Homeಮುಖಪುಟಮಧ್ಯಪ್ರದೇಶ | ನರ್ಮದಾ ನದಿ ತೀರದಲ್ಲಿ 300ಕ್ಕೂ ಹೆಚ್ಚು ವೋಟರ್ ಐಡಿಗಳು ಪತ್ತೆ : 'ಮತಗಳ್ಳತನ'ಕ್ಕೆ...

ಮಧ್ಯಪ್ರದೇಶ | ನರ್ಮದಾ ನದಿ ತೀರದಲ್ಲಿ 300ಕ್ಕೂ ಹೆಚ್ಚು ವೋಟರ್ ಐಡಿಗಳು ಪತ್ತೆ : ‘ಮತಗಳ್ಳತನ’ಕ್ಕೆ ಸ್ಪಷ್ಟ ಪುರಾವೆ ಎಂದ ಕಾಂಗ್ರೆಸ್

- Advertisement -
- Advertisement -

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಮಂಡ್ಲೇಶ್ವರ್ ಘಾಟ್‌ನಲ್ಲಿರುವ ನರ್ಮದಾ ನದಿಯ ದಡದಲ್ಲಿ ಭಾನುವಾರ (ಅ.25) ಒಟ್ಟು 343 ಮತದಾರರ ಗುರುತಿನ ಚೀಟಿಗಳು (ವೋಟರ್ ಐಡಿಗಳು) ಪತ್ತೆಯಾಗಿದ್ದು, ಇವೆಲ್ಲವೂ ಇಂದೋರ್‌ನ ವಿಳಾಸಗಳನ್ನು ಹೊಂದಿವೆ ಎಂದು newindianexpress.com ವರದಿ ಮಾಡಿದೆ.

ಈ ಸಂಬಂಧ ಎಫ್‌ಐಆರ್ ದಾಖಲಿಸಬೇಕು ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ವಿರೋಧ ಪಕ್ಷವಾದ ಕಾಂಗ್ರೆಸ್ ಒತ್ತಾಯಿಸಿದೆ.

ಮಂಡ್ಲೇಶ್ವರ್ ಘಾಟ್‌ನಲ್ಲಿ ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದ ಸಂಸ್ಥೆಯೊಂದರ ಸದಸ್ಯರು ನೀರಿನಲ್ಲಿ ತೇಲುತ್ತಿದ್ದ ಮತ್ತು ನದಿಯ ದಡದಲ್ಲಿ ಬಿದ್ದಿದ್ದ ಗುರುತಿನ ಚೀಟಿಗಳನ್ನು ಗಮನಿಸಿದ್ದಾರೆ. ಸ್ಥಳೀಯ ನಿವಾಸಿಗಳು ಅವುಗಳನ್ನು ಸಂಗ್ರಹಿಸಿ, ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿ ಹೇಳಿದೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಗುರುತಿನ ಚೀಟಿಗಳು ಪತ್ತೆಯಾದ ಸ್ಥಳದಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿರುವ ಇಂದೋರ್ ಜಿಲ್ಲೆಯ ರಾವ್ ವಿಧಾನಸಭಾ ಕ್ಷೇತ್ರಕ್ಕೆ ಸೇರಿವೆ ಎಂದು ತಿಳಿದುಬಂದಿದೆ. ಇವುಗಳಲ್ಲಿ ಇಂದೋರ್‌ನ ತಿಲಕ್ ನಗರ ಮತ್ತು ಆಸ್ತಾ ಪ್ಯಾಲೇಸ್‌ನ ವಿಳಾಸಗಳಿವೆ. ಆದರೆ, ಈ ಚೀಟಿಗಳು ನದಿ ದಡಕ್ಕೆ ಹೇಗೆ ತಲುಪಿದವು, ಇವುಗಳನ್ನು ಅಲ್ಲಿ ಎಸೆದವರು ಯಾರು ಮತ್ತು ಇವು ಅಸಲಿ ಚೀಟಿಗಳೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ ಎಂದು newindianexpress.com ವರದಿ ಹೇಳಿದೆ.

ಖಾರ್ಗೋನ್‌ನಿಂದ ಬಂದ ಸುದ್ಧಿ ವರದಿಗಳ ಪ್ರಕಾರ, ಭಾನುವಾರ ನರ್ಮದಾ ನದಿ ಮತ್ತು ಅದರ ಸುತ್ತಮುತ್ತ ಪತ್ತೆಯಾದ 343 ಕಾರ್ಡ್‌ಗಳಲ್ಲಿ ಹೆಚ್ಚಿನವು ರಾವ್ ವಿಧಾನಸಭಾ ಕ್ಷೇತ್ರಕ್ಕೆ ಸೇರಿದವು ಎಂದು ತಿಳಿದುಬಂದಿದೆ. ಈ ಕ್ಷೇತ್ರದಿಂದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಅವರು 2013 ಮತ್ತು 2018 ರಲ್ಲಿ ಗೆಲುವು ಸಾಧಿಸಿದ್ದರು, ಆದರೆ 2023ರ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು ಎಂದು ವರದಿ ಉಲ್ಲೇಖಿಸಿದೆ.

ಖಾರ್ಗೋನ್‌ನ ಮಂಡ್ಲೇಶ್ವರ್ ಉಪವಿಭಾಗದ ಪೊಲೀಸ್ ಅಧಿಕಾರಿ (ಎಸ್‌ಡಿಒಪಿ) ಶ್ವೇತಾ ಶುಕ್ಲಾ ಅವರು ಕಂದಾಯ ಇಲಾಖೆಯ ತಂಡವು ಚೀಟಿಗಳನ್ನು ವಶಪಡಿಸಿಕೊಂಡಿದೆ ಮತ್ತು ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸ್ ಠಾಣೆಯ ಉಸ್ತುವಾರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ತಮಗೆ ಕಾಂಗ್ರೆಸ್ ಪಕ್ಷದಿಂದ ಈ ಕುರಿತು ದೂರು ಬಂದಿರುವುದನ್ನು ಅವರು ಖಚಿತಪಡಿಸಿದ್ದಾರೆ.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ರವಿ ನಾಯ್ಕ್, ಬ್ಲಾಕ್ ಅಧ್ಯಕ್ಷ ಹಿಮ್ಮತ್ ಸಿಂಗ್ ಪಟೇಲ್ ಮತ್ತು ಪಕ್ಷದ ಇತರ ಕಾರ್ಯಕರ್ತರೊಂದಿಗೆ ಸೇರಿ ಮಂಡ್ಲೇಶ್ವರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ವೇಳೆ ನಾಯ್ಕ್ ಅವರು ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದು, ಪ್ರಕರಣ ದಾಖಲಿಸದಿದ್ದರೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಚೀಟಿಗಳ ಮೇಲಿನ ದಿನಾಂಕಗಳನ್ನು ಬೆಟ್ಟು ಮಾಡಿದ ರವಿ ನಾಯ್ಕ್, ಡಿಜಿಟಲ್ ಮಾದರಿಯನ್ನು 2021ರಲ್ಲಿ ಪರಿಚಯಿಸಲಾಗಿದ್ದರೂ, ಈ ಚೀಟಿಗಳ ಮೇಲೆ 2016ರ ವರ್ಷವಿದೆ ಎಂದು ಹೇಳಿದ್ದಾರೆ. ಇಂತಹ ಚೀಟಿಗಳನ್ನು 2021ಕ್ಕಿಂತ ಮುಂಚಿತವಾಗಿ ಹೇಗೆ ವಿತರಿಸಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಇದು ‘ಮತಗಳ ಕಳ್ಳತನ’ಕ್ಕೆ ಸ್ಪಷ್ಟ ಪುರಾವೆಯಾಗಿದೆ ಎಂದು ಹೇಳಿದ್ದಾರೆ.

ಪೊಲೀಸರು ಮತ್ತು ಆಡಳಿತ ಒತ್ತಡದಲ್ಲಿದ್ದು, ಯಾವುದೇ ಕ್ರಮ ಕೈಗೊಳ್ಳುವ ಮೊದಲು ಪ್ರಾಥಮಿಕ ತನಿಖೆ ನಡೆಸಲು ಒತ್ತಾಯಿಸುತ್ತಿದ್ದಾರೆ ಎಂದು ರವಿ ನಾಯ್ಕ್ ಆರೋಪಿಸಿದ್ದಾರೆ. ಕೇವಲ ಎಪಿಕ್ ಸಂಖ್ಯೆಗಳನ್ನು ಸಿಸ್ಟಂನಲ್ಲಿ ದಾಖಲಿಸುವುದರಿಂದಲೇ ಆ ಕಾರ್ಡ್‌ಗಳು ಅಸಲಿಯೇ ಅಥವಾ ನಕಲಿಯೇ ಎಂಬುದು ಸ್ಪಷ್ಟವಾಗುವುದರಿಂದ ಪ್ರತ್ಯೇಕ ತನಿಖೆಯ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದ ಅವರು, ನದಿಯ ತಳದಲ್ಲಿ ಇನ್ನೂ ಹೆಚ್ಚಿನ ಕಾರ್ಡ್‌ಗಳು ಇರಬಹುದು ಎಂಬ ಶಂಕೆಯಿಂದ, ಅವುಗಳನ್ನು ಹುಡುಕಲು ಮುಳುಗುಗಾರರನ್ನು ನಿಯೋಜಿಸಬೇಕು ಎಂದೂ ಕಾಂಗ್ರೆಸ್ ಒತ್ತಾಯಿಸಿದ್ದಾರೆ.

ಇದೇ ರೀತಿಯ ಆವಿಷ್ಕಾರಗಳು ಬೇರೆಡೆಗಳಲ್ಲೂ ವರದಿಯಾಗಿವೆ. ಮಧ್ಯಪ್ರದೇಶದ ಛತ್ತರಪುರ ಜಿಲ್ಲೆಯ ರಾಜಾ ತಲಾಬ್ ಕೊಳವನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ, ಅಕ್ಟೋಬರ್ 2025ರಲ್ಲಿ ನೂರಾರು ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿದ್ದವು. ಮತ ಕಳ್ಳತನದ ತನ್ನ ಆರೋಪಗಳಿಗೆ ಬೆಂಬಲವಾಗಿ ವಿರೋಧ ಪಕ್ಷವು ಇದನ್ನು ಉಲ್ಲೇಖಿಸಿತ್ತು.



























 







ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬ್ರೆಜಿಲ್ ಚುನಾವಣೆ: ಟ್ರಂಪ್ ಬೆಂಬಲಿತ ಬಲಪಂಥೀಯ ಬೋಲ್ಸೊನಾರೊಗೆ ಸೋಲು; ನಾಲ್ಕನೇ ಬಾರಿಗೆ ಎಡಪಂಥೀಯ ಲುಲಾಗೆ ಗೆಲುವು 

ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡಪಂಥೀಯ ನಾಯಕ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರು ತೀವ್ರ ಬಲಪಂಥೀಯ ಎದುರಾಳಿ ಫ್ಲಾವಿಯೊ ಬೋಲ್ಸೊನಾರೊ ಅವರನ್ನು ಸೋಲಿಸಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಈ ಫಲಿತಾಂಶ ಬ್ರೆಜಿಲ್‌ನ...

ಭಾರತ-ಚೀನಾ ಗಡಿ ಸಮಸ್ಯೆಗಳ ಕುರಿತ 26 ರೆಡ್ಡಿಟ್ ಪೋಸ್ಟ್‌ಗಳಿಗೆ ನಿರ್ಬಂಧ: ಕೇಂದ್ರದ ರಹಸ್ಯ ಆದೇಶದ ಕಾನೂನುಬದ್ಧತೆಯನ್ನು ಪ್ರಶ್ನಿಸಿದ ಐಎಫ್‌ಎಫ್

ಭಾರತ-ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿದ ಚರ್ಚೆಗಳು, ಸೇನಾ ದೃಶ್ಯಗಳ ಪರಿಶೀಲನೆ, ಉಪಗ್ರಹ ಚಿತ್ರಗಳ ವರದಿ ಮತ್ತು ಅರುಣಾಚಲ ಪ್ರದೇಶದ ಮೇಲಿನ ಚೀನಾದ ಹಕ್ಕುಗಳ ಕುರಿತು ಪ್ರಕಟವಾಗಿದ್ದ 26 ರೆಡ್ಡಿಟ್ ಪೋಸ್ಟ್‌ಗಳನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ....

ಅಮಿತ್ ಶಾ ಕುರಿತ ಹೇಳಿಕೆಗಳಿಗೆ ಸಂಬಂಧಿಸಿದ ಮಾನನಷ್ಟ ಪ್ರಕರಣದಿಂದ ರಾಹುಲ್ ಗಾಂಧಿ ಖುಲಾಸೆ

ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿರುವ ಸಂಸದರು/ಶಾಸಕರ ವಿಶೇಷ ನ್ಯಾಯಾಲಯವು, ಹಿರಿಯ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ವಿರುದ್ಧ ದಾಖಲಾಗಿದ್ದ 2018ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ವಜಾಗೊಳಿಸುವ ಮೂಲಕ ಅವರಿಗೆ ದೊಡ್ಡ ನಿರಾಳತೆಯನ್ನು ನೀಡಿದೆ....

ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆಯಾಗದಂತೆ ತಡೆಯಲು ಎಐಎಂಐಎಂ ಶ್ರಮಿಸಲಿದೆ: ಅಸದುದ್ದೀನ್ ಓವೈಸಿ

ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆಯಾಗದಂತೆ ನೋಡಿಕೊಳ್ಳಲು ತಮ್ಮ ಪಕ್ಷವು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಿದೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸದುದ್ದೀನ್ ಓವೈಸಿ ಭಾನುವಾರ (ಅ.25) ಹೇಳಿದ್ದಾರೆ. ಶಮ್ಲಿ...

ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ: ಕಂಪ್ಯೂಟರ್ ಸಹಾಯಕರು ಮಾಡಿದ ನಮೂದುಗಳ ಮರುಪರಿಶೀಲನೆಗೆ ಯುಪಿ ಸಿಇಒ ಆದೇಶ

ಉತ್ತರ ಪ್ರದೇಶದ ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳ ಬೆನ್ನಲ್ಲೇ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ಕಂಪ್ಯೂಟರ್ ಸಹಾಯಕರು ಮಾಡಿದ ಎಲ್ಲ ನಮೂದುಗಳನ್ನು ಕಡ್ಡಾಯವಾಗಿ ಮರುಪರಿಶೀಲಿಸುವಂತೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ...

ಲೀಟರ್ ಫಿನೈಲ್‌ಗೆ 33,500 ರೂ, ಎಲ್‌ಇಡಿ ಬಲ್ಬ್‌ಗೆ 11,800 ರೂ!: ಬಿಜೆಪಿ ಆಡಳಿತದ ಮಧ್ಯಪ್ರದೇಶ ನಗರಾಡಳಿತದಲ್ಲಿ ಬೃಹತ್ ಭ್ರಷ್ಟಾಚಾರ ಬಯಲಿಗೆಳೆದ ಹಿರಿಯ ಐಎಎಸ್ ಅಧಿಕಾರಿ!

ಮಧ್ಯಪ್ರದೇಶದ ನಗರಾಡಳಿತ ಇಲಾಖೆಯಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಅಕ್ರಮ ಖರೀದಿ ಪ್ರಕರಣವು ಈಗ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದೆ. ವಿವಿಧ ನಗರ ಸ್ಥಳೀಯ ಸಂಸ್ಥೆಗಳು (ULBs) ಮತ್ತು ಪುರಸಭೆಗಳಲ್ಲಿ ಅತ್ಯಗತ್ಯ ವಸ್ತುಗಳನ್ನು ಮಾರುಕಟ್ಟೆ...

ತಮಿಳುನಾಡು| 42 ವರ್ಷಗಳ ನಂತರ ದಲಿತ ಕೇರಿಗೆ ಪ್ರವೇಶಿಸಿದ ದೇವಾಲಯದ ರಥ

42 ವರ್ಷಗಳ ಸುದೀರ್ಘ ಅಂತರದ ನಂತರ, ದೇವಾಲಯದ ರಥವೊಂದು ದಲಿತರು ವಾಸಿಸುವ ಪ್ರದೇಶಕ್ಕೆ ಪ್ರವೇಶಿಸಿರುವ ಘಟನೆ ತಮಿಳುನಾಡಿನ ಕಾಂಚೀಪುರ ಜಿಲ್ಲೆಯ ವಾಲಾಜಾಬಾದ್ ಸಮೀಪವಿರುವ ಪುತಾಗರಂ ಗ್ರಾಮದಲ್ಲಿ ನಡೆದಿದೆ. ಜಿಲ್ಲಾಡಳಿತದ ಸೂಚನೆಯ ಮೇರೆಗೆ ಭಾನುವಾರ...

ವಿದ್ಯಾರ್ಥಿ ಸಂಘದ ಚುನಾವಣೆ ಸೇರಿದಂತೆ ಬೇಡಿಕೆಗಳ ಈಡೇರಿಕೆಗೆ ಒಪ್ಪಿದ ಜಾಮಿಯಾ ಮಿಲ್ಲಿಯಾ ವಿವಿ : ಹೋರಾಟ ಕೈಬಿಡಲು ವಿದ್ಯಾರ್ಥಿಗಳ ನಕಾರ

ಕ್ಯಾಂಪಸ್‌ನಲ್ಲಿ ಚುನಾಯಿತ ಪ್ರತಿನಿಧಿಗಳ ಮಂಡಳಿಯನ್ನು ಮರುಸ್ಥಾಪಿಸಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ನಡೆಸಿದ ಸುದೀರ್ಘ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯವು (ಜೆಎಂಐ) ಸುಮಾರು 20 ವರ್ಷಗಳ ನಂತರ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ಪುನರಾರಂಭಿಸುವುದಾಗಿ...

ಸಾಹಿಲ್ ವಕೋಡ್ ಸಾವಿನ ಪ್ರಕರಣ: ಐಐಟಿ ಬಾಂಬೆ ನಿರ್ದೇಶಕರ ರಾಜೀನಾಮೆಗೆ 84 ಸಂಘಟನೆಗಳ ಆಗ್ರಹ

ಜಾತಿ ತಾರತಮ್ಯದ ಆರೋಪ ಎದುರಿಸುತ್ತಿರುವ ಡೀನ್‌ಗೆ ಸಂಸ್ಥೆಯ ಬೆಂಬಲ, ವಿದ್ಯಾರ್ಥಿಯ ವಿರುದ್ಧ ಮಾಧ್ಯಮಗಳಿಗೆ ಹೇಳಿಕೆ, ಸಿಸಿಟಿವಿ ದೃಶ್ಯಾವಳಿ ಸೋರಿಕೆ ಮತ್ತು ಪ್ರತಿಭಟನಾಕಾರರ ಮೇಲಿನ ಪೊಲೀಸ್ ದೌರ್ಜನ್ಯದ ಆರೋಪ ಮುಂಬೈ: ಐಐಟಿ ಬಾಂಬೆಯಲ್ಲಿ ವಿದ್ಯಾರ್ಥಿ ಸಾಹಿಲ್...

ಕರ್ನಾಟಕದಲ್ಲಿ ಐದು ವರ್ಷಗಳಲ್ಲಿ 629 ವರದಕ್ಷಿಣೆ ಕಿರುಕುಳದ ಸಾವು; ಶಿಕ್ಷೆಯಾಗಿದ್ದು ಕೇವಲ ಏಳು ಪ್ರಕರಣಗಳಲ್ಲಿ: ವರದಿ 

ವರದಕ್ಷಿಣೆ ಕಿರುಕುಳ ಮತ್ತು ಸಾವುಗಳ ಪ್ರಕರಣಗಳಲ್ಲಿ ಅತ್ಯಂತ ಕಡಿಮೆ ಶಿಕ್ಷೆಯ ಪ್ರಮಾಣ; ತನಿಖೆ, ಸಾಕ್ಷ್ಯ ಸಂಗ್ರಹ ಮತ್ತು ನ್ಯಾಯಾಂಗ ವಿಳಂಬದ ವಿರುದ್ಧ ತಜ್ಞರ ಕಳವಳ ಕರ್ನಾಟಕದಲ್ಲಿ ವರದಕ್ಷಿಣೆ ಕಿರುಕುಳ ಮತ್ತು ಸಾವುಗಳಂತಹ ಗಂಭೀರ ಅಪರಾಧಗಳ...