Homeಅಂಕಣಗಳುಬಹುಜನ ಭಾರತ; ಸೋತು ಗೆಲ್ಲುವುದೇ ಯುಕ್ರೇನ್?

ಬಹುಜನ ಭಾರತ; ಸೋತು ಗೆಲ್ಲುವುದೇ ಯುಕ್ರೇನ್?

- Advertisement -
- Advertisement -

ರಷ್ಯಾ ಮತ್ತು ಯುಕ್ರೇನಿನ ನಡುವೆ ನಡೆದಿದ್ದ ಮಾತುಕತೆಗಳ ಭೂಮಿಕೆಯನ್ನು ಮತ್ತು ಚದುರಂಗದಾಟದ ಹಾಸನ್ನೇ ಎಳೆದು ಕಿತ್ತೆಸೆದು ನೇರವಾಗಿ ಯುದ್ಧವನ್ನು ಹೇರಿದ್ದಾರೆ ಪುಟಿನ್. ನವನಾಜಿಗಳಿಂದ ಮತ್ತು ಅಮೆರಿಕೆಯು ಬೆಂಬಲಿಸಿ ಸುರಿದಿರುವ ಶಸ್ತ್ರಾಸ್ತ್ರಗಳಿಂದ ಯುಕ್ರೇನನ್ನು ಮುಕ್ತಗೊಳಿಸುವುದು ಈ ಯುದ್ಧದ ಉದ್ದೇಶವೆಂದು ಸಾರಿದ್ದಾರೆ.

ಭಾರತದ ಪಾಲಿಗೆ ಪಾಕಿಸ್ತಾನ ಹೇಗೋ, ರಷ್ಯಾದ ಪಾಲಿಗೆ ಯುಕ್ರೇನ್ ಹಾಗೆ. ಭಾರತದ ಪರ ಪಾಕಿಸ್ತಾನವನ್ನು ಭಾರತ ಬಯಸುವಂತೆ ರಷ್ಯಾ ಪರ ಯುಕ್ರೇನನ್ನು ನಾವು ಬಯಸುತ್ತೇವೆ ಎಂಬುದು ರಷ್ಯಾದ ಅನಧಿಕೃತ ಅಂಬೋಣ.

ರಷ್ಯಾ ಮತ್ತು ಪಶ್ಚಿಮ ಜಗತ್ತಿನ ನಡುವಣ ತಿಸ್ರದಲ್ಲಿ ಯುಕ್ರೇನ್ ಪ್ರಜೆಗಳು ಬಡವಾಗುತ್ತಿದ್ದಾರೆ. ಅನಗತ್ಯ ಯುದ್ಧದ ವಿನಾಶವನ್ನು ಅವರ ಮೇಲೆ ಹೇರಲಾಗಿದೆ. ತಿಸ್ರದ ಈ ಬೆಂಕಿ ಇಡೀ ವಿಶ್ವವನ್ನೇ ತನ್ನ ಒಡಲಿಗೆ ಸೆಳೆಯದಿರಲಿ.

ರಷ್ಯಾದ ದಾಳಿಯನ್ನು ಖಂಡಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯ ಗೊತ್ತುವಳಿಯನ್ನು ತನ್ನ ವಿಟೋ ಅಧಿಕಾರ ಚಲಾಯಿಸಿ ನಿಷ್ಫಲಗೊಳಿಸಿದೆ ರಷ್ಯಾ. ಮುಂದಿನ ಹೆಜ್ಜೆಯಾಗಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಈ ಕುರಿತು ಸಭೆ ಸೇರಲಿದೆ. ರಷ್ಯಾದ ನಡೆಯನ್ನು ವಾಗ್ದಂಡನೆಗೆ ಗುರಿಪಡಿಸುವುದು ಈ ಸಭೆಯ ಉದ್ದೇಶ. ತನ್ನ ಈ ನಡೆಗೆ 80 ದೇಶಗಳ ಬೆಂಬಲವನ್ನು ಪಡೆದುಕೊಂಡಿದೆ.

ಈ ವಾಗ್ದಂಡನೆಯ ಗೊತ್ತುವಳಿ ಅಂಗೀಕಾರವಾಗದಂತೆ ವಿಟೋ ಅಧಿಕಾರ ಚಲಾಯಿಸುವ ಅವಕಾಶ ರಷ್ಯಾಕ್ಕೆ ಈ ಸಭೆಯಲ್ಲಿ ಇರುವುದಿಲ್ಲ. ಆಫ್ರಿಕನ್ ದೇಶಗಳೂ ಸೇರಿದಂತೆ ಅಭಿವೃದ್ಧಿಶೀಲ ದೇಶಗಳು ಈ ಹಿಂದಿನಂತೆ ರಷ್ಯಾದ ಪರವಾಗಿ ಮತ ಚಲಾಯಿಸುವ ಅಥವಾ ಮತದಾನದಲ್ಲಿ ಭಾಗವಹಿಸದಿರುವ ಸಾಧ್ಯತೆಯೂ ಈಗ ಇಲ್ಲ. ರಷ್ಯಾದ ನಡೆಯನ್ನು ಕೀನ್ಯಾ ಈಗಾಗಲೇ ಬಲವಾಗಿ ಖಂಡಿಸಿರುವುದೇ ಬದಲಾಗಿರುವ ಈ ನಿಲುವಿನ ನಿಚ್ಚಳ ಸೂಚನೆ. ಅಂತಾರಾಷ್ಟ್ರೀಯ ಅಭಿಮತ ರಷ್ಯಾದ ವಿರುದ್ಧವಾಗಿ ತಿರುಗತೊಡಗಿದೆ. ಈ ಹಿನ್ನೆಲೆಯಲ್ಲಿ ಚೀನಾ ಕೂಡ ರಷ್ಯಾದೆಡೆ ತೋರುತ್ತ ಬಂದಿರುವ ತನ್ನ ಮೆದು ನೀತಿಯನ್ನು ಕೈಬಿಡುವ ಒತ್ತಡ ಎದುರಿಸಲಿದೆ. ಭಾರತ ಕೂಡ ಇಂದಲ್ಲ ನಾಳೆ ಇದೇ ನೀತಿಯನ್ನು ತಳೆಯಬೇಕಾದೀತು.

ಅಮೆರಿಕ ಸಂಯುಕ್ತ ಸಂಸ್ಥಾನಗಳು ಮತ್ತು ಐರೋಪ್ಯ ಒಕ್ಕೂಟ ಒಟ್ಟಾಗಿ ರಷ್ಯಾದ ಮೇಲೆ ಏಕಪಕ್ಷೀಯ ನಿರ್ಬಂಧಗಳನ್ನು ಈಗಾಗಲೇ ಹೇರಿವೆ. ಯುಕ್ರೇನ್ ಮೇಲಿನ ರಷ್ಯಾ ದಾಳಿಯ ಮೊನಚನ್ನು ಈ ನಿರ್ಬಂಧಗಳು ಮೊಂಡುಮಾಡುವ ಮತ್ತು ದಾಳಿಯ ದೀರ್ಘಾವಧಿಯನ್ನು ಮೊಟಕಾಗಿಸುವ ನಿರೀಕ್ಷೆಯನ್ನು ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ಹೊಂದಿದೆ. ಯುಕ್ರೇನಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುವ ಭರವಸೆ ನೀಡಿವೆ ಅಮೆರಿಕ ಮತ್ತು ಜರ್ಮನಿ. ಆದರೆ ನೇರ ವಿದೇಶಿ ಸೇನಾ ನೆರವು ಹಾಗೂ ವಾಯದಾಳಿಯ ಬೆಂಬಲ ದೊರೆಯದೆ, ಕೇವಲ ತನ್ನ ಸ್ವಂತ ಬಲದಿಂದಲೇ ರಷ್ಯಾ ದಾಳಿಯನ್ನು ಯುಕ್ರೇನ್ ಹಿಮ್ಮೆಟ್ಟಿಸುವುದು ಅಸಾಧ್ಯ.

ರಷ್ಯಾದ ಈ ದಾಳಿಯನ್ನು ರಷ್ಯಾದ ಮಿತ್ರದೇಶಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹೆಚ್ಚು ಕಾಲ ಸಮರ್ಥಿಸುವ ಸ್ಥಿತಿಯಲ್ಲಿ ಇಲ್ಲ. ರಷ್ಯಾ ಬೆನ್ನಿಗೆ ಬಲವಾಗಿ ನಿಲುತ್ತ ಬಂದಿರುವ ಚೀನಾ ದೇಶ ಕೂಡ ಈ ಮಾತಿಗೆ ಹೊರತಲ್ಲ.

ತಾನು ಗೆದ್ದೆನೆಂದು ಪುಟಿನ್ ಬೀಗಬಹುದು. ಆದರೆ ಅವರು ಗೆದ್ದು ಸೋಲಲಿದ್ದಾರೆ. ಯುಕ್ರೇನ್‌ನ ಜನ ಸೋತು ಗೆಲ್ಲಲಿದ್ದಾರೆ. ಈ ಗೆಲುವು ಸೋಲುಗಳ ನಡುವಣ ರಕ್ತಪಾತ, ಕಣ್ಣೀರು, ಸಾವುನೋವು, ವಿನಾಶದ ಬೆಲೆ ಕಟ್ಟಲಾದೀತೇ?

ರಷ್ಯಾದ ಮಿಲಿಟರಿ ಶಕ್ತಿಗೆ ಹೆದರಿ ದಂಗುಬಡಿದು ಆರಂಭದಲ್ಲೇ ಶರಣಾದೀತು ಎಂಬ ನಿರೀಕ್ಷೆಯನ್ನು ಯುಕ್ರೇನ್ ಹುಸಿಮಾಡಿದೆ. ದಿಟ್ಟ ಪ್ರತಿರೋಧ ತೋರಿರುವ ಯುಕ್ರೇನ್ ಸೇನೆ ಸುಲಭಕ್ಕೆ ಮಣಿಯುವುದಿಲ್ಲವೆಂದು ಸಾಬೀತುಮಾಡಿದೆ. ವಿಶ್ವಾದ್ಯಂತ ಬ್ರಹ್ಮಾಸ್ತ್ರವನ್ನು ಎದುರಿಸುತ್ತಿರುವ ಗುಬ್ಬಿ ಎಂಬ ಅನುಕಂಪ ಮೆಚ್ಚುಗೆಯನ್ನು ಗಳಿಸಿದೆ. ಜನಸಾಮಾನ್ಯರೂ ಸೇನೆಯ ಸಮವಸ್ತ್ರ ಧರಿಸಿ ಶಸ್ತ್ರಗಳನ್ನು ಕೈಗೆತ್ತಿಕೊಂಡು ಸೆಣಸುತ್ತಿದ್ದಾರೆ. ಯುಕ್ರೇನ್ ಅಧ್ಯಕ್ಷ ವೋಲೋಡಿಮಿರ್ ಝೆಲೆಸ್ಸ್ಕಿ ನಿಜ ನಾಯಕಮಣಿಯಂತೆ ತಮ್ಮ ಸೇನೆಯ ಮುಂಚೂಣಿಯಲ್ಲಿದ್ದು ಮುನ್ನಡೆಸುತ್ತಿದ್ದಾರೆ. ತಮ್ಮ ಜನರ ಜೊತೆ ಗಟ್ಟಿಯಾಗಿ ನಿಂತಿದ್ದಾರೆ. ಅಮೆರಿಕದ ಕೈಗೊಂಬೆಯಾಗಿರುವ ನವನಾಜೀವಾದಿ ಎಂಬ ರಷ್ಯಾದ ನಿಂದನೆ ಅವರಿಗೆ ಅಂಟಿದಂತಿಲ್ಲ.

ತನ್ನ ಅನುಗಾಲದ ಮಿತ್ರ ರಷ್ಯಾ ದೇಶ ತನ್ನ ನೆರೆಹೊರೆಯ ದುರ್ಬಲ ಸ್ವತಂತ್ರ ಸಾರ್ವಭೌಮ ದೇಶದ ಮೇಲೆ ನಡೆಸಿರುವ ಈ ಹಿಂಸಾತ್ಮಕ ಯುದ್ಧವನ್ನು ಖಚಿತವಾಗಿ ಖಂಡಿಸುವ ಸ್ಥಿತಿಯಲ್ಲಿ ಭಾರತ ಇಲ್ಲ. ಆದರೆ ಪುಟಿನ್ ದಾಳಿ ಮುಂಬರುವ ದಿನಗಳಲ್ಲಿ ಮತ್ತಷ್ಟು ವಿನಾಶಕಾರಿಯಾದರೆ ಭಾರತ ಮೌನ ಮುರಿಯಲೇಬೇಕಾಗುತ್ತದೆ.

ಯುದ್ಧ ನಡೆಸುತ್ತಿರುವ ಪುಟಿನ್ ತಮ್ಮ ದೇಶವಾಸಿಗಳಲ್ಲಿ ಅಸ್ಮಿತೆಯ ಸಂಕಟದೊಂದಿಗೆ ಆರ್ಥಿಕ ಸಂಕಟವನ್ನೂ ಹುಟ್ಟುಹಾಕಿದ್ದಾರೆ. ರಷ್ಯಾದ ನಾಗರಿಕರ ಹತ್ತಾರು ಲಕ್ಷ ಬಂಧು-ಮಿತ್ರರು ಯುಕ್ರೇನಿನಲ್ಲಿದ್ದಾರೆ. ಯುಕ್ರೇನಿನ ಮೇಲೆ ಯುದ್ಧ ಹೇರಿರುವ ರಷ್ಯಾದ ನಡೆಯನ್ನು ರಷ್ಯಾದ ನಾಗರಿಕರು ಬಲವಾಗಿ ವಿರೋಧಿಸಿದ್ದಾರೆ. ಯುಕ್ರೇನಿನೊಂದಿಗೆ ತಾವು ಸಾರಿರುವುದು ಪೂರ್ಣಪ್ರಮಾಣದ ಯುದ್ಧ ಎಂಬ ಸಂಗತಿಯನ್ನು ತಮ್ಮ ನಾಗರಿಕರಿಂದ ಮುಚ್ಚಿಡಲು ಪ್ರಯತ್ನಿಸಿದ್ದಾರೆ. ಈ ಯುದ್ಧವನ್ನು ಯುದ್ಧವೆಂದು ಕರೆಯದಂತೆ ರಷ್ಯನ್ ಸಮೂಹ ಮಾಧ್ಯಮಗಳಿಗೆ ತಾಕೀತು ಮಾಡಿದ್ದಾರೆ. ನಿಧಾನವಾಗಿ ಆದರೆ ನಿಶ್ಚಿತವಾಗಿ ಆರ್ಥಿಕ ತಳಮಳ ರಷ್ಯಾ ಜನಜೀವನಕ್ಕೆ ಬಿಸಿಮುಟ್ಟಿಸತೊಡಗಿದೆ. ಪಶ್ಚಿಮ ಜಗತ್ತು ಹೇರುತ್ತಿರುವ ನಿರ್ಬಂಧಗಳು ಮತ್ತು ಡಾಲರ್-ರೂಬಲ್ ವಿನಿಮಯ ದರ ಕುಸಿತದ ಬೆಳವಣಿಗೆಗಳು ಬೆಲೆ ಏರಿಕೆಯ ಝಳವನ್ನು ಹೆಚ್ಚಿಸುತ್ತಿವೆ. ಪುಟಿನ್‌ರನ್ನು ಮಹಾನ್ ಎಂದು ಗಟ್ಟಿಯಾಗಿ ಜಯಕಾರ ಹಾಕುತ್ತಿದ್ದ ಜನದನಿಗಳು ಕ್ಷೀಣಗೊಳ್ಳತೊಡಗಿವೆ. ಭಿನ್ನದನಿಗಳನ್ನು ಉಕ್ಕಿನ ಹಸ್ತದಿಂದ ಹಿಸುಕಿ ಹತ್ತಿಕ್ಕುವ ಸೂಚನೆಗಳು ನಿಚ್ಚಳವಾಗತೊಡಗಿವೆ. ಯುಕ್ರೇನ್ ಮೇಲಿನ ದಾಳಿ ದಟ್ಟ, ಹಿಂಸಾತ್ಮಕ ಹಾಗೂ ವಿನಾಶಕಾರಿಯಾದಷ್ಟೂ ರಷ್ಯಾದ ಜನಮಾನಸದಲ್ಲಿ ಪುಟಿನ್ ವರ್ಚಸ್ಸು ಕುಸಿಯಲಿದೆ. ಈ ಯಾವ ಕಾರಣಗಳೂ ಪುಟಿನ್ ಅವರನ್ನು ವಿಚಲಿತಗೊಳಿಸಿಲ್ಲ.

ರಷ್ಯಾ ಮತ್ತು ಯುಕ್ರೇನಿನ ನಡುವೆ ನಡೆದಿದ್ದ ಮಾತುಕತೆಗಳ ಭೂಮಿಕೆಯನ್ನು ಮತ್ತು ಚದುರಂಗದಾಟದ ಹಾಸನ್ನೇ ಎಳೆದು ಕಿತ್ತೆಸೆದು ನೇರವಾಗಿ ಅಲ್ಲಿನ ಜನರ ಮೇಲೆ ಯುದ್ಧವನ್ನು
ಹೇರಿದ್ದಾರೆ ಪುಟಿನ್. ನವನಾಜಿಗಳಿಂದ ಮತ್ತು ಅಮೆರಿಕೆಯು ಬೆಂಬಲಿಸಿ ಸುರಿದಿರುವ ಶಸ್ತ್ರಾಸ್ತ್ರಗಳಿಂದ ಯುಕ್ರೇನನ್ನು ಮುಕ್ತಗೊಳಿಸುವುದು ಈ ಯುದ್ಧದ ಉದ್ದೇಶವಂತೆ.

ಹಾಲಿ ಪ್ರಧಾನಿ ವೊಲೋಡೋಮಿರ್ ಝೆಲೆಸ್ಕಿ ಅವರ ಆಡಳಿತದಲ್ಲಿ ನ್ಯಾಟೋದತ್ತ ಹೆಚ್ಚುಹೆಚ್ಚು ನಿಶ್ಚಿತವಾಗಿ ವಾಲಿದ ಯುಕ್ರೇನ್ ರಷ್ಯಾದ ಜೊತೆಗಿನ ವಾಣಿಜ್ಯ ವ್ಯಾಪಾರವನ್ನೂ ತಗ್ಗಿಸಿದ್ದು ಪುಟಿನ್ ಅವರನ್ನು ಕೆರಳಿಸಿದೆ.

ರಷ್ಯಾ ಮತ್ತು ಪಶ್ಚಿಮ ಜಗತ್ತಿನ ನಡುವಣ ತಿಸ್ರದಲ್ಲಿ ಯುಕ್ರೇನ್ ಪ್ರಜೆಗಳು ಬಡವಾಗುತ್ತಿದ್ದಾರೆ. ಅನಗತ್ಯ ಯುದ್ಧದ ವಿನಾಶವನ್ನು ಅವರ ಮೇಲೆ ಹೇರಲಾಗಿದೆ. ಈ ದುರ್ಬಲ ದೇಶದ ಮೇಲೆ ಅಣ್ವಸ್ತ್ರಗಳನ್ನು ಪ್ರಯೋಗಿಸುವ ಬೆದರಿಕೆಯನ್ನು ಪುಟಿನ್ ಹಾಕಿದ್ದಾರೆ. ದುರ್ಬಲ ಯುಕ್ರೇನ್ ಮಾತುಕತೆಯ ಮೇಜಿಗೆ ಬರಲು ಒಪ್ಪಿದೆ. ಪುಟಿನ್ ಯುದ್ಧ ಗೆಲ್ಲಬಹುದೇ ವಿನಾ ಮನಸುಗಳನ್ನಲ್ಲ


ಇದನ್ನೂ ಓದಿ: ಯುದ್ಧಪಿಪಾಸು ಶಕ್ತಿಗಳ ಮತ್ತು ಪಾಪ್ಯುಲಿಸ್ಟ್ ಮುಖಂಡರ ನಡುವೆ ನಲುಗುತ್ತಿರವ ಮುಗ್ಧ ಜನರ ಪ್ರಾಣ

ಇದನ್ನೂ ಓದಿ: ರಷ್ಯಾ-ಉಕ್ರೇನ್ ಬಿಕ್ಕಟ್ಟು: 352 ಉಕ್ರೇನಿಯನ್ ನಾಗರಿಕರು ಸಾವು, 1,684 ಮಂದಿಗೆ ಗಾಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...