Homeಮುಖಪುಟಬಿಹಾರದಲ್ಲಿ ಎನ್‌ಡಿಎಗೆ ಭಾರೀ ಹಿನ್ನಡೆ: ಪಕ್ಷದ ತೊರೆದ ಎಲ್‌ಜೆಪಿಯ 22 ನಾಯಕರು, ಇಂಡಿಯಾ ಮೈತ್ರಿಕೂಟಕ್ಕೆ ಬೆಂಬಲ...

ಬಿಹಾರದಲ್ಲಿ ಎನ್‌ಡಿಎಗೆ ಭಾರೀ ಹಿನ್ನಡೆ: ಪಕ್ಷದ ತೊರೆದ ಎಲ್‌ಜೆಪಿಯ 22 ನಾಯಕರು, ಇಂಡಿಯಾ ಮೈತ್ರಿಕೂಟಕ್ಕೆ ಬೆಂಬಲ ಘೋಷಣೆ

- Advertisement -
- Advertisement -

ಲೋಕಸಭೆ ಚುನಾವಣೆಯ ಹೊಸ್ತಿಲ್ಲಲ್ಲೇ ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ದೊಡ್ಡ ಹಿನ್ನಡೆಯಾಗಿದೆ. ಟಿಕೆಟ್ ನಿರಾಕರಿಸಿದ ಹಿನ್ನೆಲೆ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷದ (ರಾಮ್‌ವಿಲಾಸ್) 22 ನಾಯಕರು ರಾಜೀನಾಮೆ ನೀಡಿದ್ದಾರೆ. ಒಬ್ಬ ನಾಯಕ ಪಾಸ್ವಾನ್ ಅವರು ‘ಹಣಕ್ಕಾಗಿ ಟಿಕೆಟ್ ಮಾರಾಟ ಮಾಡುತ್ತಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಏಕಕಾಲಕ್ಕೆ ರಾಜೀನಾಮೆ ನೀಡಿರುವ ಎಲ್‌ಜಿಪಿ ನಾಯಕರು, ರಾಜ್ಯದಲ್ಲಿ ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಮಹಾಘಟಬಂಧನ್ ಅನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾರೆ.

ಪಾಸ್ವಾನ್ ನೇತೃತ್ವದ ಪಕ್ಷಕ್ಕೆ ರಾಜೀನಾಮೆ ನೀಡಿದವರಲ್ಲಿ ಒಬ್ಬರಾಗಿರುವ ಮಾಜಿ ಸಂಸದ ರೇಣು ಕುಶ್ವಾಹಾ ಅವರು, “ಟಿಕೆಟ್ ಹಂಚಿಕೆಯ ವಿಷಯಕ್ಕೆ ಬಂದಾಗ, ಹೊರಗಿನವರಿಗಿಂತ ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕು ಎಂದಿದ್ದಾರೆ.

“ಹೊರಗಿನವರಿಗೆ ಟಿಕೆಟ್ ನೀಡಲಾಗಿದೆ ಎಂದರೆ ನಿಮ್ಮ ಪಕ್ಷದಲ್ಲಿ ಸಮರ್ಥರು ಇಲ್ಲ ಎಂದಲ್ಲವೇ? ಹಾಗಾದರೆ, ನಾವೆಲ್ಲ ದುಡಿದು ನಿಮ್ಮನ್ನು ನಾಯಕರನ್ನಾಗಿ ಮಾಡುವ ಕಾರ್ಮಿಕರಾ? ನಾವು ಕಾರ್ಮಿಕರಾಗಿ ಸೇವೆ ಸಲ್ಲಿಸಲು ಬಂದಿಲ್ಲ” ಎಂದು ಕುಶ್ವಾಹಾ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಎಲ್‌ಜಿಪಿಯಿಂದ ನಿರ್ಗಮಿಸಿದ ಮತ್ತೋರ್ವ ನಾಯಕ, ಪಕ್ಷದ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಶಾಸಕ ಸತೀಶ್ ಕುಮಾರ್ ಅವರು “ಪಾಸ್ವಾನ್ ಅವರ ನಿಲುವಿನಿಂದ ಪಕ್ಷದ ಕಾರ್ಯಕರ್ತರು ‘ದಿಗ್ಭ್ರಮೆಗೊಂಡಿದ್ದಾರೆ’ ಎಂದಿದ್ದಾರೆ.

“ಚಿರಾಗ್ ಪಾಸ್ವಾನ್‌ಗೆ ನಮಸ್ಕಾರ” ಎಂದು ಹಗಲಿರುಳು ಘೋಷಣೆಗಳನ್ನು ಕೂಗುತ್ತಿದ್ದ ಮತ್ತು ಹೊಸ ಬಿಹಾರಕ್ಕಾಗಿ ಆಶಿಸಿದ ಜನರಿಗೆ ದ್ರೋಹ ಮಾಡಲಾಗಿದೆ. ಅವರ ಆಕಾಂಕ್ಷೆಗಳನ್ನು ಧ್ವಂಸ ಮಾಡಲಾಗಿದೆ. ಈಗ ದೇಶವನ್ನು ಉಳಿಸಲು, ಇಂಡಿಯಾ ಮೈತ್ರಿಕೂಟವನ್ನು ಬೆಂಬಲಿಸಬೇಕಾಗಿದೆ. ನಾವು ಇಂಡಿಯಾ ಮೈತ್ರಿಕೂಟವನ್ನು ಬೆಂಬಲಿಸುತ್ತೇವೆ” ಎಂದು ಕುಮಾರ್ ಹೇಳಿದ್ದಾರೆ.

ಎಲ್‌ಜೆಪಿಯ ಕಾರ್ಯದರ್ಶಿ ರವೀಂದ್ರ ಸಿಂಗ್ ಕೂಡ ಪಕ್ಷದ ತೊರೆದಿದ್ದು, ಪಾಸ್ವಾನ್ ‘ಟಿಕೆಟ್‌ಗಳನ್ನು ಮಾರಾಟ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.

“ಅವರು (ಚಿರಾಗ್ ಪಾಸ್ವಾನ್) ಜನರೊಂದಿಗೆ ಭಾವನಾತ್ಮಕ ಆಟವಾಡಿದ್ದಾರೆ. ನಮ್ಮ ಪರಿಶ್ರಮದಿಂದ ಐದು ಸೀಟು ಸಿಕ್ಕರೂ ಟಿಕೆಟ್‌ಗಳನ್ನು ಮಾರಾಟ ಮಾಡಿದ್ದಾರೆ. ಜನತೆ ಅವರಿಗೆ ಉತ್ತರ ನೀಡಲಿದ್ದಾರೆ” ಎಂದು ಸಿಂಗ್ ಹೇಳಿದ್ದಾರೆ.

ಎನ್‌ಡಿಎ ಸೀಟು ಹಂಚಿಕೆ ಒಪ್ಪಂದದ ಅಡಿಯಲ್ಲಿ, ಎಲ್‌ಜೆಪಿ (ಪಾಸ್ವಾನ್) ಬಿಹಾರದ ಒಟ್ಟು 40 ಸ್ಥಾನಗಳ ಪೈಕಿ ಐದು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ವೈಶಾಲಿ, ಹಾಜಿಪುರ್, ಸಮಸ್ತಿಪುರ್, ಖಗಾರಿಯಾ ಮತ್ತು ಜಮುಯಿ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು ಹಾಜಿಪುರದಿಂದ ಸ್ಪರ್ಧಿಸಿದರೆ, ಅರುಣ್ ಭಾರತಿ ಜಮುಯಿಯಿಂದ, ರಾಜೇಶ್ ವರ್ಮಾ ಖಗಾರಿಯಾದಿಂದ, ಶಾಂಭವಿ ಚೌಧರಿ ಸಮಸ್ತಿಪುರದಿಂದ ಮತ್ತು ವೀಣಾ ದೇವಿ ವೈಶಾಲಿಯಿಂದ ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಬಿಗ್‌ ಶಾಕ್: ಸಂಸದ ಉನ್ಮೇಶ್ ಪಾಟೀಲ್ ಶಿವಸೇನೆಗೆ(ಉದ್ಧವ್‌ ಬಣ) ಸೇರ್ಪಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...