Homeಮುಖಪುಟ'ರಾಜಕೀಯ ಭಿನ್ನಾಭಿಪ್ರಾಯ..ಸಂಘಟಿತ ಅಪರಾಧವಲ್ಲ': ಎಐ ಶೃಂಗಸಭೆಯಲ್ಲಿ ಪ್ರತಿಭಟಿಸಿದ್ದಕ್ಕೆ ಬಂಧಿಸಲ್ಪಟ್ಟ 9 ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಜಾಮೀನು

‘ರಾಜಕೀಯ ಭಿನ್ನಾಭಿಪ್ರಾಯ..ಸಂಘಟಿತ ಅಪರಾಧವಲ್ಲ’: ಎಐ ಶೃಂಗಸಭೆಯಲ್ಲಿ ಪ್ರತಿಭಟಿಸಿದ್ದಕ್ಕೆ ಬಂಧಿಸಲ್ಪಟ್ಟ 9 ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಜಾಮೀನು

- Advertisement -
- Advertisement -

ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ನಡೆದ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬಂಧಿಸಿದ್ದ ಒಂಬತ್ತು ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಕಾರ್ಯಕರ್ತರಿಗೆ ದೆಹಲಿ ನ್ಯಾಯಾಲಯ ಭಾನುವಾರ (ಮಾ.1) ಸಂಜೆ ಜಾಮೀನು ನೀಡಿದೆ barandbench.com ವರದಿ ಮಾಡಿದೆ.

ಪಟಿಯಾಲ ಹೌಸ್ ನ್ಯಾಯಾಲಯದ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಜೆಎಂಎಫ್‌ಸಿ) ರವಿ ಅವರು ಕೃಷ್ಣ ಹರಿ, ನರಸಿಂಹ ಯಾದವ್, ಕುಂದನ್ ಕುಮಾರ್ ಯಾದವ್, ಅಜಯ್ ಕುಮಾರ್ ಸಿಂಗ್, ಜಿತೇಂದ್ರ ಸಿಂಗ್ ಯಾದವ್, ರಾಜಾ ಗುರ್ಜರ್, ಅಜಯ್ ಕುಮಾರ್ ವಿಮಲ್ @ ಬಂಟು, ಸೌರಭ್ ಸಿಂಗ್ ಮತ್ತು ಅರ್ಬಾಝ್ ಖಾನ್ ಅವರನ್ನು ಬಿಡುಗಡೆಗೊಳಿಸಲು ಆದೇಶಿಸಿದ್ದಾರೆ ಎಂದು ವರದಿ ಹೇಳಿದೆ.

ನ್ಯಾಯಾಧೀಶರು ತಮ್ಮ ವಿವರವಾದ ಆದೇಶದಲ್ಲಿ, ಯುವ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯು ‘ರಾಜಕೀಯ ಭಿನ್ನಾಭಿಪ್ರಾಯ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದು ‘ಪುನರಾವರ್ತಿತ ಹಿಂಸಾಚಾರ ಅಥವಾ ಸಂಘಟಿತ ಅಪರಾಧ’ ಅಲ್ಲ ಎಂಬುವುದಾಗಿ ಸ್ಪಷ್ಟಪಡಿಸಿದ್ದಾರೆ.

“ಈ ಪ್ರತಿಭಟನೆಯು ಗರಿಷ್ಠ ಮಟ್ಟದಲ್ಲಿ, ಒಂದು ಸಾರ್ವಜನಿಕ ಕಾರ್ಯಕ್ರಮದ ಸಮಯದಲ್ಲಿ ನಡೆದ ಸಾಂಕೇತಿಕ ರಾಜಕೀಯ ಟೀಕೆಯಾಗಿತ್ತು. ನಾಯಕರ ಚಿತ್ರವಿರುವ ಟಿ-ಶರ್ಟ್‌ಗಳನ್ನು ಧರಿಸುವುದು, ಕೋಮು ಅಥವಾ ಪ್ರಾದೇಶಿಕ ದ್ವೇಷವಿಲ್ಲದ ಮತ್ತು ಪ್ರಚೋದನಕಾರಿಯಲ್ಲದ ಘೋಷಣೆಗಳನ್ನು ಕೂಗುವುದು ಹಾಗೂ ತಾತ್ಕಾಲಿಕವಾಗಿ ಗುಂಪು ಸೇರುವುದು ಇದರಲ್ಲಿ ಕಂಡುಬಂದಿದೆ. ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದ ಬಗ್ಗೆ ಅಥವಾ ಪ್ರತಿನಿಧಿಗಳಲ್ಲಿ ಭೀತಿ ಉಂಟುಮಾಡಿದ ಬಗ್ಗೆ ಯಾವುದೇ ಪುರಾವೆಗಳಿಲ್ಲ; ಬದಲಾಗಿ, ಭದ್ರತಾ ಸಿಬ್ಬಂದಿಯ ಬೆಂಗಾವಲಿನೊಂದಿಗೆ ಕ್ರಮಬದ್ಧವಾಗಿಯೇ ಅವರು ಹೊರಬಂದಿದ್ದಾರೆ” ಎಂದು ನ್ಯಾಯಾಧೀಶರು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ಯಾವುದೇ ತನಿಖಾ ಅವಶ್ಯಕತೆಯಿಲ್ಲದೆ, ದೀರ್ಘಾವಧಿಯ ಪೂರ್ವ ವಿಚಾರಣೆಯ ಬಂಧನವು ಸಂವಿಧಾನದ 21 ನೇ ವಿಧಿಯಡಿ ಖಾತ್ರಿಪಡಿಸಲಾದ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಆರೋಪಿಗಳ ವಿರುದ್ಧ ಹೊರಿಸಲಾದ ಯಾವುದೇ ಅಪರಾಧದ ಸೆಕ್ಷನ್‌ಗಳು ಏಳು ವರ್ಷಗಳಿಗಿಂತ ಹೆಚ್ಚಿನ ಜೈಲು ಶಿಕ್ಷೆಯನ್ನು ಹೊಂದಿಲ್ಲ ಎಂಬುವುದನ್ನು ನ್ಯಾಯಾಲಯ ಗಮನಿಸಿದೆ. ಅಲ್ಲದೆ, ಶಿಕ್ಷೆಯ ಅವಧಿಯು ಒಂದಾದ ನಂತರ ಒಂದು ಜಾರಿಯಾಗಬಹುದು ಎಂಬ ಪೊಲೀಸರ ವಾದವನ್ನು ತಿರಸ್ಕರಿಸಿದೆ.

“ಪೊಲೀಸರ ಈ ವಾದವು ಜಾಮೀನು ನೀಡುವ ಈ ಮಧ್ಯಂತರ ಹಂತದಲ್ಲಿ ಯಾವುದೇ ನ್ಯಾಯಶಾಸ್ತ್ರದ ಆಧಾರವನ್ನು ಹೊಂದಿಲ್ಲ; ಇಲ್ಲಿ ನ್ಯಾಯಾಂಗದ ದೃಷ್ಟಿಯು ಭವಿಷ್ಯದಲ್ಲಿ ಸಂಭವಿಸಬಹುದಾದ ಶಿಕ್ಷೆಯ ಮರೀಚಿಕೆಯ ಮೇಲಲ್ಲ, ಬದಲಾಗಿ ವಿಚಾರಣಾಪೂರ್ವ ಸ್ವಾತಂತ್ರ್ಯದ ನೈಜ ಸತ್ಯದ ಮೇಲೆ ನೆಟ್ಟಿದೆ” ಎಂದು ನ್ಯಾಯಾಲಯವು ಹೇಳಿದೆ.

“ಯಾವುದೇ ಅನಿವಾರ್ಯ ಅಗತ್ಯವಿಲ್ಲದೆ ಮತ್ತು ತನಿಖೆಗೆ ಪೂರಕವಾದ ಯಾವುದೇ ಬೇಡಿಕೆಗಳಿಲ್ಲದೆ ನಡೆಸುವ ವಿಚಾರಣಾಪೂರ್ವ ಬಂಧನವು ಅಂತಿಮವಾಗಿ ಅಪರಾಧ ಸಾಬೀತಾಗುವ ಮೊದಲೇ ವಿಧಿಸುವ ಕಾನೂನುಬಾಹಿರ ಮುನ್ನೆಚ್ಚರಿಕೆಯ ಶಿಕ್ಷೆಯಾಗಿ ಬದಲಾಗುತ್ತದೆ. ಇದು ಕ್ರಿಮಿನಲ್ ನ್ಯಾಯಶಾಸ್ತ್ರದ ಮೂಲಭೂತ ತತ್ವಗಳಿಗೆ ವಿರುದ್ಧವಾದ ದೊಡ್ಡ ವಿಪಥನವಾಗಿದೆ; ಏಕೆಂದರೆ ಈ ತತ್ವಗಳು ವ್ಯಕ್ತಿ ಸ್ವಾತಂತ್ರ್ಯವನ್ನು ಆಡಳಿತಾತ್ಮಕ ನಿಯಮವೆಂದು ಪರಿಗಣಿಸುತ್ತವೆ ಮತ್ತು ಕಾರಾಗೃಹ ವಾಸವನ್ನು ಅತ್ಯಂತ ಸೀಮಿತವಾದ ಅಪವಾದವನ್ನಾಗಿ ಮಾತ್ರ ನೋಡುತ್ತವೆ” ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ಪ್ರಾಸಿಕ್ಯೂಷನ್ ತನ್ನ ವಾದದಲ್ಲಿ, ಆರೋಪಿಗಳು ನಡೆಸಿದ ಪ್ರತಿಭಟನೆಯು ಒಂದು ಅತ್ಯಂತ ಪ್ರಮುಖವಾದ ಜಾಗತಿಕ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಮೂಲಕ ರಾಷ್ಟ್ರೀಯ ಭದ್ರತೆ, ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ತಂದಿದೆ ಎಂದು ಪ್ರತಿಪಾದಿಸಿತ್ತು.

ಪ್ರಕರಣದ ತನಿಖೆಯು ಇನ್ನೂ ಪ್ರಗತಿಯಲ್ಲಿದೆ. ಈ ಹಂತದಲ್ಲಿ ಜಾಮೀನು ನೀಡಿದರೆ ಆರೋಪಿಗಳು ಸಾಕ್ಷ್ಯಧಾರಗಳನ್ನು ನಾಶಪಡಿಸುವ ಅಥವಾ ತಿರುಚುವ ಅಪಾಯವಿದೆ ಎಂದು ಹೇಳಿತ್ತು.

ಆದರೆ, ಹೋರಾಟಗಾರರ ಪರವಾಗಿ ಹಾಜರಾದ ವಕೀಲರು, ಆರೋಪಿಸಲಾದ ಎಲ್ಲಾ ಅಪರಾಧಗಳೂ ಏಳು ವರ್ಷಗಳಿಗಿಂತ ಕಡಿಮೆ ಅವಧಿಯ ಶಿಕ್ಷೆಯನ್ನು ಹೊಂದಿವೆ. ಹೀಗಾಗಿ, ‘ಸತೇಂದರ್ ಕುಮಾರ್ ಆಂಟಿಲ್’ ಪ್ರಕರಣದ ತೀರ್ಪಿನ ಅಡಿಯಲ್ಲಿ ಈ ಪ್ರಕರಣವು ‘ವರ್ಗ ಎ’ಗೆ ಸೇರುತ್ತದೆ, ಇಲ್ಲಿ ಜಾಮೀನು ನೀಡುವುದೇ ನಿಯಮವಾಗಿದೆ ಎಂದು ವಾದಿಸಿದ್ದಾರೆ.

ಈ ಪ್ರತಿಭಟನೆಯು ಶಾಂತಿಯುತವಾಗಿತ್ತು, ಯಾವುದೇ ಹಿಂಸಾಚಾರ, ಹಾನಿ ಅಥವಾ ಬೆದರಿಕೆಯಿಲ್ಲದ ಸಾಂಕೇತಿಕ ರಾಜಕೀಯ ಭಿನ್ನಾಭಿಪ್ರಾಯವಾಗಿತ್ತು. ಇದು ಸಂವಿಧಾನದ ವಿಧಿ 19(1)(ಎ) ಮತ್ತು 19(1)(ಬಿ) ಅಡಿಯಲ್ಲಿ ರಕ್ಷಿಸಲ್ಪಟ್ಟಿದೆ ಎಂದು ಪ್ರತಿಪಾದಿಸಿದ್ದಾರೆ.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ 9 ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಆದೇಶಿಸಿದೆ ಎಂದು barandbench.com ತಿಳಿಸಿದೆ.

ಯುವ ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ಹಿರಿಯ ನ್ಯಾಯವಾದಿ ತನ್ವೀರ್ ಅಹ್ಮದ್ ಮೀರ್ ಅವರೊಂದಿಗೆ ವಕೀಲರಾದ ರೂಪೇಶ್ ಸಿಂಗ್ ಭದೌರಿಯಾ, ಚಿತ್ವಾನ್ ಗೋದಾರಾ, ರಿಷಭ್ ರಂಜನ್, ಅಮನ್ ಪ್ರಸಾದ್, ವಿವೇಕ್ ಪುನಿಯಾ, ಸುಮಿತ್ ರಾವತ್, ಕೇಶವ್ ನಾಗಿ, ಲಿತೇಶ್ ಬಾತ್ರಾ, ಮರೂಫ್ ಖಾನ್, ಕಾಶಿಫ್ ಅಹ್ಮದ್ ಖಾನ್, ಪ್ರಖರ್ ವಸಿಷ್ಠ ಮತ್ತು ಅಮೃತ್ ಯಾದವ್ ಹಾಜರಾಗಿದ್ದರು.

ದೆಹಲಿ ಪೊಲೀಸರ ಪರವಾಗಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾದ ಅತುಲ್ ಶ್ರೀವಾಸ್ತವ ಮತ್ತು ಕಾರ್ತಿಕೇಯ ಶರ್ಮಾ ಅವರು ಹಾಜರಾಗಿದ್ದರು.

Courtesy : barandbench.com

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...