Homeಮುಖಪುಟಮಗನ ಶಿಕ್ಷಣಕ್ಕೆ ಹಣ ಹೊಂದಿಸಲು ತಾಯಿಯ ಪ್ರಾಣ ತ್ಯಾಗ: ಬಸ್‌ನ ಮುಂದೆ ಹಾರಿ ಆತ್ಮಹತ್ಯೆ!

ಮಗನ ಶಿಕ್ಷಣಕ್ಕೆ ಹಣ ಹೊಂದಿಸಲು ತಾಯಿಯ ಪ್ರಾಣ ತ್ಯಾಗ: ಬಸ್‌ನ ಮುಂದೆ ಹಾರಿ ಆತ್ಮಹತ್ಯೆ!

- Advertisement -
- Advertisement -

ಮಗನ ಶಿಕ್ಷಣಕ್ಕೆ ಹಣ ಹೊಂದಿಸಲು ಸಾಧ್ಯವಾಗದೆ ‘ಸಫಾಯಿ ಕರ್ಮಚಾರಿ’ (ಸ್ವಚ್ಛತಾ ಸಿಬ್ಬಂದಿ) ಮಹಿಳೆಯೊಬ್ಬರು ಬಸ್ಸಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ವರದಿಗಳ ಪ್ರಕಾರ, ಸೇಲಂ ಜಿಲ್ಲೆಯ ಕಲೆಕ್ಟರ್ ಕಚೇರಿಯಲ್ಲಿ ‘ಸಫಾಯಿ ಕರ್ಮಚಾರಿ’ (ಸ್ವಚ್ಛತಾ ಸಿಬ್ಬಂದಿ) ಆಗಿ ಕೆಲಸ ಮಾಡುವ ಮಹಿಳೆಯೊಬ್ಬರು ಉದ್ದೇಶಪೂರ್ವಕವಾಗಿ ಬಸ್‌ನ ಮುಂದೆ ಜಿಗಿದಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಈ ಘಟನೆಯ ಹಿಂದೆ ಒಂದು ಕಥೆ ಇದೆ. ಅಪಘಾತದಲ್ಲಿ ಮೃತಪಟ್ಟರೆ ಕುಟುಂಬಕ್ಕೆ ಸರ್ಕಾರ 45,000 ರೂ.ಗಳನ್ನು ನೀಡುತ್ತದೆ ಆ ಮಹಿಳೆಗೆ ಯಾರೋ ಒಬ್ಬರು ಎಂದು ದಾರಿ ತಪ್ಪಿಸಿದ್ದಾರೆ. ಅದನ್ನೇ ನಂಬಿದ ಆ ಮುಗ್ಧ ಮಹಿಳೆ, ಮಗನ ಕಾಲೇಜು ಶುಲ್ಕ ಪಾವತಿಸಲು ಹಣದ ಅಗತ್ಯವಿದೆ ಎಂದು ತನ್ನ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇದೀಗ ಈ ಹೃದಯ ವಿದ್ರಾವಕ ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಅಗಿದೆ. ಈ ವೀಡಿಯೊವನ್ನು ಟ್ವೀಟ್ ಮಾಡಿದ ಜನರು ಮತ್ತು ಟ್ವಿಟರ್ ಬಳಕೆದಾರರು ಘಟನೆಯ ಬಗ್ಗೆ ತಮ್ಮ ದುಃಖ ಮತ್ತು ಕೋಪವನ್ನು ವ್ಯಕ್ತಪಡಿಸಿದ್ದಾರೆ. ಮಗನ ಫೀಸ್ ಕಟ್ಟಿದ್ದಕ್ಕೆ ತಾಯಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಸನ್ನಿವೇಶವನ್ನು ಹಲವರು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

”ಮಗನ ಶಿಕ್ಷಣದ ವೆಚ್ಚ ಭರಿಸಲು ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೇಲಂನ ಕಲೆಕ್ಟರ್ ಕಛೇರಿಯಲ್ಲಿ ‘ಸಫಾಯಿ ಕರ್ಮಚಾರಿ’ಯಾಗಿ ಕೆಲಸ ಮಾಡುತ್ತಿರುವ ತಾಯಿ ಯಾರೋ ತಪ್ಪುದಾರಿಗೆಳೆದಿದ್ದರಿಂದ, ಮಗನ ಕಾಲೇಜು ಶುಲ್ಕ 45,000 ಪಾವತಿಸಲು ಸರ್ಕಾರದಿಂದ ಹಣಕಾಸಿನ ನೆರವು ಪಡೆಯಲು ಬಸ್‌ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗನ ಕಾಲೇಜ್ ಫೀಸ್ ಕಟ್ಟಲು ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು, ಆದರೂ ನಾವು ‘ಅಭಿವೃದ್ಧಿ’ಯ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದೇವೆಯೇ?!” ಎಂದು ಟ್ವೀಟ್ ಮಾಡಿದ್ದಾರೆ.

”ಭಾರತೀಯ #ಶಿಕ್ಷಣದ ಕಳಪೆ ಸ್ಥಿತಿಯನ್ನು ಎತ್ತಿ ತೋರಿಸುವ ಘಟನೆ ಸೇಲಂನಲ್ಲಿ ನಡೆದಿದೆ. ಸಫಾಯಿ ಕರ್ಮಚಾರಿ ಮಹಿಳೆ ಸರ್ಕಾರದ ನೆರವು ಪಡೆಯಲು ಬಸ್ಸಿನ ಮುಂದೆ ಜಿಗಿದಿದ್ದಾಳೆ. ಆ ಹಣವನ್ನು ಮಗನ ಕಾಲೇಜು ಶುಲ್ಕ 45,000ರೂ. ಪಾವತಿಸಲು ಅವಳು ಬಯಸಿದ್ದಳು….” ಎಂದು ಟ್ವೀಟ್ ಮಾಡಿದ್ದಾರೆ.

”ಇದೇ ರೀತಿಯ ಘಟನೆ ಕಳೆದ ತಿಂಗಳು ಒಡಿಶಾದಲ್ಲಿ ನಡೆದಿತ್ತು. ವಿಶ್ವಗುರುವಿನ ಯುಗದಲ್ಲಿ ಶಿಕ್ಷಣಕ್ಕಾಗಿ ಎಂಥ ದುರಂತಕ್ಕೆ ನಾವೆಲ್ಲ ಸಾಕ್ಷಿಯಾಗಬೇಕಿದೆ, ಬಹಳ ದುಃಖವಾಗುತ್ತಿದೆ” ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.

”ನಮ್ಮ ದೇಶದಲ್ಲಿ ಇನ್ನೂ ಬಡತನವಿದೆ ಎಂದರೆ ಇದು ನಾಚಿಕೆಯಿಂದ ತಲೆತಗ್ಗಿಸುವಂಥ ವಿಷಯ. ರಾಜಕಾರಣಿಗಳು ಶ್ರೀಮಂತ ಕೈಗಾರಿಕೋದ್ಯಮಿಗಳ ಸಾಲವನ್ನು ಮನ್ನಾ ಮಾಡುವಲ್ಲಿ ಮುಳುಗಿದ್ದಾರೆ. ಹಾಗಾಗಿ ಬಡವರು ಬಡವರಾಗಿಯೇ ಉಳಿದು ಅದರ ಭಾರ ತಾಳಲಾರದೆ ಇಂಥ ನಿರ್ಧಾರಕ್ಕೆ ಬರಬೇಕಾಗುತ್ತಿರುವುದು ವಿಷಾದನೀಯ” ಎಂದು ಮತ್ತೊಬ್ಬರು ಹೇಳಿದ್ದಾರೆ.

ಪ್ರಕರಣದಲ್ಲಿ ಪೊಲೀಸ್ ತನಿಖೆ ನಡೆಯುತ್ತಿದ್ದು, ಪೊಲೀಸರು ಎಲ್ಲಾ ಕೋನಗಳಿಂದ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಪೊಲೀಸರ ತನಿಖೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ ಎಂದು ವರದಿಗಳು ತಿಳಿಸಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...