Homeಮುಖಪುಟಆದಿತ್ಯ ಎಲ್ -1: ಭೂಬಂಧಿತ 3ನೇ ಕಾರ್ಯಾಚರಣೆ ಯಶಸ್ವಿ

ಆದಿತ್ಯ ಎಲ್ -1: ಭೂಬಂಧಿತ 3ನೇ ಕಾರ್ಯಾಚರಣೆ ಯಶಸ್ವಿ

- Advertisement -
- Advertisement -

ಸೂರ್ಯನ ಅಧ್ಯಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಹತ್ವಾಕಾಂಕ್ಷೆಯ ಆದಿತ್ಯ ಎಲ್ -1 ಬಾಹ್ಯಾಕಾಶ ನೌಕೆಯು ಭಾನುವಾರ ನಸುಕಿನ ವೇಳೆ 3ನೇ ಭೂಬಂಧಿತ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿದೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ಈಗ ಆದಿತ್ಯ ಭೂಮಿಯಿಂದ 296 ಕಿ.ಮೀ x 71767 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಪರಿಭ್ರಮಣ ನಡೆಸುತ್ತಿದೆ.

ಈ ಕಾರ್ಯಾಚರಣೆಯನ್ನು ಬೆಂಗಳೂರು, ಮಾರಿಷಸ್, ಎಸ್‌ಡಿಎಸ್‌ಸಿ-ಎಸ್‌ಎಚ್‌ಎಆರ್ ಮತ್ತು ಪೋರ್ಟ್‌ ಬೇರ್‌ನಲ್ಲಿರುವ ಇಸ್ರೋ ಕೇಂದ್ರಗಳಲ್ಲಿ ಟ್ರ್ಯಾಕ್ ಮಾಡಲಾಗಿದೆ. ಮುಂದಿನ (ನಾಲ್ಕನೆ ಹಂತದ ಕಕ್ಕೆ ಬದಲಾವಣೆ ಸಪ್ಟೆಂಬರ್ 15ರಂದು ನಿಗದಿಯಾಗಿದೆ.

ಸೆಪ್ಟೆಂಬರ್ 2ರಂದು ಸೂರ್ಯನ ಅಧ್ಯಯನದ ಉದ್ದೇಶದ ಭಾರತದ ಮಹತ್ವಾಕಾಂಕ್ಷೆಯ ಆದಿತ್ಯ ಎಲ್1 ಬಾಹ್ಯಾಕಾಶ ನೌಕೆಯನ್ನು ಹೊತ್ತ ಪಿಎಸ್‌ಎಲ್‌ವಿ ರಾಕೆಟ್ ಅನ್ನು ಶ್ರೀಹರಿಕೋಟದ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉದ್ಯಯನ ಮಾಡಲಾಗಿತ್ತು.

ಭೂಮಿಯಿಂದ 15 ಲಕ್ಷ ಕಿ.ಮೀ. ದೂರದಲ್ಲಿರುವ ಅಗ್ರಾಂಜಿಯನ್ ಬಿಂದುವಿನಲ್ಲಿ ಆದಿಶ್ಯ ಎಲ್-1 ಅಂತರಿಕ ವೀಕ್ಷಣಾಲಯವನ್ನು ಇರಿಸಲಾಗುವುದು. 125 ದಿನಗಳಲ್ಲಿ ಎಲ್-1 ಬಿಂದುವಿಗೆ ಸೇರಿಸಲಾಗುತ್ತದೆ.

ಆದಿತ್ಯ-ಎಲ್1 ಮಿಷನ್ ಸೆಪ್ಟೆಂಬರ್ 2ರಂದು ಉಡಾವಣೆಗೊಂಡಿತ್ತು. ಈ ಉಪಗ್ರಹ ಇದೀಗ 296 ಕಿಲೋಮೀಟರ್ 71767 ಕಿಲೋಮೀಟರ್ ಕಕ್ಷೆಯಲ್ಲಿದ್ದು, ಸೆಪ್ಟೆಂಬರ್ 15ರಂದು ಮುಂಜಾನೆ 2 ಗಂಟೆಗೆ ಮುಂದಿನ ಭೂಬಂಧಿತ ಕಾರ್ಯಾಚರಣೆ ನಡೆಯಲಿದೆ ಎಂದು ಇಸ್ರೋ ಸ್ಪಷ್ಟಪಡಿಸಿದೆ. ಸೆಪ್ಟೆಂಬರ್ 15ರ ಕಾರ್ಯಾಚರಣೆ ಸೇರಿದಂತೆ ಆದಿತ್ಯ ಎಲ್-1 ಇಂಥ ಎರಡು ಕಾರ್ಯಾಚರಣೆಗಳನ್ನು ಹೊಂದಿದ್ದು, ಎಲ್1 ತಾಣದತ್ತ ತನ್ನ ಪಯಣದ ಅಗತ್ಯ ವೇಗವರ್ಧನೆಯನ್ನು ಗಳಿಸಿಕೊಳ್ಳಲು ಇದು ಅಗತ್ಯವಾಗಿದೆ.

ಉಡಾವಣೆಯ 16 ದಿನಗಳಲ್ಲಿ ಭೂಬಂಧಿತ ಕಾರ್ಯಾಚರಣೆಗಳು ಪೂರ್ಣಗೊಂಡ ಬಳಿಕ ಆದಿತ್ಯ ಎಲ್-1 ಟಿಎಲ್1 ಕಾರ್ಯಾಚರಣೆಗೆ ಒಳಗಾಗಲಿದೆ. ಇದು ಎಲ್1ನ 110 ದಿನಗಳ ಪಥದ ಆರಂಭ ಎನಿಸಲಿದೆ.

ಇದನ್ನೂ ಓದಿ: ಭಾರತದ ಮೊದಲ ಸೌರ ಮಿಷನ್ ಆದಿತ್ಯ-ಎಲ್ 1 ಯಶಸ್ವಿಯಾಗಿ ಉಡಾವಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ-2024: ಕುಗ್ಗಿದ ಮೋದಿ ವರ್ಚಸ್ಸು; ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವಲೋಕನ…

0
2014 ಮತ್ತು 2019ರ ಲೋಕಸಭೆ ಚುನಾವಣೆಗೆ ಹೋಲಿಕೆ ಮಾಡಿದರೆ 2024ರಲ್ಲಿ ದೇಶದಲ್ಲಿ ಮೋದಿ ವರ್ಚಸ್ಸು ಕಡಿಮೆಯಾಗಿದೆ. ಈ ಬಾರಿ ಬ್ರ್ಯಾಂಡ್ ಮೋದಿ ದುರ್ಬಲವಾಗುತ್ತಿದೆ, ಮೋದಿ ಕುರಿತು ನಿರೂಪಣೆಯಲ್ಲಿ ಬದಲಾವಣೆ ಇದೆ, ಜನರಲ್ಲಿ ಮೋದಿ...