Homeಮುಖಪುಟದೆಹಲಿಗೆ ತಕ್ಷಣ ನೀರು ಹರಿಸಲು ಹಿಮಾಚಲ ಪ್ರದೇಶಕ್ಕೆ ಸುಪ್ರೀಂ ನಿರ್ದೇಶನ

ದೆಹಲಿಗೆ ತಕ್ಷಣ ನೀರು ಹರಿಸಲು ಹಿಮಾಚಲ ಪ್ರದೇಶಕ್ಕೆ ಸುಪ್ರೀಂ ನಿರ್ದೇಶನ

- Advertisement -
- Advertisement -

ಬೇಸಿಗೆಯಿಂದ ನೀರಿನ ಅಭಾವ ಎದುರಿಸುತ್ತಿರುವ ದೆಹಲಿಗೆ ತಕ್ಷಣ ನೀರು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಹಿಮಾಚಲ ಪ್ರದೇಶ ಸರ್ಕಾರಕ್ಕೆ ಆದೇಶಿಸಿದ್ದು, ಈ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿಕೊಡುವಂತೆ ಹರಿಯಾಣ ಸರ್ಕಾರಕ್ಕೆ ಸೂಚಿಸಿದೆ.

ಹಿಮಾಚಲ ಪ್ರದೇಶ ಸರ್ಕಾರಕ್ಕೆ 137 ಕ್ಯೂಸೆಕ್ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಈ ನೀರು ಹರಿಯಾಣದ ಹತ್ನಿಕುಂಡ್ ಬ್ಯಾರೇಜ್‌ಗೆ ತಲುಪಲಿದೆ. ಇದರಿಂದ ಹರಿಯಾಣವು ವಝೀರಾಬಾದ್ ಬ್ಯಾರೇಜ್ ಮೂಲಕ ದೆಹಲಿಗೆ ನೀರನ್ನು ವರ್ಗಾಯಿಸಲು ಅನುಕೂಲವಾಗುತ್ತದೆ.

ನೀರಿನ ಬಿಕ್ಕಟ್ಟಿನಿಂದ ಬಳಲುತ್ತಿರುವ ರಾಷ್ಟ್ರ ರಾಜಧಾನಿಗೆ ತಕ್ಷಣವೇ ನೀರು ಬಿಡುಗಡೆ ಮಾಡಲು ಹರಿಯಾಣ ರಾಜ್ಯಕ್ಕೆ ನಿರ್ದೇಶನಗಳನ್ನು ಕೋರಿ ದೆಹಲಿ ಸರ್ಕಾರ ಸಲ್ಲಿಸಿದ ರಿಟ್ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸಿದೆ.

ಈ ಹಿಂದಿನ ವಿಚಾರಣೆಯ ವೇಳೆ ಎರಡೂ ಭಾಗದವರ ವಾದ ಆಲಿಸಿದ್ದ ನ್ಯಾಯಾಲಯ, ಜೂನ್ 5ರಂದು ಎಲ್ಲಾ ಮಧ್ಯಸ್ಥಗಾರ ರಾಜ್ಯಗಳ ತುರ್ತು ಸಭೆ ನಡೆಸಿ, ಜೂನ್‌ 6 ರಂದು ವರದಿ ಸಲ್ಲಿಸಲು ಯಮುನಾ ಮೇಲ್ದಂಡೆ ಮಂಡಳಿಗೆ ಸೂಚಿಸಿತ್ತು.

ಇಂದು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಬೇಸಿಗೆ ಕಾಲದ ಪೀಠದ ನ್ಯಾಯಾಧೀಶರಾದ ಪ್ರಶಾಂತ್ ಕೆ ಮಿಶ್ರಾ ಮತ್ತು ಕೆ ವಿ ವಿಶ್ವನಾಥನ್ ಅವರು ನೀರಿನ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡಬೇಡಿ ಎಂದು ಹೇಳಿದ್ದಾರೆ.

ದೆಹಲಿಗೆ ನೀರು ಹರಿಸಲು ತಮ್ಮದು ಯಾವುದೇ ಅಭ್ಯಂತರವಿಲ್ಲ ಎಂದು ಹಿಮಾಚಲ ಪ್ರದೇಶ ತಿಳಿಸಿದೆ. ಹಿಮಾಚಲದಿಂದ ಬಿಡುಗಡೆಯಾಗುವ ನೀರನ್ನು ಪ್ರತ್ಯೇಕಗೊಳಿಸಿ ದೆಹಲಿಗೆ ಹರಿಸಲು ಯಾವುದೇ ಯಾಂತ್ರಿಕ ಮಾನದಂಡಗಳಿಲ್ಲ ಎಂದು ಹರಿಯಾಣ ಹೇಳಿದೆ.

ಇದನ್ನೂ ಓದಿ : ವಾಲ್ಮೀಕಿ ನಿಗಮದಲ್ಲಿನ ಹಗರಣ ಪ್ರಕರಣ: ಸಚಿವ ಬಿ ನಾಗೇಂದ್ರ ರಾಜೀನಾಮೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಫಾರಂ-7: ಎಫ್‌ಐಆರ್ ಮುಂದುವರಿಸಿದರೆ ಪೊಲೀಸ್ ಠಾಣೆ ಮುತ್ತಿಗೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ಎಸ್ಐಆರ್ (SIR) ಫಾರಂ 7 ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರವು ವ್ಯವಸ್ಥಿತವಾಗಿ ಗೊಂದಲಗಳನ್ನು ಸೃಷ್ಟಿಸಿದ್ದು, ಬಿಜೆಪಿ ಕಾರ್ಯಕರ್ತರ ವಿರುದ್ಧ ಅನ್ಯಾಯವಾಗಿ ಎಫ್‌ಐಆರ್ ದಾಖಲಿಸುವುದನ್ನು ಮುಂದುವರಿಸಿದರೆ ಮುಂಬರುವ ದಿನಗಳಲ್ಲಿ ಪೊಲೀಸ್ ಠಾಣೆಗಳು ಹಾಗೂ ಎಸ್‌ಪಿ ಕಚೇರಿಗಳಿಗೂ...

ಗ್ಯಾನೇಶ್ ಅವರನ್ನು ರಕ್ಷಿಸಲು ಮೋದಿ-ಶಾ ಎಲ್ಲವನ್ನೂ ಮಾಡುತ್ತಾರೆ: ಸಿಜೆಪಿ

"ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ; ತನ್ನದೇ ನಾಗರಿಕರ ವಿರುದ್ಧ ಯುದ್ಧ ಸಾರಿದೆ" ಎಂದು ಪೊಲೀಸರ ಬಂಧನದಿಂದ ಬಿಡುಗಡೆಯಾದ ತಕ್ಷಣ ಮಾಧ್ಯಮಗಳೊಂದಿಗೆ ನಡೆಸಿದ ತಮ್ಮ ಮೊದಲ ಸಂವಾದದಲ್ಲಿ...

ದೆಹಲಿ ಪ್ರತಿಭಟನೆ ವೇಳೆ ಇಂಟರ್ನೆಟ್ ಸ್ಥಗಿತ : ನ್ಯಾಯಾಂಗ ಪರಿಶೀಲನೆ ಕೋರಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ, ಅಕ್ಟೋಬರ್ 9 ಮತ್ತು 10 ರಂದು ಮಧ್ಯ ದೆಹಲಿಯ ಜನಪಥ್-ಕರ್ತವ್ಯ ಪಥ್ ಜಂಕ್ಷನ್‌ನ ನಾಲ್ಕು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು...

ಸಿಜೆಪಿ ಪ್ರತಿಭಟನೆ: ‘ಬ್ಯಾರಿಕೇಡ್‌ ತೆರವುಗೊಳಿಸಿ, ಇಂಟರ್‌ನೆಟ್ ತಡೆಯಬೇಡಿ, ಮೆಟ್ರೋ ಸೇವೆ ಸಹಜವಾಗಿರಲಿ..’; ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ಸೂಚನೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆಯ ಹಿನ್ನೆಲೆಯಲ್ಲಿ ಹಾಕಲಾಗಿರುವ ಎಲ್ಲಾ ಬ್ಯಾರಿಕೇಡ್‌ಗಳನ್ನು, ಅತ್ಯಂತ ಅಗತ್ಯವಿದ್ದ ಕಾರಣಕ್ಕೆ ಹೊರತುಪಡಿಸಿ ತಕ್ಷಣವೇ ತೆರವುಗೊಳಿಸಬೇಕು; ರಾಷ್ಟ್ರ ರಾಜಧಾನಿಯಲ್ಲಿ ಮೆಟ್ರೋ ಸೇವೆಗಳು ಸಹಜವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಹಾಗೂ ಇಂಟರ್‌ನೆಟ್...

‘ನನ್ನನ್ನು ಬಂಧಿಸಿರಲಿಲ್ಲ, ಕಿಡ್ನಾಪ್ ಮಾಡಿದ್ದರು’ ದೆಹಲಿ ಪೊಲೀಸರ ವಿರುದ್ಧ ಧೃವ್ ರಾಠೀ ಆರೋಪ

ಸಿಜೆಪಿ (CJP) ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಬೃಹತ್ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸುವುದನ್ನು ತಡೆಯಲು ಶನಿವಾರ ಮುಂಜಾನೆ ಗುರುಗ್ರಾಮದ ನಿವಾಸದಿಂದಲೇ ಪೊಲೀಸರಿಂದ ಬಲವಂತವಾಗಿ ವಶಕ್ಕೆ ಪಡೆದುಕೊಳ್ಳಲ್ಪಟ್ಟಿದ್ದ ಖ್ಯಾತ ಯೂಟ್ಯೂಬರ್ ಧೃವ್ ರಾಠೀ ಅವರು ಭಾನುವಾರ...

ದೆಹಲಿ ಪ್ರತಿಭಟನೆ: ವಿದ್ಯಾರ್ಥಿಗಳು ಹಾಗೂ ಮಹಿಳೆಯರ ಮೇಲೆ ಹಲ್ಲೆ ನಡೆಸಿದ 4 ಹಿಂದುತ್ವವಾದಿಗಳ ಬಂಧನ!

ದೆಹಲಿಯಲ್ಲಿ ನಡೆದ ಪ್ರತಿಭಟನೆಯ ವೇಳೆ ಶಾಂತಿಯುತವಾಗಿ ಸಾಗುತ್ತಿದ್ದ ಯುವ ವಿದ್ಯಾರ್ಥಿಗಳು ಹಾಗೂ ಮಹಿಳೆಯರ ಮೇಲೆ ಭೀಕರವಾಗಿ ಹಲ್ಲೆ ನಡೆಸಿ, ಎಳೆದಾಡಿ ದೌರ್ಜನ್ಯ ಎಸಗಿದ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ 'ಹಿಂದೂ ರಕ್ಷಾ ದಳ'ದ ನಾಲ್ವರು...

ಅಭಿಜಿತ್ ದೀಪ್ಕೆ, ಅಶುತೋಷ್ ರಂಕಾ ಹಾಗೂ ಸೌರವ್ ದಾಸ್ ಬಿಡುಗಡೆ: ಮಧ್ಯಾಹ್ನ 2ಕ್ಕೆ CJP ಪತ್ರಿಕಾಗೋಷ್ಠಿ

ಚುನಾವಣಾ ಆಯೋಗದ ವಿವಾದಾತ್ಮಕ ಧೋರಣೆ ಹಾಗೂ ಮತದಾರರ ಪಟ್ಟಿ ಅಕ್ರಮಗಳನ್ನು ಖಂಡಿಸಿ ದೆಹಲಿಯಲ್ಲಿ ನಿಗದಿತ ಪ್ರತಿಭಟನೆಗೂ ಮುನ್ನ ಮುನ್ನೆಚ್ಚರಿಕೆ ಕ್ರಮವೆಂಬ ನೆಪದಲ್ಲಿ ದೆಹಲಿ ಪೊಲೀಸರಿಂದ ವಶಕ್ಕೆ ಪಡೆಯಲ್ಪಟ್ಟಿದ್ದ ಸಿಜೆಪಿ ಸಂಘಟನೆಯ ಪ್ರಮುಖ...

ದೆಹಲಿ ಹೋರಾಟಕ್ಕೆ ಬೆಂಬಲ: ಫ್ರೀಡಂಪಾರ್ಕ್ನಲ್ಲಿ ಎಡ ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ

ಬೆಂಗಳೂರು, ಅ.10: ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಶನಿವಾರ ಎಐಡಿಎಸ್‌ಒ, ಕೆವಿಎಸ್, ಎಐಎಸ್‌ಎಫ್, ಎಸ್‌ಎಫ್‌ಐ, ಎಐಎಸ್‌ಎ ಸೇರಿದಂತೆ ಇನ್ನಿತರೆ ಎಡ ವಿದ್ಯಾರ್ಥಿ ಸಂಘಟನೆಗಳ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯ...

ಕೋರ್ಟ್ ಆದೇಶ ಉಲ್ಲಂಘಿಸಿ ದೆಹಲಿಯ ಮೆಟ್ರೋ ನಿಲ್ದಾಣಗಳು ಬಂದ್, ರೈಲು ರದ್ದು : ಸುಪ್ರೀಂ ಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ರಾಜೀನಾಮೆ ಮತ್ತು ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿವಿಧ ಜಾತ್ಯತೀತ ಪಕ್ಷ ಮತ್ತು ಸಂಘಟನೆಗಳು ಇಂದು (ಅ.10) ದೆಹಲಿಯಲ್ಲಿ ಬೃಹತ್ ಪ್ರತಿಭಟನೆಗೆ ಕರೆ ಕೊಟ್ಟಿವೆ. ಪೊಲೀಸರು...

ಸಿಜೆಪಿ ಪ್ರತಿಭಟನೆಗೆ ದೆಹಲಿ ಸ್ತಬ್ಧ: ಗುರುದ್ವಾರದಲ್ಲಿ ಆಶ್ರಯ ಪಡೆದ ಪ್ರತಿಭಟನಾಕಾರರು, ಜಿರಳೆ ಆಂಟೆನಾ ಹೆಲ್ಮೆಟ್ ಧರಿಸಿ ವಿನೂತನ ಪ್ರತಿರೋಧ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾದ ‘ಜಿರಳೆ ಜನತಾ ಪಾರ್ಟಿ’ (ಸಿಜೆಪಿ) ಮತ್ತು ಅದರ ಬೆಂಬಲಿಗರನ್ನು ತಡೆಯಲು ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಭದ್ರತಾ ವ್ಯವಸ್ಥೆ...