Homeಮುಖಪುಟಅದಾನಿ ಹಗರಣ: ತನಿಖೆ ಪೂರ್ವಗೊಳಿಸಲು ಹೆಚ್ಚುವರಿ 6 ತಿಂಗಳ ಅವಕಾಶ ಕೋರಿ ಸುಪ್ರೀಂಕೋರ್ಟ್‌‌ಗೆ ಸೆಬಿ ಮನವಿ

ಅದಾನಿ ಹಗರಣ: ತನಿಖೆ ಪೂರ್ವಗೊಳಿಸಲು ಹೆಚ್ಚುವರಿ 6 ತಿಂಗಳ ಅವಕಾಶ ಕೋರಿ ಸುಪ್ರೀಂಕೋರ್ಟ್‌‌ಗೆ ಸೆಬಿ ಮನವಿ

- Advertisement -
- Advertisement -

ಅದಾನಿ ಗ್ರೂಪ್ ವಿರುದ್ಧ ಬಂದಿರುವ ಸ್ಟಾಕ್ ಮ್ಯಾನಿಪುಲೇಷನ್ ಆರೋಪಗಳ ತನಿಖೆಯನ್ನು ಪೂರ್ಣಗೊಳಿಸಲು ಇನ್ನೂ ಆರು ತಿಂಗಳ ಕಾಲಾವಕಾಶ ನೀಡಬೇಕೆಂದು ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಶನಿವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಗೌತಮ್ ಅದಾನಿ ನೇತೃತ್ವದ ಈ ಸಂಸ್ಥೆಯು ಸಾರ್ವಜನಿಕ ಷೇರುಗಳನ್ನು ನಿರ್ವಹಿಸುವ ಕನಿಷ್ಠ ನಿಯಮಗಳನ್ನು ಉಲ್ಲಂಘಿಸಿದೆಯೇ, ಸಂಬಂಧಿತ ಪಾರ್ಟಿಗಳೊಂದಿಗೆ ವಹಿವಾಟುಗಳನ್ನು ಬಹಿರಂಗಪಡಿಸಲು ವಿಫಲವಾಗಿದೆಯೇ ಮತ್ತು ಷೇರುಗಳ ಬೆಲೆಗಳಲ್ಲಿ ಯಾವುದೇ ತಿರುಚುವಿಕೆ ನಡೆದಿದೆಯೇ ಎಂದು ಪರಿಶೀಲಿಸಲು ಸೆಬಿಗೆ ನ್ಯಾಯಾಲಯ ಮಾರ್ಚ್ 2ರಂದು ಸೂಚಿಸಿತ್ತು. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು, ಎರಡು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ಸ್ಥಿತಿಗತಿ ವರದಿ ಸಲ್ಲಿಸುವಂತೆ ನಿರ್ದೇಶಿಸಿತ್ತು.

ಅಮೆರಿಕ ಮೂಲದ ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆಯು ಜನವರಿ 24ರಂದು ಪ್ರಕಟಿಸಿದ ವರದಿಯು ಅದಾನಿ ಗ್ರೂಪ್‌ನ ಹಗರಣಗಳತ್ತ ಬೊಟ್ಟು ಮಾಡಿತ್ತು. ಸ್ಟಾಕ್ ಮ್ಯಾನಿಪ್ಯುಲೇಷನ್ ಮಾಡಲಾಗಿದೆ, ಕೃತಕವಾಗಿ ಷೇರುಗಳ ಬೇಲೆ ಏರಿಕೆ ಮಾಡಲಾಗಿದೆ, ಕಡಲಾಚೆಯ ತೆರಿಗೆ ಸ್ವರ್ಗಗಳನ್ನು ಅಸಮರ್ಪಕವಾಗಿ ಬಳಸಾಗಿದೆ ಎಂದು ವರದಿ ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ಹೂಡಿಕೆದಾರರ ಸಂರಕ್ಷಣಾ ಕಾರ್ಯವಿಧಾನಗಳನ್ನು ಪರಿಶೀಲಿಸಲು ನ್ಯಾಯಾಲಯವು ತಜ್ಞರ ಸಮಿತಿಯನ್ನು ರಚಿಸಿತ್ತು.

ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ ಸಲ್ಲಿಸಿರುವ ಮನವಿಯಲ್ಲಿ, ಏಪ್ರಿಲ್‌ನಲ್ಲಿ ತಜ್ಞರ ಸಮಿತಿಯೊಂದಿಗೆ ಎರಡು ಸಭೆಗಳಲ್ಲಿ ಭಾಗವಹಿಸಿರುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ. ತನಿಖೆಯ ಸ್ಥಿತಿ ಮತ್ತು ಮಧ್ಯಂತರ ಸಂಶೋಧನೆಗಳ ಬಗ್ಗೆ ಸಮಿತಿಗೆ ತಿಳಿಸಲಾಗಿದೆ ಎಂದು ಸೆಬಿ ಹೇಳಿಕೊಂಡಿದೆ.

ಹಿಂಡೆನ್‌ಬರ್ಗ್ ರಿಸರ್ಚ್‌ನ ವರದಿಯಲ್ಲಿ ಉಲ್ಲೇಖಿಸಲಾದ 12 ಸಂಶಯಾಸ್ಪದ ವಹಿವಾಟುಗಳಿಗೆ ಸಂಬಂಧಿಸಿದಂತೆ ತನಿಖೆ ಮಾಡಲು ಕನಿಷ್ಠ 15 ತಿಂಗಳ ಕಾಲಾವಕಾಶ ಬೇಕಿದೆ ಎಂದು ಮಾರುಕಟ್ಟೆ ನಿಯಂತ್ರಕ ಸೆಬಿ ಅಭಿಪ್ರಾಯಪಟ್ಟಿದೆ.

“ಏಕೆಂದರೆ ವಹಿವಾಟುಗಳು ಸಂಕೀರ್ಣವಾಗಿವೆ. ಹಲವಾರು ದೇಶೀಯ ಮತ್ತು ಅಂತರರಾಷ್ಟ್ರೀಯ ಬ್ಯಾಂಕ್‌ಗಳಿಂದ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಪಡೆಯಬೇಕಾಗುತ್ತದೆ” ಎಂದು ಸೆಬಿ ವಿವರಿಸಿದೆ.

“ವಿದೇಶಿ ಬ್ಯಾಂಕ್‌ಗಳಿಂದ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಪಡೆಯುವ ಈ ಪ್ರಕ್ರಿಯೆಯು ವಿದೇಶಿ ನಿಯಂತ್ರಕರಿಂದ ಸಹಾಯವನ್ನು ಬೇಡುತ್ತದೆ. ಇದಕ್ಕೆ ಸಮಯ ಬೇಕಾಗುತ್ತದೆ. ಅಲ್ಲದೆ ಇದು ಸವಾಲಿನ ಕೆಲಸವಾಗಿದೆ” ಎಂದು ತಿಳಿಸಿದೆ.

ತನ್ನ ತನಿಖೆಯನ್ನು ಆರು ತಿಂಗಳೊಳಗೆ ಪೂರ್ಣಗೊಳಿಸಲು ‘ಸಮಂಜಸವಾದ ಪ್ರಯತ್ನಗಳನ್ನು’ ಮಾಡುವುದಾಗಿ ಸೆಬಿ ಹೇಳಿದೆ.

ಇದನ್ನೂ ಓದಿರಿ: ಲಿಂಗಾಯತರನ್ನು ಕಳ್ಳರೆಂದು ಬಿಜೆಪಿ ನಿಂದಿಸಿದೆ: ಮೋದಿ ಹೇಳಿರುವುದಾಗಿ ರಾಜ್ಯ ಬಿಜೆಪಿ ಟ್ವೀಟ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ-2024: ಕುಗ್ಗಿದ ಮೋದಿ ವರ್ಚಸ್ಸು; ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವಲೋಕನ…

0
2014 ಮತ್ತು 2019ರ ಲೋಕಸಭೆ ಚುನಾವಣೆಗೆ ಹೋಲಿಕೆ ಮಾಡಿದರೆ 2024ರಲ್ಲಿ ದೇಶದಲ್ಲಿ ಮೋದಿ ವರ್ಚಸ್ಸು ಕಡಿಮೆಯಾಗಿದೆ. ಈ ಬಾರಿ ಬ್ರ್ಯಾಂಡ್ ಮೋದಿ ದುರ್ಬಲವಾಗುತ್ತಿದೆ, ಮೋದಿ ಕುರಿತು ನಿರೂಪಣೆಯಲ್ಲಿ ಬದಲಾವಣೆ ಇದೆ, ಜನರಲ್ಲಿ ಮೋದಿ...