Homeಮುಖಪುಟವಿವಾದಕ್ಕೀಡಾದ ರಿಷಭ್ ಶೆಟ್ಟಿ ಹಾಡಿರುವ 'ಬಡವ ರಾಸ್ಕಲ್' ಗೀತೆ: ನಟ ಡಾಲಿ ಸ್ಪಷ್ಟನೆ

ವಿವಾದಕ್ಕೀಡಾದ ರಿಷಭ್ ಶೆಟ್ಟಿ ಹಾಡಿರುವ ‘ಬಡವ ರಾಸ್ಕಲ್’ ಗೀತೆ: ನಟ ಡಾಲಿ ಸ್ಪಷ್ಟನೆ

- Advertisement -
- Advertisement -

ನಟ ಡಾಲಿ ಧನಂಜಯ್​ ಅಭಿನಯದ ಬಡವ ರಾಸ್ಕಲ್ ಚಿತ್ರದ ಶೀರ್ಷಿಕೆ ಬಳಸಿಕೊಂಡು ರಿಷಭ್​ ಶೆಟ್ಟಿ ‘ಬಡವ ರಾಸ್ಕಲ್​’ ಗೀತೆ ಹಾಡಿದ್ದಾರೆ ಎಂದು ಡಾಲಿ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಟ ಡಾಲಿ ಧನಂಜಯ್​ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚಿಗೆ ಸಿನಿಮಾದಲ್ಲಿ ಬಳಕೆಯಾಗುವ ಹೆಸರು, ಸಂಭಾಷಣೆಗಳು ಚಲನಚಿತ್ರಗಳ ಶೀರ್ಷಿಕೆಗಳಾಗುತ್ತಿರುವುದು ವಾಡಿಕೆಯಾಗಿದೆ. ಆದರೆ ಇಲ್ಲಿ ಸಿನಿಮಾದ ಶೀರ್ಷಿಕೆಯೇ ಹಾಡಿನ ಸಾಲಾಗುವ ಮೂಲಕ ವಿವಾದಕ್ಕೆ ಕಾರಣವಾಗಿದೆ.

ನಟ ಡಾಲಿ ಧನಂಜಯ್​ ಅಭಿನಯದ ಬಡವ ರಾಸ್ಕಲ್​ ಎಂಬ ಸಿನಿಮಾ ಶೀರ್ಷಿಕೆಯ ಹಾಡು ವೈರಲ್ ಆಗಿರುವುದಕ್ಕೆ ಡಾಲಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ನಟ, ನಿರ್ದೇಶಕ ರಿಷಭ್​ ಶೆಟ್ಟಿ ‘ಒಂಭತ್ತು ಸುಳ್ಳು ಕಥೆಗಳು’ ಎಂಬ ಚಿತ್ರದಲ್ಲಿ ‘ಏನೋ ಬಡವ ರಾಸ್ಕಲ್’ ಎಂದು ಹಾಡಿದ್ದಾರೆ. ಈ ಹಾಡನ್ನು ಕೇಳಿದ ಡಾಲಿ ಅಭಿಮಾನಿಗಳು ಡಾಲಿ ಸಿನಿಮಾದ ಗೀತೆ ಇರಬಹುದು ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಆದರೆ ಇದು ಸಿನಿಮಾ ಗೀತೆಯಲ್ಲ ಎಂದು ತಿಳಿದು ಬಂದಿದೆ.

ನ.1 ರಂದು ರಾಸ್ಕಲ್​ ಗೀತೆಯನ್ನು ಯೂಟ್ಯೂಬ್​ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಕುರಿತ ಲೇಖನವೂ ಪ್ರಕಟವಾಗಿತ್ತು. ‘ನಮ್ಮ ಚಿತ್ರಕ್ಕೂ ರಿಷಭ್​ ಅದ್ಭುತವಾಗಿ ಹಾಡಿರುವ ಈ ಹಾಡಿಗೂ ಯಾವುದೇ ಸಂಬಂಧವಿಲ್ಲ. ಯಾವ ಸಿನಿಮಾ ಗೀತೆ ಎಂಬುದು ನನಗೆ ಗೊತ್ತಿಲ್ಲ. ಆ ಚಿತ್ರ ತಂಡಕ್ಕೆ ಶುಭವಾಗಲಿ, ನಮ್ಮ ಚಿತ್ರವನ್ನು ಪ್ರಮೋಟ್​ ಮಾಡಿದ್ದಕ್ಕೆ ಧನ್ಯವಾದಗಳು’ ಎಂದು ನಟ ಡಾಲಿ ಧನಂಜಯ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಮುರುಳಿ ಎಂಬುವವರು ಪ್ರತಿಕ್ರಿಯಿಸಿದ್ದು, ‘ಯಾವ ಪದದ ಮೇಲೂ ಯಾರಿಗೂ ಹಕ್ಕಿಲ್ಲ. ಯಾರು ಯಾವ ಪದವನ್ನಾದರೂ ಬಳಸಬಹುದು. ಆದರೆ ಎಲ್ಲದಕ್ಕೂ ವೃತ್ತಿ ಧರ್ಮವಿದೆ. ಡಾಲಿಯ ಬಡವ ರಾಸ್ಕಲ್​ ಸಿನಿಮಾ ಬರುತ್ತಿದೆ ಎಂದು ತಿಳಿದ ನಂತರವೂ ಆ ಸಿನಿಮಾ ಶೀರ್ಷಿಕೆಯ ಪದವನ್ನಿಟ್ಟುಕೊಂಡು ಹಾಡು ಬರೆದು, ಹಾಡಿರುವುದು ಸರಿಯಲ್ಲ. ಕನ್ನಡ ಗೊತ್ತಿಲ್ಲದವರಿಗೆ ಈ ಹಾಡು ಹೇಗೆ ಅರ್ಥವಾಗುತ್ತದೆ’ ಎಂದು ಕಿಡಿಕಾರಿದ್ದಾರೆ.

ಒಂದು ಕಡೆ ಗೀತೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೊಂದೆಡೆ ರಿಷಭ್​, ಧನಂಜಯ್​ ಅವರ ಟ್ವೀಟ್​ ನ್ನು ರೀಟ್ವೀಟ್​ ಮಾಡಿ ಧನ್ಯವಾದ ತಿಳಿಸಿದ್ದಾರೆ. “ಧನ್ಯವಾದಗಳು ಗೆಳೆಯ, ತಮ್ಮ ಅಭಿನಯದ ಬ.ರಾಸ್ಕಲ್ ಚಿತ್ರಕ್ಕೆ ಶುಭವಾಗಲಿ” ಎಂದು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ದೆಹಲಿ ಚಲೋ’ ಪ್ರತಿಭಟನೆ: ಮತ್ತೊಬ್ಬ ರೈತ ಮೃತ್ಯು; 15 ದಿನಗಳಲ್ಲಿ ಆರನೇ ಸಾವು

0
ಪಂಜಾಬ್-ಹರಿಯಾಣದ ಖನೌರಿ ಗಡಿಯಲ್ಲಿ ಮತ್ತೋರ್ವ ರೈತ ಸಾವನ್ನಪ್ಪಿದ್ದು, ಈ ಮೂಲಕ ಕಳೆದ 15 ದಿನಗಳಲ್ಲಿ 'ದೆಹಲಿ ಚಲೋ' ಮೆರವಣಿಗೆಯಲ್ಲಿ ಭಾಗವಹಿಸಿದ್ದ ಒಟ್ಟು ಆರು ಮಂದಿ ರೈತರು ಮೃತಪಟ್ಟಂತಾಗಿದೆ. ಮೃತ ರೈತನನ್ನು ಕರ್ನೈಲ್ ಸಿಂಗ್ (62)...