Homeಮುಖಪುಟಮೊರ್ಬಿ ಸೇತುವೆ ದುರಂತಕ್ಕೆ 1ವರ್ಷ: ಸಂತ್ರಸ್ತರ ಕುಟುಂಬಸ್ಥರಿಂದ ಪ್ರತಿಭಟನೆ

ಮೊರ್ಬಿ ಸೇತುವೆ ದುರಂತಕ್ಕೆ 1ವರ್ಷ: ಸಂತ್ರಸ್ತರ ಕುಟುಂಬಸ್ಥರಿಂದ ಪ್ರತಿಭಟನೆ

- Advertisement -
- Advertisement -

ಕಳೆದ ವರ್ಷ ಗುಜರಾತ್‌ನಲ್ಲಿ ಮೊರ್ಬಿ ಸೇತುವೆ ಕುಸಿತದಲ್ಲಿ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಹಲವಾರು ಜನರು ಇಂದು ಅಹ್ಮದಾಬಾದ್‌ನ ಸಬರಮತಿ ಆಶ್ರಮದ ಬಳಿ ಜಮಾಯಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ ಮತ್ತು ದುರಂತಕ್ಕೆ ಕಾರಣರಾದವರಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿದ್ದಾರೆ.

10 ಮಂದಿಯ ಬಂಧನದ ಜೊತೆಗೆ ಎಸ್‌ಐಟಿ ತನಿಖೆಯಲ್ಲಿ ನಿರ್ಲಕ್ಷದ ಆರೋಪವನ್ನು ಮಾಡಿದ ಎಲ್ಲರನ್ನು ಬಂಧಿಸಿ ಶಿಕ್ಷಿಸಬೇಕು ಎಂದು ದುರಂತದಲ್ಲಿ ತನ್ನ 10 ವರ್ಷದ ಮಗಳನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ಆಗ್ರಹಿಸಿದ್ದಾರೆ.

ಘಟನೆಯಲ್ಲಿ ಮಗ ಮತ್ತು ಸೋದರಳಿಯನನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ಸೇತುವೆಯಲ್ಲಿ ಜನಸಂದಣಿಯನ್ನು ಸರಿಯಾಗಿ ನಿರ್ವಹಣೆ ಮಾಡಲಿಲ್ಲ ಎಂದು ಆರೋಪಿಸಿದ್ದಾರೆ.

ಕಳೆದ ವರ್ಷ ಅ.30ರಂದು ಗುಜರಾತ್‌ನ ಮೋರ್ಬಿ ಸೇತುವೆ ಕುಸಿದು 50 ಮಕ್ಕಳು ಸೇರಿದಂತೆ 135 ಜನರು ಮೃತಪಟ್ಟಿದ್ದರು. ಗುಜರಾತ್‌ ಹೈಕೋರ್ಟ್‌ಗೆ ಸಲ್ಲಿಕೆಯಾದ ವರದಿ ಪ್ರಕಾರ ಈ ದುರಂತದಿಂದಾಗಿ 20 ಮಕ್ಕಳು ಅನಾಥರಾಗಿದ್ದಾರೆ. 13 ಮಕ್ಕಳು ತಂದೆ–ತಾಯಿಯಲ್ಲಿ ಒಬ್ಬರನ್ನು ಕಳೆದುಕೊಂಡಿದ್ದಾರೆ. 7 ಮಕ್ಕಳು ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದಾರೆ.

ಸಬರಮತಿ ಆಶ್ರಮದ ಎದುರು ಕುಟುಂಬದ ಸದಸ್ಯರನ್ನು ಕಳೆದುಕೊಂಡ ಸುಮಾರು 40 ಮಂದಿ ಮೋರ್ಬಿ ದುರಂತದ ಬಲಿಪಶುಗಳ ಒಕ್ಕೂಟ ಎನ್ನುವ ಬ್ಯಾನರ್‌ ಹಿಡಿದು ಪ್ರತಿಭಟನೆ ನಡೆಸಿದರು. ಈ ವೇಳೆ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಘಟನೆಯಲ್ಲಿ 10 ವರ್ಷದ ಮಗಳನ್ನು ಕಳೆದುಕೊಂಡಿರುವ ಒಕ್ಕೂಟದ ಅಧ್ಯಕ್ಷರೂ ಆಗಿರುವ ನರೇಂದ್ರ ಪಾರ್ಮರ್‌ ಅವರು ಈ ವೇಳೆ ಮಾತನಾಡಿದ್ದು, ಸಬರಮತಿ ಆಶ್ರಮದಿಂದ ಗಾಂಧಿನಗರದಲ್ಲಿರುವ ಮುಖ್ಯಮಂತ್ರಿ ನಿವಾಸದವರೆಗೆ ಮೆರವಣಿಗೆ ನಡೆಸುವ ಉದ್ದೇಶ ಇತ್ತು. ಆದರೆ ಅಧಿಕಾರಿಗಳು ಅದಕ್ಕೆ ಅನುಮತಿ ನೀಡಿಲ್ಲ. ಘಟನೆಯಲ್ಲಿ ಮೃತಪಟ್ಟ ಹೆಚ್ಚಿನವರು ಪರಿಶಿಷ್ಟ ಜಾತಿ ಹಾಗೂ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು ಹೇಳಿದ್ದಾರೆ.

ಮನೆ ಮನೆಗೆ ತೆರಳಿ ಕೆಲಸ ಮಾಡಿ ಮಗನನ್ನು ಬೆಳೆಸಿದೆ. ಸರ್ಕಾರದ ಯಾವುದೇ ಪರಿಹಾರದಿಂದ ನನಗೆ ಆಗಿರುವ ಗಾಯವನ್ನು ಅಳಿಸಲು ಸಾಧ್ಯವಿಲ್ಲ ಎಂದು ಘಟನೆಯಲ್ಲಿ ಮ‌ಗನನ್ನು ಕಳೆದುಕೊಂಡ ತಾಯಿಯೊಬ್ಬರು ದುಃಖದಿಂದ ಹೇಳಿದ್ದಾರೆ.

ಸೇತುವೆ ದುರಂತದಲ್ಲಿ ತನ್ನ 19 ವರ್ಷದ ಮಗ ಅಲ್ಫಾಜ್ ಖಾನ್‌ನನ್ನು ಕಳೆದುಕೊಂಡ ವಿಧವೆ ಶಬಾನಾ ಪಠಾಣ್ ಮಾತನಾಡುತ್ತಾ ನನಗೆ ನ್ಯಾಯ ಸಿಗುವವರೆಗೆ ಬರಿಗಾಲಿನಲ್ಲಿರುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ.

ಇದನ್ನು ಓದಿ: ಮಲಯಾಳಂ ನಟಿ ರೆಂಜೂಷಾ ಮೆನನ್ ಆತ್ಮಹತ್ಯೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಮಾಸ್ ನಾಯಕ ಸಿನ್ವಾರ್, ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ದ ಬಂಧನ ವಾರೆಂಟ್‌ಗೆ ಆಗ್ರಹ

0
ಗಾಝಾದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ (ಐಸಿಸಿ) ಕೋರ್ಟ್‌ನಿಂದ ಬಂಧನ ವಾರೆಂಟ್ ಕೋರುವುದಾಗಿ ನ್ಯಾಯಾಲಯದ ಪ್ರಾಸಿಕ್ಯೂಟರ್ ಕರೀಮ್ ಖಾನ್ ಸೋಮವಾರ ಸಿಎನ್‌ಎನ್‌ಗೆ...