Homeಮುಖಪುಟಪ್ರಧಾನಿ, ಕೇಂದ್ರದ ಯೋಜನೆ ಕುರಿತು ಸುಳ್ಳು ಸುದ್ದಿ ಹರಡಿದ ಆರೋಪ: 8 ಯುಟ್ಯೂಬ್ ಚಾನೆಲ್‌ ಬ್ಯಾನ್

ಪ್ರಧಾನಿ, ಕೇಂದ್ರದ ಯೋಜನೆ ಕುರಿತು ಸುಳ್ಳು ಸುದ್ದಿ ಹರಡಿದ ಆರೋಪ: 8 ಯುಟ್ಯೂಬ್ ಚಾನೆಲ್‌ ಬ್ಯಾನ್

- Advertisement -
- Advertisement -

ಸುಳ್ಳು ಸುದ್ದಿಗಳನ್ನು ಹರಡುತ್ತಿವೆ ಎನ್ನುವ ಆರೋಪದ ಮೇಲೆ ಕೇಂದ್ರ ಸರ್ಕಾರವು 8 ಯುಟ್ಯೂಬ್ ಚಾನೆಲ್‌ಗಳನ್ನು ನಿಷೇಧ ಮಾಡಿದೆ.

ಕೇಂದ್ರ ನಿಷೇಧಿಸಿದ ಎಂಟು ಚಾನೆಲ್‌ಗಳು

1. Yahan Sach Dekho

2. Capital TV

3. KPS News

4. Sarkari Vlog

5. Earn Tech India

6. SPN9 News

7 Educational Dost

8 World Best News

ಯೂಟ್ಯೂಬ್ ಚಾನೆಲ್‌ಗಳಲ್ಲಿ ಸುಳ್ಳು ಸುದ್ದಿಗಳ ವಿಡಿಯೋಗಳನ್ನು ಹರಡಿದ್ದಕ್ಕಾಗಿ ಪತ್ರಿಕಾ ಮಾಹಿತಿ ಬ್ಯೂರೋ ಸತ್ಯಾಸತ್ಯತೆಯನ್ನು ಪರಿಶೀಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಅದರ ಆಧಾರದ ಮೇಲೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಅವುಗಳ ಮೇಲೆ ನಿಷೇಧ ಹೇರಿದೆ ಎಂದು ಹೇಳಲಾಗಿದೆ.

ಇದರಲ್ಲಿ SPN9 News 4.8 ಮಿಲಿಯನ್ ಫಾಲೊವರ್‌ಗಳನ್ನು ಹೊಂದಿತ್ತು ಹಾಗೂ 148 ಕೋಟಿ ವೀಕ್ಷಣೆ ಕಂಡಿತ್ತು. World Best News 1.7 ಮಿಲಿಯನ್ ಫಾಲೊವರ್‌ಗಳನ್ನು 18 ಕೋಟಿ ವೀಕ್ಷಣೆ ಕಂಡಿತ್ತು.

ಎಜುಕೇಷನಲ್ ದೋಸ್ತ್ ಚಾನೆಲ್ 3.43 ಮಿಲಿಯನ್ ಚಂದಾದಾರರು ಮತ್ತು 23 ಕೋಟಿ ವೀಕ್ಷಣೆ ಹೊಂದಿದ್ದು ಇದು ಸರ್ಕಾರಿ ಯೋಜನೆಗಳ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

SPN9 ಯುಟ್ಯೂಬ್ ಚಾನೆಲ್ 4.8 ಮಿಲಿಯನ್ ಚಂದಾದಾರರು ಮತ್ತು 189 ಕೋಟಿ ವೀಕ್ಷಣೆಗಳನ್ನು ಹೊಂದಿದೆ. ಇದು ರಾಷ್ಟ್ರಪತಿ, ಪ್ರಧಾನಿ ಮತ್ತು ಹಲವರಿಗೆ ಸಂಬಂಧಿಸಿದ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಿದೆ ಎಂದು ಕೇಂದ್ರ ಮಂತ್ರಿಗಳು ಆರೋಪ ಮಾಡಿದ್ದಾರೆ.

Sarkari Vlog ಯುಟ್ಯೂಬ್ ಚಾನೆಲ್ 4.5 ಮಿಲಿಯನ್ ಚಂದಾದಾರರು ಮತ್ತು 9.4 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದ್ದು, ಇದು ಸರ್ಕಾರದ ಯೋಜನೆಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಕೆಪಿಎಸ್ ನ್ಯೂಸ್’ ಚಾನೆಲ್ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರು ಮತ್ತು 13 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದ್ದು, ಇದು ಸರ್ಕಾರಕ್ಕೆ ಸಂಬಂಧಿಸಿದ ಯೋಜನೆಗಳು, ಆದೇಶಗಳು ಮತ್ತು ನಿರ್ಧಾರಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ. ಉದಾಹರಣೆಗೆ ಅಡುಗೆ ಅನಿಲ ಸಿಲಿಂಡರ್‌ಗಳು 20 ರೂ.ಗೆ ಲಭ್ಯತೆ ಮತ್ತು ಪೆಟ್ರೋಲ್ ಲೀಟರ್‌ಗೆ 15 ರೂ. ಎಂದು ಹೇಳಲಾಗಿದೆ.

‘ಕ್ಯಾಪಿಟಲ್ ಟಿವಿ’ ಚಾನೆಲ್ 3.5 ಮಿಲಿಯನ್ ಚಂದಾದಾರರು ಮತ್ತು 160 ಕೋಟಿಗೂ ಹೆಚ್ಚು ವೀಕ್ಷಣೆ ಹೊಂದಿದ್ದು, ಇದು ಕೂಡ ಪ್ರಧಾನಿ, ಸರ್ಕಾರ ಮತ್ತು ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಸಂಬಂಧಿಸಿದ ಆದೇಶಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಲಾಗಿದೆ.

ಈ ಎಂಟೂ ಚಾನೆಲ್‌ಗಳು ಲೋಕಸಭೆ ಚುನಾವಣೆ ಹಾಗೂ ಇವಿಎಂ ಮಷಿನ್ ಸೇರಿದಂತೆ ರಾಷ್ಟ್ರಪತಿ, ಪ್ರಧಾನಿ, ಸಚಿವರು ಹಾಗೂ ಕೇಂದ್ರದ ಯೋಜನೆಗಳು, ಆಧಾರ್, ಬ್ಯಾನ್ ಕಾರ್ಡ್ ಬಗ್ಗೆ ಜನರಿಗೆ ತಪ್ಪು ಸಂದೇಶ ಹಾಗೂ ಸುಳ್ಳು ಮಾಹಿತಿಯನ್ನು ಪಸರಿಸುತ್ತಿದ್ದವು ಎಂದು ಆರೋಪಿಸಲಾಗಿದೆ.

‘ಯಹಾನ್ ಸಚ್ ದೇಖೋ’ ಯೂಟ್ಯೂಬ್ ಚಾನೆಲ್ 3 ಮಿಲಿಯನ್ ಚಂದಾದಾರರು ಮತ್ತು 100 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದ್ದು, ಇದು ಚುನಾವಣಾ ಆಯೋಗ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ನಕಲಿ ಸುದ್ದಿಗಳನ್ನು ಹರಡುತ್ತಿದೆ ಎನ್ನಲಾಗಿದೆ.

‘ಅರ್ನ್ ಇಂಡಿಯಾ ಟೆಕ್’ ಚಾನೆಲ್ 31,000 ಚಂದಾದಾರರು ಮತ್ತು 3.6 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದ್ದು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಇತರರಿಗೆ ಸಂಬಂಧಿಸಿದ ನಕಲಿ ಸುದ್ದಿಗಳನ್ನು ಪ್ರಚಾರ ಮಾಡುತ್ತಿರುವುದು ಕಂಡುಬಂದಿದೆ ಎಂದು ಹೇಳಿದೆ.

ಕೇಂದ್ರ ಸರ್ಕಾರ ಈ ಹಿಂದೆಯೂ ಇಂತಹದೇ ಆರೋಪದ ಮೇಲೆ ಅನೇಕ ಯುಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಿತ್ತು. ಸಂಬಂಧಿಸಿದ ಇಲಾಖೆಯ ಆದೇಶದ ಮೇಲೆ ಯುಟ್ಯೂಬ್ ತಾಂತ್ರಿಕ ಸಿಬ್ಬಂದಿ ಚಾನೆಲ್‌ಗಳನ್ನು ನಿಷೇಧಿಸುತ್ತಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...