Homeಮುಖಪುಟಗಾಝಾ ವಿಷಯದಲ್ಲಿ ಯುಎಸ್‌ ನಿಲುವು ಖಂಡಿಸಿ ಪಿಹೆಚ್‌ಡಿ, ಎಂಎಸ್ಸಿ ಪದವಿಗಳನ್ನು ಮರಳಿಸಿದ ಸಾಮಾಜಿಕ ಕಾರ್ಯಕರ್ತ ಸಂದೀಪ್...

ಗಾಝಾ ವಿಷಯದಲ್ಲಿ ಯುಎಸ್‌ ನಿಲುವು ಖಂಡಿಸಿ ಪಿಹೆಚ್‌ಡಿ, ಎಂಎಸ್ಸಿ ಪದವಿಗಳನ್ನು ಮರಳಿಸಿದ ಸಾಮಾಜಿಕ ಕಾರ್ಯಕರ್ತ ಸಂದೀಪ್ ಪಾಂಡೆ

- Advertisement -
- Advertisement -

ಗಾಝಾ ಮೇಲಿನ ಇಸ್ರೇಲ್‌ ಆಕ್ರಮಣವನ್ನು ಬೆಂಬಲಿಸುತ್ತಿರುವ ಯುಎಸ್‌ನ ನಡೆ ಖಂಡಿಸಿ ಸಾಮಾಜಿಕ ಕಾರ್ಯಕರ್ತ ಸಂದೀಪ್ ಪಾಂಡೆ ಅವರು ತಮ್ಮ ಪಿಹೆಚ್‌ಡಿ ಪದವಿಯನ್ನು ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ ಅಧಿಕೃತವಾಗಿ ಹಿಂದಿರುಗಿಸಿದ್ದಾರೆ.

ಗಾಝಾ ಮೇಲಿನ ಆಕ್ರಮಣಕ್ಕೆ ಬೆಂಬಲ ನೀಡುತ್ತಿರುವ ಯುಎಸ್‌ನ ವಿರುದ್ದ ಪ್ರತಿಭಟನೆಯ ಸಂಕೇತವಾಗಿ 2002 ರಲ್ಲಿ ನೀಡಲಾದ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಹಿಂದಿರುಗಿಸುವ ನಿರ್ಧಾರವನ್ನು ಪಾಂಡೆ ಅವರು ಜನವರಿಯಲ್ಲಿ ಘೋಷಿಸಿದ್ದರು. ಸಂದೀಪ್ ಪಾಂಡೆ ತಮ್ಮ ಎರಡು ಎಂಎಸ್ಸಿ ಪದವಿಗಳನ್ನೂ ಸಿರಾಕ್ಯೂಸ್ ವಿಶ್ವವಿದ್ಯಾಲಯಕ್ಕೆ ಹಿಂದಿರುಗಿಸಿದ್ದಾರೆ.

ಈ ವಿಶ್ವವಿದ್ಯಾನಿಲಯಗಳಿಗೆ ಸಂದೀಪ್ ಪಾಂಡೆ ಎರಡು ಪತ್ರಗಳನ್ನು ಬರೆದಿದ್ದು, ಅದರ ಪ್ರತಿಯನ್ನು ಪಿಟಿಐ ಹಂಚಿಕೊಂಡಿದೆ. ಆ ಪತ್ರಗಳಲ್ಲಿ “ಇಸ್ರೇಲ್-ಪ್ಯಾಲೆಸ್ತೀನ್ ನಡುವಿನ ಯುದ್ಧದಲ್ಲಿ ಯುಎಸ್ ಪಾತ್ರ ಖೇದಕರ ಎಂದು ಬರೆದಿದ್ದಾರೆ.

“ಯುದ್ಧವನ್ನು ಅಂತ್ಯಗೊಳಿಸಲು ಯುಎಸ್ ಮಧ್ಯವರ್ತಿಯ ಪಾತ್ರ ನಿರ್ವಹಿಸಬಹುದು ಎಂದು ನಾನು ಅಂದುಕೊಂಡಿದ್ದೇನೆ. ಪ್ಯಾಲೆಸ್ತೀನ್‌ಗೆ ಸ್ವತಂತ್ರ ರಾಷ್ಟ್ರದ ಸ್ಥಾನಮಾನ ನೀಡುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಹುಡುಕಬಹುದು. ಆದರೆ, ಯುಎಸ್ ಮಿಲಿಟರಿ ಮೂಲಕ ಇಸ್ರೇಲ್ ಅನ್ನು ಕುರುಡಾಗಿ ಬೆಂಬಲಿಸುವುದನ್ನು ಮುಂದುವರೆಸಿದೆ. ಇದು ಮಕ್ಕಳು ಸೇರಿದಂತೆ ಸಾವಿರಾರು ಅಮಾಯಕ ಪ್ಯಾಲೆಸ್ತೀನಿಯರ ಹತ್ಯೆಗೆ ಕಾರಣವಾಗಿದೆ. ಯುಎಸ್ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಪರವಾಗಿ ನಿಂತಿದೆ ಎಂದು ನಂಬುವುದು ಕಷ್ಟ” ಎಂದಿದ್ದಾರೆ.

ಪಾಂಡೆ ಅವರು ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಎಲ್ಲಾ ದಾಖಲೆಗಳಿಂದ ತಮ್ಮ ಹೆಸರನ್ನು ತೆಗೆದು ಹಾಕಲು ವಿನಂತಿಸಿದ್ದಾರೆ. ತಮ್ಮ ಎರಡು ಎಂಎಸ್ಸಿ ಪದವಿಗಳನ್ನು ಹಿಂದಿರುಗಿಸಿದ ಸಿರಾಕ್ಯೂಸ್ ವಿಶ್ವವಿದ್ಯಾಲಯಕ್ಕೂ ಇದೇ ರೀತಿಯ ಮನವಿ ಮಾಡಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ, ಇಸ್ರೇಲ್ ಆಕ್ರಮಣದಿಂದ ಇದುವರೆಗೆ ಗಾಝಾದ 32,000 ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ.

ಕಳೆದ ಸೋಮವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಗಾಝಾದಲ್ಲಿ ತಕ್ಷಣದ ಕದನ ವಿರಾಮಕ್ಕೆ ಆಗ್ರಹಿಸಿ ನಿರ್ಣಯ ಅಂಗೀಕರಿಸಿದೆ. ಯುಎಸ್ ಮೊದಲ ಬಾರಿಗೆ ವೀಟೋ ಅಧಿಕಾರ ಬಳಸದೆ ನಿರ್ಣಯ ಅಂಗೀಕಾರಕ್ಕೆ ಅನುವು ಮಾಡಿ ಕೊಟ್ಟಿದೆ. ಯುಎಸ್ ಮತದಾನಕ್ಕೆ ಗೈರಾಗಿತ್ತು.

ಇದನ್ನೂ ಓದಿ : ಬೋಗಸ್ ದಾಖಲೆ ಬಳಸಿ ಮೋದಿ ಸರ್ಕಾರದ ಯೋಜನೆಗಳಿಗೆ ಫಲಾನುಭವಿಗಳನ್ನು ಸೃಷ್ಟಿಸುತ್ತಿರುವ ಬ್ಯಾಂಕ್‌ಗಳು: ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read