರೀಕ್ಷಿಸುತ್ತೇವೆ ಮತ್ತು ನಾವು ಅವರೊಂದಿಗೆ ನಿಯಮಿತವಾಗಿ ಕೆಲಸ ಮಾಡುತ್ತಿದ್ದೇವೆ. ನಾವು ಹಿರಿಯ ಮಟ್ಟದಲ್ಲಿ ಭಾರತ ಸರ್ಕಾರದೊಂದಿಗೆ ನೇರವಾಗಿ ಈ ಬಗ್ಗೆ ನಮ್ಮ ಕಾಳಜಿಯನ್ನು ವ್ಯಕ್ತಪಡಿಸುವುದನ್ನು ಮುಂದುವರಿಸುತ್ತೇವೆ, ಆದರೆ ಅದನ್ನು ಮೀರಿ, ನಾನು ಇದನ್ನು ಮತ್ತಷ್ಟು ವಿಶ್ಲೇಷಿಸಲು ಹೋಗುವುದಿಲ್ಲ ಎಂದು ವೇದಾಂತ್ ಪಟೇಲ್ ಹೇಳಿದ್ದಾರೆ.

ವಾಷಿಂಗ್ಟನ್ ಪೋಸ್ಟ್ ವರದಿ ಏನು ಹೇಳಿದೆ?
ವಾಷಿಂಗ್ಟನ್ ಪೋಸ್ಟ್, ಹೆಸರಿಸದ ಮೂಲಗಳನ್ನು ಉಲ್ಲೇಖಿಸಿ, ಕಳೆದ ವರ್ಷ ಅಮೆರಿಕದ ನೆಲದಲ್ಲಿ ಪನ್ನುನ್‌ನನ್ನು ಕೊಲ್ಲಲು ಸಂಚು ರೂಪಿಸಿದ್ದಕ್ಕೆ ಸಂಬಂಧಿಸಿದಂತೆ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ಅಧಿಕಾರಿ  ವಿಕ್ರಮ್ ಯಾದವ್ ಆರೋಪಿ ಎಂದು ಹೆಸರಿಸಿದೆ. ಅಮೆರಿಕದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆಗೆ ಭಾರತದ ಗುಪ್ತಚರ ಸೇವೆಯ ಅಧಿಕಾರಿಯೊಬ್ಬರು ಅಂತಿಮ ಸೂಚನೆಗಳನ್ನು ನೀಡಿದ್ದರು. ಪನ್ನೂನ್‌ ಹತ್ಯೆಯು “ಈಗ ಆದ್ಯತೆಯಾಗಿದೆ” ಎಂದು ಭಾರತದ ಬೇಹುಗಾರಿಕಾ ಸಂಸ್ಥೆ, ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ಅಥವಾ RAWನಲ್ಲಿ ಅಧಿಕಾರಿಯಾಗಿರುವ ವಿಕ್ರಂ ಯಾದವ್ ಬರೆದಿದ್ದಾರೆ ಎಂದು ಆಪಾದಿಸಲಾಗಿದೆ. ಯುಎಸ್ ಸಲ್ಲಿಸಿದ ದೋಷಾರೋಪಣೆ ಪಟ್ಟಿ ಪ್ರಕಾರ, ಯಾದವ್‌ ಹಂತಕರಿಗೆ ಸಿಖ್ ಕಾರ್ಯಕರ್ತ ಗುರುಪತ್ವಂತ್ ಸಿಂಗ್ ಪನ್ನುನ್ ಅವರ ನ್ಯೂಯಾರ್ಕ್ ವಿಳಾಸ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ನೀಡಿದ್ದರು.

ಅಮೆರಿಕದಲ್ಲಿ ನೆಲೆ ನಿಂತಿರುವ ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆಗೆ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ ಅಧಿಕಾರಿ ವಿಕ್ರಮ್ ಯಾದವ್, ಬಾಡಿಗೆ ಹಂತಕರಿಗೆ ಸೂಚನೆ ನೀಡಿದ್ದರು ಮತ್ತು ಪನ್ನೂನ್ ಹತ್ಯೆ ಕಾರ್ಯಾಚರಣೆಯನ್ನು ಆ ಸಮಯದಲ್ಲಿ ರಾ ಮುಖ್ಯಸ್ಥರಾಗಿದ್ದ ಸಮಂತ್ ಗೋಯಲ್ ಅನುಮೋದಿಸಿದ್ದರು ಎಂದು ಅಮೆರಿಕದ ಗುಪ್ತಚರ ಏಜೆನ್ಸಿಗಳು ಅಭಿಪ್ರಾಯಪಟ್ಟಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಕಳೆದ ವರ್ಷ, ಯುಎಸ್ ಫೆಡರಲ್ ಪ್ರಾಸಿಕ್ಯೂಟರ್‌ಗಳು ಭಾರತೀಯ ಪ್ರಜೆ ನಿಖಿಲ್ ಗುಪ್ತಾ, ಪನ್ನುನ್‌ನನ್ನು ಕೊಲ್ಲುವ ಸಂಚಿನಲ್ಲಿ ಭಾರತೀಯ ಸರ್ಕಾರಿ ಉದ್ಯೋಗಿಯೊಂದಿಗೆ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದರು.  2023ರಲ್ಲಿ ಝೆಕ್ ರಿಪಬ್ಲಿಕ್‌ನಲ್ಲಿ ಗುಪ್ತಾ ಬಂಧನ ನಡೆದಿತ್ತು.

ವಾಷಿಂಗ್ಟನ್ ಪೋಸ್ಟ್ ವರದಿಗೆ ಭಾರತದ ಪ್ರತಿಕ್ರಿಯೆ
ಪನ್ನೂನ್ ಹತ್ಯೆಯ ಸಂಚಿನ ಕುರಿತು ವಾಷಿಂಗ್ಟನ್ ಪೋಸ್ಟ್‌ನ ವರದಿಯನ್ನು ಭಾರತ ‘ಆಧಾರ ರಹಿತ’ ಎಂದು ಹೇಳಿದೆ. ಕ್ರಿಮಿನಲ್ ಮತ್ತು ಭಯೋತ್ಪಾದಕ ಜಾಲಗಳ ಬಗ್ಗೆ ಯುಎಸ್ ಎತ್ತಿರುವ ಭದ್ರತಾ ಕಳವಳಗಳನ್ನು ಪರಿಹರಿಸಲು ಭಾರತ ಸರ್ಕಾರವು ಸ್ಥಾಪಿಸಿದ ಉನ್ನತ ಮಟ್ಟದ ಸಮಿತಿಯಿಂದ ತನಿಖೆ ನಡೆಯುತ್ತಿದೆ. ಈ ಬಗ್ಗೆ ಊಹಾತ್ಮಕ ಮತ್ತು ಬೇಜವಾಬ್ದಾರಿ ಕಾಮೆಂಟ್‌ಗಳು ಸಹಾಯಕವಾಗುವುದಿಲ್ಲ ಎಂದು ಜೈಸ್ವಾಲ್ ಹೇಳಿದ್ದರು.

ಇದನ್ನು ಓದಿ: ಮಣಿಪುರ ಬೆತ್ತಲೆ ಮೆರವಣಿಗೆ: ಗಲಭೆಕೋರರ ಗುಂಪಿಗೆ ಮಹಿಳೆಯರನ್ನು ಒಪ್ಪಿಸಿದ್ದ ಪೊಲೀಸರು, ಚಾರ್ಜ್‌ಶೀಟ್‌ನಲ್ಲಿ ಮಹತ್ವದ ಅಂಶಗಳು ಉಲ್ಲೇಖ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...