Homeಮುಖಪುಟವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪ; ಪಶ್ಚಿಮ ಬಂಗಾಳದ ಬಿಜೆಪಿ ನಾಯಕನ ಬಂಧನ

ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪ; ಪಶ್ಚಿಮ ಬಂಗಾಳದ ಬಿಜೆಪಿ ನಾಯಕನ ಬಂಧನ

- Advertisement -
- Advertisement -

ಹೌರಾದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸಬ್ಯಸಾಚಿ ಘೋಷ್ ಅವರನ್ನು ಶುಕ್ರವಾರ ಬಂಧಿಸಲಾಗಿದೆ. ಸಂದೇಶ್‌ಖಾಲಿ ವಿಷಯದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ವಿರುದ್ಧ ಬಿಜೆಪಿ ನಾಯಕರು ಸಮರ ಸಾರಿರುವ ಹೊತ್ತಿನಲ್ಲೆ ಈ ವಿಚಾರ ಬೆಳಕಿಗೆ ಬಂದಿದೆ.

ಈ ಬಗ್ಗೆ ಬಿಜೆಪಿ ಮೇಲಿನ ತನ್ನ ದಾಳಿಯನ್ನು ಹೆಚ್ಚಿಸಿದ ಟಿಎಂಸಿ, ಹೌರಾದ ಸಬ್ಯಸಾಚಿ ಘೋಷ್ ಅವರ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಬಂಗಾಳ ಪೊಲೀಸರು ಭೇದಿಸಿದ್ದಾರೆ ಎಂದು ಆರೋಪಿಸಿದೆ. ‘ಬಿಜೆಪಿಯು ತಲೆಹಿಡುಕರನ್ನು ರಕ್ಷಿಸುತ್ತಿದೆ; ಮಹಿಳೆಯರನ್ನಲ್ಲ’ ಎಂದು ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು ಆರೋಪಿಸಿದೆ.

ಟಿಎಂಸಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದು, ‘ಬಿಜೆಪಿ ನಾಯಕ ಸಬ್ಯಸಾಚಿ ಘೋಷ್ ಹೌರಾದ ಸಂಕ್ರೈಲ್‌ನಲ್ಲಿರುವ ತನ್ನ ಹೋಟೆಲ್‌ನಲ್ಲಿ ಅಪ್ರಾಪ್ತ ಬಾಲಕಿಯರ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಪೊಲೀಸರು 11 ಆರೋಪಿಗಳನ್ನು ಬಂಧಿಸಿದ್ದಾರೆ ಮತ್ತು 6 ಜನ ಸಂತ್ರಸ್ತರನ್ನು ಸ್ಥಳದಿಂದ ರಕ್ಷಿಸಿದ್ದಾರೆ. ಬಿಜೆಪಿಯವರು ಹೆಣ್ಣು ಮಕ್ಕಳು ರಕ್ಷಿಸುವುದಿಲ್ಲ, ಅವರು ತಲೆಹಿಡುಕರನ್ನು ರಕ್ಷಿಸುತ್ತಾರೆ’ ಎಂದು ವಾಗ್ದಾಳಿ ನಡೆಸಿದೆ.

ಸಂದೇಶಖಾಲಿ ವಿಷಯದ ಕುರಿತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಬಿಜೆಪಿ ಮಹಿಳಾ ಕಾರ್ಯಕರ್ತರ ನಿಯೋಗವು ಹಿಂದಿನ ದಿನದಲ್ಲಿ ಪ್ರಕ್ಷುಬ್ಧ ಪ್ರದೇಶಕ್ಕೆ ಭೇಟಿ ನೀಡದಂತೆ ತಡೆಯಲಾಗಿದೆ.

ಸಂಸದ ಲಾಕೆಟ್ ಚಟರ್ಜಿ ಮತ್ತು ಶಾಸಕ ಅಗ್ನಿಮಿತ್ರ ಪಾಲ್ ನೇತೃತ್ವದ ಬಿಜೆಪಿ ತಂಡವನ್ನು ಪೊಲೀಸರು ನಿಷೇಧಾಜ್ಞೆಗಳನ್ನು ಉಲ್ಲೇಖಿಸಿ ತಡೆದರು. ‘ನಿಷೇಧದ ಆದೇಶಗಳನ್ನು ಉಲ್ಲೇಖಿಸಿ ಪೊಲೀಸರು ಸಂದೇಶಖಾಲಿಗೆ ಪ್ರವೇಶವನ್ನು ನಿರಾಕರಿಸಿದರು. ರಾಜ್ಯ ಸರ್ಕಾರವು ಸತ್ಯವನ್ನು ಮರೆಮಾಚಲು ಪ್ರಯತ್ನಿಸುತ್ತಿದೆ’ ಎಂದು ನಿನ್ನೆ ಪಾಲ್ ಹೇಳಿದ್ದಾರೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತಂಡವು ಇಂದು ಸಂದೇಶಖಾಲಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪಗಳ ಕುರಿತು ಸ್ಥಳದಲ್ಲೇ ವಿಚಾರಣೆಯ ಮೂಲಕ ಸತ್ಯವನ್ನು ಖಚಿತಪಡಿಸಿಕೊಳ್ಳಲು ಮುಂದಾಗಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ)ಗೆ ಸೇರಿದ ಹಲವು ನಾಯಕರ ವಿರುದ್ಧ ಸಂದೇಶಖಾಲಿಯಲ್ಲಿ ಅನೇಕ ಮಹಿಳೆಯರು ವ್ಯವಸ್ಥಿತ ಲೈಂಗಿಕ ಶೋಷಣೆ ಮತ್ತು ಭೂಹಗರಣದ ಆರೋಪಗಳನ್ನು ಎತ್ತಿದ್ದರು. ಸ್ಥಳೀಯ ಜಿಲ್ಲಾ ಪರಿಷತ್ ಸದಸ್ಯ ಶೇಖ್ ಷಹಜಹಾನ್ ಪ್ರಮುಖ ಆರೋಪಿ ಎಂದು ಮಹಿಳೆಯರು ಆರೋಪಿಸಿದ್ದಾರೆ.

ಶೇಖ್ ಷಹಜಹಾನ್ ತಲೆಮರೆಸಿಕೊಂಡ ನಂತರ ಮಹಿಳೆಯರು ಟಿಎಂಸಿ ನಾಯಕರ ವಿರುದ್ಧ ಆರೋಪ ಹೊರಿಸಿದ್ದಾರೆ. ಜನವರಿಯಲ್ಲಿ ಸಂದೇಶಖಾಲಿಯಲ್ಲಿರುವ ಷಹಜಹಾನ್ ಮನೆಗೆ ತೆರಳುತ್ತಿದ್ದ ಜಾರಿ ನಿರ್ದೇಶನಾಲಯದ ತಂಡದ ಮೇಲೆ ದಾಳಿ ನಡೆಸಿದ್ದು, ಅಂದಿನಿಂದ ಆತ ತಲೆಮರೆಸಿಕೊಂಡಿದ್ದಾನೆ.

ಅವರ ಇಬ್ಬರು ಆಪ್ತ ಸಹಾಯಕರಾದ ಶಿಬಾಪ್ರಸಾದ್ ಹಜ್ರಾ ಮತ್ತು ಉತ್ತಮ್ ಸರ್ದಾರ್ ಟಿಎಂಸಿ ನಾಯಕರೂ ಆಗಿದ್ದು, ಈ ಪ್ರದೇಶದ ಮಹಿಳೆಯರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ ನಂತರ ಬಂಧಿಸಲಾಯಿತು.

ಇದನ್ನೂ ಓದಿ;

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ; ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು...