Homeಅಂತರಾಷ್ಟ್ರೀಯಕರಾಚಿ| ಖಮೇನಿ ಹತ್ಯೆ ಖಂಡಿಸಿ ಪ್ರತಿಭಟನೆ ವೇಳೆ ಘರ್ಷಣೆ : ಕನಿಷ್ಠ 9 ಸಾವು

ಕರಾಚಿ| ಖಮೇನಿ ಹತ್ಯೆ ಖಂಡಿಸಿ ಪ್ರತಿಭಟನೆ ವೇಳೆ ಘರ್ಷಣೆ : ಕನಿಷ್ಠ 9 ಸಾವು

- Advertisement -
- Advertisement -

ಪಾಕಿಸ್ತಾನದ ಕರಾಚಿಯಲ್ಲಿರುವ ಅಮೆರಿಕ ದೂತಾವಾಸದ ಬಳಿ ಭಾನುವಾರ (ಮಾ.1) ಇರಾನ್ ಪರ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿಯ ನಡುವೆ ಘರ್ಷಣೆ ಉಂಟಾಗಿ ಕನಿಷ್ಠ ಒಂಭತ್ತು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

“ನಾವು ಕನಿಷ್ಠ ಎಂಟು ಮೃತದೇಹಗಳನ್ನು ಕರಾಚಿಯ ಸಿವಿಲ್ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದ್ದೇವೆ. ದೂತವಾಸದ ಬಳಿಯ ಘಟನೆಯಲ್ಲಿ 20 ಮಂದಿ ಗಾಯಗೊಂಡಿದ್ದಾರೆ” ಎಂದು ಎಧಿ ಫೌಂಡೇಶನ್ ರಕ್ಷಣಾ ಸೇವೆಯ ವಕ್ತಾರ ಮುಹಮ್ಮದ್ ಅಮೀನ್ ಹೇಳಿದ್ದಾರೆ. ಹೆಚ್ಚಿನವರಿಗೆ ಗುಂಡೇಟಿನ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.

ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ನಡೆಸಿದ ಜಂಟಿ ದಾಳಿ ಮತ್ತು ಇರಾನ್‌ನ ಪರಮೋಚ್ಚ ನಾಯಕ ಅಯಾತೊಲ್ಲ ಅಲಿ ಖಮೇನಿ ಅವರು ಹತ್ಯೆಯಿಂದ ಆಕ್ರೋಶಗೊಂಡ ಜನರು, ಕರಾಚಿಯ ಅಮೆರಿಕ ದೂತವಾಸಕ್ಕೆ ಮುತ್ತಿಗೆ ಹಾಕಿದ್ದಾರೆ ಎಂದು ವರದಿಯಾಗಿದೆ.

ಖಮೇನಿಯವರ ಹತ್ಯೆಯ ಸುದ್ದಿ ತಿಳಿದು ಭಾನುವಾರ ಬೆಳಿಗ್ಗೆ ಅಮೆರಿಕದ ದೂತವಾಸಕ್ಕೆ ನುಗ್ಗಿದ ನೂರಾರು ಜನರು, ಅಲ್ಲಿನ ಕಿಟಕಿ ಗಾಜುಗಳನ್ನು ಧ್ವಂಸಗೈದಿದ್ದಾರೆ ಎಂದು ವರದಿಗಳು ಹೇಳಿವೆ.

ಆಕ್ರೋಶಗೊಂಡ ಜನರನ್ನು ಚದುರಿಸಲು ಪೊಲೀಸರು ಮತ್ತು ಅರೆಸೇನಾ ಪಡೆಗಳು ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ ನಡೆಸಿದೆ ಎಂದು ಪೊಲೀಸ್ ಅಧಿಕಾರಿ ಮೊಹಮ್ಮದ್ ಜವಾದ್ ಹೇಳಿದ್ದಾರೆ. ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವಿನ ಘರ್ಷಣೆಯಲ್ಲಿ ಕನಿಷ್ಠ ಒಬ್ಬ ಪ್ರತಿಭಟನಾಕಾರ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ, ಅಮೆರಿಕ ದೂತವಾಸದ ಕಿಟಕಿ ಗಾಜುಗಳನ್ನು ಯುವಜನರ ಗುಂಪು ಧ್ವಂಸ ಮಾಡಿರುವುದನ್ನು ನೋಡಬಹುದು.

ಪಾಕಿಸ್ತಾನದ ಪೂರ್ವ ನಗರವಾದ ಲಾಹೋರ್ ಮತ್ತು ಉತ್ತರದ ಸ್ಕಾರ್ದುನಲ್ಲೂ ಸಾವಿರಾರು ಜನರು ಬೀದಿಗಿಳಿದಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ಅಮೆರಿಕದ ರಾಯಭಾರ ಕಚೇರಿ ಇರುವ ರಾಜತಾಂತ್ರಿಕ ಪ್ರದೇಶದ ಬಳಿ ಪ್ರತಿಭಟನೆ ನಡೆದಿದೆ ಎಂದು ವರದಿಯಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಪ್ರಜಾಪ್ರಭುತ್ವ ಜಗತ್ತಿನ ನಾಯಕರು, ಸಾರ್ವಭೌಮ ರಾಷ್ಟ್ರದ ನಾಯಕನನ್ನು ಹತ್ಯೆ ಮಾಡಿದ್ದು ಹೇಯ ಕೃತ್ಯ’: ಖಮೇನಿ ಹತ್ಯೆಗೆ ಪ್ರಿಯಾಂಕ ಗಾಂಧಿ ಖಂಡನೆ

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾನುವಾರ ತೀವ್ರವಾಗಿ ಖಂಡಿಸಿದ್ದಾರೆ. "ಪ್ರಜಾಪ್ರಭುತ್ವ ಜಗತ್ತಿನ ನಾಯಕರು ಎಂದು ಕರೆಯಲ್ಪಡುವವರು" ಸಾರ್ವಭೌಮ ರಾಷ್ಟ್ರದ ನಾಯಕತ್ವವನ್ನು ಗುರಿಯಾಗಿಸಿಕೊಂಡು...

ದುಬೈ-ಅಬುಧಾಬಿ ಮೇಲೆ ದಾಳಿ; ಇರಾನ್‌ಗೆ ಯುಎಇ ಎಚ್ಚರಿಕೆ

ಇರಾನ್ ತನ್ನ ನೆರೆಹೊರೆಯವರನ್ನು ಗುರಿಯಾಗಿಸಿಕೊಳ್ಳಬಾರದು ಎಂದು ಯುಎಇ ಅಧ್ಯಕ್ಷರ ರಾಜತಾಂತ್ರಿಕ ಸಲಹೆಗಾರ ಅನ್ವರ್ ಗರ್ಗಶ್ ಎಚ್ಚರಿಕೆ ನೀಡಿದ್ದಾರೆ. "ಗಲ್ಫ್ ರಾಷ್ಟ್ರಗಳ ವಿರುದ್ಧ ಇರಾನ್ ಆಕ್ರಮಣವು ತಪ್ಪು ಲೆಕ್ಕಾಚಾರವಾಗಿದೆ. ಇದೇ ಬೆಳವಣಿಗೆ ನಿರ್ಣಾಯಕ ಹಂತದಲ್ಲಿ ಇರಾನ್...

ಇರಾನ್‌ ಹಂಗಾಮಿ ಸರ್ವೋಚ್ಚ ನಾಯಕರಾಗಿ ಅಯಾತೊಲ್ಲ ಅಲಿರೆಝಾ ಅರಾಫಿ ನೇಮಕ

ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ಹಿನ್ನೆಲೆ, ಹಿರಿಯ ಧರ್ಮಗುರು ಅಯತೊಲ್ಲಾ ಅಲಿರೆಝಾ ಅರಾಫಿ ಅವರು ಇರಾನ್‌ನ ಹಂಗಾಮಿ ಸರ್ವೋಚ್ಚ ನಾಯಕರಾಗಿ ಆಯ್ಕೆ ಮಾಡಲಾಗಿದೆ ಎಂದು ಸರ್ಕಾರಿ-ಸಂಯೋಜಿತ...

ಖಮೇನಿ ಹತ್ಯೆ ವಿರೋಧಿಸಿ ಬೃಹತ್ ಪ್ರತಿಭಟನೆ; ಶ್ರೀನಗರದಲ್ಲಿ ಇಂಟರ್‌ನೆಟ್ ಸ್ತಬ್ಧ

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯನ್ನು ವಿರೋಧಿಸಿ ಕಾಶ್ಮೀರದಾದ್ಯಂತ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿವೆ. ಶ್ರೀನಗರದಲ್ಲಿರುವ ವಿಶ್ವಸಂಸ್ಥೆಯ ಮಿಲಿಟರಿ ವೀಕ್ಷಕರ ಗುಂಪು (UNMOGIP) ಪ್ರಧಾನ ಕಚೇರಿಯ ಮುಂದೆ ದೊಡ್ಡ ಜನಸಮೂಹ ಜಮಾಯಿಸಿತ್ತು....

ಅಮೆರಿಕಾ-ಇಸ್ರೇಲ್ ‘ಪುಂಡ ರಾಷ್ಟ್ರಗಳು’; ಇರಾನ್ ಮೇಲಿನ ದಾಳಿ ಖಂಡಿಸಿದ ಕೇರಳ ಸಿಎಂ; ಅನಿವಾಸಿ ಭಾರತೀಯರ ಆತಂಕ ಪರಿಹರಿಸಲು ಕೇಂದ್ರಕ್ಕೆ ಮನವಿ

ತಿರುವನಂತಪುರಂ: ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ನಡೆಸುತ್ತಿರುವ ದಾಳಿಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರವಾಗಿ ಖಂಡಿಸಿದ್ದಾರೆ ಮತ್ತು ಗಲ್ಫ್ ರಾಷ್ಟ್ರಗಳಲ್ಲಿರುವ ಹಲವಾರು ಅನಿವಾಸಿ ಭಾರತೀಯರ ಆತಂಕವನ್ನು ಪರಿಹರಿಸಲು ಕೇಂದ್ರವು ತಕ್ಷಣ...

ಅಮೆರಿಕ-ಇಸ್ರೇಲಿ ಮಿಲಿಟರಿ ದಾಳಿಯಲ್ಲಿ ‘ಇರಾನ್‌ ಸಶಸ್ತ್ರ ಪಡೆಗಳ ಮುಖ್ಯಸ್ಥ ಅಬ್ದುಲ್ರಹೀಮ್ ಮೌಸಾವಿ ಹತ್ಯೆ; ಇರಾನ್ ಮಾಧ್ಯಮಗಳ ವರದಿ 

ಟೆಹ್ರಾನ್: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ ಸಶಸ್ತ್ರ ಪಡೆಗಳ ಮುಖ್ಯಸ್ಥ ಅಬ್ದುಲ್ರಹೀಮ್ ಮೌಸಾವಿ ಸಾವನ್ನಪ್ಪಿದ್ದಾರೆ ಎಂದು ದೇಶದ ಸರ್ಕಾರಿ ಸ್ವಾಮ್ಯದ ಐಆರ್‌ಐಬಿ ಟಿವಿ ಭಾನುವಾರ ವರದಿ ಮಾಡಿದೆ. ಟೆಹ್ರಾನ್ ಮೇಲಿನ ದಾಳಿಯಲ್ಲಿ...

ಇರಾನ್-ಇಸ್ರೇಲ್ ಯುದ್ಧ: ಭಾರತ ತಕ್ಷಣದ ಆರ್ಥಿಕ ಸವಾಲುಗಳನ್ನು ಎದುರಿಸುವ ಸಾಧ್ಯತೆಯಿದೆ; ವರದಿ

ಫೆಬ್ರವರಿ 28, 2026 ರಂದು ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಮುಷ್ಕರದ ನಂತರ ಇರಾನ್-ಇಸ್ರೇಲ್ ಸಂಘರ್ಷದಲ್ಲಿ ತೀವ್ರ ಏರಿಕೆಯು ಪಶ್ಚಿಮ ಏಷ್ಯಾದಲ್ಲಿ ಭೌಗೋಳಿಕ ರಾಜಕೀಯ ಅಪಾಯಗಳನ್ನು ತೀವ್ರಗೊಳಿಸಿದೆ ಮತ್ತು ಜಾಗತಿಕ ಇಂಧನ ಮಾರುಕಟ್ಟೆಗಳಿಗೆ ತಕ್ಷಣದ...

ಮಹಾರಾಷ್ಟ್ರ: ನಾಗ್ಪುರದ ಸ್ಫೋಟಕ ಕಾರ್ಖಾನೆಯಲ್ಲಿ ಸ್ಫೋಟ, 17ಸಾವು, 18 ಜನರಿಗೆ ಗಂಭೀರ ಗಾಯ

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಸ್ಫೋಟಕ ತಯಾರಿಕಾ ಕಾರ್ಖಾನೆಯಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದು, 18 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ (ನಾಗ್ಪುರ...

ಮಧ್ಯಪ್ರಾಚ್ಯ ಉದ್ವಿಗ್ನತೆ: ಯುದ್ಧ ಪೀಡಿತ ಸ್ಥಳಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸ್ಥಳಾಂತರಿಸಲು ತುರ್ತು ಕ್ರಮಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಹೆಚ್ಚುತ್ತಿರುವ ಮಧ್ಯೆ, ಇಸ್ರೇಲ್, ಯುಎಇ, ಇರಾನ್ ಮತ್ತು ಕತಾರ್ ಸೇರಿದಂತೆ ಪೀಡಿತ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ವಾಸಿಸುವ ಕನ್ನಡಿಗರ ಸುರಕ್ಷತೆ ಮತ್ತು ಸ್ಥಳಾಂತರಿಸುವಿಕೆಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ...

ಅಮೆರಿಕ-ಇಸ್ರೇಲ್-ಇರಾನ್ ಉದ್ವಿಗ್ನತೆ: ಖಮೇನಿ ಹತ್ಯೆಯ ನಂತರ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಭುಗಿಲೆದ್ದ ಪ್ರತಿಭಟನೆಗಳು

ಶ್ರೀನಗರ: ಅಮೆರಿಕ-ಇಸ್ರೇಲ್ ಬಾಂಬ್ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ ನಂತರ ಶ್ರೀನಗರ ನಗರದ ಕೆಲವು ಭಾಗಗಳಲ್ಲಿ ಭಾನುವಾರ ಸ್ವಯಂಪ್ರೇರಿತ ಪ್ರತಿಭಟನೆಗಳು ನಡೆದವು. ಜಮ್ಮು ಮತ್ತು ಕಾಶ್ಮೀರದ...