Homeಕರ್ನಾಟಕ🛑 Live | ಕರ್ನಾಟಕದಲ್ಲಿ ‘ಭಾರತ ಐಕ್ಯತಾ ಯಾತ್ರೆ’ | ಕಾರ್ಯಕರ್ತನಿಗೆ ಥಳಿತ - ಯಥಾ...

🛑 Live | ಕರ್ನಾಟಕದಲ್ಲಿ ‘ಭಾರತ ಐಕ್ಯತಾ ಯಾತ್ರೆ’ | ಕಾರ್ಯಕರ್ತನಿಗೆ ಥಳಿತ – ಯಥಾ ಮುಖ್ಯಮಂತ್ರಿ, ತಥಾ‌ ಪೊಲೀಸ್ ಎಂದ ಸಿದ್ದರಾಮಯ್ಯ

- Advertisement -
- Advertisement -

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ‌ ಐಕ್ಯತಾ ಯಾತ್ರೆ’ಯಲ್ಲಿ #PayCM ಬಾವುಟ ಮತ್ತು ಟಿ ಶರ್ಟ್ ಧರಿಸಿ ಭಾಗವಹಿಸಿದ ಕಾಂಗ್ರೆಸ್ ಕಾರ್ಯಕರ್ತನಿಗೆ ಪೊಲೀಸರು ಹಲ್ಲೆ ನಡೆಸಿರುವುದನ್ನು ವಿಪಕ್ಷ ನಾಯಕ ಶನಿವಾರ ಖಂಡಿಸಿದ್ದಾರೆ.

ಈ ಬಗ್ಗೆ ಸಿದ್ದರಾಮಯ್ಯ ಅವರು ಟ್ವಿಟರ್‌ನಲ್ಲಿ ಆಕ್ರೊಶ ವ್ಯಕ್ತಪಡಿಸಿದ್ದು, “#PayCM ಟೀ ಶರ್ಟ್ ಧರಿಸಿದ್ದ ನಮ್ಮ ಪಕ್ಷದ ಕಾರ್ಯಕರ್ತನ ಮೇಲೆ ಬೀದಿ ಗೂಂಡಾನಂತೆ ಹಲ್ಲೆಗೈದ ಪೊಲೀಸ್ ಅಧಿಕಾರಿಯ ಕೃತ್ಯ ಖಂಡನೀಯ. ಈ‌ ಪುಂಡ ಪೋಲಿಸನನ್ನು ಈ ಕೂಡಲೇ ಅಮಾನತು ಮಾಡಬೇಕು ಎಂದು ರಾಜ್ಯ ಮುಖ್ಯಮಂತ್ರಿಯವರನ್ನು ಆಗ್ರಹಿಸುತ್ತೇನೆ” ಎಂದು ಹೇಳಿದ್ದಾರೆ. ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಯಥಾ ಮುಖ್ಯಮಂತ್ರಿ, ತಥಾ‌ ಪೊಲೀಸ್. ಕರ್ನಾಟಕದಲ್ಲಿ ಯುಪಿ ಮಾದರಿ ಆಡಳಿತ ತರುತ್ತೇವೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದರು. ಪೊಲೀಸರು ಅದನ್ನು ಅನುಷ್ಠಾನಗೊಳಿಸಲು ಹೊರಟಂತಿದೆ. 40% ಕಮಿಷನ್ಭ್ರ ಷ್ಟಾಚಾರದ ವಿರುದ್ಧದ ನಮ್ಮ ಪಕ್ಷದ ಅಭಿಯಾನವನ್ನು ಎದುರಿಸುವ ಧಮ್ಮು-ತಾಕತ್‌ ರಾಜ್ಯದ ಬಿಜೆಪಿ ಪಕ್ಷಕ್ಕೆ ಇಲ್ಲ. ರಾಜಕೀಯವಾಗಿ ನಮ್ಮನ್ನು ಎದುರಿಸಲಾಗದೆ ಬಿಜೆಪಿ ಪೊಲೀಸರ ಮೂಲಕ ದಮನಿಸುವ ಹೇಡಿತನಕ್ಕೆ ಇಳಿದಿದೆ” ಎಂದು ಅವರು ಕಿಡಿ ಕಾರಿದ್ದಾರೆ.
ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ 

ಕರ್ನಾಟಕದಲ್ಲಿ ‘ಭಾರತ ಐಕ್ಯತಾ ಯಾತ್ರೆ’
ನಿಂದನಾತ್ಮಕ ಜಾಹೀರಾತು ನೀಡಿದ
ರಾಜ್ಯ ಬಿಜೆಪಿ; ಜನಾಕ್ರೋಶ
1 October 2022, 3:30 PM

🛑 Live | ಕರ್ನಾಟಕದಲ್ಲಿ ‘ಭಾರತ ಐಕ್ಯತಾ ಯಾತ್ರೆ’ | ನಿಂದನಾತ್ಮಕ ಜಾಹೀರಾತು ನೀಡಿದ ರಾಜ್ಯ ಬಿಜೆಪಿ | Naanu Gauri

ಕಾಂಗ್ರೆಸ್‌‌ ನಾಯಕ ರಾಹುಲ್ ಗಾಂಧಿಯ ನೇತೃತ್ವದಲ್ಲಿ ನಡೆಯಯುತ್ತಿರುವ ‘ಭಾರತ ಐಕ್ಯತಾ ಯಾತ್ರೆ’ ರಾಜ್ಯ ಬಿಜೆಪಿಯು ಪತ್ರಿಕೆಗಳಲ್ಲಿ ನಿಂದನಾತ್ಮಕ ಜಾಹೀರಾತು ನೀಡಿದೆ. ಜಾಹಿರಾತು ಕೀಳು ಅಭಿರುಚಿಯಿಂದ ಕೂಡಿದ್ದು, ಜನರ ಆಕ್ರೋಶಕ್ಕೆ ಗುರಿಯಾಗಿದೆ. ಜಾಹಿರಾತು ‘ಕನ್ನಡಪ್ರಭ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಅಂತಹ ಜಾಹೀರಾತನ್ನು ಪ್ರಕಟಿಸಿದ ಪತ್ರಿಕೆಯ ವಿರುದ್ಧವೂ ಜನರು ಅಸಮಾಧಾನ ಹೊರಹಾಕಿದ್ದಾರೆ. ಈ ಸುದ್ದಿ ರ್ಪೂರ್ತಿ ಓದಲು ಇಲ್ಲಿ ಕ್ಲಿಕ್ ಮಾಡಿ.

‘ಭಾರತ ಐಕ್ಯತಾ ಯಾತ್ರೆ’ ಬಗ್ಗೆ ಮಾತ್ರವಲ್ಲದೆ, ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರ ಬಗ್ಗೆ ಕೂಡಾ ಜಾಹಿತಾರಿನ ಮೂಲಕ ಸುಳ್ಳನ್ನು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಜಾಹಿರಾತಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕನ್ನಡದಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್‌,“#BharatJodoYatra ಯಶಸ್ಸಿನಿಂದ ಕಂಗೆಟ್ಟಿರುವ ಬಿಜೆಪಿ ಕನ್ನಡ ಪತ್ರಿಕೆಯೊಂದರಲ್ಲಿ ಎಂದಿನಂತೆ ಇತಿಹಾಸ ತಿರುಚುವ ಮುಖಪುಟದ ಜಾಹೀರಾತು ನೀಡಿದೆ. ಸಾವರ್ಕರ್ ಎರಡು ರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು, ಜಿನ್ನಾ ಅದನ್ನು ಪೂರೈಸಿಕೊಂಡರು. ಜನಸಂಘದ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಬಂಗಾಳದ ವಿಭಜನೆಯಲ್ಲಿ ಮುಂದಾಳತ್ವ ವಹಿಸಿದ್ದರು” ಎಂದು ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್‌ ಇದನ್ನು ವಿರೋಧಿಸಿ ಟ್ವೀಟ್ ಮಾಡಿದ್ದು, ಭಾರತ ಐಕ್ಯತಾ ಯಾತ್ರೆಯು ಬಿಜೆಪಿಗೆ ಭಯ, ಆತಂಕ, ಅಭದ್ರತೆಯನ್ನು ಮೂಡಿಸಿದೆ ಎಂದು ಹೇಳಿದೆ.

“ರಾಜಕೀಯ ಪಕ್ಷಗಳು ಸಹಜವಾಗಿ ತಮ್ಮ ಸಾಧನೆ ಹೇಳಲು, ಸಕಾರಾತ್ಮಕ ಸಂದೇಶ ನೀಡಲು ಪತ್ರಿಕೆಗಳ ಮುಖಪುಟದ ಜಾಹೀರಾತು ನೀಡುವುದು ವಾಡಿಕೆ. ಆದರೆ ರಾಜ್ಯ ಬಿಜೆಪಿ ಕೋಟಿ ಕೋಟಿ ಖರ್ಚು ಮಾಡಿ ನಕಾರಾತ್ಮಕ ಜಾಹೀರಾತು ನೀಡಿದೆ ಎಂದರೆ ಅವರಲ್ಲಿ ಅದೆಷ್ಟು ಭಯ, ಆತಂಕ, ಅಭದ್ರತೆಯನ್ನು #BharatJodoYatra ಮೂಡಿಸಿರಬಹುದೆಂದು ಊಹಿಸಬಹುದು” ಎಂದು ಅದು ಆಕ್ರೋಶ ವ್ಯಕ್ತಪಡಿಸಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದಲ್ಲಿ ‘ಭಾರತ ಐಕ್ಯತಾ ಯಾತ್ರೆ’
#PayCM ಟಿ-ಶರ್ಟ್ ಧರಿಸಿದ್ದ ಕಾರ್ಯಕರ್ತನಿಗೆ
ಥಳಿಸಿದ ಪೊಲೀಸ್ ಅಧಿಕಾರಿ
1 October 2022

🛑 Live | ಕರ್ನಾಟಕದಲ್ಲಿ ‘ಭಾರತ ಐಕ್ಯತಾ ಯಾತ್ರೆ’ | #PayCM ಟಿ-ಶರ್ಟ್ ಧರಿಸಿದ್ದ ಕಾರ್ಯಕರ್ತನಿಗೆ ಥಳಿಸಿದ ಪೊಲೀಸ್ ಅಧಿಕಾರಿ

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ‌ ಐಕ್ಯತಾ ಯಾತ್ರೆ’ಯಲ್ಲಿ #PayCM ಬಾವುಟ ಮತ್ತು ಟಿ ಶರ್ಟ್ ಧರಿಸಿ ಭಾಗವಹಿಸಿದ ಕಾಂಗ್ರೆಸ್ ಕಾರ್ಯಕರ್ತನಿಗೆ ಪೊಲೀಸರು ಹಲ್ಲೆ ನಡೆಸಿರುವ ಘಟನೆ ಶನಿವಾರ ನಡೆದಿದೆ. ಹಲ್ಲೆಗೊಳಗಾಗಿರುವ ಕಾರ್ಯಕರ್ತನನ್ನು ವಿಜಯಪುರ ಜಿಲ್ಲೆಯ ಅಕ್ಷಯ್ ಕುಮಾರ್‌ ಎಂದು ಗುರುತಿಸಲಾಗಿದ್ದು ಪೊಲೀಸರು ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಕರ್ನಾಟಕದಲ್ಲಿ ಎರಡನೇ ದಿನಕ್ಕೆ ಕಾಲಿಡುತ್ತಿರುವ ಭಾರತ ಐಕ್ಯತಾ ಯಾತ್ರೆಯು ಮೈಸೂರಿನತ್ತ ಚಲಿಸುತ್ತಿದೆ. ಇದೇ ವೇಳೆ ಪೊಲೀಸರು ಈ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. #PayCM ಟಿ-ಶರ್ಟ್ ಧರಿಸಿದ್ದಕ್ಕೆ ಅವರ ಮೇಲೆ ದಾಳಿ ಮಾಡಿದ ಪೊಲೀಸರು ಅದನ್ನು ತೆಗೆಯುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ರಾಜ್ಯ ಕಾಂಗ್ರೆಸ್‌ ನಡೆಸಿದ್ದ #PayCM ಅಭಿಯಾನದ ಟಿ-ಶರ್ಟ್‌ ಮತ್ತು ಧ್ವಜವನ್ನು ಅಕ್ಷಯಕುಮಾರ್ ಅವರು ಹಿಡಿದಿದ್ದರು ಮತ್ತು ಟೀ ಶರ್ಟ್ ಧರಿಸಿದ್ದರು. ಇದೀಗ ಅವರ ವಿರುದ್ಧ ಪೊಲೀಸ್ ಇಲಾಖೆ ಎಫ್‌ಐಆರ್ ದಾಖಲಿಸಿದೆ ಎಂದು ವರದಿಯಾಗಿದೆ. ವಿಡಿಯೊದಲ್ಲಿ ಪೊಲೀಸ್ ಅಧಿಕಾರಿಯು ಮುಷ್ಟಿ ಹಿಡಿದು ಅಕ್ಷಯ್ ಕುಮಾರ್‌ ಅವರಿಗೆ ಥಳಿಸುವುದು ದಾಖಲಾಗಿದೆ.

“ಒಂದು ವೇಳೆ ಅವರು ಟಿ-ಶರ್ಟ್ ಧರಿಸಿದ್ದು ತಪ್ಪಾಗಿದ್ದರೆ ಅವರನ್ನು ಶಾಂತಿಯುತವಾಗಿಯೆ ಬಂಧಿಸಬಹುದಿತ್ತು. ಆದರೆ ಈ ಪೊಲೀಸ್ ಅಧಿಕಾರಿ ಮನಸ್ಸಿನೊಳಗೆ ಪಕ್ಷಪಾತ ಇಟ್ಟು ಈ ರೀತಿ ವರ್ತಿಸಿದ್ದಾರೆ. ಕಾರ್ಯಕರ್ತನ ಮೇಲೆ ಅವರು ತೋರಿಸಿದ ದರ್ಪ ಅವರದ್ದಲ್ಲ, ಅದು ಈ ರಾಜ್ಯದ ಆಳುವ ಪಕ್ಷವಾದ ಬಿಜೆಪಿಯದ್ದು. ಯಾತ್ರೆಯಿಂದ ಬಿಜೆಪಿ ಬೆದರಿದೆ, ಅದಕ್ಕೆ ಅದು ಕಾರ್ಯಾಂಗದ ಮೂಲಕ ಹೀಗೆ ವರ್ತಿಸುತ್ತಿದೆ” ಎಂದು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

ಈ ಬಗ್ಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು ಇವರು ಪೊಲೀಸರು, ಬೀದಿ ಪುಂಡರೋ ಎಂದು ಪ್ರಶ್ನಿಸಿದೆ. #PayCm ಟಿ ಶರ್ಟ್ ಧರಿಸಿದ್ದ ನಮ್ಮ ಕಾರ್ಯಕರ್ತನ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿರುವುದು ಖಂಡನೀಯ. ಟಿ ಶರ್ಟ್ ಬಿಚ್ಚಿಸಿ ರಸ್ತೆಯಲ್ಲಿ ಆತನ ಮೇಲೆ ಹಲ್ಲೆ ನಡೆಸಲು ಪೊಲೀಸರಿಗೆ ಅಧಿಕಾರ ಕೊಟ್ಟವರು ಯಾರು? ಇವರೇನು ಪೊಲೀಸರೊ ಅಥವಾ ಗೂಂಡಾಗಳೋ? ಹಲ್ಲೆ ನಡೆಸಿದ ಅಧಿಕಾರಿಯನ್ನು ಈ ಕೂಡಲೇ ಅಮಾನತು ಮಾಡಬೇಕು” ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಮತ್ತು ರಾಜ್ಯ ಪೊಲೀಸರಿಗೆ ಆಗ್ರಹಿಸಿದೆ.

ಕರ್ನಾಟಕದಲ್ಲಿ ‘ಭಾರತ ಐಕ್ಯತಾ ಯಾತ್ರೆ’
ಮೈಸೂರಿನತ್ತ ಲಗ್ಗೆ
1 October 2022

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ‘ಭಾರತ ಐಕ್ಯತಾ ಯಾತ್ರೆ’ ಚಾಮರಾಜನಗರ ಜಿಲ್ಲೆಯಿಂದ ಮೈಸೂರಿನತ್ತ ಚಲಿಸಿದೆ. ರಾಹುಲ್ ಗಾಂಧಿಯ ಜೊತೆಗೆ ರಾಜ್ಯ ವಿಧಾನ ಪರಿಷತ್‌‌‌ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಪ್ರಿಯಾಂಕ್‌ ಖರ್ಗೆ ಕೂಡಾ ಹೆಜ್ಜೆ ಹಾಕುತ್ತಿದ್ದಾರೆ.

ಇಂದಿನ ಪಾದಯಾತ್ರೆಯು ಗುಂಡ್ಲುಪೇಟೆಯ ತೊಂಡವಾಡಿ ಗೇಟ್‌‌ನಿಂದ ಹೊರಟಿದೆ. ಅಲ್ಲಿಂದ ಹೊರಟ ಯಾತ್ರೆಯು ಕಳಲೆ ಗೇಟ್‌ ವಿರಮಿಸಲಿದೆ. ಸಂಜೆ ನಾಲ್ಕುವರೆ ಗಂಟೆಗೆ ಅಲ್ಲಿಂದ ಹೊರಡಲಿರುವ ಯಾತ್ರೆಯು ಮೈಸೂರು ಜಿಲ್ಲೆಯನ್ನು ಪ್ರವೇಶಿಸಿ ತಾಂಡವಪುರದ ಚಿಕ್ಕಯಾನ ಛತ್ರದಲ್ಲಿ ಮತ್ತೆ ವಿರಮಿಸಲಿದೆ. ರಾತ್ರಿ ತಾಂಡವಪುರದಲ್ಲೆ ತಂಗಲಿದೆ.

ಶುಕ್ರವಾರ ಮಧ್ಯಾಹ್ನ ರಾಹುಲ್ ಗಾಂಧಿ ಅವರು ಚಾಮರಾಜನಗರ ಜಿಲ್ಲೆಯ ಬುಡಕಟ್ಟು ಸಮುದಾಯ ಸಂಘದೊಂದಿಗೆ ಸಂವಾದ ನಡೆಸಿದರು. ಬುಡಕಟ್ಟು ಸಮುದಾಯದೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ಪ್ರಕೃತಿಯನ್ನು ಹೇಗೆ ಗೌರವಿಸಬೇಕು ಎಂಬುದನ್ನು ಅವರಿಂದ ನಾವು ಕಲಿಯಬೇಕು ಎಂದು ಒತ್ತಿ ಹೇಳಿದರು.

ರಾಯಚೂರು ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಆಮ್ಲಜನಕದ ಕೊರತೆ ದುತಂತದಲ್ಲಿ ಸಾವನ್ನಪ್ಪಿದ ಕುಟುಂಬ ಸದಸ್ಯರನ್ನು ಅವರು ಭೇಟಿ ಮಾಡಿ ಅವರಿಗೆ ಸಾಂತ್ವಾನ ಹೇಳಿದರು.

ಶುಕ್ರವಾರ ರಾಜ್ಯದಕ್ಕೆ ಆಗಮಿಸಿದ್ದ ಯಾತ್ರೆಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಸೇರಿದಂತೆ ಸ್ವಾಗತಿಸಿದ್ದರು. ಯಾತ್ರೆಯಲ್ಲಿ ಕೂಡಾ ಅವರು ಅವರು ಜೊತೆಗೂಡಿ ಹೆಜ್ಜೆ ಹಾಕಿದ್ದರು.

ಬೆಂಬಲ ವ್ಯಕ್ತಪಡಿಸಿ ರಾಹುಲ್‌ ಗಾಂಧಿಗೆ 
ಸಂವಿಧಾನದ ಪ್ರತಿ ನೀಡಿದ 
ಖ್ಯಾತ ಸಾಹಿತಿ ದೇವನೂರ ಮಹಾದೇವ
30 September 2022

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ ಐಕ್ಯತಾ ಯಾತ್ರೆ’ಗೆ ನಾಡಿನ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರು ಶುಕ್ರವಾರ ಬೆಂಬಲ ನೀಡಿದ್ದಾರೆ.

ಗುಂಡ್ಲು ಪೇಟೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ದೇವನೂರ ಮಹಾದೇವ ಅವರು ರಾಹುಲ್ ಗಾಂಧಿ ಅವರಿಗೆ ಭಾರತದ ಸಂವಿಧಾನ ಮತ್ತು ಸಂವಿಧಾನದ ಪೀಠಿಕೆಯನ್ನು ನೀಡಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಭಾರತ್ ಜೋಡೋ ಯಾತ್ರೆ ಕರ್ನಾಟಕದ ಮೂಲಕ ಇಡಿ ದೇಶಕ್ಕೆ ‘ಸಂವಿಧಾನ ಉಳಿಸುವ’ ಚೈತನ್ಯವನ್ನು ನೀಡುತ್ತಿದೆ. ಭಾರತದಲ್ಲಿ ದಲಿತ ದೌರ್ಜನ್ಯದ ಬಳಿಕ ರಭಸ ಪಡೆದುಕೊಂಡಿರುವ ಶೂದ್ರ ವಿರೋಧಿ ಸಂಸ್ಕಾರವನ್ನು ಮೆಟ್ಟಿ ನಿಲ್ಲುವ, ಶೂದ್ರ ವಿರೋಧಿ ರಾಜಕಾರಣದ ಧಿಮಾಕನ್ನು ಕತ್ತರಿಸುವ ಪ್ರತಿಜ್ಞೆಯನ್ನು ಎಲ್ಲರೂ ಕೈಗೊಳ್ಳಬೇಕಿದೆ” ಎಂದು ಕಾಂಗ್ರೆಸ್ ವಕ್ತಾರ ಪ್ರಕಾಶ್ ರಾಥೋಡ್‌ ಹೇಳಿದ್ದಾರೆ.

ಭಾರತ ಐಕ್ಯತಾ ಯಾತ್ರೆಗೆ, ಜನಪರ ಚಳವಳಿ, ಸಂಘಟನೆ, ಸಾಹಿತಿಗಳು, ಕಲಾವಿದರು, ಚಿಂತಕರು ಹಾಗೂ ಸೌಹಾರ್ದ ಕನ್ನಡಿಗರ ವೇದಿಕೆ ಬೆಂಬಲ ವ್ಯಕ್ತಪಡಿಸಿದೆ.


ಕರ್ನಾಟಕದಲ್ಲಿ ‘ಭಾರತ ಐಕ್ಯತಾ ಯಾತ್ರೆ’ 
ನೊಂದವರಿಗೆ ರಾಹುಲ್ ಗಾಂಧಿಯಿಂದ ಸಾಂತ್ವಾನ
30 September 2022

ಚಾಮರಾಜನಗರ ಕೊರೊನಾ ದುರಂತದಲ್ಲಿ ಮೃತಪಟ್ಟವರನ್ನು ಭೇಟಿ ಮಾಡಲಿರುವ ರಾಹುಲ್ ಗಾಂಧಿ | Naanu Gauri

ಬೆಂಡಗಳ್ಳಿ ಮೂಲಕ ಹಾದು ಹೋಗಲಿರುವ ರಾಹುಲ್ ಗಾಂಧಿ ನೇತೃತ್ವದ ‘ಭಾರತ ಐಕ್ಯತಾ ಯಾತ್ರೆ’ ಪಾದಯಾತ್ರೆ, ಸಂಜೆ ಬೇಗೂರು ಬಸ್ ನಿಲ್ದಾಣ ಸಮೀಪ ವಿರಮಿಸಲಿದೆ. ಅಲ್ಲಿಂದ ಬೇಗೂರು ಸರ್ಕಾರಿ ಪ್ರೌಢಶಾಲೆಯ ಪಕ್ಕದಲ್ಲಿರುವ ಗ್ರೌಂಡ್ ನಲ್ಲಿ ಮೊದಲ ದಿನದ ಯಾತ್ರೆಯನ್ನು ಮುಗಿಸಲಿದೆ.

ಈ ನಡುವೆ ಯಾತ್ರೆಯ ನಡುವಲ್ಲಿ ಎರಡು ಪುಟ್ಟ ಸಂವಾದ ಕಾರ್ಯಕ್ರಮಗಳಲ್ಲಿ ರಾಹುಲ್ ಗಾಂಧಿ ಭಾಗಿಯಾಗಲಿದ್ದಾರೆ. ಮೊದಲ ಕಾರ್ಯಕ್ರಮದಲ್ಲಿ ಚಾಮರಾಜ ನಗರ ಬುಡಕಟ್ಟು ಸಮುದಾಯ ಸಂಘದೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಎರಡನೆ ಕಾರ್ಯಕ್ರಮದಲ್ಲಿ ಕೊರೊನಾ ದುರಂತದ ಸಮಯದಲ್ಲಿ ಚಾಮರಾಜನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದವರ ಕುಟುಂಬಗಳೊಂದಿಗೆ ರಾಹುಲ್ ಗಾಂಧಿ ಸಮಾಲೋಚನ ಸಭೆ ನಡೆಸಿ, ಅವರಿಗೆ ಸಾಂತ್ವನ ಹೇಳಲಿದ್ದಾರೆ.


ಕರ್ನಾಟಕದಲ್ಲಿ ‘ಭಾರತ ಐಕ್ಯತಾ ಯಾತ್ರೆ’
ಇಂದಿನ ಯಾತ್ರೆ ಹೀಗಿರಲಿದೆ
30 September 2022

🛑 Live Updates | ಕರ್ನಾಟಕದಲ್ಲಿ ‘ಭಾರತ ಐಕ್ಯತಾ ಯಾತ್ರೆ’ | ಇಂದಿನ ಯಾತ್ರೆ ಹೀಗಿರಲಿದೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ ಐಕ್ಯತಾ ಯಾತ್ರೆ’ಯು ಚಾಮರಾಜನಗರ ಜಿಲ್ಲೆಯ ಮೂಲಕ ಕರ್ನಾಟಕಕ್ಕೆ ಶುಕ್ರವಾರ ಪ್ರವೇಶಿಸಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಊಟಿ-ಕ್ಯಾಲಿಕಟ್ ಜಂಕ್ಷನ್ ಅಂಬೇಡ್ಕರ್‌ ಭವನದಲ್ಲಿ ಯಾತ್ರೆಯನ್ನು ರಾಜ್ಯದ ಕಾಂಗ್ರೆಸ್ ನಾಯಕರು ಸ್ವಾಗತಿಸಿದ್ದಾರೆ.

ದೇಶದಾದ್ಯಂತ ಸರಿ ಸುಮಾರು 150 ದಿನಗಳ ಅವಧಿಯ ಪಾದಯಾತ್ರೆಯು ರಾಜ್ಯದಲ್ಲಿ 21 ದಿನಗಳ ಕಾಲ ಸಂಚರಿಸಲಿದೆ. ಯಾತ್ರೆಯು ಸುಮಾರು 3,500 ಕಿಮೀ ದೂರವನ್ನು ಕ್ರಮಿಸುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈಗಾಗಲೆ ರಾಜ್ಯದಿಂದ ಪಾದಯಾತ್ರೆ ಪ್ರಾರಂಭವಾಗಿದ್ದು, ಚಾಮರಾಜನಗರದ ಊಟಿ-ಕ್ಯಾಲಿಕಟ್ ಜಂಕ್ಷನ್‌ನಿಂದ ಹೊರಟಿದೆ. ಪಂಜನಹಳ್ಳಿಯ ಸ್ವಾಮಿ ಶನೇಶ್ವರ ದೇವಾಲಯದ ಪಾದಯಾತ್ರೆ ತಂಗಲಿದ್ದು, ನಂತರ ಸಂಜೆಗೆ ಬೆಂಡಗಳ್ಳಿಯಲ್ಲಿ ನಿಂತು, ನಂತರ ಬೇಗೂರು ಬಸ್ ನಿಲ್ದಾಣದಲ್ಲೂ ನಿಲ್ಲಲಿದೆ.

ಗುಂಡ್ಲುಪೇಟೆಯ ಸರ್ಕಾರಿ ಹೈಸ್ಕೂಲ್ ಪಕ್ಕದ ಬೇಗೂರು ಮೈದಾನಲ್ಲಿ ಪಾದಯಾತ್ರಿಗಳು ರಾತ್ರಿ ತಂಗಲಿದ್ದಾರೆ.


ಕರ್ನಾಟಕ ಪ್ರವೇಶಿಸಿದ ‘ಭಾರತ ಐಕ್ಯತಾ ಯಾತ್ರೆ’
30 September 2022

🛑 Live Updates | ಕರ್ನಾಟಕಕ್ಕೆ ಆಗಮಿಸಿದ ‘ಭಾರತ ಐಕ್ಯತಾ ಯಾತ್ರೆ’

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ ಐಕ್ಯತಾ ಯಾತ್ರೆ’ಯು ಚಾಮರಾಜನಗರ ಜಿಲ್ಲೆಯ ಮೂಲಕ ಕರ್ನಾಟಕಕ್ಕೆ ಶುಕ್ರವಾರ ಪ್ರವೇಶಿಸಿದೆ. ಪಕ್ಷದ ರಾಷ್ಟ್ರೀಯ ನಾಯಕರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್‌‌ ಸೇರಿದಂತೆ ಪಕ್ಷದ ಮುಖಂಡರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

‘ಭಾರತ ಐಕ್ಯತಾ ಯಾತ್ರೆ’ಯು 23 ನೇ ದಿನಕ್ಕೆ ಕಾಲಿಟ್ಟಿದ್ದು, ಇದೇ ಮೊದಲ ಬಾರಿ ಬಿಜೆಪಿ ಆಡಳಿತದ ರಾಜ್ಯವನ್ನು ಪ್ರವೇಶಿಸುತ್ತಿದೆ. ಯಾತ್ರೆ ರಾಜ್ಯಕ್ಕೆ ಆಗಮಿಸುವ ಮುನ್ನ ರಾಜ್ಯದಲ್ಲಿ ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರ ಹಲವಾರು ಪೋಸ್ಟರ್‌ಗಳನ್ನು ಹರಿದು ಹಾಕಲಾಗಿತ್ತು. ಇದು ಬಿಜೆಪಿ ಕೃತ್ಯ ಎಂದು ಕಾಂಗ್ರೆಸ್ ಆರೋಪಿಸಿದೆ. ಸುಮಾರು 40ಕ್ಕೂ ಹೆಚ್ಚು ಪೋಸ್ಟರ್‌ಗಳನ್ನು ಹರಿದು ಹಾಕಲಾಗಿದೆ ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಭಾರತ ಐಕ್ಯತಾ ಯಾತ್ರೆಯ ಮೂಲಕ ಇಂದು ರಾಜ್ಯಕ್ಕೆ ಆಗಮಿಸಿದ ರಾಹುಲ್ ಗಾಂಧಿ ಅವರನ್ನು ಬಂಡೀಪುರದ ಬಳಿ ಪ್ರೀತಿಯಿಂದ ಬರ ಮಾಡಿಕೊಂಡೆವು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಮಾಜಿ ಸಚಿವರಾದ ಕೆ.ಜೆ ಜಾರ್ಜ್‌, ಸಿ. ಮಹದೇವಪ್ಪ, ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಶ್ ರಾಥೋಡ್‌‌ ಇನ್ನಿತರರು ಹಾಜರಿದ್ದರು” ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.

ಯಾತ್ರೆಯ ನಿರ್ವಹಣೆಗಾಗಿ ರಾಜ್ಯ ಕಾಂಗ್ರೆಸ್ 18 ಸಮಿತಿಗಳನ್ನು ರಚಿಸಿದೆ. ಯಾತ್ರೆಗೆ ಪ್ರತಿ ಕ್ಷೇತ್ರದಿಂದ 5 ಸಾವಿರ ಜನರನ್ನು ಸಜ್ಜುಗೊಳಿಸುವಂತೆ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷದ ಎಲ್ಲಾ ಶಾಸಕರಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ‘ರಾಹುಲ್ ಗಾಂಧಿಯನ್ನು ಸ್ವಾಗತಿಸುತ್ತೇನೆ’: ಭಾರತ್‌ ಜೋಡೋ ಯಾತ್ರೆಗೆ ಜೆಡಿಎಸ್‌ನ ಶಾಸಕನ ಬೆಂಬಲ

“ಭಾರತ ಐಕ್ಯತಾ ಯಾತ್ರೆ ಹಾಗೂ ರಾಹುಲ್‌ ಗಾಂಧಿ ಅವರನ್ನು ಕನ್ನಡ ನಾಡು ತೆರೆದ ಬಾಹುಗಳಿಂದ ಸ್ವಾಗತಿಸಿದೆ. ನವ ಭಾರತ ನಿರ್ಮಾಣದ ಮತ್ತೊಂದು ಅಧ್ಯಾಯ ಆರಂಭವಾಗಿದೆ” ಎಂದು ಡಿ.ಕೆ. ಶಿವಕುಮಾರ್‌ ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಭಾರತ ಐಕ್ಯತಾ ಯಾತ್ರೆಗೆ ಇತರ ಪಕ್ಷಗಳು ಮತ್ತು ಸಂಘಟನೆಗಳು, ಸಾಹಿತಿಗಳು, ಹೋರಾಟಗಾರರು ಕೂಡಾ ಬೆಂಬಲ ವ್ಯಕ್ತಪಡಿಸಿದ್ದಾರೆ.

“ಭಾರತ ಐಕ್ಯತಾ ಯಾತ್ರೆಯ ಗುರಿ ಭಾರತವನ್ನು ಒಂದುಗೂಡಿಸುವುದು ಮತ್ತು ಒಗ್ಗೂಡಿ ನಮ್ಮ ರಾಷ್ಟ್ರವನ್ನು ಬಲಪಡಿಸುವುದು” ಎಂದು ಕಾಂಗ್ರೆಸ್ ಹೇಳಿಕೊಂಡಿದೆ.

ಇದನ್ನೂ ಓದಿ: ಭಾರತ್‌ ಜೋಡೋ – ಹೃದಯ ಬೆಸೆಯುವ ಯಾತ್ರೆ: ಜಿ.ಪಿ.ಬಸವರಾಜು

ಪಾದಯಾತ್ರೆಯು ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾಗಿದ್ದು, 12 ರಾಜ್ಯಗಳ ಮೂಲಕ ಹಾದುಹೋಗಿ, ಜಮ್ಮು ಕಾಶ್ಮೀರದಲ್ಲಿ ಕೊನೆಗೊಳ್ಳುತ್ತದೆ. ಸರಿ ಸುಮಾರು 150 ದಿನಗಳ ಅವಧಿಯಲ್ಲಿ ಸುಮಾರು 3,500 ಕಿಮೀ ದೂರವನ್ನು ಯಾತ್ರೆಯು ನಡೆಯುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...