Homeಮುಖಪುಟ40 ಅಡಿ ಆಳದ ಕೊಳವೆಬಾವಿಗೆ ಬಿದ್ದ ಮಗು; ದೆಹಲಿ ನೀರು ಶುದ್ಧೀಕರಣ ಘಟಕದಲ್ಲಿ ಅವಘಡ

40 ಅಡಿ ಆಳದ ಕೊಳವೆಬಾವಿಗೆ ಬಿದ್ದ ಮಗು; ದೆಹಲಿ ನೀರು ಶುದ್ಧೀಕರಣ ಘಟಕದಲ್ಲಿ ಅವಘಡ

- Advertisement -
- Advertisement -

ದೆಹಲಿ ಜಲ ಮಂಡಳಿಯ ನೀರು ಶುದ್ಧೀಕರಣ ಘಟಕದಲ್ಲಿ ಭಾನುವಾರ ನಸುಕಿನಲ್ಲಿ ಮಗುವೊಂದು 40 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದು. ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ದೆಹಲಿ ಅಗ್ನಿಶಾಮಕ ಸೇವೆಗಳ ನೇತೃತ್ವದ ರಕ್ಷಣಾ ತಂಡಗಳು ಕಾರ್ಯಚರಣೆ ನಡೆಸುತ್ತಿದ್ದು, ವ್ಯಕ್ತಿಯ ಇರುವಿಕೆಯ ಗುರುತು ಇನ್ನೂ ಪತ್ತೆಯಾಗಿಲ್ಲ ಎನ್ನಲಾಗುತ್ತಿದೆ.

ಭಾನುವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ದೆಹಲಿ ಅಗ್ನಿಶಾಮಕ ದಳಕ್ಕೆ ಪಶ್ಚಿಮ ದೆಹಲಿಯ ಕೇಶೋಪುರ್ ಮಂಡಿ ಪ್ರದೇಶದಲ್ಲಿ ನಡೆದ ಅವಘಡದ ಬಗ್ಗೆ ಮಾಹಿತಿ ಲಭಿಸಿದೆ. ‘ಕೂಡಲೇ ಐದು ಅಗ್ನಿಶಾಮಕ ಪಡೆಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು…’ ಎಂದು ಡಿಎಫ್‌ಎಸ್ ಮುಖ್ಯಸ್ಥ ಅತುಲ್ ಗಾರ್ಗ್ ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಮಾತನಾಡಿದ್ದಾರೆ. ಎನ್‌ಡಿಆರ್‌ಎಫ್ ತಂಡವು ಮಗು ಬಿದ್ದ ಬೋರ್‌ವೆಲ್‌ಗೆ ಸಮಾನಾಂತರವಾಗಿ ಮತ್ತೊಂದು ಬೋರ್‌ವೆಲ್ ಅಗೆಯಲು ಪ್ರಾರಂಭಿಸುತ್ತೇವೆ ಎಂದು ಅವರು ಹೇಳಿದರು.

ಘಟನೆಯ ಕುರಿತು ಮಾತನಾಡಿದ ಉಪ ಪೊಲೀಸ್ ಆಯುಕ್ತ (ಪಶ್ಚಿಮ) ವೀರ್ ಪ್ರತಾಫ್ ಸಿಂಗ್, ‘ವಿಕಸ್ಪುರಿ ಪೊಲೀಸ್ ಠಾಣೆಗೆ ರಾತ್ರಿಯಲ್ಲಿ ಪಿಸಿಆರ್ ಕರೆ ಬಂದಿದ್ದು, ಕೆಶೋಪುರ (ದೆಹಲಿ) ಜಲ ಮಂಡಳಿ ಕಚೇರಿಯಲ್ಲಿ ವ್ಯಕ್ತಿಯೊಬ್ಬರು ಬೋರ್‌ವೆಲ್‌ಗೆ ಬಿದ್ದಿದ್ದಾರೆ ಎಂದು ತಿಳಿಸಲಾಗಿದೆ. ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡಗಳು ಸ್ಥಳಕ್ಕೆ ತಲುಪಿದವು. ಎನ್‌ಡಿಆರ್‌ಎಫ್ ತಂಡವನ್ನು ಕೂಡ ಸ್ಥಳಕ್ಕೆ ಕರೆಸಲಾಗಿದೆ. ಮಗುವನ್ನು ಸುರಕ್ಷಿತವಾಗಿ ಹೊರತರಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ;

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಿಕೋಬಾರ್ ದ್ವೀಪಗಳಿಗೆ ಆಗಮಿಸಿದ ನೈರುತ್ಯ ಮಾನ್ಸೂನ್; ಮೇ 31ರ ವೇಳೆಗೆ ಕೇರಳ ತಲುಪುವ ನಿರೀಕ್ಷೆ

0
ಭಾರತದ ಕೃಷಿ ಆಧಾರಿತ ಆರ್ಥಿಕತೆಯ ಜೀವನಾಡಿಯಾಗಿರುವ ನೈಋತ್ಯ ಮಾನ್ಸೂನ್ ಭಾನುವಾರ ದೇಶದ ದಕ್ಷಿಣದ ಪ್ರದೇಶವಾದ ನಿಕೋಬಾರ್ ದ್ವೀಪಗಳ ಮೇಲೆ ತನ್ನ ಆರಂಭವನ್ನು ಮಾಡಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. "ನೈಋತ್ಯ ಮಾನ್ಸೂನ್...