Homeಮುಖಪುಟಸೌರವ್ ದಾಸ್ - ಆಶುತೋಶ್ ರಾಂಕಾ ಬಿಡುಗಡೆ ಕುರಿತು ಸಿಗದ ಸ್ಪಷ್ಟತೆ

ಸೌರವ್ ದಾಸ್ – ಆಶುತೋಶ್ ರಾಂಕಾ ಬಿಡುಗಡೆ ಕುರಿತು ಸಿಗದ ಸ್ಪಷ್ಟತೆ

- Advertisement -
- Advertisement -

ದೇಶದ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ಸೋಮವಾರ ಮಧ್ಯಾಹ್ನ ಹೊಸ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಎಸ್‌ಇಎಂ) ಮುಂದೆ ಹಾಜರುಪಡಿಸಬೇಕಿತ್ತು. ಆದರೆ, ಅಧಿಕಾರಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಸಿಜೆಪಿಯ ರತ್ನಾ ಸಿಂಗ್, “ಇನ್ನು ಮುಂದೆ ಈ ಪ್ರಕ್ರಿಯೆ ಯಾವುದೇ ವಿಳಂಬವಾಗುವುದಿಲ್ಲ, ಪ್ರಕ್ರಿಯೆಗಳಿಗೆ ತಡೆಯೊಡ್ಡುವ ಯಾವುದೇ ಪ್ರಯತ್ನಗಳು ನಡೆಯುವುದಿಲ್ಲ” ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ, ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪಕೆ ಅವರು, ಪಕ್ಷದ ಸಂಚಾಲಕರಾದ ಅಶುತೋಷ್ ರಾಂಕಾ ಮತ್ತು ಸೌರವ್ ದಾಸ್ ಅವರ ಬಂಧನವನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಆರೋಪಿಸಿದ್ದರು. ಸದ್ಯ ಇವರಿಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಪ್ರತಿಭಟನಾ ಸ್ಥಳವಾಗಿ ಡಿನೋಟಿಫೈ ಮಾಡಲಾಗಿದ್ದ ಜಂತರ್ ಮಂತರ್‌ನ ಲಾಕ್ ಮಾಡಿದ್ದ ಗೇಟ್ ಅನ್ನು ಹತ್ತಿ ಒಳಗೆ ಪ್ರವೇಶಿಸಿದ ನಂತರ, ಅಕ್ಟೋಬರ್ 13 ರಂದು ರಾಂಕಾ ಮತ್ತು ದಾಸ್ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಸಿಜೆಪಿಯ ಮತ್ತು ಎಐಎಸ್‌ಎ ಕಾರ್ಯಕರ್ತರೊಂದಿಗೆ ಇಬ್ಬರೂ ಈ ಸ್ಥಳದಲ್ಲಿ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಿದ್ದರು. ನಂತರ ಅವರನ್ನು ವಶಕ್ಕೆ ತೆಗೆದುಕೊಂಡು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲಾಯಿತು. ಬಳಿಕ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಭಾನುವಾರಕ್ಕೆ ಅವರ ಬಂಧನವು ಆರನೇ ದಿನಕ್ಕೆ ಕಾಲಿಟ್ಟಿದೆ ಎಂದು ದೀಪ್ಕೆ ಹೇಳಿದ್ದು, “ನ್ಯಾಯಾಲಯದ ಪ್ರಕ್ರಿಯೆಗಳನ್ನು ವಿಳಂಬಗೊಳಿಸಲು, ಅವರ ಬಿಡುಗಡೆಯನ್ನು ತಡೆಯಲು ರಾಜ್ಯ ಸರ್ಕಾರವು ಎಲ್ಲಾ ರೀತಿಯ ತಂತ್ರಗಳನ್ನು ಬಳಸುವ ಮೂಲಕ ಆಶುತೋಶ್‌ ಮತ್ತು ಸೌರವ್ ಅವರ ಅಕ್ರಮ ಬಂಧನವನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದೆ. ಅವರನ್ನು ಕಂಬಿಗಳ ಹಿಂದೆ ಇಡಲು ಯಾವುದೇ ಕಾನೂನುಬದ್ಧ ಆಧಾರಗಳಿಲ್ಲ, ಅದಕ್ಕಾಗಿಯೇ ಅವರನ್ನು ಅಲ್ಲಿಯೇ ಮುಂದುವರಿಸಲು ವಿಳಂಬದ ತಂತ್ರಗಳನ್ನು ಆಶ್ರಯಿಸುತ್ತಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.

ಭಾನುವಾರ ಅವರ ಜಾಮೀನು ಅರ್ತಿಯ ವಿಚಾರಣೆ ನಡೆಸಿದ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರು ಬೆದರಿಕೆಗಳು ಮತ್ತು ಮಾನಸಿಕ ಕಿರುಕುಳವನ್ನು ಉಲ್ಲೇಖಿಸಿದ್ದು, ಇದರಿಂದಾಗಿ ಇಬ್ಬರ ಬಿಡುಗಡೆಯು ಇನ್ನೂ ಇತ್ಯರ್ಥಗೊಳ್ಳದೆ ಉಳಿದಿದೆ.

ಎಸ್‌ಇಎಂ ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ವಿಳಂಬದ ಆರೋಪಗಳನ್ನು ತಳ್ಳಿಹಾಕಿರುವ ಪೊಲೀಸರು, ನಿಗದಿತ ಕಾನೂನು ಪ್ರಕ್ರಿಯೆಯನ್ನು ಅನುಸರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮತ್ತೊಂದು ಪ್ರತಿಭಟನೆಯ ಯೋಜನೆ ಇದೆ ಎಂದ ಪೊಲೀಸರು

ವಿಚಾರಣೆಯ ವೇಳೆ, ಸಿಜೆಪಿ ನಾಯಕರಾದ ಅಭಿಜೀತ್ ದಿಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರು ಮತ್ತೊಂದು ಪ್ರತಿಭಟನೆಗೆ ಯೋಜನೆ ರೂಪಿಸುತ್ತಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಭಾನುವಾರ ವಿಮಾನ ನಿಲ್ದಾಣದಲ್ಲಿ ಪಕ್ಷವು ತನ್ನ ಮುಂದಿನ ಕಾರ್ಯತಂತ್ರವನ್ನು ರೂಪಿಸಲಿದೆ ಎಂದು ದೀಪ್ಕೆ ನೀಡಿರುವ ಹೇಳಿಕೆಯನ್ನು ಪೊಲೀಸರು ಉಲ್ಲೇಖಿಸಿದ್ದಾರೆ. ಆದರೆ, ತಾವು ಯಾವುದೇ ಪ್ರತಿಭಟನೆಯನ್ನು ಯೋಜಿಸಿಲ್ಲ, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೂ ಯಾವುದೇ ಪೋಸ್ಟ್ ಮಾಡಿಲ್ಲ ಎಂದು ಸಿಜೆಪಿ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಅನ್ಯಧರ್ಮೀಯರು ಹೊರಹೋಗಿ’: ಗುಜರಾತ್ ಗರ್ಬಾ ಉತ್ಸವಗಳಲ್ಲಿ ಹಿಂದುತ್ವ ಸಂಘಟನೆಗಳಿಂದ ಕಿರುಕುಳ, ಬೆದರಿಕೆ!

ಗುಜರಾತ್‌ನಾದ್ಯಂತ ನಡೆಯುತ್ತಿರುವ ನವರಾತ್ರಿ ಗರ್ಬಾ ಉತ್ಸವಗಳಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸೇರಿದಂತೆ ಬಲಪಂಥೀಯ ಹಿಂದುತ್ವ ಸಂಘಟನೆಗಳು ಮುಸ್ಲಿಮರು ಹಾಗೂ ಮುಸ್ಲಿಮೇತರರನ್ನು ಪ್ರವೇಶಿಸದಂತೆ ತಡೆಯಲು ಹೊಸ ನಿಯಮಗಳನ್ನು ಜಾರಿಗೆ ತರುತ್ತಿವೆ ಎಂದು...

ಮಣಿಪುರ ಹಿಂಸಾಚಾರ: ಉರುವಲು ಸಂಗ್ರಹಿಸುತ್ತಿದ್ದ ಮೂವರನ್ನು ಕೊಂದ ಉಗ್ರರು; ಸಿಎಂ ನಿವಾಸದ ಮುಂದೆ ಶವಗಳನ್ನಿಟ್ಟು ಸ್ಥಳೀಯರ ಪ್ರತಿಭಟನೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಕಾಡಿನಲ್ಲಿ ಉರುವಲು ಸಂಗ್ರಹಿಸಲು ತೆರಳಿದ್ದ ಮೂವರನ್ನು ಉಗ್ರಗಾಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಇಂಫಾಲ್ ಪೂರ್ವ ಮತ್ತು ಕಾಂಗ್ಪೋಕ್ಪಿ ಜಿಲ್ಲೆಗಳ ಗಡಿಯಲ್ಲಿರುವ ಬೆಟ್ಟ ಪ್ರದೇಶದಲ್ಲಿ ಸೋಮವಾರ ಈ ದಾಳಿ ನಡೆದಿದೆ....

ಆಂಧ್ರ ಪ್ರದೇಶ | ಹಿಂಸಾಚಾರದಿಂದ ಮುನ್ಸಿಪಲ್ ಚುನಾವಣೆ ನಾಮಪತ್ರ ಸಲ್ಲಿಕೆಗೆ ಅಡ್ಡಿ ಆರೋಪ : ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವೈಎಸ್‌ಆರ್‌ ಕಾಂಗ್ರೆಸ್

ಆಂಧ್ರ ಪ್ರದೇಶದಲ್ಲಿ ನಡೆದ ವ್ಯಾಪಕ ಹಿಂಸಾಚಾರದಿಂದಾಗಿ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಮ್ಮ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ಆರೋಪಿಸಿ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷ ಸೋಮವಾರ (ಅಕ್ಟೋಬರ್ 19) ಸುಪ್ರೀಂ ಕೋರ್ಟ್‌ನ...

ಮೂಲಭೂತ ಸೌಕರ್ಯ- ವಿದ್ಯಾರ್ಥಿ ಸಂಘಕ್ಕಾಗಿ ಉಪವಾಸ ಸತ್ಯಾಗ್ರಹ; ಸಮಸ್ಯೆಗಳ ಪರಿಹಾರಕ್ಕೆ ಮುಂದಾದ ಜಾಮಿಯಾ ಆಡಳಿತ ಮಂಡಳಿ

ದೆಹಲಿಯಲ್ಲಿರುವ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಒಂದು ವಾರ ತುಂಬಿದ ಹಿನ್ನೆಲೆಯಲ್ಲಿ, ಸೋಮವಾರ (ಅ.19) ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಏಳು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ವಿದ್ಯಾರ್ಥಿಗಳು...

2027ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗುವ ಇಚ್ಛೆ: ಕೊಲೆ ಅಪರಾಧಿಯ ಶಿಕ್ಷೆಗೆ ತಡೆ ನೀಡಿದ ಅಲಹಾಬಾದ್ ಹೈಕೋರ್ಟ್!

ಉತ್ತರ ಪ್ರದೇಶದಲ್ಲಿ 2027ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಅಥವಾ ಸಾಧ್ಯವಾದರೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಟಿಕೆಟ್‌ನಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿರುವ ಕೊಲೆ ಪ್ರಕರಣದ ಅಪರಾಧಿಯ ಜೀವಾವಧಿ ಜೈಲು ಶಿಕ್ಷೆ...

SIR ವಿರೋಧಿ ಹೋರಾಟಕ್ಕೆ ಧುಮುಕಿದ ರೈತ, ದಲಿತ ಸಂಘಟನೆಗಳು : ಅ.23ರಂದು ರಾಜ್ಯದಾದ್ಯಂತ ಪ್ರತಿಭಟನೆ

ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿವಿಗಾಗಿ ಹಾಗೂ ಚುನಾವಣಾ ಆಯೋಗದ ಏಕಪಕ್ಷೀಯ ತೀರ್ಮಾನಗಳನ್ನು ವಿರೋಧಿಸಿ ಅಕ್ಟೋಬರ್ 23ರಂದು ರಾಜ್ಯದಾದ್ಯಂತ ಬೃಹತ್ ಜನತಾ ಮೆರವಣಿಗೆ ಮತ್ತು 'ಜಂತರ್ ಮಂತರ್' ಮಾದರಿಯ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದಾಗಿ ಎಸ್ಐಆರ್ ವಿರೋಧಿ...

ಅಸ್ಸಾಂನಲ್ಲಿ ಎರಡು ದಿನಗಳಲ್ಲಿ 1,100ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳ ಒಕ್ಕಲೆಬ್ಬಿಸಲಾಗಿದೆ: 10ಕ್ಕೂ ಹೆಚ್ಚು ಮಸೀದಿಗಳ ಧ್ವಂಸ

ಅಸ್ಸಾಂ: ಅಸ್ಸಾಂನ ಬಿಜೆಪಿ ನೇತೃತ್ವದ ಸರ್ಕಾರ ಎರಡು ದಿನಗಳ ಅತಿಕ್ರಮಣ ವಿರೋಧಿ ತೆರವು ಕಾರ್ಯಾಚರಣೆಯಲ್ಲಿ 1,100ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳನ್ನು ಒಕ್ಕಲೆಬ್ಬಿಸಿದ್ದು, 10ಕ್ಕೂ ಹೆಚ್ಚು ಮಸೀದಿಗಳನ್ನು ಧ್ವಂಸಗೊಳಿಸಿದೆ. ನಾಗಾಂವ್, ಗೋಲಾಘಾಟ್ ಮತ್ತು ಹೊಜೈ...

ಸುಳ್ಳು ಅಫಿಡವಿಟ್‌ ಸಲ್ಲಿಸಿದ ಅಭ್ಯರ್ಥಿಗಳ ವಿರುದ್ಧ ಮತದಾರರು ಖಾಸಗಿ ದೂರು ದಾಖಲಿಸಬಹುದು : ಸುಪ್ರೀಂ ಕೋರ್ಟ್

'ಜನತಾ ಪ್ರಾತಿನಿಧ್ಯ ಕಾಯ್ದೆ 1951'ರ ಸೆಕ್ಷನ್ 125A ಅಡಿಯಲ್ಲಿ ಬರುವ ಅಪರಾಧಗಳಿಗೆ ಸಂಬಂಧಿಸಿದಂತೆ, ಚುನಾಯಿತ ಅಭ್ಯರ್ಥಿಗಳು ತಮ್ಮ ಚುನಾವಣಾ ಅಫಿಡವಿಟ್‌ಗಳಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಅಥವಾ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿ, ಖಾಸಗಿ...

ಉತ್ತರ ಪ್ರದೇಶ| ಜಾಹೀರಾತು ವಿವಾದ; ಹಿಟ್ಟಿನ ಗಿರಣಿಯಲ್ಲಿ ಹಲ್ಲೆಗೊಳಗಾಗಿದ್ದ ಹಿರಿಯ ಪತ್ರಕರ್ತ ಸಾವು

ಉತ್ತರ ಪ್ರದೇಶದ ಹಪುರ್‌ನಲ್ಲಿರುವ ಹಿಂದಿ ದಿನಪತ್ರಿಕೆ 'ದೈನಿಕ್ ಜನ್ವಾಣಿ'ಯ ಪತ್ರಕರ್ತರೊಬ್ಬರು ಹಿಟ್ಟಿನ ಗಿರಣಿಯಲ್ಲಿ ಭಾಣುವಾರ ನಡೆದ ಹಲ್ಲೆಯಿಂದಾಗಿ ಮೃತಪಟ್ಟಿದ್ದಾರೆ. ಜಾಹೀರಾತು ಕೇಳಲು ತೆರಳಿದ್ದ ವೇಳೆ ಅವರನ್ನು ನಕಲಿ ಪತ್ರಕರ್ತ ಎಂದು ಆರೋಪಿಸಿ ಹಲ್ಲೆ...

ಗ್ಯಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ : ಬಾಂಡ್ ಸಲ್ಲಿಸುವಂತೆ ಪೊಲೀಸರಿಂದ ನೋಟಿಸ್; ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನೇಹಾ ಬೋರಾ

ವಿಚಾರಣೆಯ ಅವಧಿಯಲ್ಲಿ ಶಾಂತಿ ಕಾಪಾಡುವ ಸಲುವಾಗಿ ಒಬ್ಬರ ಜಾಮೀನಿನೊಂದಿಗೆ (ಶ್ಯೂರಿಟಿ) 10,000 ರೂ. ಮೌಲ್ಯದ ಬಾಂಡ್ (ಮುಚ್ಚಳಿಕೆ ಪತ್ರ) ಸಲ್ಲಿಸುವಂತೆ ದೆಹಲಿ ಪೊಲೀಸರು ತಮಗೆ ನೀಡಿದ್ದ ನೋಟಿಸ್ ಅನ್ನು ಪ್ರಶ್ನಿಸಿ ವಿದ್ಯಾರ್ಥಿ ಸಂಘಟನೆ...