Homeಮುಖಪುಟಬಾಟ್ಲಾ ಹೌಸ್ ಎನ್‌ಕೌಂಟರ್‌: ಅಪರಾಧಿ ಅರಿಜ್ ಖಾನ್‌ಗೆ ಮರಣದಂಡನೆ

ಬಾಟ್ಲಾ ಹೌಸ್ ಎನ್‌ಕೌಂಟರ್‌: ಅಪರಾಧಿ ಅರಿಜ್ ಖಾನ್‌ಗೆ ಮರಣದಂಡನೆ

- Advertisement -
- Advertisement -

ದೆಹಲಿಯಲ್ಲಿ 2008 ರಲ್ಲಿ ನಡೆದಿದ್ದ ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯನ್ನು ಹತ್ಯೆಗೈದ ಆರೋಪಲ್ಲಿ ಶಿಕ್ಷೆಗೊಳಗಾಗಿದ್ದ ಭಾರತೀಯ ಮುಜಾಹಿದ್ದೀನ್ ಭಯೋತ್ಪಾದಕ ಅರಿಜ್ ಖಾನ್‌ಗೆ ಸೋಮವಾರ ಮರಣದಂಡನೆ ವಿಧಿಸಲಾಗಿದೆ.

ದಕ್ಷಿಣ ದೆಹಲಿಯ ಬಾಟ್ಲಾ ಹೌಸ್‌ನಲ್ಲಿ 2008 ರಲ್ಲಿ ಭಯೋತ್ಪಾದಕರ ಒಂದು ಗುಂಪು ಮತ್ತು ದೆಹಲಿ ಪೊಲೀಸರು ನಡುವಿನ ಘರ್ಷಣೆಯಲ್ಲಿ ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ ಬಲಿಯಾಗಿದ್ದರು. ಇನ್ನಿಬ್ಬರು ಅಧಿಕಾರಿಗಳು ಗಾಯಗೊಂಡಿದ್ದರು.

ಘಟನೆ ನಂತರ 2008 ರಲ್ಲಿ ಸ್ಥಳದಿಂದ ಪರಾರಿಯಾಗಿದ್ದ, ಉತ್ತರ ಪ್ರದೇಶದ ಅಜಮ್‌ಗಢ ಮೂಲದ ಅರಿಜ್ ಖಾನ್‌ನನ್ನು 2018 ರ ಫೆಬ್ರವರಿಯಲ್ಲಿ ದೆಹಲಿ ಪೊಲೀಸರ ವಿಶೇಷ ದಳ ಬಂಧಿಸಿತ್ತು. ಕಳೆದ ವಾರ ಈ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ವಿಧಿಸಲಾಗಿತ್ತು. ದೆಹಲಿ, ರಾಜಸ್ಥಾನ, ಗುಜರಾತ್ ಮತ್ತು ಉತ್ತರ ಪ್ರದೇಶದಾದ್ಯಂತ ನಡೆದ 2008 ರ ಸರಣಿ ಸ್ಫೋಟಗಳ ಮಾಸ್ಟರ್ ಮೈಂಡ್ ಅರಿಜ್ ಖಾನ್ ಎನ್ನಲಾಗಿದೆ.

ಇದನ್ನೂ ಓದಿ: ಪಕ್ಷಾಂತರಿಗೆ ಟಿಕೆಟ್ ನೀಡಿದ್ದಕ್ಕೆ ಆಕ್ರೋಶ: ಬಿಜೆಪಿ ನಾಯಕರನ್ನು ಕೊಠಡಿಯಲ್ಲಿ ಕೂಡಿ ಹಾಕಿದ ಕಾರ್ಯಕರ್ತರು!

ಇದು ಕೇವಲ ಸಾಮಾನ್ಯ ಹತ್ಯೆಯಲ್ಲ, ಆದರೆ ನ್ಯಾಯದ ರಕ್ಷಕನಾಗಿದ್ದ ಕಾನೂನು ಜಾರಿಗೊಳಿಸುವ ಅಧಿಕಾರಿಯ ಕೊಲೆ ಎಂದು ಪೊಲೀಸರು ಖಾನ್‌ಗೆ ಮರಣದಂಡನೆ ವಿಧಿಸಬೇಕು ಎಂದು ಕೋರಿದ್ದರು. ಅರಿಜ್ ಖಾನ್ ಪರ ಹಾಜರಾಗಿದ್ದ ವಕೀಲ ಎಂ.ಎಸ್. ಖಾನ್, ಘಟನೆಯನ್ನು ಪೂರ್ವನಿಯೋಜಿತವಲ್ಲ ಎಂದು ಮರಣದಂಡನೆಯನ್ನು ವಿರೋಧಿಸಿದರು.

ಮರಣದಂಡನೆ ವಿಧಿಸಲು ಅರ್ಹವಾದ “ಅಪರೂಪದ ಪ್ರಕರಣಗಳಲ್ಲಿ ಒಂದಾಗಿದೆ” ಎಂದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂದೀಪ್ ಯಾದವ್ ಸೋಮವಾರ ಅರಿಜ್ ಖಾನ್‌ಗೆ ಮರಣದಂಡನೆ ವಿಧಿಸಿ, ಒಟ್ಟು 11 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ ಅವರ ಕುಟುಂಬ ಸದಸ್ಯರಿಗೆ 10  ಲಕ್ಷವನ್ನು ತಕ್ಷಣ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

2013 ರಲ್ಲಿ ಆರೋಪಿ ಖಾನ್ ಜೊತೆಗೆ ಬಾಟ್ಲಾ ಹೌಸ್ ಶೂಟೌಟ್‌ನಿಂದ ತಪ್ಪಿಸಿಕೊಂಡಿದ್ದ ಶಹಜಾದ್ ಅಹ್ಮದ್ ಎಂಬಾತನನ್ನು ಶಿಕ್ಷೆಗೊಳಪಡಿಸಲಾಗಿದೆ. ಘಟನೆಯಲ್ಲಿ ಆರೋಪಿಗಳಾಗಿದ್ದ ಇಬ್ಬರು ಸಹಚರರಾದ ಅತೀಫ್ ಅಮೀನ್ ಮತ್ತು ಮೊಹಮ್ಮದ್ ಸಾಜಿದ್ ಸಾವನ್ನಪ್ಪಿದ್ದಾರೆ. ಮೂರನೆಯವನನ್ನು ಮೊಹಮ್ಮದ್ ಸೈಫ್ ಎಂಬಾತನನ್ನು ಬಂಧಿಸಲಾಗಿದೆ.

2008 ರಲ್ಲಿ ರಾಷ್ಟ್ರ ರಾಜಧಾನಿಯ ಹೊರತಾಗಿಯೂ, ಜೈಪುರ ಮತ್ತು ಅಹಮದಾಬಾದ್‌ನಂತಹ ನಗರಗಳಲ್ಲಿ ನಡೆದ ಅನೇಕ ಬಾಂಬ್ ಸ್ಫೋಟಗಳಿಗೂ ಅರಿಜ್ ಖಾನ್‌ಗೂ ಸಂಬಂಧ ಹೊಂದಿದ್ದವು. ಈ ಘಟನೆಗಳಲ್ಲಿ ಸುಮಾರು 165 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಜೊತೆಗೆ ಅರಿಜ್ ಖಾನ್ ಮೇಲೆ 15 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.


ಇದನ್ನೂ ಓದಿ: ತಮಿಳುನಾಡು ಚುನಾವಣೆ: ನಟ ಕಮಲ್ ಹಾಸನ್ ಮೇಲೆ ಹಲ್ಲೆ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್: ಎನ್‌ಡಿಎ ಮೈತ್ರಿ ಪಕ್ಷದ ನಾಯಕ ರಾಜೀನಾಮೆ

0
ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬಿಜೆಪಿಯ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರ ಪುತ್ರನಿಗೆ ಟಿಕೆಟ್ ನೀಡಿದ ಬೆನ್ನಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿ ಎನ್‌ಡಿಎ ಮೈತ್ರಿ ಪಕ್ಷ ಆರ್‌ಎಲ್‌ಡಿಯ ರಾಷ್ಟ್ರೀಯ ವಕ್ತಾರ ರೋಹಿತ್...