HomeಅಂಕಣಗಳುKarnataka against SIR‘ಪೆನ್ಶನ್ ಹೋಗಲ್ಲ, SIR ಹೋಗುತ್ತೆ, ಹೆದರಬೇಡಿ’: ತುಮಕೂರಿನಲ್ಲಿ ಸಂತ್ರಸ್ತ ಮಹಿಳೆಗೆ ಪ್ರಕಾಶ್ ರಾಜ್ ಭರವಸೆ

‘ಪೆನ್ಶನ್ ಹೋಗಲ್ಲ, SIR ಹೋಗುತ್ತೆ, ಹೆದರಬೇಡಿ’: ತುಮಕೂರಿನಲ್ಲಿ ಸಂತ್ರಸ್ತ ಮಹಿಳೆಗೆ ಪ್ರಕಾಶ್ ರಾಜ್ ಭರವಸೆ

- Advertisement -
- Advertisement -

ತುಮಕೂರು: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದ ನೋಟಿಸ್‌ಗಳಿಂದ ಆತಂಕಕ್ಕೊಳಗಾಗಿರುವ ತುಮಕೂರಿನ ಎನ್‌ಆರ್ ಕಾಲೊನಿಯ ನಿವಾಸಿಗಳ ಮನೆಗಳಿಗೆ ನಟ ಹಾಗೂ ಹೋರಾಟಗಾರ ಪ್ರಕಾಶ್ ರಾಜ್ ಭೇಟಿ ನೀಡಿ, ಅವರ ಸಮಸ್ಯೆಗಳನ್ನು ಆಲಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಹಾಗೂ ಬಡವರು ವಾಸಿಸುವ ಈ ಪ್ರದೇಶದಲ್ಲಿ SIR ಕುರಿತು ಸ್ಪಷ್ಟ ಮಾಹಿತಿ ಇಲ್ಲದಿರುವುದು ಮತ್ತು ದಾಖಲೆಗಳನ್ನು ಸಲ್ಲಿಸುವ ಕುರಿತ ಆತಂಕ ಹಲವು ಕುಟುಂಬಗಳಲ್ಲಿ ಗೊಂದಲ ಹಾಗೂ ಭಯಕ್ಕೆ ಕಾರಣವಾಗಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡರು.

ಎನ್‌ಆರ್ ಕಾಲೊನಿಯ ಪ್ರವೇಶದ್ವಾರದಲ್ಲಿ ನೋಟಿಸ್ ಹಿಡಿದು ನಿಂತಿದ್ದ 80 ವರ್ಷ ದಾಟಿದ ವೃದ್ಧೆಯೊಬ್ಬರು, ದಾಖಲೆಗಳನ್ನು ನೀಡದಿದ್ದರೆ ತಮ್ಮ ಪಿಂಚಣಿ ನಿಲ್ಲಿಸಲಾಗುತ್ತದೆ ಎಂದು ನೋಟಿಸ್‌ನ ಹಿನ್ನೆಲೆಯಲ್ಲಿ ತಿಳಿಸಲಾಗುತ್ತಿದೆ ಎಂದು ಪ್ರಕಾಶ್ ರಾಜ್ ಅವರ ಬಳಿ ಅಳಲು ತೋಡಿಕೊಂಡರು. ಅವರಿಗೆ ಧೈರ್ಯ ತುಂಬಿದ ಪ್ರಕಾಶ್ ರಾಜ್, “ನಿಮ್ಮ ಪೆನ್ಶನ್ ಹೋಗಲ್ಲ, SIR ಹೋಗುತ್ತೆ, ಹೆದರಬೇಡಿ” ಎಂದು ಭರವಸೆ ನೀಡಿದರು. 

ಕಾಲೋನಿಯ ನಿವಾಸಿಗಳಲ್ಲಿ ಕೆಲವರು SIR ಎಂದರೇನು ಎಂಬುದರ ಬಗ್ಗೆಯೇ ಸ್ಪಷ್ಟ ಮಾಹಿತಿ ಇಲ್ಲದೆ, ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಾದರೆ ಸರ್ಕಾರದ ಸೌಲಭ್ಯಗಳು ನಿಲ್ಲಬಹುದು ಅಥವಾ ತಮ್ಮನ್ನು ಹೊರಗಿನವರಂತೆ ಪರಿಗಣಿಸಬಹುದು ಎಂಬ ಆತಂಕ ವ್ಯಕ್ತಪಡಿಸಿದರು. ಪ್ರಕಾಶ್ ರಾಜ್ ಅವರೊಂದಿಗೆ ರೈತ ನಾಯಕ ವೀರಸಂಗಯ್ಯ, ವಸತಿ ಹೋರಾಟಗಾರ ಕುಮಾರ್ ಸಮತಳ ಸೇರಿದಂತೆ ಜನಪರ ಸಂಘಟನೆಗಳ ಮುಖಂಡರು ನಿವಾಸಿಗಳ ಅಹವಾಲುಗಳನ್ನು ಆಲಿಸಿದರು.

ಮನೆಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಮಹಿಳೆಯೊಬ್ಬರು ತಮ್ಮ ಕುಟುಂಬದ ಯಾರಿಗೂ ಎನ್ಯುಮರೇಷನ್ ಫಾರಂ ಬಂದಿಲ್ಲ ಎಂದು ತಿಳಿಸಿದರು. ಇದನ್ನು ಉಲ್ಲೇಖಿಸಿದ ಪ್ರಕಾಶ್ ರಾಜ್, ರಾಜ್ಯದಲ್ಲಿ ಇರುವ ಮತದಾರರ ಸಂಖ್ಯೆಗೆ ಅನುಗುಣವಾಗಿ ಫಾರಂಗಳನ್ನು ಮುದ್ರಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಹೇಳುತ್ತಿದ್ದರೆ, ತಮ್ಮ ಮನೆಗಳಿಗೆ ಫಾರಂಗಳು ಏಕೆ ತಲುಪಿಲ್ಲ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಬೇಕು ಎಂದು ಹೇಳಿದರು.

ಇದೇ ವೇಳೆ ಜಯಮ್ಮ ಎಂಬ ವೃದ್ಧ ಮಹಿಳೆಯೊಬ್ಬರು SIR ನೋಟಿಸ್‌ನಿಂದ ತೀವ್ರ ಆತಂಕಕ್ಕೊಳಗಾಗಿರುವ ವಿಚಾರವೂ ಬೆಳಕಿಗೆ ಬಂತು. ನಿಗದಿತ ಅವಧಿಯೊಳಗೆ ದಾಖಲೆಗಳನ್ನು ತರದಿದ್ದರೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲಾಗುತ್ತದೆ ಎಂದು ಬೂತ್ ಮಟ್ಟದ ಅಧಿಕಾರಿ (BLO) ದೂರವಾಣಿ ಮೂಲಕ ತಿಳಿಸಿದ್ದಾಗಿ ಕುಟುಂಬದವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸರಿಯಾಗಿ ಊಟ ಮಾಡುತ್ತಿಲ್ಲ, ಆತಂಕದಲ್ಲಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಕಾಲೋನಿಯ ನಿವಾಸಿಗಳು ಚುನಾವಣಾ ಆಯೋಗದ ಅಧಿಕಾರಿಗಳು ಕೇವಲ ಕಚೇರಿಗಳಿಂದ ಹೇಳಿಕೆ ನೀಡದೆ, ತಮ್ಮ ಮನೆಗಳಿಗೆ ಬಂದು ಸಮಸ್ಯೆಗಳನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು. ದೂರದ ಊರುಗಳಿಗೆ ಕೆಲಸಕ್ಕಾಗಿ ತೆರಳಿರುವ ಹಲವು ನಿವಾಸಿಗಳಿಗೆ ನೋಟಿಸ್‌ಗಳ ಮಾಹಿತಿ ಸಂಬಂಧಿಕರ ಮೂಲಕ ತಲುಪಿಸಲಾಗಿದೆ ಎಂಬುದನ್ನೂ ಸ್ಥಳೀಯರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಕೇವಲ ಪ್ರತಿಭಟನೆ ನಡೆಸುವುದಕ್ಕೆ ಸೀಮಿತವಾಗದೆ, ಮತದಾರರ ಪಟ್ಟಿ ಸಂಪೂರ್ಣವಾಗಿ ಸರಿಯಾಗುವವರೆಗೆ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸದಿರುವ ಕುರಿತು ಗಟ್ಟಿ ನಿರ್ಧಾರ ಕೈಗೊಂಡು ಬೀದಿ ಹೋರಾಟಕ್ಕೆ ಇಳಿಯಬೇಕು ಎಂದು SIR ವಿರೋಧಿ ಒಕ್ಕೂಟ ಕರೆ ನೀಡಿದೆ. ಈ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೆಪ್ಟೆಂಬರ್ 26ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎಡ, ಪ್ರಜಾತಾಂತ್ರಿಕ ಪಕ್ಷಗಳು ಹಾಗೂ ಜನಪರ ಸಂಘಟನೆಗಳ ಜಂಟಿ ಪ್ರತಿಭಟನೆ ನಡೆಯಲಿದೆ.

SIR ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಯಲಿಗೆಳೆಯಲು, ಸಂತ್ರಸ್ತರನ್ನು ನೇರವಾಗಿ ಭೇಟಿ ಮಾಡಿ ಸಾಕ್ಷ್ಯಗಳನ್ನು ಸಂಗ್ರಹಿಸುವ ಉದ್ದೇಶದಿಂದ ಸೆಪ್ಟೆಂಬರ್ 22ರಿಂದ 30ರವರೆಗೆ SIR ವಿರೋಧಿ ಜನಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟದ ವತಿಯಿಂದ ‘SIR ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’ ಹಮ್ಮಿಕೊಳ್ಳಲಾಗಿದೆ. ತುಮಕೂರಿನ ಎನ್‌ಆರ್ ಕಾಲೊನಿಯಲ್ಲಿನ ಮನೆಮನೆ ಭೇಟಿ ಈ ಪರಿಶೋಧನಾ ಪ್ರಕ್ರಿಯೆಯ ಭಾಗವಾಗಿ ನಡೆದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುರ್ಷಿದಾಬಾದ್‌: ಎಸ್ಐಆರ್ ಪ್ರಕ್ರಿಯೆಯಲ್ಲಿ ಹೆಸರುಗಳು ಉಳಿದರೂ ‘ಬಾಂಗ್ಲಾದೇಶಿ’ ಎಂದು ಅನುಮಾನಿಸಿ 60 ವರ್ಷದ ತಂದೆ, ಮೂವರು ಪುತ್ರರ ಗಡಿಪಾರು ಆರೋಪ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬಂಗಾಳಿ ಮುಸ್ಲಿಂ ಕುಟುಂಬವೊಂದರ ನಾಲ್ವರು ಸದಸ್ಯರನ್ನು ಪೊಲೀಸರು ಮನೆಯಿಂದ ಕರೆದೊಯ್ದು, ಅವರು ಬಾಂಗ್ಲಾದೇಶಿ ಪ್ರಜೆಗಳು ಎಂದು ಆರೋಪಿಸಿ ಬಿಎಸ್‌ಎಫ್‌ಗೆ ಹಸ್ತಾಂತರಿಸಿ ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು...

ಗ್ಯಾನೇಶ್ ಕುಮಾರ್‌ನನ್ನು ಬಂಧಿಸುವಂತೆ ಬಿ.ಕೆ. ಹರಿಪ್ರಸಾದ್ ಆಗ್ರಹ: ನಾಳೆ ಕಾಂಗ್ರೆಸ್‌ನಿಂದ ಪ್ರತಿಭಟನೆ

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಇನ್ನುಳಿದ ಇಬ್ಬರು ಆಯುಕ್ತರ ಭಿನ್ನಮತವನ್ನು ಸಂಪೂರ್ಣವಾಗಿ ತಳ್ಳಿಹಾಕಿ ಗೌಪ್ಯವಾಗಿ 'ಎಸ್‌ಐಆರ್'...

SIR ಅಕ್ರಮ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ PIL

ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾಂವಿಧಾನಿಕ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರ ವಿರುದ್ಧ ಶಿಸ್ತು ಹಾಗೂ...

ಜೆನ್ ಝಿ ಮತದಾರರ ನೋಂದಣಿ ಸ್ಥಗಿತದ ಹಿಂದೆ ಮೋದಿ-ಸಿಇಸಿ ಸಂಚು: ಕಾಂಗ್ರೆಸ್ ಆರೋಪ

18 ವರ್ಷ ತುಂಬಿದ ಯುವಜನರನ್ನು (Gen Z) ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ 'ವಿಶೇಷ ಸಂಕ್ಷಿಪ್ತ ಪರಿಷ್ಕರಣೆ' (SSR) ಪ್ರಕ್ರಿಯೆಯು 2024 ರಿಂದ ತಡೆಹಿಡಿಯಲ್ಪಟ್ಟಿರುವುದು ಹಾಗೂ ಈ ವಿಷಯವಾಗಿ ಕೇಂದ್ರ ಚುನಾವಣಾ ಆಯೋಗದಲ್ಲಿ (ECI)...

ತುಮಕೂರಿನ ಎನ್.ಆರ್. ಕಾಲೋನಿ ಕೋತಿ ತೋಪಿನಲ್ಲಿ ಎಸ್ಐಆರ್ ಪರಿಶೋಧನೆ: ಸಂತ್ರಸ್ತರ ಅಹವಾಲು ಆಲಿಸಿದ ಪ್ರಕಾಶ್ ರಾಜ್: ಸೆ.26ಕ್ಕೆ ಬೆಂಗಳೂರಿನಲ್ಲಿ ಪ್ರತಿಭಟನೆ

ತುಮಕೂರು: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಿಂದ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಎದುರಾಗಿರುವ ಸಮಸ್ಯೆಗಳನ್ನು ನೇರವಾಗಿ ಪರಿಶೀಲಿಸುವ ಉದ್ದೇಶದಿಂದ ನಟ ಹಾಗೂ ಹೋರಾಟಗಾರ ಪ್ರಕಾಶ್ ರಾಜ್ ಅವರು ತುಮಕೂರು ನಗರದ ಎನ್‌ಆರ್‌ ಕಾಲೊನಿ...

SIR ವಿವಾದ ಮತ್ತು ಆಂತರಿಕ ಬಿಕ್ಕಟ್ಟು: ಮೀರತ್, ವಾರಾಣಸಿ ಪ್ರವಾಸ ದಿಢೀರ್ ರದ್ದುಗೊಳಿಸಿದ ಗ್ಯಾನೇಶ್‌ ಕುಮಾರ್! Gen-Z ಆಕ್ರೋಶಕ್ಕೆ ಬೆದರಿತೇ ಆಯೋಗ?

ದೇಶಾದ್ಯಂತ ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿರುವ 'ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ' (SIR) ವಿವಾದ, ಸ್ಥಗಿತಗೊಂಡಿರುವ ವಾರ್ಷಿಕ ಮತದಾರರ ಪಟ್ಟಿ ಪರಿಷ್ಕರಣೆ (SSR) ಹಾಗೂ ಚುನಾವಣಾ ಆಯೋಗದ ಉನ್ನತ ಹಂತದ ಶೀತಲ...

ವಿಜಯವಾಡ ಕಸ್ಟಡಿಯಲ್ಲಿ ಸಾಯಿ ಕೃಷ್ಣ ಸಾವು: ಶವ ದಹನ, ಸಾಕ್ಷ್ಯ ನಾಶ ಖಚಿತ ಪಡಿಸಿದ ಎಸ್ಐಟಿ; ಸುಪ್ರೀಂ ಕೋರ್ಟ್ ನೇರ ಮೇಲ್ವಿಚಾರಣೆ 

ವಿಜಯವಾಡ: ಆಂಧ್ರಪ್ರದೇಶದ ವಿಜಯವಾಡದಲ್ಲಿ 25 ವರ್ಷದ ಗದೆ ಸಾಯಿ ಕೃಷ್ಣ ಅವರ ನಾಪತ್ತೆ ಹಾಗೂ ಶಂಕಿತ ಕಸ್ಟಡಿ ಸಾವಿನ ಪ್ರಕರಣ ಇದೀಗ ಸುಪ್ರೀಂ ಕೋರ್ಟ್‌ನ ನೇರ ಮೇಲ್ವಿಚಾರಣೆಗೆ ಒಳಪಟ್ಟಿದೆ. ಕೃಷ್ಣಲಂಕಾ ಪೊಲೀಸರು ವಶಕ್ಕೆ...

ಜ್ಞಾನೇಶ್ ಕುಮಾರ್‌ನನ್ನು ವಜಾಗೊಳಿಸಿ-SIR ರದ್ದುಗೊಳಿಸುವಂತೆ ಒತ್ತಾಯಿಸಿ ಸೆ.26 ಪ್ರತಿಭಟನೆಗೆ ಎಡ ಪಕ್ಷಗಳು ಹಾಗೂ SIR ವಿರೋಧಿ ಒಕ್ಕೂಟ ಕರೆ

ಕೇಂದ್ರ ಚುನಾವಣಾ ಆಯೋಗವು ಎಸಗಿರುವ ಅಕ್ರಮಗಳ ಪಾಪದ ಕೊಡ ತುಂಬಿದ್ದು, ಆಯೋಗದ ಆಂತರಿಕ ಭಿನ್ನಾಭಿಪ್ರಾಯಗಳು ಜಗಜ್ಜಾಹೀರಾಗಿವೆ ಎಂದು ‘SIR ವಿರೋಧಿ ಜನಪರ ಸಂಘಟನೆಗಳ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟ’ ಆಕ್ರೋಶ ವ್ಯಕ್ತಪಡಿಸಿದೆ. ಮುಖ್ಯ...

SIR ಜಾರಿಯಿಂದ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮೇಲೆ ಸಂಶಯ ಮೂಡಿದೆ: ಅಶೋಕ್ ಲವಾಸ ಕಳವಳ

ಚುನಾವಣಾ ಪ್ರಕ್ರಿಯೆಯ ಶುದ್ಧೀಕರಣದ ನೆಪದಲ್ಲಿ ನೈಜ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಅಥವಾ ಬೇಟೆಯಾಡುವ ಪ್ರವೃತ್ತಿಯನ್ನು ತಕ್ಷಣವೇ ಕೈಬಿಡಬೇಕು, SIR ಪ್ರಕ್ರಿಯೆಯಿಂದ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮತ್ತು ವರ್ಚಸ್ಸಿಗೆ ಭಾರೀ ಧಕ್ಕೆಯಾಗುತ್ತಿದೆ ಎಂದಿರುವ ಮಾಜಿ...

“ಟರ್ನ್ ಅಪ್ರೂವರ್ ಆಗಿ”: ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯ; ಮತ ಕಳ್ಳತನ ಆರೋಪದಲ್ಲಿ ಮೋದಿ, ಶಾ ತನಿಖೆ ನಡೆಯಬೇಕಿದೆ: ರಾಹುಲ್ ಗಾಂಧಿ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಚುನಾವಣಾ ವ್ಯವಸ್ಥೆಯಲ್ಲಿ ನಡೆದಿರುವುದಾಗಿ ಆರೋಪಿಸಲಾಗುತ್ತಿರುವ ಅಕ್ರಮಗಳ ಕುರಿತು “ಅನುಮೋದಕರಾಗಿ” (ಅಪ್ರೂವರ್) ಬದಲಾಗಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ...