Homeಮುಖಪುಟಉತ್ತರಪ್ರದೇಶ: ನವಜಾತ ಶಿಶುಗಳ ಸಾವು; ವೈದ್ಯನ ಬಂಧನ

ಉತ್ತರಪ್ರದೇಶ: ನವಜಾತ ಶಿಶುಗಳ ಸಾವು; ವೈದ್ಯನ ಬಂಧನ

- Advertisement -
- Advertisement -

ಭಾನುವಾರ ಶಾಮ್ಲಿ ಜಿಲ್ಲೆಯ ಖಾಸಗಿ ಕ್ಲಿನಿಕ್‌ನಲ್ಲಿ ಎರಡು ನವಜಾತ ಶಿಶುಗಳು ಹೆಚ್ಚು ತಂಪಾಗಿರುವ ಕೋಣೆಯಲ್ಲಿ ಇರಿಸಿದ್ದರಿಂದ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚೆನ್ನಾಗಿ ನಿದ್ರೆ ಮಾಡುವ ಉದ್ದೇಶದಿಂದ ಕ್ಲಿನಿಕ್‌ನ ಮಾಲಕನೂ ಕೂಡ ಆಗಿರುವ ವೈದ್ಯ ‘ಎಸಿ’ಯನ್ನು ಆನ್‌ ಮಾಡಿಟ್ಟಿದ್ದು, ಈತನ ಯಡವಟ್ಟಿಗೆ ಎರಡು ನವಜಾತ ಶಿಶುಗಳು ಮೃತಪಟ್ಟ ಘಟನೆ ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ.

ವೈದ್ಯನ ವಿರುದ್ಧ ಸಂತ್ರಸ್ತ ಕುಟುಂಬಗಳು ಪ್ರತಿಭಟನೆ ನಡೆಸಿದ್ದು ಕ್ರಮಕ್ಕೆ ಆಗ್ರಹಿಸಿದೆ. ವೈದ್ಯ ರಾತ್ರಿ ನಿದ್ರೆ ಮಾಡುವಾಗ ‘ಎಸಿ’ಯನ್ನು ಆನ್‌ ಮಾಡಿದ್ದೇ ಘಟನೆಗೆ ಕಾರಣ ಎಂದು ಆರೋಪಿಸಿದ್ದಾರೆ. ಇದೀಗ ಪೊಲೀಸರು ಆರೋಪಿ ವೈದ್ಯ ನೀತು ವಿರುದ್ಧ ಐಪಿಸಿಯ ಸೆಕ್ಷನ್ 304ರಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕೈರಾನಾ ಎಸ್‌ಎಚ್‌ಒ ನೇತ್ರಪಾಲ್ ಸಿಂಗ್ ಈ ಕುರಿತು ಮಾಹಿತಿಯನ್ನು ನೀಡಿದ್ದು, ಕುಟುಂಬಸ್ಥರ ದೂರಿನ ಬಳಿಕ ಆರೋಪಿ ವೈದ್ಯ ನೀತು ಅವರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನು ಘಟನೆಯ ಬಗ್ಗೆ ಆರೋಗ್ಯ ಇಲಾಖೆ ತನಿಖೆಗೆ ಆದೇಶಿಸಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಅಶ್ವನಿ ಶರ್ಮಾ ತಿಳಿಸಿದ್ದಾರೆ.

ದೂರಿನ ಪ್ರಕಾರ, ಶನಿವಾರ ಕೈರಾನಾದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಿಶುಗಳು ಜನಿಸಿದ್ದು, ನಂತರ ಅದೇ ದಿನ ಖಾಸಗಿ ಕ್ಲಿನಿಕ್‌ಗೆ ಸ್ಥಳಾಂತರಿಸಲಾಗಿದೆ. ಶಿಶುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಯ ವಿಶೇಷ ಘಟಕದಲ್ಲಿ ಇರಿಸಲಾಗಿತ್ತು.

ವೈದ್ಯ ನೀತು ಶನಿವಾರ ರಾತ್ರಿ ಮಲಗಲು ಹವಾನಿಯಂತ್ರಿತ ಕೊಠಡಿಯನ್ನು ಸ್ವಿಚ್ ಆನ್ ಮಾಡಿದ್ದು, ಮರುದಿನ ಬೆಳಿಗ್ಗೆ ಸಂತ್ರಸ್ತ ಕುಟುಂಬಸ್ಥರು ಶಿಶುಗಳನ್ನು ನೋಡಲು ಹೋದಾಗ ಎರಡು ಶಿಶುಗಳು ಕೂಡ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದೆ.

ಇದನ್ನು ಓದಿ: ಉತ್ತರಪ್ರದೇಶ: ಲೋಕಸಭೆ, ವಿಧಾನಸಭೆಗಳಲ್ಲಿ SC, ST, OBCಗಳಿಗಿಂತ ಹೆಚ್ಚು ಪ್ರಾತಿನಿಧ್ಯ ಪಡೆದ ಬ್ರಾಹ್ಮಣ, ಠಾಕೂರ್‌ ಮಹಿಳೆಯರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...