Homeಕರ್ನಾಟಕಭೂರಹಿತರ, ಕಡಿಮೆ ಭೂಮಿ ಇರುವವರ ಖಾಸಗಿ ಸಾಲ ಮನ್ನಾ ಮಾಡಲು ನಿನ್ನೆ ಋಣಮುಕ್ತ ಕಾಯ್ದೆ ತಂದಿದ್ದೇವೆ:...

ಭೂರಹಿತರ, ಕಡಿಮೆ ಭೂಮಿ ಇರುವವರ ಖಾಸಗಿ ಸಾಲ ಮನ್ನಾ ಮಾಡಲು ನಿನ್ನೆ ಋಣಮುಕ್ತ ಕಾಯ್ದೆ ತಂದಿದ್ದೇವೆ: ಎಚ್.ಡಿ.ಕೆ

- Advertisement -
- Advertisement -

ನಾನು ಹಳ್ಳಿಗಳಿಗೆ ಹೋದಾಗ ನೀವು ಕೇವರ ಭೂಮಿ ಇರುವ ರೈತರ ಸಾಲ ಮನ್ನಾ ಮಾಡುತ್ತೀರಿ ನಮಗೇನು ಮಾಡಿದ್ದೀರಿ ಎಂದು ಹಲವಾರು ಜನ ಕೇಳುತ್ತಿದ್ದರು. ಅವರ ನೆರವಿಗಾಗಿ ಭೂರಹಿತರ, ಕಡಿಮೆ ಭೂಮಿ ಇರುವವರ ಖಾಸಗಿ ಸಾಲ ಮನ್ನಾ ಮಾಡಲು ನಿನ್ನೆ ಋಣಮುಕ್ತ ಕಾಯ್ದೆ ತಂದಿದ್ದೇವೆ ಎಂದು ಉಸ್ತುವಾರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದರು.

ಇಂದು ಸಿಎಂ ಕಛೇರಿ ಕೃಷ್ಣಾದಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿಯವರು ವಾರ್ಷಿಕ 1.20 ಲಕ್ಷ ಆದಾಯ ಮಿತಿಯೊಳಗಿರುವ ಬಡವರಿಗೆ, ಭೂ ರಹಿತ ಕಾರ್ಮಿಕರು, ರೈತರೂ, 2 ಎಕರೆಗಿಂತ ಕಡಿಮೆ ಭೂಮಿ ಇರುವವರಿಗೂ ಸಹ ಈ ಕಾಯ್ದೆಯ ಫಲಾನುಭವಿಗಳಾಗಲಿದ್ದಾರೆ ಎಂದರು.

ರಾಜ್ಯ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಳ ಎಲ್ಲರ ಸಹಕಾರದಿಂದ 14 ತಿಂಗಳು ಕಾರ್ಯನಿರ್ವಹಿಸಿದ್ದೇನೆ. ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದರು.

ರೈತರ ಸಾಲಮನ್ನಾ ಯೋಜನೆ, ಸಿದ್ಧತೆಗಳನ್ನು ಮಾಡಿದ್ದೇವೆ. ಅದಕ್ಕೆ ಪೂರಕವಾಗಿ ಕೆಲಸ ಮಾಡಿದ್ದಾರೆ.

ರಾಜಕೀಯ ಅಸ್ಥಿರತೆ ಉಂಟು ಮಾಡುವ ಘಟನೆಗಳು ಪ್ರತಿದಿನ ನಡೆಯುತ್ತಿದ್ದರೂ ಅಧಿಕಾರಿಗಳು ಕೊಟ್ಟ ಸಹಕಾರದಿಂದ ಆರ್ಥಿಕ ಶಿಸ್ತು ಕಾಪಾಡಿದ್ದೇವೆ. ಮುಂದಿನ ದಿನಗಳು ಸಹ ರಾಜಕೀಯ ಅಸ್ಥಿರತೆ ಮುಂದುವರೆಯುತ್ತವೆ. ಏನು ಬೇಕಾದರೂ ಆಗಬಹುದು. ಯಾವುದೇ ಅಸ್ಥಿರತೆ ಇದ್ದರೂ ಜನರ ಸಮಸ್ಯೆಗಳಿಗೆ ಸ್ಪಂದಿಸಿ .. ಪ್ರಾಮಾಣಿಕವಾಗಿ ನಿರ್ವಹಣೆ ಮಾಡಿ ಎಂದು ಹೇಳಿದ್ದೇನೆ ಎಂದರು.

ಅಧಿಕಾರದಿಂದ ನಿರ್ಗಮಿಸುವಾಗ ಜನರಿಗೆ ಕೊಡುಗೆ ಕೊಡುವ ಸಲುವಾಗಿ ಈ ಋಣಮುಕ್ತ ಕಾಯ್ದೆ ತಂದಿದ್ದೇವೆ ಎಂದರು. ರೈತರ ಸಾಲಮನ್ನಾ ಮಾಡುವಾಗ ದೇವರಾಜ್ ಅರಸ್ 1976 ಆಕ್ಟ್ ಮುಂದುವರೆಸುವುದು ನಮ್ಮ ಗುರಿ ಎಂದರು. ಈ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಅಂಕಿತ ಹಾಕಿದ್ದಕ್ಕೆ ಬಡಜನರ ಪರವಾಗಿ ಧನ್ಯವಾದ ತಿಳಿಸುತ್ತೇನೆ ಎಂದರು. ಉತ್ತಮ ಕೆಲಸ ಮಾಡಿದ ಆತ್ಮ ತೃಪ್ತಿ ನನಗಿದೆ ಎಂದರು.

ರಿಲೀಫ್ ಆಕ್ಟ್ ಪ್ರಕಾರ ಸಾಲದ ಸಂಪೂರ್ಣ ಮಾಹಿತಿ ಕೊಡಿ. ಜಾಹೀರಾತು ಕೂಡ ಕೊಡುತ್ತಾರೆ. 90 ದಿನದ ಒಳಗೆ ಮನಿ ಲೆಂಡರ್ಸ್ ಹತ್ತಿರ ಸಾಲ ಪಡೆದಿರುವವರು ನೊಡಲ್ ಆಫೀಸರ್ ಬಳಿ ತಲುಪಿಸಿದರೆ ಆ ಸಾಲದಿಂದ ಋಣಮುಕ್ತ ಕಾಯ್ದೆಯನ್ವಯ ಮನ್ನಾ ಆಗುತ್ತದೆ ಎಂದರು. ಇದು ಒಂದು ಟೈಮ್ ಸೆಟ್ಲಮೆಂಟ್ ರಿಲೀಫ್ ಆಗಿದೆ. ಒಂದು ವರ್ಷ ಈ ಆಕ್ಟ್ ಇದೆ.  ಎಲ್ಲಾ ರೀತಿಯ ಸಾಲ ಮನ್ನಾಗೆ ಅವಕಾಶವಿದೆ ಎಂದರು. ಬಂಡೆಪ್ಪ ಕಾಶೆಂಪೂರ್ ರವರು ಜೊತೆಗಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಬಡವರ ಪಾಲಿಗೆ ನಮ್ಮ ಕುಮಾರಣ್ಣನ ಯಾವಾಗಾದ್ರೂ ಇವರನ್ನು ಮುಕ್ತ ತಂದಿದ್ದು ನಮಗೆ ತುಂಬಾ ಸಂತೋಷ ಅವರಿಗೆ ದೇವರು ಆಯುಷ್ಯ ಆರೋಗ್ಯ ಸಂಪತ್ತು ಕೊಡಲಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...