HomeUncategorizedಅಫ್ಘಾನಿಸ್ತಾನದ ಮಸೀದಿಯಲ್ಲಿ ಉಗ್ರರಿಂದ ಗುಂಡಿನ ದಾಳಿ 20 ಮಂದಿ ಸಾವು

ಅಫ್ಘಾನಿಸ್ತಾನದ ಮಸೀದಿಯಲ್ಲಿ ಉಗ್ರರಿಂದ ಗುಂಡಿನ ದಾಳಿ 20 ಮಂದಿ ಸಾವು

- Advertisement -
- Advertisement -

ಅಫ್ಘಾನಿಸ್ತಾನದ ನಂಗಾಹಾರ ಪ್ರದೇಶದ ಮಸೀದಿಯೊಂದರಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಸುಮಾರು 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 40 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಫ್ಘನ್ ಮೂಲಗಳು ತಿಳಿಸಿವೆ.

ಅಫ್ಘಾನಿಸ್ತಾನದ ನಂಗಾಹಾರ  ಪ್ರದೇಶದ ಮಸೀದಿಯಲ್ಲಿ ಮಧ್ಯಾಹ್ನದ ವೇಳೆ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಈ ವೇಳೆ ಮೇಲ್ಛಾವಣಿಯಿಂದ ಗುಂಡು ಹಾರಿಸಿದ್ದಾರೆ ಎಂದು ಪೂರ್ವ ನಂಗಾಹಾರದ ವಕ್ತಾರ ಅತ್ತಾಉಲ್ಲಾ ಖೋಗ್ಯಾನಿ ತಿಳಿಸಿದ್ದಾರೆ. ದುಷ್ಕರ್ಮಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದ ಮಕ್ಕಳ ಮೇಲೂ ಗುಂಡು ಹಾರಿಸಿದ್ದಾರೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಇನ್ನು ದಾಳಿಯ ಹೊಣೆಯನ್ನೂ ಯಾವ ಉಗ್ರ ಸಂಘಟನೆಗಳೂ ಹೊತ್ತಿಲ್ಲ. ಆದರೂ ನಂಗಾಹಾರ ಪ್ರದೇಶದ ಸುತ್ತಮುತ್ತ ತಾಲಿಬಾನಿ ಮತ್ತು ಇಸ್ಲಾಮಿಕ್ ಸ್ಟೇಟ್ ಗ್ರೂಪ್ ಉಗ್ರರ ಚಟುವಟಿಕೆ ಹೆಚ್ಚಿದೆ. ಹೀಗಾಗಿ  ಎರಡೂ ಉಗ್ರ ಸಂಘಟನೆಗಳ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸುಮಾರು 9 ತಿಂಗಳವರೆಗೆ ನಡೆದ ದಾಳಿಗಳಲ್ಲಿ 2,500 ನಾಗರಿಕರು ಮೃತಪಟ್ಟಿದ್ದು, 5600 ಮಂದಿ ಗಾಯಗೊಂಡಿದ್ದಾರೆ ಎಂದು ಯು.ಎನ್ ರಿಪೋರ್ಟ್ ಹೇಳಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೇಶಿ ಮುಸ್ಲಿಮರ ಗಣತಿಗೆ ಅಸ್ಸಾಂ ಸಂಪುಟ ಅನುಮೋದನೆ

0
ರಾಜ್ಯದ ದೇಶಿ ಮುಸ್ಲಿಮರ ಆರ್ಥಿಕ-ಸಾಮಾಜಿಕ ಸಮೀಕ್ಷೆಗೆ ಸಮೀಕ್ಷೆಗೆ ಅಸ್ಸಾಂ ಸಂಪುಟ ಸಭೆ ಶುಕ್ರವಾರ ಅನುಮೋದನೆ ನೀಡಿದೆ. ಮುಸ್ಲಿಂ ಜನಾಂಗದ ಐದು ಸಮುದಾಯಗಳನ್ನು ದೇಶಿಯ ಅಸ್ಸಾಂ ಮುಸ್ಲಿಮರು ಎಂದು ಹಿಮಂತ್ ಬಿಶ್ವ ಶರ್ಮಾ ನೇತೃತ್ವದ ಸರ್ಕಾರ...