Homeಮುಖಪುಟಐಡಿಸಿ ಸರ್ವೇ: ಭಾರತಕ್ಕೆ ರಫ್ತಾದ 3.25 ಕೋಟಿ ಸ್ಮಾರ್ಟ್‌ಫೋನ್‌ಗಳಲ್ಲಿ 76% ಚೀನಾದವು!

ಐಡಿಸಿ ಸರ್ವೇ: ಭಾರತಕ್ಕೆ ರಫ್ತಾದ 3.25 ಕೋಟಿ ಸ್ಮಾರ್ಟ್‌ಫೋನ್‌ಗಳಲ್ಲಿ 76% ಚೀನಾದವು!

ಭಾರತವು ಬೇರೆ ಯಾವುದೇ ದೇಶಗಳಿಗಿಂತ ಹೆಚ್ಚು ಚೀನೀ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳಿಂದ ಕೂಡಿದೆ. ಇದರರ್ಥ ಭಾರತೀಯರು ಚೀನೀ ಬ್ರಾಂಡ್ ಖರೀದಿಸುವ ಸಾಧ್ಯತೆಗಳು ಹೆಚ್ಚು ಎಂದು ಸಮೀಕ್ಷೆ ತಿಳಿಸಿದೆ.

- Advertisement -
- Advertisement -

ಮಾರುಕಟ್ಟೆ ಸಂಶೋಧನಾ ಸಂಸ್ಥೆ ಐಡಿಸಿ ನಡೆಸಿದ ಸರ್ವೇ ಪ್ರಕಾರ, ಮಾರ್ಚ್ 2020ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಭಾರತಕ್ಕೆ ರವಾನೆಯಾದ 3.25 ಕೋಟಿ ಸ್ಮಾರ್ಟ್‌ಫೋನ್‌ಗಳಲ್ಲಿ ಸುಮಾರು 76 ಪ್ರತಿಶತವು ಚೀನಾದ ಬ್ರಾಂಡ್‌ಗಳಾಗಿವೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.

ಅದೇ ಐಡಿಸಿ ದತ್ತಾಂಶವು ಭಾರತದ ಐದು ಉನ್ನತ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳಲ್ಲಿ ನಾಲ್ಕು ಚೀನಾದವು ಎಂದು ತೋರಿಸಿದೆ.

ಚೀನಾದ ಬ್ರಾಂಡ್ ಶಿಯೋಮಿ ಭಾರತದಲ್ಲಿ ಅತಿ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿದ್ದು, ನಂತರದ ಸ್ಥಾನದಲ್ಲಿ ವಿವೊ ಇದೆ. ಮೂರನೆಯ ಸ್ಥಾನದಲ್ಲಿ ಚೀನಾದ್ದು ಅಲ್ಲದ ಸ್ಯಾಮ್‌ಸಂಗ್ ಇದ್ದರೆ ನಂತರದ ಸ್ಥಾನದಲ್ಲಿ ಮತ್ತೆ ಚೀನಾದ ರಿಯಲ್‌ಮೆ ಮತ್ತು ಒಪ್ಪೊ ಇವೆ.

ಭಾರತದ 10 ಜನರಲ್ಲಿ 4 ಭಾರತೀಯರು ಮಾತ್ರ ಚೀನೀ ಫೋನ್ ಖರೀದಿಸುವುದಿಲ್ಲ ಎಂದು ಗಾಲ್ವಾನ್ ಘರ್ಷಣೆಗೆ ಮುನ್ನ ನಡೆಸಿದ ಕೌಂಟರ್‌ಪಾಯಿಂಟ್ ರಿಸರ್ಚ್‌ ಸಮೀಕ್ಷೆಯಲ್ಲಿ ಕಂಡುಬಂದಿದೆ.

ಒಂದು ತಿಂಗಳ ಹಿಂದೆ ಲಡಾಖ್ ಗಡಿಯಲ್ಲಿ ಉದ್ವಿಗ್ನತೆ ಪ್ರಾರಂಭವಾದಾಗಿನಿಂದ ಚೀನಾ ವಿರೋಧಿ ಭಾವನೆ ಬೆಳೆಯುತ್ತಿರುವುದರಿಂದ, ಭಾರತದಲ್ಲಿ ‘ಮೇಡ್ ಇನ್ ಚೀನಾ’ ಉತ್ಪನ್ನಗಳನ್ನು ಬಹಿಷ್ಕರಿಸುವ ಕರೆ ಬಂದಿದೆ. ಆದಾಗ್ಯೂ, ಮಾರುಕಟ್ಟೆ ಸಂಶೋಧನಾ ಸಂಸ್ಥೆಯ ಇತ್ತೀಚಿನ ಸಮೀಕ್ಷೆಯ ಪ್ರಕಾರ ಬಹಳಷ್ಟು ಜನರು ತಾವು ಕೊಳ್ಳುವ ಸಾಮಾಗ್ರಿಗಳು ಯಾವ ದೇಶದ್ದು ಎಂಬುದಕ್ಕೆ ಗಮನ ನೀಡುವುದಿಲ್ಲ ಎಂದು ಹೇಳಲಾಗಿದೆ.

ಭಾರತದಲ್ಲಿ ಪ್ರತಿಕ್ರಿಯಿಸಿದ 10 ಜನರಲ್ಲಿ ನಾಲ್ವರು ಚೀನೀ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸದಿರಲು ಬಲವಾದ ಅಭಿಪ್ರಾಯಗಳನ್ನು ಹೊಂದಿದ್ದರೆ, ಹೆಚ್ಚಿನವರು ತಮ್ಮ ನಿರ್ಧಾರದ ಬಗ್ಗೆ ಖಚಿತವಾಗಿರಲಿಲ್ಲ ಎಂದು ಕೌಂಟರ್ಪಾಯಿಂಟ್ ರಿಸರ್ಚ್‌ನ ಹಿರಿಯ ವಿಶ್ಲೇಷಕ ಪಾವೆಲ್ ನಯಾ ತಿಳಿಸಿದ್ದಾರೆ.

ಭಾರತವು ಬೇರೆ ಯಾವುದೇ ದೇಶಗಳಿಗಿಂತ ಹೆಚ್ಚು ಚೀನೀ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳಿಂದ ಕೂಡಿದೆ. ಇದರರ್ಥ ಭಾರತೀಯರು ಚೀನೀ ಬ್ರಾಂಡ್ ಖರೀದಿಸುವ ಸಾಧ್ಯತೆಗಳು ಹೆಚ್ಚು ಎಂದು ಸರ್ವೇ ತಿಳಿಸಿದೆ.

ಶಿಯೋಮಿ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಮಾರಾಟವಾಗುತ್ತಿದ್ದರೆ, ನಂತರದ ಸ್ಥಾನದಲ್ಲಿ ಸ್ಯಾಮ್‌ಸಂಗ್, ಒನ್‌ಪ್ಲಸ್ ಮತ್ತು ಆಪಲ್ ಫೋನ್‌ಗಳಿವೆ ಎಂದು ಯಾಂತ್ರಾ ಸಹ-ಸಂಸ್ಥಾಪಕ ಮತ್ತು ಸಿಇಒ ಜಯಂತ್ ಜಾ ತಿಳಿಸಿದ್ದಾರೆ.

ಗಾಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಮುಖಾಮುಖಿಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ ಕಳೆದ ಸೋಮವಾರದ ಮೊದಲು, ಮೇ ಮಧ್ಯ ಮತ್ತು ಜೂನ್ ಮೊದಲ ವಾರದ ನಡುವೆ ಈ ಸಮೀಕ್ಷೆಯನ್ನು ನಡೆಸಲಾಯಿತು ಎನ್ನಲಾಗಿದೆ.

ಕಂಪನಿಯು ತನ್ನ ಹೇಳಿಕೆಯಲ್ಲಿ “ಭಾರತ-ಚೀನಾ ಗಡಿಯಲ್ಲಿನ ಇತ್ತೀಚಿನ ಸಂಘರ್ಷವು ಈ [ಗ್ರಾಹಕ] ನಡವಳಿಕೆಯನ್ನು ರೂಪಿಸುವಲ್ಲಿ ಆಳವಾದ ಪಾತ್ರವನ್ನು ವಹಿಸುತ್ತದೆ ಎಂದು ನಾವು ನಂಬುತ್ತೇವೆ” ಎಂದು ಹೇಳಿದೆ.

“ಫಲಿತಾಂಶವು ಸಮೀಕ್ಷೆಯ ಸಮಯದಲ್ಲಿ ಪ್ರತಿಕ್ರಿಯಿಸಿದವರ ಅಭಿಪ್ರಾಯವನ್ನು ತೋರಿಸುತ್ತಿದೆ. ಆದರೆ ಬಜೆಟ್, ಬೆಲೆ, ಪರ್ಯಾಯ ಉತ್ಪನ್ನಗಳ ಲಭ್ಯತೆ ಮತ್ತು ಇತರ ಸಾಮಾಜಿಕ ಮತ್ತು ಆರ್ಥಿಕ ಡೈನಾಮಿಕ್ಸ್ ಸೇರಿದಂತೆ ಹಲವು ಅಂಶಗಳಿಂದ ನಿಜವಾದ ಖರೀದಿ ನಿರ್ಧಾರವನ್ನು ನಿರ್ಧರಿಸಲಾಗುತ್ತದೆ” ಎಂದು ಸಂಸ್ಥೆ ತಿಳಿಸಿದೆ.


ಇದನ್ನೂ ಓದಿ: ಇದ್ದಕ್ಕಿದ್ದಂತೆ ಸಾಧ್ಯವಿಲ್ಲ: ’ಬಾಯ್ಕಾಟ್ ಚೀನಾ’ ಅಭಿಯಾನಕ್ಕೆ ಕ್ರೀಡಾ ಕ್ಷೇತ್ರದ ವಿರೋಧವೇಕೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : 2014ಕ್ಕಿಂತ ಮೊದಲು ಭಾರತದಲ್ಲಿ ಕೇವಲ 300 ಸ್ಟಾರ್ಟ್ ಅಪ್‌ಗಳಿದ್ದವು ಎಂಬುವುದು...

0
"ನವ ಭಾರತ ವೇಗವಾಗಿ ಮುನ್ನೆಡೆಯುತ್ತಿದೆ. 2014ರಲ್ಲಿ ಭಾರತದಲ್ಲಿ ಇದ್ದದ್ದು ಕೇವಲ 300 ಸ್ಟಾರ್ಟ್‌ ಅಪ್‌ಗಳು, ಈಗ 1 ಲಕ್ಷಕ್ಕೂ ಅಧಿಕ ಸ್ಟಾರ್ಟ್‌ ಅಪ್‌ಗಳು ಭಾರತದಲ್ಲಿವೆ. ಅದಕ್ಕೆ ದೇಶದಲ್ಲಿ ಮೋದಿಜಿ ಇದ್ದರೆ ಎಲ್ಲವೂ ಸಾಧ್ಯ"...