Homeಕರ್ನಾಟಕತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕಾಲೇಜು ವಿದ್ಯಾರ್ಥಿಗಳಿಗೆ ಒತ್ತಾಯ: ಆರೋಪ

ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕಾಲೇಜು ವಿದ್ಯಾರ್ಥಿಗಳಿಗೆ ಒತ್ತಾಯ: ಆರೋಪ

- Advertisement -
- Advertisement -

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವಿವಿ ಪುರಂನ ಜೈನ್ ಕಾಲೇಜು ವಿದ್ಯಾರ್ಥಿಗಳಿಗೆ ಒತ್ತಾಯಿಸಿರುವ ಆರೋಪ ಕೇಳಿ ಬಂದಿದೆ.

ಈ ಕುರಿತು ರೋಹಿನ್ ಆನಂದ್‌ ಎಂಬವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು,  ತೇಜಸ್ವಿ ಸೂರ್ಯ ಅವರು ಕೊಳಕು ತಂತ್ರಗಳನ್ನು ಮಾಡುತ್ತಿದ್ದು, ಕಾಲೇಜು ವಿದ್ಯಾರ್ಥಿಗಳನ್ನು ತಾನು ಸ್ಪರ್ಧಿಸುತ್ತಿರುವ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆಯ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸುವಂತೆ ಒತ್ತಾಯಿಸಿದ್ದಾರೆ.

ವಿವಿ ಪುರಂ ಬೆಂಗಳೂರಿನ ಜೈನ್ ಕಾಲೇಜಿನ ವಿದ್ಯಾರ್ಥಿಗಳಿಗೆ ತೇಜಸ್ವಿ ಸೂರ್ಯ ಅವರ ನಾಮಪತ್ರ ಸಲ್ಲಿಕೆ ರ್ಯಾಲಿಗೆ ಹಾಜರಾಗುವಂತೆ ಒತ್ತಾಯಿಸಲಾಗುತ್ತಿದೆ ಮತ್ತು ಇಲ್ಲದಿದ್ದರೆ ಅವರಿಗೆ ಹಾಜರಾತಿ ನೀಡುವುದಿಲ್ಲ ಎಂದು ಹೇಳಾಗಿದೆ. ನಾಮಪತ್ರ ಸಲ್ಲಿಕೆ ರ್ಯಾಲಿಯಲ್ಲಿ ಅವರ ಹೆಸರು ಮುದ್ರಿತ ಟೀ ಶರ್ಟ್‌ಗಳನ್ನು ಧರಿಸಲು ಮತ್ತು ತೇಜಸ್ವಿ ಸೂರ್ಯ ವಿರುದ್ಧ ಘೋಷಣೆಗಳನ್ನು ಕೂಗುವಂತೆ ಸೂಚಿಸಲಾಗಿದೆ. ಇದು ಸರ್ವಾಧಿಕಾರವಲ್ಲವೇ?  ಇದು ಸರಿಯೇ? ಚುನಾವಣಾ ಆಯೋಗ ಏನು ನಿದ್ರೆಗೆ ಜಾರಿದೆಯಾ ಎಂದು ಪ್ರಶ್ನಿಸಿದ್ದಾರೆ.

ಗುರುರಾಜ್‌ ಅಂಜನ್‌ ಎಂಬವರು ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ಅಪ್ರಬುದ್ಧ ರಾಜಕಾರಣಿ ತೇಜಸ್ವಿ ಸೂರ್ಯ ಕಾಲೇಜು ವಿದ್ಯಾರ್ಥಿಗಳನ್ನೂ ಬಿಡಲಿಲ್ಲ. ಜೈನ್ ಕಾಲೇಜಿನ ವಿದ್ಯಾರ್ಥಿಗಳು ತೇಜಸ್ವಿ ಸೂರ್ಯ ಅವರ ನಾಮನಿರ್ದೇಶನ ರ್ಯಾಲಿಗೆ ಹಾಜರಾಗುವಂತೆ ಒತ್ತಾಯಿಸಲಾಗುತ್ತಿದೆ ಮತ್ತು ಇಲ್ಲದಿದ್ದರೆ ಅವರಿಗೆ ಹಾಜರಾತಿ ನೀಡುವುದಿಲ್ಲ ಎಂದು ಹೇಳಲಾಗಿದೆ. ಇದಕ್ಕಾಗಿಯೇ ನಾವು ಬೆಂಗಳೂರು-ದಕ್ಷಿಣ ಜನರನ್ನು ತೇಜಸ್ವಿ ಸೂರ್ಯ  ಪ್ರತಿನಿಧಿಸುವುದನ್ನು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ವಾಟ್ಸಾಪ್‌ ಸಂದೇಶವೊಂದು ವೈರಲ್‌ ಆಗಿದ್ದು, ಸಂದೇಶದಲ್ಲಿ ನಾಳೆ ವಿದ್ಯಾರ್ಥಿ ಸಂಘಟನೆಯ ಎಲ್ಲಾ ಸದಸ್ಯರು ಜಯನಗರದ ಮೈಯ್ಯಾಸ್‌ ಹೋಟೇಲ್‌ ಬಳಿ 9 ಗಂಟೆಗೆ ತೇಜಸ್ವಿಸೂರ್ಯ ಅವರ ರ್ಯಾಲಿಗೆ ಹಾಜರಿರಬೇಕು. ನಿಮಗ ಅಲ್ಲಿ ಟೀ-ಶರ್ಟ್‌ ಸಿಗುತ್ತದೆ. ಆದ್ದರಿಂದ ತಡ ಮಾಡಬೇಡಿ, ಎಲ್ಲರೂ ಕ್ಲಪ್ತ ಸಮಯಕ್ಕೆ ಅಲ್ಲಿ ಹಾಜರಿರಬೇಕು. ನಿಮಗೆ ಭಾಗವಹಿಸಿದರೆ ಕಾಲೇಜಿನಿಂದ ಹಾಜರಾತಿ ಸಿಗಲಿದೆ ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ನಾನುಗೌರಿ.ಕಾಂ ಜೈನ್ ಕಾಲೇಜು ಅಥಾರಿಟಿಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದು, ತಕ್ಷಣಕ್ಕೆ ಸಂಪರ್ಕ ಸಾಧ್ಯವಾಗಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ…

 

ಇದನ್ನು ಓದಿ: ಶಿವಮೊಗ್ಗದಲ್ಲಿ ರಾಘವೇಂದ್ರನನ್ನು ಸೋಲಿಸಲು ಅಮಿತ್‌ ಶಾ ಆಶೀರ್ವಾದಿಸಿದ್ದಾರೆ: ಕೆಎಸ್‌ ಈಶ್ವರಪ್ಪ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...