Homeಕರ್ನಾಟಕ'ಬಿಳೇಕಹಳ್ಳಿ' ಮೆಟ್ರೋ ನಿಲ್ದಾಣಕ್ಕೆ ಕೇವಲ 'ಐಐಎಂಬಿ' ಹೆಸರಿಟ್ಟಿರುವುದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ : ಮರುನಾಮಕರಣಕ್ಕೆ ಆಗ್ರಹ

‘ಬಿಳೇಕಹಳ್ಳಿ’ ಮೆಟ್ರೋ ನಿಲ್ದಾಣಕ್ಕೆ ಕೇವಲ ‘ಐಐಎಂಬಿ’ ಹೆಸರಿಟ್ಟಿರುವುದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ : ಮರುನಾಮಕರಣಕ್ಕೆ ಆಗ್ರಹ

- Advertisement -
- Advertisement -

ಬೆಂಗಳೂರಿನ ‘ನಮ್ಮ ಮೆಟ್ರೋ’ ಗುಲಾಬಿ ಮಾರ್ಗದ (Pink Line) ‘ಬಿಳೇಕಹಳ್ಳಿ’ ನಿಲ್ದಾಣಕ್ಕೆ ಕೇವಲ ಐಐಎಂಬಿ (ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು) ಎಂದು ಹೆಸರಿಟ್ಟಿರುವುದಕ್ಕೆ ಊರಿನ ಜನರು ತೀವ್ರ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದ್ದು, ಮರುನಾಮಕರಣಕ್ಕೆ ಆಗ್ರಹಿಸಿ ಹೋರಾಟ ಆರಂಭಿಸಿದ್ದಾರೆ.

ಬನ್ನೇರುಘಟ್ಟ ರಸ್ತೆಯ ‘ಬಿಳೇಕಹಳ್ಳಿ’ಯ ನಿಲ್ದಾಣಕ್ಕೆ ‘ಐಐಎಂಬಿ’ ಎಂದು ನಾಮಕರಣ ಮಾಡಲಾಗಿದೆ. ಐಐಎಂಬಿ ಪಕ್ಕದಲ್ಲೇ ಇರುವ ನಿಲ್ದಾಣವಾದ್ದರಿಂದ ಈ ಹೆಸರು ಇಡಲಾಗಿದೆ ಎನ್ನಲಾಗಿದೆ. ಆದರೆ, ಊರಿನ ಹೆಸರೇ ಕೈಬಿಟ್ಟು ಕೇವಲ ಐಐಎಂಬಿ ಎಂದು ನಾಮಕರಣ ಮಾಡಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

‘ಐಐಎಂಬಿ’ ಎಂದು ಹೆಸರಿಟ್ಟಿರುವುದಕ್ಕೆ ತಮ್ಮ ತಕರಾರಿಲ್ಲ. ಆದರೆ, ಊರಿನ ಹೆಸರು ಕೈಬಿಟ್ಟಿರುವುದು ಸರಿಯಲ್ಲ. ತಕ್ಷಣ ಇದನ್ನು ಸರಿಪಡಿಸಿ ‘ಐಐಎಂಬಿ-ಬಿಳೇಕಹಳ್ಳಿ’ ಎಂಬುವುದಾಗಿ ಮರುನಾಮಕರಣ ಮಾಡಬೇಕೆಂದು ಊರಿನ ಜನರು ಆಗ್ರಹಿಸಿದ್ದಾರೆ.

‘ಬಿಳೇಕಹಳ್ಳಿ’ ಎನ್ನುವುದು ಕೇವಲ ಒಂದು ಊರಿನ ಹೆಸರಲ್ಲ. ನಮ್ಮ ಪೂರ್ವಜರ ನೆನಪು, ನಮ್ಮ ನೆಲದ ಇತಿಹಾಸ, ನಮ್ಮ ಅಸ್ತಿತ್ವ. ಮೆಟ್ರೋ ನಿಲ್ದಾಣಕ್ಕೆ ಕೇವಲ ‘ಐಐಎಂಬಿ’ ಎಂದು ಮಾತ್ರ ಹೆಸರಿಟ್ಟಿರುವುದು ನಮಗೆ ನೋವುಂಟುಮಾಡಿದೆ. ನಮಗೆ ‘ಐಐಎಂಬಿ’ ಹೆಸರಿನ ಬಗ್ಗೆ ಯಾವುದೇ ವಿರೋಧವಿಲ್ಲ. ಆದರೆ, ಶತಮಾನಗಳಿಂದ ಗುರುತಿಸಿಕೊಂಡಿರುವ ‘ಬಿಳೇಕಹಳ್ಳಿ’ ಎಂಬ ಹೆಸರೂ ಉಳಿಯಬೇಕು ಎನ್ನುವುದು ನಮ್ಮ ವಿನಮ್ರ ವಿನಂತಿ. ಮೆಟ್ರೋ ಯೋಜನೆಯ ಆರಂಭದ ದಿನಗಳಿಂದಲೇ ಈ ಬಗ್ಗೆ ನಾವು ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಹಾಗೂ ಮಾಜಿ ಸಂಸದ ದಿವಂಗತ ಅನಂತ್ ಕುಮಾರ್ ಅವರಿಗೂ ಮನವಿ ಸಲ್ಲಿಸಿದ್ದೆವು. ‘ಐಐಎಂಬಿ-ಬಿಳೇಕಹಳ್ಳಿ ಮೆಟ್ರೋ ನಿಲ್ದಾಣ’ ಎಂದು ಮರುನಾಮಕರಣ ಮಾಡಿ. ಅಭಿವೃದ್ಧಿಯ ಜೊತೆಗೆ ನಮ್ಮ ಗುರುತೂ ಉಳಿಯಲಿ. ಬಿಳೇಕಹಳ್ಳಿಯ ಐತಿಹಾಸಿಕ ಅಸ್ತಿತ್ವವೂ ಉಳಿಯಲಿ” ಎಂದು ಸ್ಥಳೀಯರು ಹೇಳಿದ್ದಾರೆ.

ವಿಸ್ತೃತ ಯೋಜನಾ ವರದಿಯಲ್ಲಿ (ಡಿಪಿಆರ್‌) ಪ್ರಸ್ತಾಪಿಸಿದಂತೆ ನಿಲ್ದಾಣಕ್ಕೆ ಹೆಸರಿಡಲಾಗಿದೆ. ತಿದ್ದುಪಡಿ ಮಾಡಲು ಅವಕಾಶವಿದೆ. ಅದಕ್ಕಾಗಿ ಸಮಿತಿ ರಚಿಸಲಾಗಿದೆ. ಈ ಸಮಿತಿ ಕೈಗೊಳ್ಳುವ ನಿರ್ಧಾರಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಬೇಕಾಗುತ್ತದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿರುವುದಾಗಿ ವರದಿಗಳು ತಿಳಿಸಿವೆ.

ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಸಿಎಂ ಪತ್ರ

ಮೆಟ್ರೋ ನಿಲ್ದಾಣದ ಮರುನಾಮಕರಣಕ್ಕೆ ಆಗ್ರಹಿಸಿ ಬಿಳೇಕಹಳ್ಳಿಯ ಸ್ಥಳೀಯ ಮುಖಂಡರು ಹಾಗೂ ನಿವಾಸಿಗಳ ನಿಯೋಗವೊಂದು ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು. ಇದಕ್ಕೆ ತಕ್ಷಣವೇ ಸ್ಪಂದಿಸಿರುವ ಸಿಎಂ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ಸಿ ಜಾಫರ್ ಅವರಿಗೆ ಅಧಿಕೃತ ಟಿಪ್ಪಣಿ ರವಾನಿಸಿದ್ದಾರೆ ಎಂದು ವರದಿಯಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೋವು ಕಳ್ಳಸಾಗಣೆ ಆರೋಪ: ಮುಸ್ಲಿಮರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸುತ್ತಿರುವ ಉತ್ತರ ಪ್ರದೇಶ ಪೊಲೀಸರು!

ಪೊಲೀಸರು ಬಿಡುಗಡೆ ಮಾಡುವ ವಿಡಿಯೊಗಳಲ್ಲಿ ಒಂದೇ ರೀತಿಯ ದೃಶ್ಯಗಳು ಮರುಕಳಿಸುತ್ತವೆ: ಕಾಲಿನ ಕೆಳಭಾಗಕ್ಕೆ ಗುಂಡೇಟು ತಗುಲಿದ ವ್ಯಕ್ತಿಯೊಬ್ಬರು ಕತ್ತಲಿನಲ್ಲಿ ಕುಂಟುತ್ತಾ ಸಾಗುತ್ತಿದ್ದರೆ, ಪೊಲೀಸರು ಅವರನ್ನು ಸುತ್ತುವರಿದು ಕರೆದೊಯ್ಯುತ್ತಾರೆ. ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ...

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ₹13.97 ಕೋಟಿ ಅನಧಿಕೃತ ವಹಿವಾಟು: ಎಫ್‌ಐಆರ್ ದಾಖಲು

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಜೊತೆಗಿನ ತನ್ನ ಸೆಟಲ್‌ಮೆಂಟ್ ಖಾತೆಯಿಂದ ರೂ 13.97 ಕೋಟಿ ಹಣವನ್ನು ಅನಧಿಕೃತವಾಗಿ ವರ್ಗಾಯಿಸಲಾಗಿದೆ (ಸೈಫನ್ ಮಾಡಲಾಗಿದೆ) ಎಂದು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಆರೋಪಿಸಿದೆ. ಹಿಂದುಸ್ತಾನ್ ಟೈಮ್ಸ್...

ಡಿ.ಕೆ ಶಿವಕುಮಾರ್, ಕೇರಳ ಸಿಎಂ ಸತೀಶನ್‌ಗೆ ಸ್ಟಿಂಗ್ ಆಪರೇಷನ್ ಬಲೆ? ಉನ್ನತ ಮಟ್ಟದ ತನಿಖೆಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ

ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಷನ್ ನಡೆಸಲು ಯತ್ನಿಸಲಾಗಿದೆ ಎಂಬ ಆರೋಪದ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಕಾಂಗ್ರೆಸ್ ಹೈಕಮಾಂಡ್...

ಬಾಲ್ಯದಲ್ಲಿ ಮಾಡಿದ ಕೃತ್ಯಗಳಿಗಾಗಿ ಸೌದಿಯಲ್ಲಿ ಮರಣದಂಡನೆ: ವಿಶ್ವಸಂಸ್ಥೆ ತಜ್ಞರ ತೀವ್ರ ಖಂಡನೆ, ಇಬ್ಬರ ಜೀವ ಉಳಿಸಲು ಆಗ್ರಹ

ಸೌದಿ ಅರೇಬಿಯಾದಲ್ಲಿ ಬಾಲ್ಯದಲ್ಲಿ ಮಾಡಿದ ಕೃತ್ಯಗಳಿಗಾಗಿ ಮರಣದಂಡನೆಗೆ ಗುರಿಯಾಗಿದ್ದ ಹಸನ್ ಝಾಕಿ ಅಲ್-ಫರಾಜ್ ಅವರನ್ನು ಗಲ್ಲಿಗೇರಿಸಿರುವುದಕ್ಕೆ ವಿಶ್ವಸಂಸ್ಥೆಯ ತಜ್ಞರು ತೀವ್ರ ಆಘಾತ ಮತ್ತು ಖಂಡನೆ ವ್ಯಕ್ತಪಡಿಸಿದ್ದಾರೆ. ಇದೇ ಪ್ರಕರಣದ ಮಾದರಿಯಲ್ಲಿ ಮರಣದಂಡನೆ ಎದುರಿಸುತ್ತಿರುವ...

ತಮಿಳುನಾಡು| ಜಾತಿ ತಾರತಮ್ಯಕ್ಕೆ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಶಿಕ್ಷಕನ ಬಂಧನ; ಸಹಪಾಠಿಗಳ ವಿರುದ್ಧ ಕೇಸ್‌ ದಾಖಲು

ಕೊಯಮತ್ತೂರಿನ ಸರ್ಕಾರಿ ಅನುದಾನಿತ ಶಾಲೆಯೊಂದರಲ್ಲಿ 11ನೇ ತರಗತಿಯಲ್ಲಿ ಓದುತ್ತಿದ್ದ 16 ವರ್ಷದ ದಲಿತ ವಿದ್ಯಾರ್ಥಿಯೊಬ್ಬ, ಸಹಪಾಠಿಗಳಿಂದ ಜಾತಿ ಆಧಾರಿತ ಕಿರುಕುಳಕ್ಕೆ ಒಳಗಾದ ನಂತರ, ಅಕ್ಟೋಬರ್ 21, ಬುಧವಾರದಂದು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ...

ತಮಿಳುನಾಡು ಮುಖ್ಯ ಚುನಾವಣಾಧಿಕಾರಿಯ ಸರ್ವಪಕ್ಷ ಸಭೆಯಿಂದ ಹೊರನಡೆದ ಟಿವಿಕೆ, ಡಿಎಂಕೆ ಸೇರಿದಂತೆ ಒಂಬತ್ತು ಪಕ್ಷಗಳು : ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ

ತಮಿಳುನಾಡಿನ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮತ್ತು ಪ್ರಮುಖ ವಿರೋಧ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸೇರಿದಂತೆ ಒಂಬತ್ತು ರಾಜಕೀಯ ಪಕ್ಷಗಳು, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ...

ಉತ್ತರ ಪ್ರದೇಶ: ದುರ್ಗಾ ಮೂರ್ತಿ ವಿಸರ್ಜನೆ ಮೆರವಣಿಗೆ ವೀಕ್ಷಿಸುತ್ತಿದ್ದ ದಲಿತರ ಮೇಲೆ ಹಲ್ಲೆ, ಜಾತಿ ನಿಂದನೆ; ಆರು ಜನರ ವಿರುದ್ಧ ಪ್ರಕರಣ

ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ದುರ್ಗಾ ಮೂರ್ತಿ ವಿಸರ್ಜನೆ ಮೆರವಣಿಗೆಯನ್ನು ವೀಕ್ಷಿಸುತ್ತಿದ್ದ ದಲಿತ ಸಮುದಾಯದ ಪುರುಷರ ಮೇಲೆ ಗುಂಪೊಂದು ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಘಟನೆಯಲ್ಲಿ ನಾಲ್ವರು...

‘ಮತ್ತೊಂದು ಗಾಲ್ವಾನ್ ಸಂಭವಿಸುತ್ತಿದೆಯೇ?’: ಅರುಣಾಚಲದಲ್ಲಿ ಚೀನಾ ಸೇನೆ ಜೊತೆಗಿನ ಮುಖಾಮುಖಿ ವರದಿ ಬೆನ್ನಲ್ಲೇ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಅರುಣಾಚಲ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವೆ ಮುಖಾಮುಖಿ ಮುಂದುವರಿದಿರುವ ವರದಿಗಳ ಕುರಿತು ಕೇಂದ್ರ ಸರ್ಕಾರ ಮೌನ ವಹಿಸಿದೆ ಎಂದು ಶುಕ್ರವಾರ (ಅ.23) ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಗಡಿ ಭದ್ರತೆ ಮತ್ತು...

ಎಸ್‌ಐಆರ್ ವಿರುದ್ಧ ಒಂದಾದ ದಲಿತ, ರೈತ, ಕಾರ್ಮಿಕ, ಮಹಿಳಾ ಸಂಘಟನೆಗಳು: ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ರಾಷ್ಟ್ರಧ್ವಜದೊಂದಿಗೆ ಜಾಥಾ

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯ; ಬೆಂಗಳೂರಿನಲ್ಲಿ ದಲಿತ, ರೈತ, ಕಾರ್ಮಿಕ, ವಿದ್ಯಾರ್ಥಿ, ಮಹಿಳಾ ಮತ್ತು ಅಲ್ಪಸಂಖ್ಯಾತ ಸಂಘಟನೆಗಳ ಒಗ್ಗಟ್ಟಿನ ಹೋರಾಟ ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ರದ್ದುಗೊಳಿಸಬೇಕು, ಮುಖ್ಯ ಚುನಾವಣಾ...

ಎಸ್‌ಐಆರ್ ವಿರುದ್ಧ ದೆಹಲಿಯಲ್ಲಿ ಭುಗಿಲೆದ್ದ ಪ್ರತಿಭಟನೆ: ಚುನಾವಣಾ ಆಯೋಗದತ್ತ ಮೆರವಣಿಗೆ, ಹಲವರನ್ನು ವಶಕ್ಕೆ ಪಡೆದ ಪೊಲೀಸರು 

ನವದೆಹಲಿ: ದೇಶದ ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಅಳಿಸಲಾಗುತ್ತಿದೆ ಎಂದು ಆರೋಪಿಸಿ, ದೆಹಲಿಯಲ್ಲಿ ಶುಕ್ರವಾರ ನಡೆದ ‘ಪೀಪಲ್ ಅಗೇನ್ಸ್ಟ್ ಎಸ್‌ಐಆರ್’ ಪ್ರತಿಭಟನಾ...