Homeಮುಖಪುಟ33 ಕ್ಷೇತ್ರಗಳಲ್ಲಿ ಹಾಲಿ ಸಂಸದರ ಬದಲಿಗೆ ಹೊಸ ಮುಖಗಳಿಗೆ ಮಣೆ ಹಾಕಿದ ಬಿಜೆಪಿ

33 ಕ್ಷೇತ್ರಗಳಲ್ಲಿ ಹಾಲಿ ಸಂಸದರ ಬದಲಿಗೆ ಹೊಸ ಮುಖಗಳಿಗೆ ಮಣೆ ಹಾಕಿದ ಬಿಜೆಪಿ

- Advertisement -
- Advertisement -

ಲೋಕಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಶನಿವಾರ ಬಿಡುಗಡೆ ಮಾಡಿದ್ದು, ವಿವಿಧ ರಾಜ್ಯಗಳಲ್ಲಿ ಗಮನಾರ್ಹ ಬದಲಾವಣೆಗಳೊಂದಿಗೆ ಬಿಜೆಪಿ 33 ಹಾಲಿ ಸಂಸದರಿಗೆ ಟಿಕೆಟ್‌ ನಿರಾಕರಿಸಿದೆ. ಇದರಿಂದ ಪಕ್ಷದೊಳಗೆ ಅಸಮಾಧಾನ ಉದ್ಭವಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೇಸರಿ ಪಕ್ಷದ ಲೋಕಸಭೆ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕೇಂದ್ರ ಸಚಿವರು ಸೇರಿದಂತೆ ಅಸ್ಸಾಂ, ಛತ್ತೀಸ್‌ಗಢ, ದೆಹಲಿ, ಗುಜರಾತ್, ಜಾರ್ಖಂಡ್, ಮಧ್ಯಪ್ರದೇಶ, ರಾಜಸ್ಥಾನ, ತ್ರಿಪುರಾ ಮತ್ತು ಪಶ್ಚಿಮ ಬಂಗಾಳದ ರಾಜ್ಯಗಳಿಗೆ ಸ್ಪರ್ಧೆಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಪಟ್ಟಿಯಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ 95 ಹೆಸರುಗಳಿವೆ.

ಬಿಜೆಪಿ ಅಸ್ಸಾಂನಲ್ಲಿ ಐದು ಹೊಸ ಮುಖಗಳನ್ನು ಕಣಕ್ಕಿಳಿಸಿದೆ ಮತ್ತು ಇತರ 6 ಹಾಲಿ ಸಂಸದರಿಗೆ ಟಿಕೆಟ್‌ ನೀಡಿದೆ. ಸಿಲ್ಚಾರ್ ಕ್ಷೇತ್ರದಲ್ಲಿ ಬಿಜೆಪಿಯು ರಾಜ್‌ದೀಪ್ ರಾಯ್ ಬದಲಿಗೆ ಪರಿಮಳಾ ಸುಕ್ಲಬೈಧ್ಯ ಅವರನ್ನು ಕಣಕ್ಕಿಳಿಸಿದೆ. ಸಂಸದ ಹೋರೆನ್ ಸಿಂಗ್ ಬೇ ಬದಲಿಗೆ ಅಮರ್ ಸಿಂಗ್ ಟಿಸ್ಸೊಗೆ ಟಿಕೆಟ್‌ ನೀಡಿದೆ. ಕ್ವೀನ್ ಓಜಾ ಸಂಸದರ ಗೌಹಾಟಿ ಲೋಕಸಭಾ ಕ್ಷೇತ್ರಕ್ಕೆ ಬಿಜುಲಿ ಕಲಿತಾ ಮೇಧಿ ಸ್ಪರ್ಧಿಸಲಿದ್ದು, ಪಲ್ಲಬ್ ಲೋಚನ್ ದಾಸ್ ಹಾಲಿ ಸಂಸದರಾಗಿರುವ ತೇಜ್‌ಪುರದಿಂದ ರಂಜಿತ್ ದತ್ತಾ ಸ್ಪರ್ಧಿಸಲಿದ್ದಾರೆ. ಕೇಂದ್ರ ಸಚಿವ ಸರ್ಬಾನಂದ್ ಸೋನೊವಾಲ್ ಅವರು ಸಂಸದ ರಾಮೇಶ್ವರ್ ತೇಲಿ ಅವರ ಬದಲಿಗೆ ದಿಬ್ರುಗಢದಲ್ಲಿ ಸ್ಪರ್ಧಿಸಲಿದ್ದಾರೆ.

ಛತ್ತೀಸ್‌ಗಢದಲ್ಲಿ ಪಕ್ಷವು ನಾಲ್ಕು ಹೊಸ ಮುಖಗಳನ್ನು ಹೆಸರಿಸಿದೆ. ರಾಯ್‌ಪುರ ಕ್ಷೇತ್ರವನ್ನು ಸುನಿಲ್‌ಕುಮಾರ್‌ ಸೋನಿ ಅವರ ಬದಲಿಗೆ ಬಿಜೆಪಿಯ ಹಿರಿಯ ನಾಯಕ ಬ್ರಿಜ್‌ಮೋಹನ್‌ ಅಗರವಾಲ್‌ ಅವರಿಗೆ ನೀಡಲಾಗಿದೆ. ಕಮಲೇಶ್ ಜಂಗ್ಡೆ ಅವರು ಹಾಲಿ ಸಂಸದ ಗುಹರಾಮ್ ಅಜ್ಗಲ್ಲಿ ಬದಲಿಗೆ ಜಾಂಜ್ಗೀರ್ ಚಂಪಾ (ಎಸ್ಸಿ) ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಸಂಸದ ಚುನ್ನಿ ಲಾಲ್ ಸಾಹು ಅವರನ್ನು ಕೈಬಿಟ್ಟಿದ್ದು ರೂಪ್ ಕುಮಾರಿ ಚೌಧರಿ ಮಹಾಸಮುಂಡ್‌ನ ಅಭ್ಯರ್ಥಿಯಾಗಿದ್ದಾರೆ. ಕಂಕೇರ್‌ನಲ್ಲಿ (ಎಸ್‌ಟಿ) ಮೋಹನ್ ಮಾಂಡವಿ ಬದಲಿಗೆ ಭೋಜರಾಜ್ ನಾಗ್ ಅವರಿಗೆ ಟಿಕೆಟ್‌ ನೀಡಲಾಗಿದೆ.

ದೆಹಲಿಯಲ್ಲಿ ಹೆಸರಿಸಲಾದ ಬಿಜೆಪಿ ಅಭ್ಯರ್ಥಿಗಳ ಪೈಕಿ ನಾಲ್ವರು ಹಾಲಿ ಸಂಸದರಿಗೆ ಟಕೆಟ್‌ ನಿರಾಕರಿಸಲಾಗಿದೆ.  ಚಾಂದನಿ ಚೌಕ್ ಲೋಕಸಭಾ ಕ್ಷೇತ್ರದಿಂದ ಮಾಜಿ ಕೇಂದ್ರ ಸಚಿವ ಹರ್ಷವರ್ಧನ್ ಅವರನ್ನು ಕೈಬಿಡಲಾಗಿದ್ದು, ಪ್ರವೀಣ್ ಖಂಡೇಲ್ವಾಲ್ ಅವರಿಗೆ ಟಿಕೆಟ್‌ ನೀಡಲಾಗಿದೆ. ಪಶ್ಚಿಮ ದೆಹಲಿ ಕ್ಷೇತ್ರದಲ್ಲಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಬದಲಿಗೆ ಕಮಲಜೀತ್ ಸೆಹ್ರಾವತ್ ಅವರನ್ನು ನೇಮಿಸಲಾಗಿದೆ. ಬಿಜೆಪಿಯ ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ನವದೆಹಲಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದು, ಹಾಲಿ ಸಂಸದೆ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರು ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ಸಂಸತ್ತಿನಲ್ಲಿ ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ರಮೇಶ್ ಬಿದುರಿ ಅವರನ್ನು ದಕ್ಷಿಣ ದೆಹಲಿಯಿಂದ ಕೈಬಿಡಲಾಗಿದೆ ಮತ್ತು ಅವರ ಸ್ಥಾನದಿಂದ ರಾಮವೀರ್ ಸಿಂಗ್ ಬಿಧುರಿ ಅವರಿಗೆ ಟಿಕೆಟ್‌ ನೀಡಲಾಗಿದೆ.

ಗುಜರಾತ್‌ನಲ್ಲಿ 15 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಹೆಸರಿಸಿದ್ದು, ಬಿಜೆಪಿ 5 ಹಾಲಿ ಸಂಸದರನ್ನು ಕೈಬಿಟ್ಟಿದೆ. ಹಾಲಿ ಸಂಸದ ಪ್ರಭಾತಭಾಯ್ ಸಾವಭಾಯಿ ಪಟೇಲ್ ಬದಲಿಗೆ ರೇಖಾಬೆನ್ ಹಿತೇಶ್ ಭಾಯ್ ಚೌಧರಿ ಬನಸ್ಕಾಂತ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಸಂಸದ ಕಿರಿತ್ ಸೋಲಂಕಿ ಅವರ ಬದಲಿಗೆ ಅಹಮದಾಬಾದ್ ವೆಸ್ಟ್‌ನಿಂದ ದಿನೇಶ್‌ಭಾಯ್ ಕಿದರ್‌ಭಾಯ್ ಮಕ್ವಾನಾ ಅವರು ಸ್ಪರ್ಧಿಸಲಿದ್ದಾರೆ.

ರಾಜ್‌ಕೋಟ್‌ನಲ್ಲಿ ಹಾಲಿ ಸಂಸದ ಮೋಹನ್‌ಭಾಯ್ ಕಲ್ಯಾಣ್‌ಜಿ ಕುಂದರಿಯಾ ಅವರನ್ನು ಕೈಬಿಟ್ಟು ಕೇಂದ್ರ ಸಚಿವ ಪರ್ಷೋತ್ತಮ್ ರೂಪಾಲಾ ಅವರನ್ನು ಅಭ್ಯರ್ಥಿಯನ್ನಾಗಿ ಬಿಜೆಪಿ ಹೆಸರಿಸಿದೆ. ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಅವರು ಪೋರ್ಬಂದರ್ ಕ್ಷೇತ್ರದಿಂದ ಅಭ್ಯರ್ಥಿಯಾಗಿದ್ದು, ಪ್ರಸ್ತುತ ಪಕ್ಷದ ಸಂಸದ ರಮೇಶ್ಭಾಯ್ ಲವ್ಜಿಭಾಯಿ ಧದುಕ್ ಅವರನ್ನು ಕೈಬಿಡಲಾಗಿದೆ. ಹಾಲಿ ಸಂಸದ ರತನ್‌ಸಿನ್ಹ್ ಮಗನ್‌ಸಿನ್ಹ್ ರಾಥೋಡ್ ಅವರನ್ನು ಕೈಬಿಟ್ಟಿದ್ದರಿಂದ ರಾಜ್‌ಪಾಲ್‌ಸಿಂಗ್ ಮಹೇಂದ್ರಸಿಂಗ್ ಜಾಧವ್ ಪಂಚಮಹಲ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಬಿಜೆಪಿ ಅಭ್ಯರ್ಥಿ ಮನೀಶ್ ಜೈಸ್ವಾಲ್ ಅವರಿಗೆ ಟಿಕೆಟ್‌ ನೀಡಿದ್ದು, ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರ ಪುತ್ರ ಜಯಂತ್ ಸಿನ್ಹಾ ಅವರನ್ನು ಕೈಬಿಟ್ಟಿದ್ದಾರೆ. ಬಿಜೆಪಿಯ ಪಟ್ಟಿ ಘೋಷಣೆಗೆ ಒಂದು ದಿನ ಮೊದಲು ಸಿನ್ಹಾ ಅವರು ಲೋಕಸಭೆ ಚುನಾವಣೆಯಿಂದ ಹೊರಗುಳಿಯುತ್ತಿರುವುದಾಗಿ ಹೇಳಿದ್ದರು. ಲೋಹರ್ದಗಾದಲ್ಲಿ ಮೂರು ಬಾರಿ ಸಂಸದರಾಗಿದ್ದ ಸುದರ್ಶನ್ ಭಗತ್ ಬದಲಿಗೆ ಸಮೀರ್ ಓರಾನ್ ಅವರಿಗೆ ಟಿಕೆಟ್‌ ನೀಡಲಾಗಿದೆ.

ಬಿಜೆಪಿಯ ಮಧ್ಯಪ್ರದೇಶ ಪಟ್ಟಿಯಲ್ಲಿ ಏಳು ಹೊಸ ಮುಖಗಳಿವೆ. ಪಕ್ಷದ ಹಾಲಿ ಸಂಸದ ವಿವೇಕ್ ನಾರಾಯಣ ಶೇಜ್ವಾಲ್ಕರ್ ಬದಲಿಗೆ ಭರತ್ ಸಿಂಗ್ ಕುಶ್ವಾಹಾ ಗ್ವಾಲಿಯರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಗುನಾದಿಂದ ಹಾಲಿ ಸಂಸದ ಕೃಷ್ಣಪಾಲ್ ಸಿಂಗ್ ಯಾದವ್ ಬದಲಿಗೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ನೇಮಿಸಲಾಗಿದೆ. ಪ್ರಸ್ತುತ ರಾಜಬಹದ್ದೂರ್ ಸಿಂಗ್ ಅವರು ಹೊಂದಿರುವ ಸಾಗರ್ ಲೋಕಸಭಾ ಕ್ಷೇತ್ರದಿಂದ ಲತಾ ವಾಂಖೆಡೆ ಅವರನ್ನು ಹೆಸರಿಸಲಾಗಿದೆ. ವೀರೇಂದ್ರ ಖಾಟಿಕ್ ಅವರು ಟಿಕಮ್‌ಗಢ (ಎಸ್‌ಸಿ) ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ವಿದಿಶಾ ಸಂಸದ ರಮಾಕಾಂತ್ ಭಾರ್ಗವ ಅವರನ್ನು ಕೈಬಿಡಲಾಗಿದ್ದು, ಆ ಸ್ಥಾನವನ್ನು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಹಂಚಿಕೆ ಮಾಡಲಾಗಿದೆ.

ಭೋಪಾಲ್‌ನಲ್ಲಿ ಅಲೋಕ್ ಶರ್ಮಾ ಸ್ಪರ್ಧಿಸಲಿದ್ದಾರೆ. ಪ್ರಸ್ತುತ ಸ್ಥಾನವನ್ನು ಸಾಧ್ವಿ ಪ್ರಜ್ಞಾ ಸಿಂಗ್ ಹೊಂದಿದ್ದಾರೆ. ಪ್ರಸ್ತುತ ಬಿಜೆಪಿ ಸಂಸದ ಗುಮನ್ ಸಿಂಗ್ ದಾಮೋರ್ ಹೊಂದಿರುವ ರತ್ಲಾಮ್ (ಎಸ್‌ಟಿ) ಸ್ಥಾನವನ್ನು ಅನಿತಾ ನಗರ್ ಸಿಂಗ್ ಚೌಹಾಣ್ ಅವರಿಗೆ ನೀಡಲಾಗಿದೆ.

ರಾಜಸ್ಥಾನದಲ್ಲಿ 15 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಹೆಸರಿಸಿದ್ದು, ಪಕ್ಷವು ರಾಜಸ್ಥಾನದಲ್ಲಿ ಐದು ಹಾಲಿ ಸಂಸದರಿಗೆ ಟಿಕೆಟ್‌ ನೀಡಿಲ್ಲ. ಚುರು, ಭರತ್‌ಪುರ, ಜಲೋರ್, ಉದಯಪುರ ಮತ್ತು ಬನ್ಸ್ವಾರಾ ಕ್ಷೇತ್ರದಲ್ಲಿ ಹೊಸ ಮುಖಗಳಿಗೆ ಟಿಕೆಟ್‌ ನೀಡಲಾಗಿದೆ.

ತ್ರಿಪುರಾದಲ್ಲಿ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರು ಪ್ರಸ್ತುತ ಪಕ್ಷದ ಸಂಸದೆ ಪ್ರತಿಮಾ ಭೂಮಿಕ್ ಅವರು ಪ್ರತಿನಿಧಿಸುವ ತ್ರಿಪುರ ಪಶ್ಚಿಮ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಅಲಿಪುರ್ದೂರ್ ಸಂಸದ ಜಾನ್ ಬಾರ್ಲಾ ಅವರ ಬದಲಿಗೆ ಮನೋಜ್ ತಿಗ್ಗಾ ಅವರನ್ನು ಸ್ಪರ್ಧೆಗಿಳಿಸಲಾಗಿದೆ.

ಇದನ್ನು ಓದಿ: ಸೌಜನ್ಯ ಪ್ರಕರಣ: ಸೋನಿಯಾ ಗಾಂಧಿ ನಿವಾಸದ ಬಳಿ ಪ್ರತಿಭಟನೆ   

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...