Homeಕರ್ನಾಟಕಮುಖ್ಯಮಂತ್ರಿ ಸೇರಿ ಶಾಸಕರಿಗೆ 50% ವೇತನ ಹೆಚ್ಚಳ

ಮುಖ್ಯಮಂತ್ರಿ ಸೇರಿ ಶಾಸಕರಿಗೆ 50% ವೇತನ ಹೆಚ್ಚಳ

ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, “ಕಳೆದ 7 ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಮನೆ ಬಾಡಿಗೆ, ಇತರ ವೆಚ್ಚಗಳು ಜಾಸ್ತಿಯಾಗುತ್ತಿದೆ, ಜನಪ್ರತಿನಿಧಿಗಳು ಕಷ್ಟಪಡುತ್ತಿದ್ದಾರೆ" ಎಂದಿದ್ದಾರೆ.

- Advertisement -
- Advertisement -

ಕರ್ನಾಟಕ ಸರ್ಕಾರವು ಮಂಗಳವಾರದ ವಿಧಾನಮಂಡಲ ಅಧಿವೇಶನದಲ್ಲಿ ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳ ಸಂಬಳವನ್ನು 50% ಹೆಚ್ಚಿಸುವ ಮಸೂದೆಯನ್ನು ಮಂಡಿಸಿದ್ದು, ಮಸೂದೆಯನ್ನು ಅಂಗೀಕರಿಸಲಾಗಿದೆ.

ವೇತನ ಮತ್ತು ಭತ್ಯೆಗಳ 2022 (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲಾಗಿದೆ. ಇದು ಕಾಯ್ದೆಯಾದರೆ, ಇದರ ಪ್ರಕಾರ, ಮುಖ್ಯಮಂತ್ರಿ, ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಭಾಪತಿ, ಉಪ ಸಭಾಪತಿಗಳು, ಅಧ್ಯಕ್ಷರು ಮತ್ತು ಉಪ ಅಧ್ಯಕ್ಷರು ತಮ್ಮ ಮನೆ ಭತ್ಯೆ, ಪ್ರಯಾಣ ಮತ್ತು ಸವಲತ್ತುಗಳಲ್ಲಿ ಹೆಚ್ಚಳಕ್ಕೆ ಅರ್ಹರಾಗಿರುತ್ತಾರೆ.

ಈ ಪರಿಷ್ಕರಣೆಯ ಪ್ರಕಾರ, ಮುಖ್ಯಮಂತ್ರಿಗಳ ಮಾಸಿಕ ವೇತನ 50,000 ರೂ.ಗಳಿಂದ 75,000 ರೂ.ಗಳಿಗೆ ಹೆಚ್ಚಳವಾಗಲಿದೆ. ಸಚಿವರ ವೇತನವು 40,000 ರೂ.ಗಳಿಂದ 60,000 ರೂ.ಗೆ ಏರುತ್ತದೆ. ಇದರ ಹೊರತಾಗಿ ಮುಖ್ಯಮಂತ್ರಿಗಳ ಮನೆ ಭತ್ಯೆಯು ರೂ. 80,000 ರಿಂದ ರೂ 1.2 ಲಕ್ಷಕ್ಕೆ ಏರಿಕೆಯಾಗಲಿದೆ. 20,000 ಫೋನ್ ಬಿಲ್‌ಗಳು, ರೂ 40,000 ಕ್ಷೇತ್ರದ ಭತ್ಯೆಗಳು, ರೂ 5000 ಅಂಚೆ ಶುಲ್ಕಗಳು ಮತ್ತು ಇತರ ಅನೇಕ ವೆಚ್ಚಗಳಲ್ಲಿಯೂ ಏರಿಕೆಯಾಗಲಿದೆ. ಶಾಸಕರ ವೇತನವು ಮಾಸಿಕ 25,000 ರೂ.ನಿಂದ 40,000 ರೂ. ಹೆಚ್ಚಳವಾಗುತ್ತದೆ.

ಮಂತ್ರಿಗಳ ಸಂಬಳ ಮತ್ತು ಭತ್ಯೆ (ತಿದ್ದುಪಡಿ) ಮಸೂದೆಯು 25.4 ಕೋಟಿ ರೂಪಾಯಿಗಳ ಹೆಚ್ಚುವರಿ ಆರ್ಥಿಕ ಹೊರೆಯನ್ನು ರಾಜ್ಯ ಬೊಕ್ಕಸದ ಮೇಲೆ ಬೀಳಲಿದೆ. ಅಲ್ಲದೆ, ಕರ್ನಾಟಕ ಶಾಸಕಾಂಗದ ವೇತನಗಳು, ಪಿಂಚಣಿಗಳು ಮತ್ತು ಭತ್ಯೆಗಳು (ತಿದ್ದುಪಡಿ) ಮಸೂದೆ 2022ರ ಪ್ರಕಾರ, ವಾರ್ಷಿಕವಾಗಿ 67 ಕೋಟಿ ರೂಪಾಯಿಗಳ ಹೆಚ್ಚುವರಿ ವೆಚ್ಚವಾಗಲಿದೆ.

ಸದನದ ಮುಂದೆ ವಿಧೇಯಕ ಮಂಡಿಸಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ “2015ರಿಂದ ರಾಜ್ಯ ಸರ್ಕಾರ ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನ, ಭತ್ಯೆ ಹೆಚ್ಚಿಸಿಲ್ಲ, ಕಳೆದ ಏಳು ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಮನೆ ಬಾಡಿಗೆ ಮತ್ತು ಇತರ ವೆಚ್ಚಗಳು ಜಾಸ್ತಿಯಾಗುತ್ತಿದೆ, ಶಾಸಕರು ಕಷ್ಟಪಡುತ್ತಿದ್ದಾರೆ” ಎಂದು ಹೇಳಿದ್ದಾರೆ.

ಹೊಸ ತಿದ್ದುಪಡಿಯ ಪ್ರಕಾರ ಶಾಸಕರು ಮತ್ತು ಮಂತ್ರಿಗಳು ತಿಂಗಳಿಗೆ 1000 ಲೀಟರ್ ಪೆಟ್ರೋಲ್, ಡೀಸೆಲ್ ಬದಲಿಗೆ 1500 ಲೀಟರ್ ಪೆಟ್ರೋಲ್, ಡೀಸೆಲ್ ಪಡೆಯಲು ಅವಕಾಶವಿದೆ.


ಇದನ್ನೂ ಓದಿರಿ: ನಟ, ಸಾಮಾಜಿಕ ಕಾರ್ಯಕರ್ತ ಚೇತನ್‌ ವಿರುದ್ಧ ಎಫ್‌ಐಆರ್‌ ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಇಲ್ಲಿ ಜನಗಳು ಕೊರೋನ ಮಹಾಮಾರಿಯೆಂದು ನೀವೇ ಹೇಳುತ್ತೀರಾ ಇಲ್ಲಿ ಎಷ್ಟೂ ಬಡವರು ತಿನೋಕು ಗತಿಯಿಂಳದ್ದೆ ಸಾಯುತಿದಾರೆ ಹಾಗೆ ಈ ಕೊರೋನ ಹೆಸರಿನಲ್ಲಿ ಎಷ್ಟೋ ಹಣವನ್ನು ಲೂಟಿ ಮಾಡಿದರೆ ಈಗಾ ಮತ್ತೆ ನಿಮ್ಮ ನಿಮ್ಮ ವೇತನಕ್ಕೆ ಇಷ್ಟಲ್ಲ ವೆಚ್ಚ ಹೇಳುತಿದೀರಾ ಹಾಗಾದರೆ ಇಲ್ಲಿ ಇರುವ ಬಡುವರಿಗೆ ಯಾವ ತರ…. 🙄🙄🙄🙄

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ರಾಜ್ಯಪಾಲರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ದೂರು ದಾಖಲು

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು,  ರಾಜಭವನದ ಮಹಿಳಾ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಹಿಳೆ 2019ರಿಂದ ರಾಜಭವನದಲ್ಲಿ ತಾತ್ಕಾಲಿಕ ಸಿಬ್ಬಂದಿಯಾಗಿ ಕೆಲಸ...