Homeರಾಷ್ಟ್ರೀಯನದಿ ನೀರು ಕುಡಿದ ಕೆಲವೇ ದಿನಗಳಲ್ಲಿ ಹೊಟ್ಟೆ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ಪಂಜಾಬ್ ಸಿಎಂ

ನದಿ ನೀರು ಕುಡಿದ ಕೆಲವೇ ದಿನಗಳಲ್ಲಿ ಹೊಟ್ಟೆ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ಪಂಜಾಬ್ ಸಿಎಂ

- Advertisement -
- Advertisement -

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಹೊಟ್ಟೆಯ ಸೋಂಕಿನಿಂದ ದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ನಡುವೆ ಅವರು ಕುಲುಷಿತ ನೀರನ್ನು ಕುಡಿದ್ದರಿಂದ ಅನಾರೋಗ್ಯಕ್ಕೆ ಈಡಾಗಿದ್ದಾರೆ ಎಂದು ಆರೋಪಗಳನ್ನು ಮಾಡಲಾಗಿದ್ದು, ಅವರು ನದಿಯೊಂದರಿಂದ ನೀರು ಕುಡಿಯುತ್ತಿರುವ ವಿಡಿಯೊ ವೈರಲ್ ಆಗಿದೆ.

ನದಿಯ ನೀರನ್ನು ಲೋಟವೊಂದರಲ್ಲಿ ಎತ್ತಿ ಕುಡಿಯುಯತ್ತಿರುವ ವೀಡಿಯೊವನ್ನು ಆಮ್ ಆದ್ಮಿ ಪಾರ್ಟಿ ಪಂಜಾಬ್ ಟ್ವೀಟ್ ಮಾಡಿದೆ. ಅದರಲ್ಲಿ ಬೆಂಬಲಿಗರ ಜಯಘೋಷಗಳ ನಡುವೆ ಮುಖ್ಯಮಂತ್ರಿ ಮಾನ್‌ ಅವರು ನದಿಯಿಂದ ಒಂದು ಲೋಟ ನೀರನ್ನು ಕುಡಿಯುತ್ತಿರುವುದು ಕಾಣಬಹುದಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಆದರೆ ಅವರ ಪಕ್ಷದ ನಾಯಕರು, ಮುಖ್ಯಮಂತ್ರಿ ನದಿಯ ನೀರು ಕುಡಿಯುತ್ತಿರುವುದಕ್ಕೂ, ಅವರ ಆರೋಗ್ಯದ ತೊಂದರೆಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಅವರು ಆಸ್ಪತ್ರೆಗೆ ರೆಗ್ಯುಲರ್‌‌ ತಪಾಸಣೆಗೆಂದು ಹೋಗಿದ್ದರು ಎಂದು ಅವರು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಪಂಜಾಬ್‌: ಉದ್ಯಾನದಲ್ಲಿದ್ದ ಗಾಂಧಿ ಪ್ರತಿಮೆ ಧ್ವಂಸ

ಎಎಪಿಯ ಪಂಜಾಬ್ ಘಟಕವು ಮಾಡಿದ ವೀಡಿಯೊದಲ್ಲಿ,“ಗುರು ನಾನಕ್ ಸಾಹಿಬ್ ಅವರು ಪಾದ ಇಟ್ಟ ನಾಡು ಸುಲ್ತಾನಪುರ ಲೋಧಿಯಲ್ಲಿ ಸಿಎಂ ಭಗವಂತಮಾನ್‌ ಪವಿತ್ರ ನೀರು ಕುಡಿಯುತ್ತಿದ್ದಾರೆ. ರಾಜ್ಯಸಭಾ ಸದಸ್ಯ ಸಂತ ಸಿಚೆವಾಲ್ ಅವರು ಪವಿತ್ರ ಸ್ಥಳವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಕೈಗೊಂಡಿದ್ದಾರೆ” ಎಂದು ಬರೆದಿದೆ.

ವಿವಾದಿತ ವಿಡಿಯೋ ಕಳೆದ ಭಾನುವಾರದ್ದಾಗಿದ್ದು, ಮುಖ್ಯಮಂತ್ರಿ ಮಾನ್ ಅವರು ಖ್ಯಾತ ಪರಿಸರವಾದಿ, ರಾಜ್ಯಸಭಾ ಸಂಸದ ಬಾಬಾ ಬಲ್ಬೀರ್ ಸಿಂಗ್ ಸೀಚೆವಾಲ್ ಅವರು ಆಯೋಜಿಸಿದ್ದ ಕಾಳಿಬೀನ್ ನದಿಯ ಸ್ವಚ್ಛತೆಯ 22 ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಬಿಜೆಪಿ ಸೇರಲಿರುವ ಪಂಜಾಬ್‌ ಮಾಜಿ ಸಿಎಂ ಅಮರಿಂದರ್‌ ಸಿಂಗ್‌!

ಪಂಜಾಬ್‌ನ ಸುಲ್ತಾನ್‌ಪುರ ಲೋಧಿಯಲ್ಲಿರುವ ಈ ನದಿಯು ಸಿಖ್ಖರಿಗೆ ಪವಿತ್ರವಾಗಿದ್ದು, ಅಲ್ಲಿ ಮುಖ್ಯಮಂತ್ರಿ ನದಿಯ ನೀರನ್ನು ಕುಡಿದಿದ್ದರು. ನದಿಗೆ ಪಟ್ಟಣಗಳು ​​ಮತ್ತು ಹಳ್ಳಿಗಳ ಚರಂಡಿಯ ತ್ಯಾಜ್ಯಗಳು ಸೇರುತ್ತದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಈ ನೀರನ್ನು ಪಂಜಾಬ್ ಮುಖ್ಯಮಂತ್ರಿ ಯಾವುದೇ ಹಿಂಜರಿಕೆಯಿಲ್ಲದೆ ಕುಡಿದಿದ್ದರು.

ಇದಾಗಿ ಕೆಲವು ದಿನಗಳ ನಂತರ ಮುಖ್ಯಮಂತ್ರಿ ಮಾನ್ ಅವರು ದೆಹಲಿಯ ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ನದಿಗಳು ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸಲು ರಾಜ್ಯಾದ್ಯಂತ ಅಭಿಯಾನವನ್ನು ಪ್ರಾರಂಭಿಸುವುದಾಗಿ ಪಂಜಾಬ್ ಘೋಷಿಸಿದೆ.

ಕಾಳಿಬೀನ್ ನದಿಯನ್ನು ಸ್ವಚ್ಛಗೊಳಿಸಲು ಸಂತ ಬಾಬಾ ಬಲ್ಬೀರ್ ಸಿಂಗ್ ಸೀಚೆವಾಲ್ ಮಾಡಿದ ಪ್ರಯತ್ನಗಳನ್ನು ಶ್ಲಾಘಿಸಿದ ಮುಖ್ಯಮಂತ್ರಿ, ಸುಮಾರು 22 ವರ್ಷಗಳ ಹಿಂದೆ ತೆಗೆದುಕೊಂಡ ಐತಿಹಾಸಿಕ ಉಪಕ್ರಮವು ಗುರುನಾನಕ್ ದೇವ್ ಅವರು ಸ್ನಾನ ಮಾಡುತ್ತಿದ್ದ ಪವಿತ್ರ ನದಿಯನ್ನು ಸ್ವಚ್ಛಗೊಳಿಸುವಲ್ಲಿ ಶೀಘ್ರವಾಗಿ ಕಾರ್ಯನಿರ್ವಹಿಸಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಪಂಜಾಬ್ ಉಪಚುನಾವಣೆ: ಸಿಎಂ ಭಗವಂತ್ ಮಾನ್ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಕಳೆದುಕೊಂಡ ಆಪ್

ಮಹಾನ್ ಗುರುಗಳ ಪರಂಪರೆಯನ್ನು ಮುಂದುವರಿಸಲು ಇಂತಹ ಪ್ರಯತ್ನಗಳನ್ನು ಸಾಮೂಹಿಕ ಮಟ್ಟದಲ್ಲಿ ಪುನರಾವರ್ತಿಸುವ ಅಗತ್ಯವಿದೆ ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read