Homeಕರ್ನಾಟಕSCSP/TSP ನಿಂದ ಯಾವ ದಲಿತ ಉದ್ಧಾರ ಆಗಿದ್ದಾರೆ ಎಂದು ಮೌಲ್ಯಮಾಪನ ಮಾಡಬೇಕಾಗಿದೆ: ದಲಿತ ಹಕ್ಕುಗಳ ಹೋರಾಟಗಾರ...

SCSP/TSP ನಿಂದ ಯಾವ ದಲಿತ ಉದ್ಧಾರ ಆಗಿದ್ದಾರೆ ಎಂದು ಮೌಲ್ಯಮಾಪನ ಮಾಡಬೇಕಾಗಿದೆ: ದಲಿತ ಹಕ್ಕುಗಳ ಹೋರಾಟಗಾರ ಗುರುಪ್ರಸಾದ್ ಕೆರಗೋಡು

- Advertisement -
- Advertisement -

SCSP/TSP ಯೋಜನೆಯಲ್ಲಿ ಸುಮಾರು 3.37 ಲಕ್ಷ ಕೋಟಿಗೂ ಹೆಚ್ಚಿನ ದಲಿತರಿಗೆ ನೀಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಇಷ್ಟೊಂದು ಬೃಹತ್ ಮೊತ್ತ ಎಲ್ಲಿ ಹೋಗಿದೆ. ಈ ಹಣವನ್ನು ಬಳಸಿ ದಲಿತರು ಉದ್ಧಾರವಾಗಿರುವಂತದ್ದು ಎಲ್ಲೂ ಕಾಣುತ್ತಿಲ್ಲ. ಈ ಹಣದ ಖರ್ಚಿನಲ್ಲಿ ಯಾವ ಬದಲಾವಣೆ ಆಗಿದೆ ಎಂದು ಚರ್ಚೆ ಮಾಡಲು ಒಂದು ಬಾರಿ ವಿಶೇಷ ಅಧಿವೇಶನ ಮಾಡಿ ಎಂದು ಅದಕ್ಕಾಗಿಯೆ ನಾವು ಕೇಳುತ್ತಿದ್ದೇವೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಗುರುಪ್ರಸಾದ್ ಕೆರಗೋಡು ಬುಧವಾರ ಹೇಳಿದರು. SCSP/TPS ನಿಂದ

‘ಸಂಯುಕ್ತ ಹೋರಾಟ-ಕರ್ನಾಟಕ’ ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿರುವ ಎರಡು ದಿನಗಳ ‘ಜನ ಚಳವಳಿಗಳ ಬಜೆಟ್ ಅಧಿವೇಶನ’ದಲ್ಲಿ ‘ಸಾಮಾಜಿಕ ನ್ಯಾಯ ಮತ್ತು ಬಜೆಟ್ ಧೋರಣೆಗಳು’ ಎಂಬ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. “SCSP/TSP ಯೋಜನೆಯನ್ನು ಬಡತನ ನಿರ್ಮೂಲನೆಗಾಗಿ ಮಾಡಿರುವ ಯೋಜನೆ ಅಲ್ಲ, ಬದಲಾಗಿ ಬಡತನದ ಅಂತರ ಕಡಿಮೆ ಮಾಡಲು ಜಾರಿ ಮಾಡಲಾಗಿದೆ. ಈ ಹಣವನ್ನು ಗ್ಯಾರೆಂಟಿ ಯೋಜನೆ ಸೇರಿದಂತೆ ಇತರ ಯೋಜನೆಗಳಿಗೆ ಬಳಸಬಾರದು. ಹಾಗಾಗಿ ಹಣದ ಮೌಲ್ಯಮಾಪನ ಮಾಡಬೇಕಾಗಿದೆ” ಎಂದು ಅವರು ಆಗ್ರಹಿಸಿದರು. SCSP/TPS ನಿಂದ

“6 ತಿಂಗಳ ಒಳಗೆ ಬ್ಯಾಕ್‌ಲ್ಯಾಗ್ ಹುದ್ದೆಗಳನ್ನು ತುಂಬಿಸಬೇಕು ಎಂದು ಬಿಜೆಪಿ ಸರ್ಕಾರ ಇದ್ದಾಗಲೆ ಆದೇಶ ಬಂದಿತ್ತು. ಆದರೂ ಕಾಂಗ್ರೆಸ್ ಸರ್ಕಾರ ಬಂದು 2 ವರ್ಷಗಳಾದರೂ ಆ ಹುದ್ದೆಗಳನ್ನು ತುಂಬಿಲ್ಲ. ಬಿಎಡ್‌ ಓದುವ ದಲಿತ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಮತ್ತು ಸ್ಕಾಲರ್‌ಶಿಪ್‌ಗಳು ಇಲ್ಲ. ಇದು ಯಾವ ಸಾಮಾಜಿಕ ನ್ಯಾಯ? ಇದಕ್ಕೆ ಸಿದ್ದರಾಮಯ್ಯ ಅವರು ಉತ್ತರಿಸಬೇಕು” ಎಂದು ಅವರು ಹೇಳಿದರು.

“ಸಿದ್ದರಾಮಯ್ಯ ಅವರು 2013ರಲ್ಲಿ ಸಿಎಂ ಆಗಿದ್ದ ಸಮಯದಲ್ಲಿ ಸಂವೇದನಶೀಲರಾಗಿದ್ದರು. ಆದರೆ ಈ ಬಾರಿ ಅವರಿಗೆ ಏನಾಗಿದೆ ಎಂದು ತಿಳಿಯುತ್ತಿಲ್ಲ. ಅವರಿಗೆ ಈಗ ಸಾಮಾಜಿಕ ನ್ಯಾಯ ಈಡೇರಿಸಬೇಕು ಎಂಬ ಮನಸ್ಥಿತಿ ಇಲ್ಲ. ಘೋಷಣೆ ಮಾಡುವುದು ಒಂದು ಮೊತ್ತ, ಹಂಚಿಕೆ ಮಾಡುವುದು ಒಂದು ಮೊತ್ತ, ಆದರೆ ಬಿಡುಗಡೆ ಮಾಡುವುದು ಒಂದು ಮೊತ್ತವಾಗಿದೆ” ಎಂದು ಅವರು ಹೇಳಿದರು. ಇವೆಲ್ಲಕ್ಕೂ ಪರಿಹಾರ ಎಂದರೆ ಎಲ್ಲರೂ ಒಗ್ಗಟ್ಟಾಗಿ ಸಾಂವಿಧಾನಿಕ ಮೌಲ್ಯಗಳನ್ನು ಇಟ್ಟುಕೊಂಡೆ ಮಿಲಿಟೆಂಟ್‌ ಯೋಜನೆಗಳನ್ನು ರೂಪಿಸಬೇಕಿದೆ ಎಂದು ಹೇಳಿದರು.

ದಲಿತರಿಗೆ ಭೂಮಿ ನೀಡಲ್ಲ ಎಂದು ಸರ್ಕಾರ ನೇರವಾಗಿ ಹೇಳುತ್ತಿದೆ: ದಲಿತ ಹಕ್ಕುಗಳ ಹೋರಾಟಗಾರ ಗೋಪಾಲಕೃಷ್ಣ ಹರಳಹಳ್ಳಿ

ಇದಕ್ಕೂ ಮೊದಲು ಬಗರ್‌ಹುಕುಂ ಭೂಮಿ ವಿಚಾರದ ಬಗ್ಗೆ ಮಾತನಾಡಿದ ದಲಿತ ಹಕ್ಕುಗಳ ಸಮಿತಿ ರಾಜ್ಯಾಧ್ಯಕ್ಷರಾದ ಗೋಪಾಲಕೃಷ್ಣ ಹರಳಹಳ್ಳಿ, “ನಮ್ಮ ದೇಶದಲ್ಲಿ ಸ್ವತಂತ್ರ ಬಂದ ನಂತರ ಸರ್ಕಾರಗಳು ಭೂ ಸುಧಾರಣೆ ಜಾರಿಗೆ ತಂದವು. ಆದರೆ ಭೂಮಿ ಜನರಿಗೆ ಸಿಕ್ಕಿಲ್ಲ. ಬಗರ್‌ಹುಕುಂ ಭೂಮಿಯ ಸಮಸ್ಯೆಯು ದಲಿತರು ಮತ್ತು ದಲಿತೇತರ ಬಡವರ ಬಗ್ಗೆ ಈಗಲೂ ಕಾಡುತ್ತಿದೆ. ಈ ವಿಚಾರದ ಬಗ್ಗೆ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ಯಾವುದೆ ಘೋಷಣೆ ಮಾಡಿಲ್ಲ. ಈ ಸರ್ಕಾರ ದಲಿತರಿಗೆ ಭೂಮಿ ನೀಡಲ್ಲ ಎಂಬುವುದು ಇದರ ಅರ್ಥವಾಗಿದ್ದು, ಅಂತಹ ಇಚ್ಛಾಶಕ್ತಿ ತಮಗೆ ಇಲ್ಲ ಎಂದೆ ಸರ್ಕಾರ ಹೇಳುತ್ತಿದೆ” ಎಂದು ಅವರು ಹೇಳಿದರು.

ದಲಿತ ಹಕ್ಕುಗಳ ಸಮಿತಿ ರಾಜ್ಯಾಧ್ಯಕ್ಷರಾದ ಗೋಪಾಲಕೃಷ್ಣ ಹರಳಹಳ್ಳಿ

ದಲಿತರಿಗಾಗಿ 2 ಲಕ್ಷ ಕೋಟಿ ರೂ.ಗಳು ಖರ್ಚು ಮಾಡಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಇದರ ಬಗ್ಗೆ ಯಾವುದಾದರು ಅಧ್ಯಯನ ಆಗಿದೆಯೆ? ಎಂದು ಅವರು ಹೇಳಿದರು. “ಜೀತಮುಕ್ತಿ ಕಾಯ್ದೆಯ ಪ್ರಕಾರ ದಲಿತರಿಗೆ ಭೂಮಿ ಕೊಡಬೇಕು ಎಂದು ಕಾನೂನು ಹೇಳುತ್ತದೆ. ಆದರೆ ಇವತ್ತಿನವರೆಗೂ ಯಾವುದೆ ಭೂಮಿ ದಲಿತರಿಗೆ ನೀಡಿಲ್ಲ. ಭೂಮಿ ಕೇಳಿದ ದಲಿತರ ಮೇಲೆ ಸರ್ಕಾರ ಕೇಸು ಹಾಕುತ್ತಿದೆ. ದೇವದಾಸಿ ಮಹಿಳೆಯರಿಗೆ ಸರ್ಕಾರ ಬಜೆಟ್‌ನಲ್ಲಿ ಏನಾದರೂ ಘೋಷಣೆ ಮಾಡುತ್ತದೆ ಎಂದು ನಿರೀಕ್ಷಿಸಿದ್ದೆವು, ಆದರೆ ಸರ್ಕಾರ ಇದರ ಬಗ್ಗೆ ಏನೂ ಘೋಷಣೆ ಮಾಡಿಲ್ಲ” ಎಂದು ಹೇಳಿದರು.

“ಜಾತಿ ವ್ಯವಸ್ಥೆಯನ್ನು ಉಳಿಸುವ ಶಕ್ತಿಗಳು ಬಲವಾಗಿದ್ದು, ದಲಿತರಿಗೆ ನ್ಯಾಯ ಸಿಗಬೇಕು ಎಂದರೆ ದಲಿತರೊಂದಿಗೆ ದಲಿತೇತರರು ಕೂಡಾ ಸೇರಿ ಹೋರಾಟ ಮಾಡಬೇಕಿದೆ. ಈ ಸರ್ಕಾರ ಯಾವ ದಲಿತರಿಗೂ ಭೂಮಿ ಮತ್ತು ಸಮಾನತೆಯನ್ನು ನೀಡುವುದಿಲ್ಲ. ಅದಕ್ಕಾಗಿ ಜನಚಳವಳಿಗಳು ಪರ್ಯಾಯ ರಾಜಕೀಯ ಚಳವಳಿ ಕಟ್ಟಬೇಕಿದೆ” ಎಂದು ಗೋಪಾಲಕೃಷ್ಣ ಹೇಳಿದರು.

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ಮುಸ್ಲಿಮರ 2ಬಿ ಮೀಸಲಾತಿ ಬಗ್ಗೆ ಸೊಲ್ಲೆತ್ತುವ ಧೈರ್ಯ ಸಿದ್ದರಾಮಯ್ಯರಿಗೆ ಇಲ್ಲ: ಪತ್ರಕರ್ತ ಬಿ.ಎಂ. ಹನೀಫ್‌

ಮುಸ್ಲಿಮರ 2ಬಿ ಮೀಸಲಾತಿ ಬಗ್ಗೆ ಸೊಲ್ಲೆತ್ತುವ ಧೈರ್ಯ ಸಿದ್ದರಾಮಯ್ಯರಿಗೆ ಇಲ್ಲ: ಪತ್ರಕರ್ತ ಬಿ.ಎಂ. ಹನೀಫ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಮಿಳುನಾಡು: ಕ್ಷೇತ್ರ ಪುನರ್ವಿಂಗಡೆ ವಿರುದ್ಧ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ: ಕೇಂದ್ರ ಸರ್ಕಾರಕ್ಕೆ ಎಂ.ಕೆ. ಸ್ಟಾಲಿನ್ ಎಚ್ಚರಿಕೆ

ಚೆನ್ನೈ: ಏಪ್ರಿಲ್ 16 ರಂದು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಾಗಿರುವ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ವಿರುದ್ಧ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗಳ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷರು ಮಂಗಳವಾರ ಬಿಜೆಪಿ...

ಪಶ್ಚಿಮ ಏಷ್ಯಾ ಸಂಘರ್ಷವು 25 ಲಕ್ಷ ಭಾರತೀಯರನ್ನು ಬಡತನಕ್ಕೆ ತಳ್ಳುವ ಅಪಾಯವಿದೆ : ವಿಶ್ವಸಂಸ್ಥೆ ವರದಿ

ಪಶ್ಚಿಮ ಏಷ್ಯಾ ಸಂಘರ್ಷವು 25 ಲಕ್ಷ ಭಾರತೀಯರನ್ನು ಬಡತನದ ಕೂಪಕ್ಕೆ ತಳ್ಳಬಹುದು ಮತ್ತು ದೇಶದ ಮಾನವ ಅಭಿವೃದ್ಧಿ ಪ್ರಗತಿಯಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆಯನ್ನುಂಟು ಮಾಡಬಹುದು ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (ಯುಎನ್‌ಡಿಪಿ) ಹೊಸ...

ಗೋ-ರಕ್ಷಕರ ದಾಳಿಯ ನಂತರ ವ್ಯಕ್ತಿ ನಾಪತ್ತೆ: ಜಮ್ಮುವಿನ ರಾಂಬನ್‌ನಲ್ಲಿ ತೀವ್ರ ಪ್ರತಿಭಟನೆ; ಸಾಮಾಜಿಕ ಮಾಧ್ಯಮಗಳಲ್ಲೂ ಆಕ್ರೋಶ

ಗೋರಕ್ಷಕರ ದಾಳಿಗೆ ಸಂಬಂಧಿಸಿ ಸ್ಥಳೀಯ ನಿವಾಸಿ ತನ್ವೀರ್ ಅಹ್ಮದ್ ಚೋಪನ್ ನಾಪತ್ತೆಯಾದ ನಂತರ ಸೋಮವಾರ ರಾಂಬನ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಸಾವಿರಾರು ಜನರು ಸಂಚಾರ ತಡೆದು ಪ್ರತಿಭಟಿಸಿದ್ದಾರೆ. ಪೊಲೀಸರ ಪ್ರಕಾರ,...

ನಿತೀಶ್ ಕುಮಾರ್ ರಾಜೀನಾಮೆ : ಬಿಹಾರದ ಹೊಸ ಸಿಎಂ ಆಗಿ ಬಿಜೆಪಿಯ ಸಾಮ್ರಾಟ್ ಚೌಧರಿ ಆಯ್ಕೆ

ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದು, ಹೊಸ ಮುಖ್ಯಮಂತ್ರಿಯಾಗಿ ಬಿಜೆಪಿಯ ಸಾಮ್ರಾಟ್ ಚೌಧರಿ ಅವರನ್ನು ಆಯ್ಕೆ ಮಾಡಲಾಗಿದೆ. ಪಾಟ್ನಾದ ಲೋಕ ಭವನದಲ್ಲಿ ಮಂಗಳವಾರ (ಏ.14) ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ)...

ಮುಂಬೈ ಸಂಗೀತ ಕಾರ್ಯಕ್ರಮದಲ್ಲಿ ಮಾದಕ ದ್ರವ್ಯ ಸೇವನೆಯಿಂದ ಇಬ್ಬರು ವಿದ್ಯಾರ್ಥಿಗಳು ಸಾವು, ಐವರ ಬಂಧನ; ತನಿಖೆ

ಮಂಗಳವಾರ ಮುಂಬೈನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಮಾದಕ ದ್ರವ್ಯ ಸೇವಿಸಿದ ಆರೋಪದ ಮೇಲೆ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ದಕ್ಷಿಣ ಮುಂಬೈನ ಪ್ರತಿಷ್ಠಿತ ಸಂಸ್ಥೆಯ ವಿದ್ಯಾರ್ಥಿಗಳು ಎಂಬಿಎ ಓದುತ್ತಿದ್ದರು ಎಂದು...

ನಸೀರ್ ಅಹ್ಮದ್‌ರನ್ನು ವಜಾಗೊಳಿಸಿದ್ದೇಕೆ… ಡಿಕೆಶಿ ಹೇಳಿದ್ದೇನು?  

ಮುಖ್ಯಮಂತ್ರಿಗಳು ತಮ್ಮದೇ ಆದ ವಿವಿಧ ಮೂಲಗಳಿಂದ ಮಾಹಿತಿ ಪಡೆದು, ಪಕ್ಷದ ಹಿತದೃಷ್ಟಿಯಿಂದ ನಸೀರ್ ಅಹ್ಮದ್ ವಿಚಾರದಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಮಂಗಳವಾರ (ಏ.14)...

ಆಟೋ ಪರ್ಮಿಟ್‌ಗಳಿಗೆ ಮರಾಠಿ ಭಾಷೆ ಕಡ್ಡಾಯ ನಿಯಮ; ಆರ್‌ಟಿಒ ಅಧಿಕಾರಿಗೆ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ

ಕಳವಳಕಾರಿ ಬೆಳವಣಿಗೆಯಲ್ಲಿ, ಆಟೋ-ರಿಕ್ಷಾ ಪರ್ಮಿಟ್ ಪರಿಶೀಲನೆಗೆ ಮರಾಠಿ ಜ್ಞಾನವನ್ನು ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ಆದೇಶಕ್ಕೆ ವಿರೋಧ ವ್ಯಕ್ತವಾಗಿದ್ದು, ಇದರಲ್ಲಿ ಬಿಷ್ಣೋಯ್ ಗ್ಯಾಂಗ್ ಭಾಗಿಯಾಗಿದೆ ಎಂದು ಆರೋಪಿಸಲಾಗಿದೆ. ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಅಧಿಕಾರಿ...

‘ನಾನು ಪ್ರೀತಿಯಲ್ಲಿ ನಂಬಿಕೆ ಇಡುತ್ತೇನೆ, ಬುಲ್ಡೋಜರ್‌ ರಾಜಕೀಯದಲ್ಲಿ ಅಲ್ಲ’: ಯುಪಿ ಮಾದರಿ ವಿವಾದದ ನಡುವೆ ಯೋಗಿ ವಿರುದ್ಧ ಮಮತಾ ದಾಳಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ದಾಳಿ ನಡೆಸಿದ್ದಾರೆ. ಅವರು ಬುಲ್ಡೋಜರ್ ರಾಜಕೀಯದಲ್ಲಿ ನಂಬಿಕೆ ಇಡುವುದಿಲ್ಲ ಎಂದು ಹೇಳಿದ್ದಾರೆ ಮತ್ತು ಉತ್ತರ ಪ್ರದೇಶದಲ್ಲಿ...

ಬಿಹಾರ| ಸಿಎಂ ಹುದ್ದೆಗೆ ರಾಜೀನಾಮೆ ನೀಡಲು ಅಣಿಯಾದ ನಿತೀಶ್ ಕುಮಾರ್ : ಸಂಪುಟ ವಿಸರ್ಜನೆಗೆ ಶಿಫಾರಸು

ಬಿಹಾರದಲ್ಲಿ ಹೊಸ ಸರ್ಕಾರ ರಚನೆ ಕಸರತ್ತು ತೀವ್ರಗೊಂಡಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಅಣಿಯಾಗಿದ್ದು, ಅದಕ್ಕೂ ಮೊದಲು ಸಚಿವ ಸಂಪುಟ ವಿಸರ್ಜಿಸಲು ಅವರು ಶಿಫಾರಸು ಮಾಡಿದ್ದಾರೆ....

‘ರಾತ್ರೋರಾತ್ರಿ ಒಪ್ಪಂದ ಸಾಧ್ಯವಿಲ್ಲ’: ಪಶ್ಚಿಮ ಏಷ್ಯಾ ಯುದ್ಧದ ಕುರಿತು ನಿರಂತರ ಮಾತುಕತೆಗೆ ವಿಶ್ವಸಂಸ್ಥೆ ಒತ್ತಾಯ

ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಅವರು ಅಮೆರಿಕ ಮತ್ತು ಇರಾನ್ ನಡುವೆ ನಿರಂತರ ರಾಜತಾಂತ್ರಿಕ ಮಾತುಕತೆಗೆ ಕರೆ ನೀಡಿದ್ದಾರೆ. "ಒಂದು ಒಪ್ಪಂದವನ್ನು ರಾತ್ರೋರಾತ್ರಿ ತಲುಪಲು ಸಾಧ್ಯವಿಲ್ಲ" ಎಂದು ಒತ್ತಿ ಹೇಳಿದ ಅವರು ಪಶ್ಚಿಮ...