Homeಮುಖಪುಟಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

- Advertisement -
- Advertisement -

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ, ಟೋಲ್ ಪ್ಲಾಜಾ ಬಳಿಯ ಸಿಮೆಂಟ್ ಗೋಡೆಗೆ ಡಿಕ್ಕಿ ಹೊಡೆದಿದ್ದಾನೆ.

ಜನಗಾಂವ್ ಜಿಲ್ಲೆಯ ಪಾಲಕುರ್ತಿಯ ನಿವಾಸಿ ವೆಂಕಣ್ಣ ಎಂದು ಗುರುತಿಸಲಾದ ಆರೋಪಿ, ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಖಾಲಿ ಬಸ್‌ ಅನ್ನು ಕುಡಿದ ಮತ್ತಿನಲ್ಲಿ ತೆಗೆದುಕೊಂಡು ಸೂರ್ಯಪೇಟೆ ಕಡೆಗೆ ಚಲಾಯಿಸಿದ್ದಾನೆ ಎಂದು ವರದಿಯಾಗಿದೆ.

ಸಿಂಗರಾಜುಪಲ್ಲಿ ಟೋಲ್ ಗೇಟ್ ಬಳಿ ವಾಹನ ಸವಾರರು ಬಸ್‌ ಅನ್ನು ನಿಲ್ಲಿಸಿದಾಗ, ಬಸ್ ಸಿಮೆಂಟ್ ಬ್ಲಾಕ್‌ಗೆ ಡಿಕ್ಕಿ ಹೊಡೆದು ಹಠಾತ್ತನೆ ನಿಂತಿತು. ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ವೆಂಕಣ್ಣನನ್ನು ವಶಕ್ಕೆ ಪಡೆದು ವಾಹನ ವಶಪಡಿಸಿಕೊಂಡಿದ್ದಾರೆ.

ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯು ನಿಲ್ಲಿಸಿದ್ದ ಬಸ್‌ಗೆ ಹೇಗೆ ಪ್ರವೇಶ ಪಡೆದ? ಅದನ್ನು ಓಡಿಸಿದ್ದಾದರೂ ಹೇಗೆ ಎಂಬುದನ್ನು ಕಂಡುಹಿಡಿಯಲು ಹೆಚ್ಚಿನ ತನಿಖೆ ನಡೆಯುತ್ತಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಜನಗಾಂವ್ ಸಬ್-ಇನ್ಸ್‌ಪೆಕ್ಟರ್ (ಎಸ್‌ಐ) ಎಂ. ಭರತ್, “ಬಸ್‌ ಚಾಲಕ ಗೋಪಿಕೃಷ್ಣ ರೆಡ್ಡಿ, ಪ್ರಯಾಣ ಮುಗಿದ ನಂತರ ಆರ್‌ಟಿಸಿ ಬಸ್ ನಿಲ್ದಾಣ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಬಸ್‌ ಕಳುವಾಗಿದೆ ಎಂದು ದೂರು ದಾಖಲಿಸಿದ್ದಾರೆ” ಎಂದು ಹೇಳಿದರು.

ಚಾಲಕ ಎಂದಿನಂತೆ ಕೀಲಿಯನ್ನು ರಹಸ್ಯ ಸ್ಥಳದಲ್ಲಿ ಇಟ್ಟಿದ್ದನು, ಮುಂದಿನ ಶಿಫ್ಟ್ ಚಾಲಕ ಕರ್ತವ್ಯಕ್ಕೆ ಬಂದಾಗ ಆತನಿಗೆ ಸುಲಭವಾಗಿ ಸಿಗಲಿ ಎಂದು ಕೀ ಅಲ್ಲೇ ಇಡಲಾಗಿತ್ತು ಎಂದು ದೂರುದಾರರು ಹೇಳಿದ್ದಾರೆ.

ಕದ್ದ ಬಸ್‌ನಲ್ಲಿ ವೆಂಕಣ್ಣ ಜನಗಾಂವ್ ಪಟ್ಟಣದಿಂದ 21 ಕಿಲೋಮೀಟರ್ ಪ್ರಯಾಣಿಸಿದ್ದ, ಜನಗಾಂವ್ ಜಿಲ್ಲೆಯ ದೇವುರುಪ್ಪಳ ಮಂಡಲದ ಅಡಿಯಲ್ಲಿ ಬರುವ ಸಿಂಗರಾಜಪಲ್ಲೆ ಗ್ರಾಮ ಮಿತಿಯಲ್ಲಿರುವ ಟೋಲ್ ಪ್ಲಾಜಾ ತಲುಪಿದ ನಂತರ, ಆತ ನಿಯಂತ್ರಣ ತಪ್ಪಿ ಟೋಲ್ ಪ್ಲಾಜಾ ಮೊದಲು ರಸ್ತೆಬದಿಯ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾನೆ.

ಟೋಲ್ ಗೇಟ್ ಸಿಬ್ಬಂದಿ ತಕ್ಷಣ ದೇವುರುಪ್ಪಳ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಟೋಲ್ ಪ್ಲಾಜಾಗೆ ಧಾವಿಸಿ ವೆಂಕಣ್ಣನನ್ನು ವಿಚಾರಣೆ ನಡೆಸಿದರು.

ಚೆನ್ನೂರು ಗ್ರಾಮದಲ್ಲಿರುವ ತನ್ನ ನಿವಾಸದಲ್ಲಿ ನಡೆದ ಘರ್ಷಣೆಯ ನಂತರ, ಆತ ಮದ್ಯ ಸೇವಿಸಿ ತಿರುಪತಿಗೆ ಭೇಟಿ ನೀಡಲು ಜನಗಾಂವ್ ರೈಲು ನಿಲ್ದಾಣಕ್ಕೆ ಹೋಗಿದ್ದಾಗಿ ಬಹಿರಂಗಪಡಿಸಿದ್ದಾನೆ.

ರಾತ್ರಿ ವೇಳೆ ರೈಲುಗಳು ಲಭ್ಯವಿಲ್ಲದ ಕಾರಣ, ಆತ ಜನಗಾಂವ್ ಟೌನ್ ಬಸ್ ನಿಲ್ದಾಣ ತಲುಪಲು ಬಸ್ ಹತ್ತಿದ. ನಿಂತಿದ್ದ ಬಸ್ ನೋಡಿ ಅದನ್ನು ಪ್ರವೇಶಿಸಿ ನಿದ್ರೆಗೆ ಜಾರಿದ್ದಾನೆ. ಎಚ್ಚರವಾದಾಗ, ಆತನಿಗೆ ಬಸ್ಸಿನ ಕೀ ಸಿಕ್ಕದೆ, ಕೂಡಲೇ ಆತ ಬಸ್ ಅನ್ನು ಪ್ರಾರಂಭಿಸಿದ್ದಾನೆ.

“ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ” ಎಂದು ಎಸ್ಐ ಭರತ್ ಹೇಳಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

20 ಬಂಡಾಯ ಸಂಸದರ ಅನರ್ಹತೆಗೆ ಒತ್ತಾಯ: ಶೀಘ್ರ ನಿರ್ಧಾರ ಕೈಗೊಳ್ಳುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಟಿಎಂಸಿ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ

ತಮ್ಮ ಪಕ್ಷದಿಂದ ಪ್ರತ್ಯೇಕಗೊಂಡಿರುವ 20 ಬಂಡಾಯ ಸಂಸದರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಕುರಿತು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಶೀಘ್ರ ನಿರ್ಧಾರ ಕೈಗೊಳ್ಳುವಂತೆ ನಿರ್ದೇಶನ ನೀಡಲು ಕೋರಿ ತೃಣಮೂಲ ಕಾಂಗ್ರೆಸ್...

ದೆಹಲಿ, ಬಿಹಾರದಲ್ಲಿ ನೀಟ್ ಪ್ರತಿಭಟನಾಕಾರರ ಮೇಲೆ ಪೆಲೆಟ್, ಅಶ್ರುವಾಯು, ವಿದ್ಯುತ್ ಶಾಕ್ ಲಾಠಿ ಪ್ರಹಾರ ನಡೆದಿರುವುದು ಸತ್ಯ: ಅಮ್ನೆಸ್ಟಿ ವರದಿಯಲ್ಲಿ ಕಳವಳಕಾರಿ ವಿಷಯಗಳು ಬಹಿರಂಗ

ದೆಹಲಿ ಮತ್ತು ಬಿಹಾರದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನರ ನೇತೃತ್ವದಲ್ಲಿ ನಡೆದ ನೀಟ್ (NEET) ಪರೀಕ್ಷಾ ವಿವಾದಕ್ಕೆ ಸಂಬಂಧಿಸಿದ ಪ್ರತಿಭಟನೆಗಳ ಸಂದರ್ಭದಲ್ಲಿ ಭಾರತೀಯ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಕಾನೂನುಬಾಹಿರ ಮತ್ತು ಅತಿಯಾದ ಬಲಪ್ರಯೋಗ ಮಾಡಿದ್ದಾರೆ...

ರಾಜ್ಯ ಚುನಾವಣಾ ಆಯೋಗದಿಂದ ಎಸ್‌ಐಆರ್ ಕರಡು ಪಟ್ಟಿ ಪ್ರಕಟ; ದಾವಣಗೆರೆಯಲ್ಲಿ ಅತಿ ಕಡಿಮೆ- ಬೆಂಗಳೂರು ನಗರದಲ್ಲಿ 9.46 ಲಕ್ಷ ಜನರಿಗೆ ನೋಟಿಸ್‌!

ರಾಜ್ಯ ಚುನಾವಣಾ ಆಯೋಗವು ಇಂದು ಎಸ್‌ಐಆರ್ ಕರಡು ಪಟ್ಟಿ ಪ್ರಕಟಿಸಿದ್ದು, 'ಲಾಜಿಕಲ್ ಡಿಸ್ಕ್ರಿಪೆನ್ಸಿ' ಹೆಸರಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಅತಿ ಕಡಿಮೆ, ಅಂದರೆ 7,088 ಜನರಿಗೆ ನೋಟಿಸ್‌ ನೀಡಲು ಸಿದ್ಧತೆ ನಡೆಸಲಾಗಿದೆ. ಬೆಂಗಳೂರು ನಗರದಲ್ಲಿ...

ಮಹಾರಾಷ್ಟ್ರದ ಅಮರಾವತಿಯಲ್ಲಿ ದಾರುಣ ದುರಂತ: ಸರ್ಕಾರಿ ಆಸ್ಪತ್ರೆಯ ವೆಂಟಿಲೇಟರ್ ಸ್ಫೋಟಗೊಂಡು ಮೂವರು ನವಜಾತ ಶಿಶುಗಳ ಸಾವು

ಅಮರಾವತಿ: ಮಹಾರಾಷ್ಟ್ರದ ಅಮರಾವತಿ ಜಿಲ್ಲಾ ಸರ್ಕಾರಿ ಮಹಿಳಾ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಸೋಮವಾರ ಮುಂಜಾನೆ ಭೀಕರ ಅಗ್ನಿ ಅವಘಡ ಸಂಭವಿಸಿದ್ದು ವೆಂಟಿಲೇಟರ್‌ನಲ್ಲಿ ಉಂಟಾದ ಸ್ಫೋಟದಿಂದಾಗಿ ಬೆಂಕಿ ಮತ್ತು ದಟ್ಟ...

‘ಮೋದಿ ಅವರ ‘ದಿಮಾಗಿ ನಕ್ಸಲ್’ ಹೇಳಿಕೆಯು ಮುಂಬರುವ ಯುವ ಭಿನ್ನಾಭಿಪ್ರಾಯದ ಅಲೆಯನ್ನು ‘ರಾಷ್ಟ್ರವಿರೋಧಿ’ ಎಂದು ಬಿಂಬಿಸುವ ಪ್ರಯತ್ನವಾಗಿದೆ’: ಆನಂದ್ ತೇಲ್ತುಂಬ್ಡೆ

ಜೆನ್ ಝೀ ಅಲೆಯ ಹೊಸ ರೀತಿಯ ಪ್ರತಿಭಟನೆಗೆ ಬೆಚ್ಚಿಬಿದ್ದಿರುವ ಪ್ರಧಾನಿ ಮೋದಿಯವರ 'ದಿಮಾಗಿ ನಕ್ಸಲ್' ಹೇಳಿಕೆಯ ಮುಖವಾಡವನ್ನು 'ದಿ ವೈರ್' ಲೇಖನದಲ್ಲಿ ಪ್ರಸಿದ್ಧ ಚಿಂತಕ ಡಾ. ಆನಂದ್ ತೇಲ್ತುಂಬ್ಡೆ ಬಿಚ್ಚಿಟ್ಟಿದ್ದಾರೆ. ಆಡಳಿತದ ವಿಫಲ...

SIR : ಮೂರು ದೇಶಗಳಿಗೆ ಭಾರತದ ರಾಯಭಾರಿಯಾಗಿದ್ದ ನವದೀಪ್ ಸೂರಿಗೆ ಪೌರತ್ವ ಸಾಬೀತುಪಡಿಸುವ ಸವಾಲು!

ಪಂಜಾಬ್‌ನಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಪೌರತ್ವ ಸಾಬೀತುಪಡಿಸುವ ವಿಧಾನದ ಕುರಿತು ಮಾಜಿ ರಾಜತಾಂತ್ರಿಕ ನವದೀಪ್ ಸೂರಿ ಅವರು ಭಾನುವಾರ (ಆ.23) ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ....

ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣ : 22 ಆರೋಪಿಗಳ ಖುಲಾಸೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಸಹೋದರ

ಸೊಹ್ರಾಬುದ್ದೀನ್ ಶೇಖ್ ಮತ್ತು ಅವರ ಪತ್ನಿ ಕೌಸರ್ ಬಿ ಹಾಗೂ ಆಪ್ತ ತುಳಸಿರಾಮ್ ಪ್ರಜಾಪತಿ ಅವರ 2005ರ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಗುಜರಾತ್, ರಾಜಸ್ಥಾನ ಮತ್ತು ಆಂಧ್ರಪ್ರದೇಶದ 21 ಪೊಲೀಸರು ಸೇರಿದಂತೆ ಒಟ್ಟು...

ಉತ್ತರ ಪ್ರದೇಶ| ಚಲಿಸುವ ರೈಲಿನಲ್ಲಿ ಮದರಸಾ ವಿದ್ಯಾರ್ಥಿ ಮೇಲೆ ಹಲ್ಲೆ; ಬಲವಂತವಾಗಿ ಮದ್ಯ ಕುಡಿಸಿದ ದುಷ್ಕರ್ಮಿಗಳು

ಪಶ್ಚಿಮ ಉತ್ತರ ಪ್ರದೇಶದಲ್ಲಿ ಶನಿವಾರ ರಾತ್ರಿ ಚಲಿಸುತ್ತಿದ್ದ ರೈಲಿನಲ್ಲಿ ಮದರಸಾ ವಿದ್ಯಾರ್ಥಿಯೊಬ್ಬನ ಮೇಲೆ ಕುಡಿದ ಮತ್ತಿನಲ್ಲಿದ್ದ ಯುವಕರ ಗುಂಪೊಂದು ಹಲ್ಲೆ ನಡೆಸಿ, ಆತನ ಧಾರ್ಮಿಕ ಗುರುತನ್ನು ನಿಂದಿಸಿ, ಬಲವಂತವಾಗಿ ಮದ್ಯ ಕುಡಿಸಿರುವ ಘಟನೆ...

ಶೈಕ್ಷಣಿಕ ಬೇಡಿಕೆಗಳಿಗಾಗಿ ವಾರ್ಧಾ ಎಂಜಿಎಎಚ್‌ವಿಯಲ್ಲಿ ವಿದ್ಯಾರ್ಥಿಗಳ ಅಹೋರಾತ್ರಿ ಸತ್ಯಾಗ್ರಹ: 47ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ, 6 ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್

ವಾರ್ಧಾ (ಮಹಾರಾಷ್ಟ್ರ): ಮಹಾರಾಷ್ಟ್ರದ ವಾರ್ಧಾದಲ್ಲಿರುವ ಪ್ರತಿಷ್ಠಿತ ಮಹಾತ್ಮ ಗಾಂಧಿ ಅಂತರರಾಷ್ಟ್ರೀಯ ಹಿಂದಿ ವಿಶ್ವವಿದ್ಯಾಲಯದಲ್ಲಿ (ಎಂಜಿಎಎಚ್‌ವಿ) ಶೈಕ್ಷಣಿಕ ಹಾಗೂ ವಿದ್ಯಾರ್ಥಿ ಕಲ್ಯಾಣಕ್ಕೆ ಸಂಬಂಧಿಸಿದ ವಿವಿಧ ಮೂಲಭೂತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಸತ್ಯಾಗ್ರಹವು...

ಮೀಸಲಾತಿ ವಿರೋಧಿ ಬೇಡಿಕೆಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ: ಕೇಂದ್ರ ಸಚಿವ ಅಠಾವಳೆ ಆಗ್ರಹ

ಮೀಸಲಾತಿಯನ್ನು ವಿರೋಧಿಸುವ ಅಥವಾ ಅದನ್ನು ರದ್ದುಗೊಳಿಸಲು ಆಗ್ರಹಿಸುವವರ ವಿರುದ್ಧ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಬೇಕೆಂದು ಕೇಂದ್ರ ಸಚಿವ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠಾವಳೆ) ಅಧ್ಯಕ್ಷ ರಾಮದಾಸ್ ಅಠಾವಳೆ ಭಾನುವಾರ ಆಗ್ರಹಿಸಿದ್ದಾರೆ. ಮೀಸಲಾತಿ ವಿರೋಧಿಸಿ...