Homeಮುಖಪುಟಅಬಕಾರಿ ನೀತಿ ಹಗರಣದ ಸಾಕ್ಷಿಯಿಂದ 60 ಕೋಟಿ ಪಡೆದ ಬಗ್ಗೆ ಉತ್ತರಿಸಿ: ಬಿಜೆಪಿಗೆ ಎಎಪಿ ಆಗ್ರಹ

ಅಬಕಾರಿ ನೀತಿ ಹಗರಣದ ಸಾಕ್ಷಿಯಿಂದ 60 ಕೋಟಿ ಪಡೆದ ಬಗ್ಗೆ ಉತ್ತರಿಸಿ: ಬಿಜೆಪಿಗೆ ಎಎಪಿ ಆಗ್ರಹ

- Advertisement -
- Advertisement -

ಆಮ್ ಆದ್ಮಿ ಪಕ್ಷದ ದೆಹಲಿ ಅಬಕಾರಿ ನೀತಿ ಪ್ರಕರಣದ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬರಾದ ಶರತ್ ಚಂದ್ರ ರೆಡ್ಡಿಯಿಂದ ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ 60 ಕೋಟಿ ರೂ. ಹಣವನ್ನು ಪಡೆದಿದೆ ಎಂದು ಆರೋಪಿಸಿದ ಒಂದು ದಿನದ ನಂತರ, ರೆಡ್ಡಿ ಮತ್ತು ಬಿಜೆಪಿ ನಡುವಿನ ಸಂಬಂಧದ ಬಗ್ಗೆ ದೆಹಲಿ ಸಚಿವ ಸೌರಭ್ ಭಾರದ್ವಾಜ್ ಭಾನುವಾರ ಪ್ರಶ್ನೆಗಳನ್ನು ಕೇಳಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಭಾರದ್ವಾಜ್, ‘ಅರಬಿಂದೋ ಫಾರ್ಮಾ’ ಎಂಬ ಪ್ರಸಿದ್ಧ ಔಷಧ ಕಂಪನಿಯ ಮಾಲಕ ರೆಡ್ಡಿಯಿಂದ ಬಿಜೆಪಿ ಏಕೆ ಹಣ ಪಡೆದಿದೆ ಎಂಬ ಬಗ್ಗೆ ಮೌನ ವಹಿಸಿದೆ ಎಂದು ಆರೋಪಿಸಿದ್ದಾರೆ.

ನಿನ್ನೆ ಎಎಪಿ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಬಾಂಡ್‌ ಕುರಿತ ದಾಖಲೆಗಳನ್ನು ತೋರಿಸಿದ್ದು, ಇದರಲ್ಲಿ ಬಾಂಡ್ ಖರೀದಿಸಿದವರ ಹೆಸರು, ಮುಖಬೆಲೆಗಳು, ಖರೀದಿಸಿದ ದಿನಾಂಕ ಮತ್ತು ಇತರ ವಿವರಗಳಿವೆ ಮತ್ತು ರೆಡ್ಡಿ ಅವರ ಮೂರು ಕಂಪನಿಗಳು ಬಿಜೆಪಿಗೆ ಸುಮಾರು 60 ಕೋಟಿ ಹಣವನ್ನು ನೀಡಿವೆ ಎಂದು ಹೇಳಿಕೊಂಡಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಈ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಕೋರಿ ಎಎಪಿ ಪಕ್ಷ ಪತ್ರ ಬರೆದಿದೆ ಎಂದು ಭಾರದ್ವಾಜ್ ಹೇಳಿದ್ದಾರೆ.

ನಾವು ಪ್ರಕರಣದಲ್ಲಿ ಮೂರು ಪ್ರಮುಖ ಪ್ರಶ್ನೆಗಳನ್ನು ಎತ್ತಲು ಬಯಸುತ್ತೇವೆ ರೆಡ್ಡಿ ಮತ್ತು ಬಿಜೆಪಿ ನಡುವಿನ ಸಂಬಂಧವೇನು? ಬಿಜೆಪಿ ಪಕ್ಷದಿಂದ ಯಾರು ಅವರನ್ನು ಭೇಟಿ ಮಾಡಿದರು ಮತ್ತು ಅವರ ಭೇಟಿ ವೇಳೆ ಏನು ಸಂಭಾಷಣೆ ನಡೆಸಿದ್ದಾರೆ? ಸಿಬಿಐ ಮತ್ತು ಇಡಿಗೆ ರೆಡ್ಡಿಯಿಂದ ಹಣ ಪಡೆದ ಬಗ್ಗೆ ಏಕೆ ಮಾಹಿತಿ ನೀಡಲಿಲ್ಲ? ಎಂದು ಭಾರದ್ವಾಜ್  ಪ್ರಶ್ನಿಸಿದ್ದಾರೆ.

ರೆಡ್ಡಿ ಅವರನ್ನು ಅಬಕಾರಿ ಹಗರಣದ ಕಿಂಗ್‌ಪಿನ್ ಮತ್ತು ಅತಿದೊಡ್ಡ ಫಲಾನುಭವಿ ಎಂದು ಇಡಿ ಕರೆದಿದೆ ಎಂದು ಭಾರದ್ವಾಜ್ ಈ ಹಿಂದೆ ಹೇಳಿದ್ದರು ಮತ್ತು ಪಕ್ಷದ ನಾಯಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನವು ರೆಡ್ಡಿ ಹೇಳಿಕೆಯನ್ನು ಆಧರಿಸಿದೆ ಎಂದು ಹೇಳಿದ್ದರು.

ಎಎಪಿ ಪ್ರಕಾರ, ಈಗ ರದ್ದಾದ ದೆಹಲಿ ಮದ್ಯ ನೀತಿಯ ಅಡಿಯಲ್ಲಿ ರೆಡ್ಡಿ ದೆಹಲಿಯ ಕೆಲವು ವಲಯಗಳಲ್ಲಿ ಕೆಲವು ಮದ್ಯದ ಅಂಗಡಿಗಳನ್ನು ಪಡೆದಿದ್ದರು ಮತ್ತು ಅವರನ್ನು ನವೆಂಬರ್ 9, 2022ರಂದು ವಿಚಾರಣೆಗೆ ಕರೆಯಲಾಯಿತು. ಮರುದಿನ ಅವರನ್ನು ಇಡಿ ಬಂಧಿಸಿತ್ತು. ಬಳಿಕ ಅವರು ತಮ್ಮ ಹೇಳಿಕೆಯನ್ನು ಬದಲಾಯಿಸಲು ಪ್ರಾರಂಭಿಸಿದರು, ಅವರಿಗೆ ಜಾಮೀನು ಸಿಕ್ಕಿತು ಎಂದು ಭಾರದ್ವಾಜ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಎಎಪಿಯ ಜಾಸ್ಮಿನ್ ಶಾ ಮಾತನಾಡಿ, ಈ ಪ್ರಕರಣದಲ್ಲಿ ರೆಡ್ಡಿಯನ್ನು ಆರು ತಿಂಗಳ ಕಾಲ ಜೈಲಿನಲ್ಲಿ ಇರಿಸಲಾಯಿತು, ನಂತರ ಅವರು ತಮ್ಮ ಹೇಳಿಕೆಯನ್ನು ಬದಲಾಯಿಸಿದರು. ಅವರು ಬಿಜೆಪಿ ಒತ್ತಡದಲ್ಲಿ ಹೇಳಿಕೆ ಬದಲಾಯಿಸಿದ್ದು ಮಾತ್ರವಲ್ಲದೆ ಅವರಿಂದ ಕೋಟಿಗಟ್ಟಲೆ ಹಣವನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಭಾರತೀಯ ಚುನಾವಣಾ ಆಯೋಗವು ಗುರುವಾರ ತನ್ನ ವೆಬ್‌ಸೈಟ್‌ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ ಇತ್ತೀಚಿನ ವಿವರಗಳೊಂದಿಗೆ ಚುನಾವಣಾ ಬಾಂಡ್ ಡೇಟಾವನ್ನು ಅಪ್‌ಲೋಡ್ ಮಾಡಿದೆ. ಇತ್ತೀಚಿನ ದಾನಿಗಳ ಪಟ್ಟಿಯು ಬಾಂಡ್‌ ಖರೀದಿದಾರರ ಹೆಸರು, ಅದರ ಮುಖಬೆಲೆ, ನಿರ್ದಿಷ್ಟ ಸಂಖ್ಯೆ, ಸ್ವೀಕರಿಸಿದವರ ಪಟ್ಟಿಯ ಜೊತೆಗೆ ಅದನ್ನು ಎನ್‌ಕ್ಯಾಶ್ ಮಾಡಿದ ಪಕ್ಷದ ಹೆಸರನ್ನು ಹೊಂದಿತ್ತು.

ಇದನ್ನು ಓದಿ: ಕೇಜ್ರಿವಾಲ್‌ ಬಂಧನ ವಿರೋಧಿಸಿ ಮಾ.31ರಂದು ರಾಮಲೀಲಾ ಮೈದಾನದಲ್ಲಿ ಪ್ರತಿಪಕ್ಷಗಳ ಒಕ್ಕೂಟದಿಂದ ಬೃಹತ್‌ ರ್‍ಯಾಲಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಂಧನ

0
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ...