Homeಮುಖಪುಟಬಿಹಾರದ ಜಾತಿ ಗಣತಿ ಸ್ವಾಗತಾರ್ಹ, ಇದು 'ಸರಿಯಾದ ಪರಿಹಾರ' ಎಂದು ಕೇಂದ್ರಕ್ಕೆ ಮಾಯಾವತಿ ಸಲಹೆ

ಬಿಹಾರದ ಜಾತಿ ಗಣತಿ ಸ್ವಾಗತಾರ್ಹ, ಇದು ‘ಸರಿಯಾದ ಪರಿಹಾರ’ ಎಂದು ಕೇಂದ್ರಕ್ಕೆ ಮಾಯಾವತಿ ಸಲಹೆ

- Advertisement -
- Advertisement -

ಬಿಹಾರದಲ್ಲಿ ಜಾತಿ ಆಧಾರಿತ ಜನಗಣತಿ ವರದಿಯನ್ನು ಸರಕಾರ ಬಿಡುಗಡೆಗೊಳಿಸಿದೆ. ಇದು ಇತರ ಹಿಂದುಳಿದ ವರ್ಗಗಳ (ಒಬಿಸಿ) ಸಾಂವಿಧಾನಿಕ ಹಕ್ಕುಗಳನ್ನು ಖಾತ್ರಿಪಡಿಸುವ ಮೊದಲ ಹೆಜ್ಜೆಯಾಗಿದೆ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಮಂಗಳವಾರ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲೂ ಜಾತಿಜನಗಣತಿ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

”ಬಿಹಾರ ಸರ್ಕಾರ ನಡೆಸಿದ ಜಾತಿ ಗಣತಿಯ ವರದಿಗಳು ಇಂದು ಸುದ್ದಿಯಲ್ಲಿವೆ ಮತ್ತು ಅದರ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಕೆಲವು ಪಕ್ಷಗಳಿಗೆ ಇದು ಒಪ್ಪಿತವಿಲ್ಲ, ಆದರೆ ಬಿಎಸ್‌ಪಿಗೆ ಇದು ಖಾತ್ರಿಪಡಿಸುವ ಸುದೀರ್ಘ ಹೋರಾಟದ ಮೊದಲ ಹೆಜ್ಜೆಯಾಗಿದೆ. OBC ಗಳ ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ಇದು ಅನಕೂಲವಾಗುತ್ತದೆ” ಎಂದು ಅವರು X ನಲ್ಲಿ ಬರೆದಿದ್ದಾರೆ.

ಯುಪಿ ಸರ್ಕಾರವು ಜಾತಿ ಆಧಾರಿತ ಜನಗಣತಿಯನ್ನು ತಕ್ಷಣವೇ ಪ್ರಾರಂಭಿಸಬೇಕು ಇದು ಸರಿಯಾದ ಪರಿಹಾರ ಎಂದು ಒತ್ತಾಯಿಸಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಷ್ಟ್ರೀಯ ಮಟ್ಟದಲ್ಲಿ ಇದನ್ನು ಅನುಸರಿಸಬೇಕು ಎಂದು ಹೇಳಿದರು.

”ಜನರ ಭಾವನೆಗಳು ಮತ್ತು ನಿರೀಕ್ಷೆಗಳಿಗೆ ಅನುಗುಣವಾಗಿ ಯುಪಿ ಸರ್ಕಾರವು ಈಗ ತನ್ನ ಉದ್ದೇಶಗಳು ಮತ್ತು ನೀತಿಗಳನ್ನು ಸುಧಾರಿಸಬೇಕು. ಜಾತಿ ಗಣತಿ/ಸಮೀಕ್ಷೆಯನ್ನು ತಕ್ಷಣವೇ ಪ್ರಾರಂಭಿಸಬೇಕು, ಕೇಂದ್ರ ಸರ್ಕಾರವು ರಾಷ್ಟ್ರೀಯ ಮಟ್ಟದಲ್ಲಿ ಜಾತಿ ಗಣತಿಯನ್ನು ನಡೆಸಿ ಅವುಗಳನ್ನು ನೀಡಿದಾಗ ಮಾತ್ರ ಸರಿಯಾದ ಪರಿಹಾರವನ್ನು ಕಂಡುಹಿಡಿಯಲಾಗುತ್ತದೆ” ಎಂದು ಅವರು ಹೇಳಿದರು.

ನಿರ್ಲಕ್ಷಿತ ‘ಬಹುಜನ ಸಮಾಜ’ ಪರವಾಗಿ ಭಾರತದ ರಾಜಕೀಯಕ್ಕೆ ಹೊಸ ತಿರುವು ಪಡೆಯುತ್ತದೆ. ಇದು ನಮಗೆ, ನಮ್ಮ ಪಕ್ಷಕ್ಕೆ ಸಂತೋಷ ತಂದಿದೆ ಎಂದು ಮಾಯಾವತಿ ಹೇಳಿದರು. ಈ ಹೊಸ ಬೆಳವಣಿಗೆಯು ”ತೀವ್ರ ಜಾತಿ-ವಿರೋಧಿ ಮತ್ತು ಮಂಡಲ ವಿರೋಧಿ” ವಿಭಾಗಗಳನ್ನು ತಮ್ಮ ಭವಿಷ್ಯದ ಬಗ್ಗೆ ಚಿಂತಿಸುವಂತೆ ಮಾಡಿದೆ” ಎಂದು ಅವರು ಹೇಳಿದರು.

ಬಿಹಾರದಲ್ಲಿ ಜಾತಿಗಣತಿಯ ವರದಿಯನ್ನು ಸರಕಾರ ಬಿಡುಗಡೆಗೊಳಿಸಿದೆ. ಈ ಮೂಲಕ ದೇಶದಲ್ಲಿ ಜಾತಿ ಆಧಾರಿತ ಸಮೀಕ್ಷೆಯ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಬಿಹಾರ ಪಾತ್ರವಾಗಿದೆ.

ರಾಜ್ಯದಲ್ಲಿ 36%ದಷ್ಟು ಅತಿಹೆಚ್ಚು ಹಿಂದುಳಿದಿರುವ ಮತ್ತು 27% ಹಿಂದುಳಿದ ವರ್ಗದ ಜನರಿದ್ದಾರೆ. 19.7%  ಪರಿಶಿಷ್ಟ ಜಾತಿಯ ಜನ ಮತ್ತು 1.7%  ಪರಿಶಿಷ್ಟ ಪಂಗಡಗಳ ಜನರಿದ್ದಾರೆ. ಸಾಮಾನ್ಯ ವರ್ಗದ ಜನಸಂಖ್ಯೆಯು  15.5% ದಷ್ಟಿದೆ. ರಾಜ್ಯದ ಒಟ್ಟು ಜನಸಂಖ್ಯೆ 13.1 ಕೋಟಿಗೂ ಹೆಚ್ಚು ಎಂದು ಜಾತಿಗಣತಿಯಲ್ಲಿ ಬಹಿರಂಗವಾಗಿದೆ.

ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರ ಯಾದವ್ ಸಮುದಾಯವು ಅತಿಹೆಚ್ಚು ಅಂದರೆ ಒಬಿಸಿ ವರ್ಗಗಳಲ್ಲಿ 14.27 ಶೇಕಡಾ ಜನಸಂಖ್ಯೆಯನ್ನು ಹೊಂದಿದೆ. ಭೂಮಿಹಾರ್ ಜನಸಂಖ್ಯೆ ಶೇಕಡಾ 2.86 ರಷ್ಟಿದ್ದರೆ, ಬ್ರಾಹ್ಮಣರು ಶೇಕಡಾ 3.66 ರಷ್ಟಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಸಮುದಾಯಕ್ಕೆ ಸೇರಿದ ಕುರ್ಮಿಗಳು ಜನಸಂಖ್ಯೆ ಶೇಕಡಾ 2.87 ರಷ್ಟಿದ್ದಾರೆ. ಮುಸಾಹರ್‌ಗಳು ಶೇಕಡಾ 3 ರಷ್ಟಿದ್ದಾರೆ.

ಈ ಜಾತಿಗಣತಿಯ ವರದಿಯು ರಾಜ್ಯದಲ್ಲಿ ಭಾರೀ ರಾಜಕೀಯ ಚರ್ಚೆಗೆ ಕಾರಣವಾಗಲಿದೆ. ಒಬಿಸಿಗಳಿಗೆ ಕೋಟಾಗಳನ್ನು ಹೆಚ್ಚಿಸುವ ಬೇಡಿಕೆ ಕೂಡ ಹೆಚ್ಚಾಗಳಿದೆ. ಈಗ ರಾಜ್ಯದಲ್ಲಿ ಒಬಿಸಿಗಳಿಗೆ 27% ಮೀಸಲಾತಿ ಇದೆ. 2024ರ ಲೋಕಸಭಾ ಚುನಾವಣೆಗೆ ತಿಂಗಳುಗಳ ಮೊದಲು ಬಿಡುಗಡೆಯಾದ ಈ ಅಂಕಿಅಂಶಗಳ ಪ್ರಕಾರ ಒಬಿಸಿಗಳು ರಾಜ್ಯದಲ್ಲಿ ಶೇಕಡಾ 63.1ರಷ್ಟಿದ್ದಾರೆ.

ಈ ಜಾತಿಗಣತಿ ವರದಿಯು ಬಿಹಾರದಲ್ಲಿ ಒಬಿಸಿಗಳ ಪ್ರಾಬಲ್ಯ ಮತ್ತು ಚುನಾವಣಾ ಪ್ರಭಾವವನ್ನು ಒತ್ತಿಹೇಳುತ್ತಿದೆ.

ದತ್ತಾಂಶ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗಾಂಧಿ ಜಯಂತಿಯ ದಿನದಂದು ದತ್ತಾಂಶ ಬಿಡುಗಡೆ ಬಗ್ಗೆ ಶ್ಲಾಘಿಸಿ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿದ್ದಾರೆ.

ಶೀಘ್ರದಲ್ಲೇ ಬಿಹಾರ ವಿಧಾನಸಭೆಯಲ್ಲಿ ಒಂಬತ್ತು ಪಕ್ಷಗಳ ಸಭೆಯನ್ನು ಕರೆಯಲಾಗುವುದು. ಬಿಹಾರದಲ್ಲಿನ ಜಾತಿ ಆಧಾರಿತ ಜನಗಣತಿಯ ಫಲಿತಾಂಶಗಳ ಬಗ್ಗೆ ಅವರಿಗೆ ತಿಳಿಸಲಾಗುವುದು ಎಂದು ನಿತೀಶ್ ಕುಮಾರ್ ಅವರು ಹೇಳಿದ್ದಾರೆ.

ಈ ಬಗ್ಗೆ ಲಾಲು ಪ್ರಸಾದ್ ಯಾದವ್‌ ಅವರು ಪ್ರತಿಕ್ರಿಯಿಸಿದ್ದು, ಜಾತಿಗಣತಿ ಬಿಡುಗಡೆ ಬಗ್ಗೆ ಶ್ಲಾಘಿಸಿದ್ದಾರೆ.  ಬಿಜೆಪಿಯ ಪಿತೂರಿಗಳು, ಕಾನೂನು ಅಡೆತಡೆಗಳು ಹೊರತಾಗಿಯೂ ಇಂದು ಬಿಹಾರ ಸರ್ಕಾರವು ಜಾತಿ ಆಧಾರಿತ ಸಮೀಕ್ಷೆಯನ್ನು ಬಿಡುಗಡೆ ಮಾಡಿದೆ ಎಂದು ಹೇಳಿದ್ದಾರೆ.

ಆದರೆ ಕೇಂದ್ರ ಸಚಿವ ಮತ್ತು ಸಂಸದ ಗಿರಿರಾಜ್ ಸಿಂಗ್ ಅವರು ಜಾತಿ ಆಧಾರಿತ ಸಮೀಕ್ಷೆಯ ವರದಿಯನ್ನು “ಕಣ್ಣು ಕಟ್ಟು” ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಜಾತಿಯಾಧಾರಿತ ಜನಗಣತಿಗೆ ನಕಾರ: ಕೇಂದ್ರದ ವಿರುದ್ಧ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ವಾಗ್ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್ ವೇಮುಲಾ ಪ್ರಕರಣ: ಪೊಲೀಸರ ವರದಿ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ; ಪ್ರತಿಕ್ರಿಯಿಸಿದ ಕುಟುಂಬ

0
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಪೊಲೀಸರು ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ವರದಿಯಲ್ಲಿ ರೋಹಿತ್‌ ವೇಮುಲಾ 'ದಲಿತ ಅಲ್ಲ', ತನ್ನ “ನಿಜವಾದ ಜಾತಿಯ ಗುರುತು”...