Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌ಚೆಕ್ : ಮದ್ಯದ ನಶೆಯಲ್ಲಿ ಹುಲಿಯ ತಲೆ ಸವರಿಸಿದ ವ್ಯಕ್ತಿ...ವೈರಲ್ ವಿಡಿಯೋದ ಸತ್ಯಾಸತ್ಯತೆ ಏನು?

ಫ್ಯಾಕ್ಟ್‌ಚೆಕ್ : ಮದ್ಯದ ನಶೆಯಲ್ಲಿ ಹುಲಿಯ ತಲೆ ಸವರಿಸಿದ ವ್ಯಕ್ತಿ…ವೈರಲ್ ವಿಡಿಯೋದ ಸತ್ಯಾಸತ್ಯತೆ ಏನು?

- Advertisement -
- Advertisement -

ರಾತ್ರಿ ಹೊತ್ತು ರಸ್ತೆಯಲ್ಲಿ ಕುಳಿತಿರುವ ಹುಲಿಯೊಂದರ ತಲೆ ಸವರುವ ವ್ಯಕ್ತಿ, ತನ್ನ ಕೈಯ್ಯಲ್ಲಿದ್ದ ಮದ್ಯದ ಬಾಟಲಿಯಿಂದ ಹುಲಿಗೆ ಮದ್ಯ ಕುಡಿಸಲು ಯತ್ನಿಸಿದ 6 ಸೆಕೆಂಡುಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಇದು ಮಧ್ಯಪ್ರದೇಶದಲ್ಲಿ ನಡೆದ ಘಟನೆ ಎಂದು ಈ ವಿಡಿಯೋ ಕುರಿತು ಕೆಲ ಮುಖ್ಯ ವಾಹಿನಿ ಮಾಧ್ಯಮಗಳು ಕೂಡ ಸುದ್ದಿ ಮಾಡಿವೆ. ಅನೇಕ ಪ್ರಮುಖ ವ್ಯಕ್ತಿಗಳೇ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಲು ಸಿಸಿಟಿವಿ ಕ್ಯಾಮಾರದಲ್ಲಿ ರೆಕಾರ್ಡ್ ಆದ ದೃಶ್ಯದಂತಿದೆ.

“ರಾಜು ಎಂಬ 52 ವರ್ಷದ ವ್ಯಕ್ತಿ ತಡರಾತ್ರಿ ಮದ್ಯಪಾನ ಮಾಡಿ, ಇಸ್ಪೀಟ್ ಆಡಿದ ಬಳಿಕ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಹರಡಿಕೊಂಡಿರುವ ಪೆಂಚ್ ಹುಲಿ ಅಭಯಾರಣ್ಯದಿಂದ ಅಲೆದಾಡುತ್ತಾ ಬಂದ ಹುಲಿ ರಸ್ತೆ ಮಧ್ಯೆ ಕುಳಿತಿತ್ತು. ಅದನ್ನು ದೊಡ್ಡ ಬೆಕ್ಕು ಎಂದುಕೊಂಡ ರಾಜು ತಲೆ ಸವರಿ ಮದ್ಯ ಕುಡಿಸಿದ್ದಾರೆ. ಕೊನೆಗೆ ಅರಣ್ಯ ಅಧಿಕಾರಿಗಳು ಹುಲಿಯನ್ನು ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಹುಲಿಗೆ ಮದ್ಯ ಕುಡಿಸಿದ ರಾಜು ಸ್ಥಳೀಯ ಮಟ್ಟದಲ್ಲಿ ಹೀರೋ ಆಗಿದ್ದಾರೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡ ಕೆಲವರು ಬರೆದುಕೊಂಡಿದ್ದಾರೆ.

@808constituent ಎಂಬ ಎಕ್ಸ್ ಬಳಕೆದಾರ ಅಕ್ಟೋಬರ್ 23, 2025ರಂದು ವೈರಲ್ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದರು. ಈ ವರದಿ ಬರೆಯುವ ಹೊತ್ತಿಗೆ ಆ ಪೋಸ್ಟ್ 68 ಸಾವಿರ ವೀಕ್ಷಣೆಗಳನ್ನು ಪಡೆದಿತ್ತು. ಅವರು ಪೋಸ್ಟ್ ಮಾಡಿರುವ ವಿಡಿಯೋ ಈಗಲೂ ಎಕ್ಸ್‌ನಲ್ಲಿ ಇದೆ. ಎಕ್ಸ್‌ ಇದುವರೆಗೆ ವಿಡಿಯೋ ಬಗ್ಗೆ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.

ಆಂಧ್ರಪ್ರದೇಶ ಮತ್ತು ತೆಲಂಗಾಣವನ್ನು ಒಳಗೊಂಡ ಸುದ್ದಿ ಪೋರ್ಟಲ್ ‘ಗ್ರೇಟರ್ ಆಂಧ್ರ ನ್ಯೂಸ್’ ಕೂಡ ಅಕ್ಟೋಬರ್ 29ರಂದು ವೈರಲ್ ವಿಡಿಯೋವನ್ನು ಹಂಚಿಕೊಂಡಿತ್ತು. ಇದೂ ಕೂಡ ಮಧ್ಯಪ್ರದೇಶದ ಪೆಂಚ್ ರಾಷ್ಟ್ರೀಯ ಉದ್ಯಾನವನದ ಸಿಸಿಟಿವಿ ದೃಶ್ಯ ಎಂದು ಹೇಳಿತ್ತು.

ರಿದ್ಧಿ ರಣಥಂಬೋರ್ ಸಫಾರಿ ಎಂಬ ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ವೈರಲ್ ಕ್ಲಿಪ್ ಹಂಚಿಕೊಳ್ಳಲಾಗಿದೆ.

ಫ್ಯಾಕ್ಟ್‌ಚೆಕ್ : ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿರುವುದರಿಂದ ನಾವು ಇದರ ಸತ್ಯಾಸತ್ಯತೆ ತಿಳಿಯಲು ಮುಂದಾದೆವು. ಮೊದಲು ನಾವು ಈ ವಿಡಿಯೋ ಕುರಿತು ಯಾವುದಾದರು ಮಾಧ್ಯಮಗಳಲ್ಲಿ ಸುದ್ದಿ ಆಗಿದೆಯೇ ಎಂದು ಪರಿಶೀಲಿಸಿದೆವು.

ಈ ವೇಳೆ ಕೆಲ ಕನ್ನಡ ಮಾಧ್ಯಮಗಳ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಪೋಸ್ಟ್‌ ಮಾಡಿರುವುದು ಕಂಡು ಬಂದಿದೆ. ಇತರ ಭಾಷೆಗಳ ಮಾಧ್ಯಮಗಳ ಪೇಜ್‌ಗಳಲ್ಲೂ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಆದರೂ, ನಮಗೆ ಆ ಮಾಧ್ಯಮಗಳ ಸುದ್ದಿಯ ನಿಖರತೆಯ ಬಗ್ಗೆ ಅನುಮಾನ ಮೂಡಿತು. ಹಾಗಾಗಿ, ವಿಡಿಯೋದ ಸತ್ಯಾಸತ್ಯತೆ ಕುರಿತು ಹೆಚ್ಚಿನ ಮಾಹಿತಿ ಹುಡುಕಾಡಿದೆವು.

ಈ ವೇಳೆ ಆಲ್ಟ್ ನ್ಯೂಸ್, ಫ್ಯಾಕ್ಟ್‌ಲೀ ಸೇರಿದಂತೆ ಅನೇಕ ಫ್ಯಾಕ್ಟ್ ಚೆಕ್ ಸುದ್ದಿ ಸಂಸ್ಥೆಗಳು ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್ ಮಾಡಿರುವುದು ಕಂಡು ಬಂದಿದೆ.

ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಹಲವಾರು ದೃಶ್ಯ ವ್ಯತ್ಯಾಸಗಳು ಕಂಡು ಬರುತ್ತವೆ. ಇದು ವಿಡಿಯೋವನ್ನು ಕೃತಕವಾಗಿ ರಚಿಸಿರುವುದನ್ನು ಸೂಚಿಸುತ್ತದೆ. ಉದಾಹರಣೆಗೆ : ಮನುಷ್ಯ ಹುಲಿಯನ್ನು ಮುದ್ದಿಸುತ್ತಿದ್ದಂತೆ, ಮದ್ಯದ ಬಾಟಲಿಯ ಕುತ್ತಿಗೆಯ ಗಾತ್ರ ಕಡಿಮೆಯಾಗುತ್ತದೆ ಮತ್ತು ನಂತರ ಅದರ ಮೂಲ ಗಾತ್ರಕ್ಕೆ ಮರಳುತ್ತದೆ. ಇದಲ್ಲದೆ, ಹಿಂದುಗಡೆ ಮನೆಯ ವರಾಂಡಾದಲ್ಲಿ ಕುಳಿತಿರುವ ಇಬ್ಬರು ವ್ಯಕ್ತಿಗಳ ಚಲನೆಯು ವಿರೂಪಗೊಂಡಂತೆ ಕಾಣುತ್ತದೆ. ಇದು ಕೃತಕವಾಗಿ ರಚಿಸಲಾದ ಕ್ಲಿಪ್‌ಗಳ ಮತ್ತೊಂದು ವಿಶಿಷ್ಟ ಲಕ್ಷಣವಾಗಿದೆ ಎಂದು ಅಲ್ಟ್‌ ನ್ಯೂಸ್ ಹೇಳಿದೆ.

ವೈರಲ್ ವಿಡಿಯೋ ಕುರಿತು ಮಾಹಿತಿ ಪಡೆಯಲು ನಾವು ಪೆಂಚ್ ಹುಲಿ ಸಂರಕ್ಷಿತ ಅಭಯಾರಣ್ಯದ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೇವೆ. ನಮ್ಮ ಸಂಪರ್ಕಕ್ಕೆ ಅವರು ಸಿಕ್ಕಿಲ್ಲ. ಆದರೆ, ಅಕ್ಟೋಬರ್ 29ರಂದು ‘ದಿ ಸೂತ್ರ್’ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ವರದಿಯಲ್ಲಿ, “ಮೀಸಲು ಅರಣ್ಯ ಪ್ರದೇಶದ ಉಪ ನಿರ್ದೇಶಕ ರಜನೀಶ್ ಸಿಂಗ್ ಅವರು ವೈರಲ್ ವಿಡಿಯೋ ಪೆಂಚ್ ಅಭಯಾರಣ್ಯದ ಪ್ರದೇಶದ್ದು ಎಂಬುವುದನ್ನು ತಳ್ಳಿ ಹಾಕಿದ್ದನ್ನು ಉಲ್ಲೇಖಿಸಲಾಗಿದೆ ಎಂದು ಆಲ್ಟ್ ನ್ಯೂಸ್ ಹೇಳಿದೆ.

ನಮಗೆ ಲಭ್ಯವಾದ ಮಾಹಿತಿ, ವಿಡಿಯೋದಲ್ಲಿ ಕಾಣುವ ಕೆಲ ಸೂಕ್ಷ ವ್ಯತ್ಯಾಸಗಳಿಂದ ವೈರಲ್ ವಿಡಿಯೋ ಕೃತಕ ಬುದ್ದಿಮತ್ತೆ (ಎಐ) ಮೂಲಕ ಸೃಷ್ಟಿಸಿದ್ದು ಎಂಬ ತೀರ್ಮಾನಕ್ಕೆ ನಾವು ಬಂದಿದ್ದೇನೆ. ಅಲ್ಲದೆ, ಅಕ್ಟೋಬರ್ 4ರಂದು ಪೆಂಚ್ ಅರಣ್ಯದಿಂದ ಹುಲಿ ತಪ್ಪಿಸಿಕೊಂಡ ಬಗ್ಗೆ ಎಲ್ಲೂ ಅಧಿಕೃತ ವರದಿಯಾಗಿಲ್ಲ ಎಂದು ಅಲ್ಟ್ ನ್ಯೂಸ್ ಹೇಳಿದೆ.

ವೈರಲ್ ವಿಡಿಯೋ ನಕಲಿ ಎಂದು ಪೆಂಚ್ ಟೈಗರ್ ರಿಸರ್ವ್ ಅಧಿಕಾರಿಗಳು ದೃಢಪಡಿಸಿದ್ದಾರೆ ಎಂಬ ಭಾಸ್ಕರ್ ಇಂಗ್ಲಿಷ್ ವರದಿ ನಮಗೆ ಲಭ್ಯವಾಗಿದೆ ಎಂದು ಫ್ಯಾಕ್ಟ್‌ಚೆಕ್ ಸುದ್ದಿ ವೆಬ್‌ಸೈಟ್ ಫ್ಯಾಕ್ಟ್‌ಲೀ ಹೇಳಿದೆ.

ನಾವು ಪೆಂಚ್ ಹುಲಿ ಸಂರಕ್ಷಿತ ಪ್ರದೇಶದ ಉಪ ನಿರ್ದೇಶಕ ರಜನೀಶ್ ಕುಮಾರ್ ಸಿಂಗ್ ಅವರನ್ನು ಸಂಪರ್ಕಿಸಿದಾಗ, ಅವರು ವೈರಲ್ ವಿಡಿಯೋ ನಕಲಿ ಎಂದು ದೃಢಪಡಿಸಿದ್ದಾರೆ. ಇತ್ತೀಚೆಗೆ ಹುಲಿಗೆ ಸಂಬಂಧಿಸಿದ ಯಾವುದೇ ಘಟನೆಗಳು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಫ್ಯಾಕ್ಟ್‌ಲೀ ತಿಳಿಸಿದೆ.

ಎಐ ವಿಷಯಗಳ ಪತ್ತೆ ಸಾಧನ ‘ಹೈವ್ ಮಾಡರೇಶನ್‌’ ಮೂಲಕ ನಾವು ವಿಡಿಯೋವನ್ನು ಪರಿಶೀಲಿಸಿದ್ದೇವೆ. ಅದು ವೈರಲ್ ವಿಡಿಯೋ ಶೇಕಡ 99ರಷ್ಟು ಎಐ ರಚಿತ ಎಂದು ಹೇಳಿದೆ. ವಿಡಿಯೋ ಕೃತವಾಗಿ ರಚಿತವಾಗಿದ್ದು ಎಂಬುವುದನ್ನು ಬಲವಾಗಿ ಹೇಳಿದೆ ಎಂದು ಫ್ಯಾಕ್ಟ್‌ಲೀ ತಿಳಿಸಿದೆ. ಹಾಗಾಗಿ, ವೈರಲ್ ವಿಡಿಯೋ ಎಐ ರಚಿತ ಎಂದಿದೆ.

FACT CHECK | ಆರ್‌ಎಸ್ಎಸ್ ಶತಮಾನೋತ್ಸವ ಪ್ರಯುಕ್ತ ನೆದರ್‌ಲ್ಯಾಂಡ್‌ ಸರ್ಕಾರ ಅಂಚೆ ಚೀಟಿ ಬಿಡುಗಡೆ ಮಾಡಿರುವುದು ನಿಜಾನಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತ್ಯತೀತ ತಾಣ ಬಾಬಾ ಬುಡನ್‌ ಗಿರಿಯಲ್ಲಿ ‘ವೈದಿಕ ಆಚರಣೆ’ಗೆ ವಿರೋಧ; ಕಾಂಗ್ರೆಸ್‌ ಸರ್ಕಾರದ ವಿರುದ್ದ ಪ್ರತಿಭಟನೆ

ಕೋಮುವಾದಿಗಳು ಎಷ್ಟೇ ವಿಷಯ ತಿರುಚುವ ಕೆಲಸ ಮಾಡಿದರೂ ಬಾಬಾ ಬುಡನ್ ಗಿರಿಯ ಜಾತ್ಯತೀತ ಹಿನ್ನೆಲೆಯನ್ನು ಮುಚ್ಚಿಡುವುದಕ್ಕೆ ಸಾಧ್ಯವಿಲ್ಲ. ಅಲ್ಲಿನ ಸೌಹಾರ್ಧ ಪರಂಪರೆಯನ್ನು ಬದಿಗೆ ಸರಿಸಿ, ವೈದಿಕ ಆಚರಣೆಗೆ ಅನುಮತಿ ನೀಡುವ ಮೂಲಕ ಹಿಂದುತ್ವ...

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಯುದ್ಧನೌಕೆ ಮೇಲೆ ಜಲಾಂತರ್ಗಾಮಿ ದಾಳಿ: ಸಮುದ್ರದಲ್ಲಿ ಶವಗಳು ಪತ್ತೆ

ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿ ಬುಧವಾರ ಜಲಾಂತರ್ಗಾಮಿ ದಾಳಿಯ ನಂತರ ಇರಾನ್ ನೌಕಾ ಯುದ್ಧನೌಕೆ ಐರಿಸ್ ದೇನಾ ಮುಳುಗಿದೆ ಎಂದು ವರದಿಯಾಗಿದೆ.  ಈ ದಾಳಿಯಲ್ಲಿ ಕನಿಷ್ಠ 101 ಜನರು ಕಾಣೆಯಾಗಿದ್ದಾರೆ ಮತ್ತು 78 ಜನರು ಗಾಯಗೊಂಡಿದ್ದಾರೆ,...

ಹೆದ್ದಾರಿಯಲ್ಲಿ ದ್ವೇಷ ಬರಹ : ಮುಸ್ಲಿಮರು ಭಾರತದಲ್ಲಿ ‘ಬಾಡಿಗೆದಾರರು’ ಅವರು ಹಾಗೆಯೇ ಬದುಕಬೇಕು ಎಂದ ಹಿಂದೂ ರಕ್ಷಾ ದಳದ ಸದಸ್ಯರು

2026ರ ಫೆಬ್ರವರಿ 26 ಮತ್ತು 27ರ ನಡುವಿನ ಮಧ್ಯರಾತ್ರಿ ಉತ್ತರ ಪ್ರದೇಶದ ದೆಹಲಿ–ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ತಡೆಗೋಡೆಯ ಮೇಲೆ ಹಿಂದೂ ರಕ್ಷಾ ದಳಕ್ಕೆ (ಹೆಚ್‌ಆರ್‌ಡಿ) ಸೇರಿದ ಮಹಿಳೆಯರು ಹಿಂದಿಯಲ್ಲಿ “मुसलमान के लिए...

ಇರಾನ್‌ನ ಮುಂದಿನ ಸರ್ವೋಚ್ಚ ನಾಯಕ ಯಾರೇ ಆದರೂ ಹತ್ಯೆಗೆ ಗುರಿಯಾಗುತ್ತಾನೆ: ಇಸ್ರೇಲ್ ರಕ್ಷಣಾ ಸಚಿವನಿಂದ ಬೆದರಿಕೆ

ದುಬೈ: ‘ಅಯತೊಲ್ಲಾ ಅಲಿ ಖಮೇನಿ ಉತ್ತರಾಧಿಕಾರಿಯಾಗಿ ಯಾರೇ ಆಯ್ಕೆಯಾದರೂ ಅವರನ್ನು ಹತ್ಯೆ ಮಾಡುತ್ತೇವೆ’ ಎಂದು ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಬುಧವಾರ ಪರೋಕ್ಷವಾಗಿ ಬೆದರಿಕೆ ಹಾಕಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ...

ಇರಾನ್ ಮೇಲಿನ ಇಸ್ರೇಲ್-ಅಮೆರಿಕ ದಾಳಿಗಳು ಅಂತರರಾಷ್ಟ್ರೀಯ ಕಾನೂನಿಗೆ ಸರಿ ಹೊಂದುವುದಿಲ್ಲ: ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ

ಸಿಡ್ನಿ: ಇರಾನ್ ಮೇಲಿನ ಅಮೆರಿಕ ಮತ್ತು ಇಸ್ರೇಲ್ ದಾಳಿಗಳನ್ನು "ವಿಷಾದದಿಂದ" ಬೆಂಬಲಿಸುವುದಾಗಿ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಹೇಳಿದ್ದಾರೆ. ಆದರೆ ಈ ಸಂಘರ್ಷವು ಅಂತರರಾಷ್ಟ್ರೀಯ ಕ್ರಮದ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು...

ಉತ್ತರ ಪ್ರದೇಶ | ಅತ್ಯಾಚಾರ ಸಂತ್ರಸ್ತೆಯನ್ನು ಗುಂಡಿಕ್ಕಿ ಕೊಂದ ಆರೋಪಿ

ಸುಮಾರು 17 ವರ್ಷದ ಅತ್ಯಾಚಾರ ಸಂತ್ರಸ್ತೆಯನ್ನು 22 ವರ್ಷದ ಆರೋಪಿ ಗುಂಡಿಕ್ಕಿ ಕೊಂದು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಯ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು...

ಹಾರ್ಮುಜ್ ಜಲಸಂಧಿ ಮುಚ್ಚಿದ ಇರಾನ್; ಪರ್ಷಿಯನ್ ಕೊಲ್ಲಿಯಲ್ಲಿ ಸಿಲುಕಿಸಿದ 37 ಭಾರತೀಯ ಹಡಗುಗಳು

ಇಸ್ರೇಲ್-ಯುಎಸ್ ಜಂಟಿ ದಾಳಿಯ ನಂತರ, ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವುದರಿಂದ ಭಾರತೀಯ ಹಡಗುಗಳು ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿವೆ. ಭಾರತೀಯ ಧ್ವಜ ಹೊಂದಿರುವ 37 ಹಡಗುಗಳು ಪರ್ಷಿಯನ್ ಕೊಲ್ಲಿ ಮತ್ತು ಒಮಾನ್ ನೀರಿನಲ್ಲಿ ಸಿಲುಕಿಕೊಂಡಿವೆ. 37 ಹಡಗುಗಳು...

ಪಾಲ್ಘರ್: ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಹೊತ್ತಿ ಉರಿದ ಟೆಂಪೋ: 28 ವರ್ಷದ ಚಾಲಕ ಸಜೀವ ದಹನ, ಕ್ಲೀನರ್ ಗೆ ಗಾಯ

ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಟೆಂಪೋಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಪಂಜಾಬ್‌ನ 28 ವರ್ಷದ ಚಾಲಕ ಸುಟ್ಟು ಕರಕಲಾಗಿದ್ದು, ಕ್ಲೀನರ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಘಟನೆಯ ಬಗ್ಗೆ ಜನನಿಬಿಡ...

ಗುಜರಾತ್| ಅಂತರ್ಧರ್ಮೀಯ ದಂಪತಿಗೆ ಪೊಲೀಸರ ರಕ್ಷಣೆ; ‘ಲವ್ ಜಿಹಾದ್’ ಎಂದು ಕೂಗಿದ ವಿಎಚ್‌ಪಿ

ಮಾರ್ಚ್ 3 ರಂದು ಗುಜರಾತ್‌ನ ಅಹಮದಾಬಾದ್‌ನ ಮೆಟ್ರೋ ನ್ಯಾಯಾಲಯದ ಸಂಕೀರ್ಣದೊಳಗಿನ ವಿವಾಹ ನೋಂದಣಿ ಕಚೇರಿಯು ಅವ್ಯವಸ್ಥೆಯ ತಾಣವಾಯಿತು. ಗಾಂಧಿನಗರದ ಹಿಂದೂ ಮಹಿಳೆಯೊಬ್ಬರು ನಗರದ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಲು ಬಂದ ನಂತರ ಹಿಂದುತ್ವ ಸಂಘಟನೆಯ...

ಖಮೇನಿ ಹತ್ಯೆ ಕುರಿತು ಪೋಸ್ಟ್‌ : ನ್ಯಾಷನಲ್ ಕಾನ್ಫರೆನ್ಸ್ ಸಂಸದ, ಶ್ರೀನಗರದ ಮಾಜಿ ಮೇಯರ್ ವಿರುದ್ಧ ಎಫ್‌ಐಆರ್

ದಾರಿತಪ್ಪಿಸುವ ಆನ್‌ಲೈನ್ ವಿಷಯವನ್ನು ಹಂಚಿಕೊಂಡ ಆರೋಪದ ಮೇಲೆ ಜಮ್ಮು ಕಾಶ್ಮೀರದ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ಸಂಸದ ಅಗಾ ಸೈಯದ್ ರೂಹುಲ್ಲಾ ಮೆಹದಿ ಮತ್ತು ಶ್ರೀನಗರದ ಮಾಜಿ ಮೇಯರ್ ಜುನೈದ್ ಅಝೀಂ ಮಟ್ಟು ವಿರುದ್ಧ...