Homeಮುಖಪುಟಪೂರ್ವ ಲಡಾಖ್‌ನ ಎಲ್‌ಎಸಿನಲ್ಲಿ ಪರಿಸ್ಥಿತಿ ಅಪಾಯಕಾರಿಯಾಗಿದೆ: ವಿದೇಶಾಂಗ ಸಚಿವ ಜೈಶಂಕರ್‌‌

ಪೂರ್ವ ಲಡಾಖ್‌ನ ಎಲ್‌ಎಸಿನಲ್ಲಿ ಪರಿಸ್ಥಿತಿ ಅಪಾಯಕಾರಿಯಾಗಿದೆ: ವಿದೇಶಾಂಗ ಸಚಿವ ಜೈಶಂಕರ್‌‌

- Advertisement -
- Advertisement -

ಪೂರ್ವ ಲಡಾಖ್‌ನಲ್ಲಿನ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಉದ್ದಕ್ಕೂ ಭಾರತ ಮತ್ತು ಚೀನಾ ನಡುವಿನ ಪರಿಸ್ಥಿತಿಯು ಬಹಳ ಸೂಕ್ಷ್ಮವೂ, ಸಾಕಷ್ಟು ಅಪಾಯಕಾರಿಯೂ ಆಗಿ ಉಳಿದಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

‘ಇಂಡಿಯಾ ಟುಡೇ’ ವಾಹಿನಿಯ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿರುವ ಅವರು, “ಎರಡೂ ದೇಶಗಳ ಮಿಲಿಟರಿ ಪಡೆಗಳು ಕೆಲವು ಭಾಗಗಳಲ್ಲಿ ಪರಸ್ಪರ ಹತ್ತಿರದಲ್ಲಿ ನಿಯೋಜಿಸಲ್ಪಟ್ಟಿವೆ. ಹೀಗಾಗಿ ಪರಿಸ್ಥಿತಿ ಸೂಕ್ಷ್ಮವೂ ಅಪಾಯಕಾರಿಯೂ ಆಗಿದೆ” ಎಂದಿದ್ದಾರೆ.

ಜೂನ್ 2020ರಲ್ಲಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರು ಮುಖಾಮುಖಿಯಾದಾಗ ಎರಡೂ ಕಡೆಗಳಲ್ಲಿ ಸಾವುನೋವುಗಳು ಸಂಭವಿಸಿದ್ದವು. ಹಲವು ದಶಕಗಳ ನಂತರ ಈ ವಿದ್ಯಮಾನ ನಡೆದಿತ್ತು. ಅನೇಕ ಸೂಕ್ಷ್ಮ ಪ್ರದೇಶಗಳಲ್ಲಿ ಉದ್ವಿಗ್ನತೆಗಳು ಭುಗಿಲೆದ್ದವು. ಫಿರಂಗಿ, ಟ್ಯಾಂಕ್‌ಗಳು ಮತ್ತು ಫೈಟರ್ ಜೆಟ್‌ಗಳೊಂದು ಹತ್ತಾರು ಸಾವಿರ ಸೈನಿಕರನ್ನು ಉಭಯ ದೇಶಗಳೂ ನಿಯೋಜಿಸಿದ್ದವು.

ಈ ತಿಂಗಳ ಆರಂಭದಲ್ಲಿ ಅಮೇರಿಕನ್ ಗುಪ್ತಚರವು ಹಲವು ವಿಚಾರಗಳನ್ನು ತಿಳಿಸಿತ್ತು. ಆತಂಕಕಾರಿ ಸಂಗತಿಗಳನ್ನು ಮೌಲ್ಯಮಾಪನ ಮಾಡಿ, ಮಿಲಿಟರಿ ವಿಸ್ತರಣೆಯಿಂದಾಗಿ ಪರಮಾಣು-ಶಸ್ತ್ರಸಜ್ಜಿತ ದೈತ್ಯರ ನಡುವಿನ ಸಶಸ್ತ್ರ ಮುಖಾಮುಖಿಯ ಅಪಾಯಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿತ್ತು.

ಇಂಡಿಯಾ ಟುಡೇ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೈ ಶಂಕರ್‌ ಮಾತನಾಡಿದ್ದು, “ಚೀನಾದ ಮಾಜಿ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ 2020ರ ಸೆಪ್ಟೆಂಬರ್‌ನಲ್ಲಾದ ತಾತ್ವಿಕ ಒಪ್ಪಂದಕ್ಕೆ ಅನುಗುಣವಾಗಿ ಗಡಿ ವಿವಾದವನ್ನು ಪರಿಹರಿಸುವವರೆಗೆ ನವದೆಹಲಿ ಮತ್ತು ಬೀಜಿಂಗ್ ನಡುವಿನ ಸಂಬಂಧಗಳು ಸಹಜ ಸ್ಥಿತಿಗೆ ಮರಳಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

“ಚೀನಿಯರು ತಾವು ಒಪ್ಪಿಕೊಂಡದ್ದನ್ನು ನಡೆಸಿಕೊಡಬೇಕು. ಆದರೆ ಅವರು ಒಪ್ಪಂದದೊಂದಿಗೆ ತಾಕಲಾಟದಲ್ಲಿದ್ದಾರೆ” ಎಂದು ಜೈಶಂಕರ್ ಹೇಳಿದ್ದಾರೆ.

ಇದನ್ನೂ ಓದಿರಿ: ಕೆಲವು ನಿವೃತ್ತ ನ್ಯಾಯಮೂರ್ತಿಗಳು ದೇಶ ವಿರೋಧಿ ಗ್ಯಾಂಗ್‌ನಲ್ಲಿದ್ದಾರೆ: ಕೇಂದ್ರ ಕಾನೂನು ಸಚಿವ

ಇತರ ವಿಚಾರಗಳ ಬಗ್ಗೆಯೂ ಚರ್ಚೆಗಳು ನಡೆಯುತ್ತಿರುವಾಗ ಉಭಯ ರಾಷ್ಟ್ರಗಳು ಅನೇಕ ಕ್ಷೇತ್ರಗಳಿಂದ ಹೊರಗುಳಿಯುವಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿವೆ ಎಂದು ವಿದೇಶಾಂಗ ಸಚಿವರು ತಿಳಿಸಿದ್ದಾರೆ.

ಮಾರ್ಚ್ 2ರಂದು ದೆಹಲಿಯಲ್ಲಿ ನಡೆದ ಜಿ 20 ವಿದೇಶಾಂಗ ಸಚಿವರ ಸಭೆಯ ಹಿನ್ನೆಲೆಯಲ್ಲಿ ಚೀನಾದ ಹೊಸ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ಅವರೊಂದಿಗೆ ಗಡಿಯಲ್ಲಿನ ಪರಿಸ್ಥಿತಿಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದೇನೆ ಎಂದು ಜೈಶಂಕರ್ ಮಾಹಿತಿ ನೀಡಿದ್ದಾರೆ.

“ನಾವು ಶಾಂತಿ ಮತ್ತು ನೆಮ್ಮದಿಯನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ನಾವು ಚೀನಿಯರಿಗೆ ಸ್ಪಷ್ಟವಾಗಿ ಹೇಳಿದ್ದೇವೆ. ನೀವು ಒಪ್ಪಂದಗಳನ್ನು ಉಲ್ಲಂಘಿಸುವಂತಿಲ್ಲ ಮತ್ತು ನಂತರ ಏನೂ ಆಗಿಲ್ಲ ಎಂಬಂತೆ ಉಳಿದ ಸಂಬಂಧವನ್ನು ಮುಂದುವರಿಸಲು ಬಯಸುತ್ತೇವೆ” ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...