Homeಮುಖಪುಟನೂತನ ಸಂಸತ್ ಕಟ್ಟಡದಲ್ಲಿ ‘ಅಖಂಡ ಭಾರತ’ ಚಿತ್ರ; ಭಾರತದ ಸ್ಪಷ್ಟನೆ ಬಯಸಿದ ಬಾಂಗ್ಲಾ

ನೂತನ ಸಂಸತ್ ಕಟ್ಟಡದಲ್ಲಿ ‘ಅಖಂಡ ಭಾರತ’ ಚಿತ್ರ; ಭಾರತದ ಸ್ಪಷ್ಟನೆ ಬಯಸಿದ ಬಾಂಗ್ಲಾ

ಪ್ರಹ್ಲಾದ್ ಜೋಶಿಯವರು ಮಾಡಿರುವ ಟ್ವೀಟ್‌ಗೆ ಪಾಕಿಸ್ತಾನ ಮತ್ತು ನೇಪಾಳದಲ್ಲಿ ಆಕ್ಷೇಪಗಳು ವ್ಯಕ್ತವಾಗಿವೆ.

- Advertisement -
- Advertisement -

ಹೊಸ ಸಂಸತ್ತಿನ ಕಟ್ಟಡದಲ್ಲಿ ಇರಿಸಲಾಗಿರುವ ‘ಅಖಂಡ ಭಾರತ’ ಚಿತ್ರದ ಬಗ್ಗೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಸ್ಪಷ್ಟನೆ ಪಡೆಯಲು ಬಾಂಗ್ಲಾದೇಶ ಸರ್ಕಾರ ನಿರ್ಧರಿಸಿದೆ.

‘ಅಖಂಡ ಭಾರತ್‌’ ಎಂದು ಬಿಂಬಿಸಲಾಗಿರುವ ಚಿತ್ರ ಈಗ ಅಂತಾರಾಷ್ಟ್ರೀಯ ವಿದ್ಯಮಾನಕ್ಕೆ ಕಾರಣವಾಗಿದೆ. ಪಾಕಿಸ್ತಾನ ಮತ್ತು ನೇಪಾಳದಲ್ಲಿ ಪ್ರತಿಭಟನೆಗಳು ದಾಖಲಾಗಿವೆ. “ಈ ಸಂಬಂಧ ಬಾಂಗ್ಲಾದ ಅವಾಮಿ ಲೀಗ್ ಸರ್ಕಾರವು ಭಾರತದಿಂದ ಸ್ಪಷ್ಟೀಕರಣವನ್ನು ಪಡೆಯುವ ಪ್ರಕ್ರಿಯೆಯಲ್ಲಿದೆ” ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಶಹರಿಯಾರ್ ಆಲಂ ಅವರು ಢಾಕಾದಲ್ಲಿ ಪತ್ರಕರ್ತರಿಗೆ ತಿಳಿಸಿದ್ದಾರೆ.

ಅಲ್ಲಿನ ವಿರೋಧ ಪಕ್ಷವಾದ ‘ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ’ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಆನಂತರ ಬಾಂಗ್ಲಾ ವಿದೇಶಾಂಗ ಸಚಿವರ ಹೇಳಿಕೆ ಹೊರಬಿದ್ದಿದೆ. “ಅಖಂಡ ಭಾರತ ಕಲ್ಪನೆಯು ಬಾಂಗ್ಲಾದೇಶದ ಸ್ವಾತಂತ್ರ್ಯ ಮತ್ತು ಸಾರ್ವಭೌಮತೆಗೆ ನೀಡಿರುವ ಬೆದರಿಕೆ” ಎಂದು ವಿರೋಧ ಪಕ್ಷ ಎಚ್ಚರಿಸಿದೆ.

ಸ್ಥಳೀಯ ಒತ್ತಡದಿಂದಾಗಿ ಬಾಂಗ್ಲಾ ಸರ್ಕಾರ ಈ ನಿರ್ಧಾರಕ್ಕೆ (ಸ್ಪಷ್ಟನೆ ಕೇಳುವುದಕ್ಕೆ) ಬಂದಿರಬಹುದೆಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ವಕ್ತಾರರು ಹೇಳಿದ್ದಾರೆ. ಅಶೋಕ ಸಾಮ್ರಾಜ್ಯದ ಕಾಲದಲ್ಲಿನ ಭಾರತದ ಗಡಿಗಳ ಬಗ್ಗೆ ತೋರಿಸುವ ಪ್ರಯತ್ನವೇ ಈ ಚಿತ್ರವಾಗಿದೆ. ಸಾಮ್ರಾಜ್ಯವನ್ನು ಪುನರುಜ್ಜೀನವಗೊಳಿಸುವ ಕಲ್ಪನೆಯದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಆಲಂ ಪ್ರತಿಕ್ರಿಯಿಸಿ,  “ಈ ವಿಷಯದ ಬಗ್ಗೆ ಭಾರತದ ಅಧಿಕೃತ ವಿವರಣೆಯನ್ನು ಪಡೆಯಲು ಭಾರತವನ್ನು ಸಂಪರ್ಕಿಸುವಂತೆ ದೆಹಲಿಯಲ್ಲಿರುವ ಬಾಂಗ್ಲಾದೇಶ ರಾಯಭಾರಿ ಕಚೇರಿಗೆ ಸೂಚನೆ ನೀಡಲಾಗಿದೆ” ಎಂದಿದ್ದಾರೆ. ಆಲಂ ಹೇಳಿಕೆ ಕುರಿತು ‘ಢಾಕಾ ಟ್ರಿಬ್ಯೂನ್’ ವರದಿ ಮಾಡಿದೆ.

ಭಿತ್ತಿಚಿತ್ರದ ವಿರುದ್ಧ ನೇಪಾಳದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದವು. ನಂತರ ಭಾರತೀಯ ವಿದೇಶಾಂಗ ಸಚಿವಾಲಯ ವಿವರಣೆ ನೀಡಿತು.

“ಇದು ಕ್ರಿಸ್ತನ ಜನನಕ್ಕೆ 300 ವರ್ಷಗಳ ಹಿಂದಿನ ಅಶೋಕ ಸಾಮ್ರಾಜ್ಯದ ನಕ್ಷೆ” ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ಹೇಳಿದ್ದಾರೆ. “ಈ ಚಿತ್ರವು ಜನರ ಪ್ರಯಾಣವನ್ನು ಚಿತ್ರಿಸುತ್ತದೆ. ಸಾಂಸ್ಕೃತಿಕ ಸಾಮ್ಯತೆಗಳಿರಬಹುದು, ಆದರೆ ಅದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಆಲಂ ಅವರೂ ಪುನರುಚ್ಚರಿಸಿದ್ದಾರೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು, “ಸಂಕಲ್ಪ ಸ್ಪಷ್ಟವಾಗಿದೆ – ಅಖಂಡ ಭಾರತ” ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಟ್ವೀಟ್ ಮಾಡಿದ ನಂತರ ಈ ಸಮಸ್ಯೆ ಉದ್ಭವವಾಗಿದೆ.

ನೇಪಾಳದಲ್ಲಿ ಭಿತ್ತಿಚಿತ್ರದ ಬಗ್ಗೆ ಬೀದಿ ಪ್ರತಿಭಟನೆಗಳು ನಡೆದವು. ಕೆಲವು ರಾಜಕಾರಣಿಗಳು ಪ್ರತಿಕ್ರಿಯಿಸಿ, “ಈ ಕ್ರಮವು ಕಠ್ಮಂಡು ಮತ್ತು ದೆಹಲಿ ನಡುವೆ ಈಗಾಗಲೇ ಇರುವ ವಿಶ್ವಾಸದ ಕೊರತೆಯನ್ನು ಉಲ್ಬಣಗೊಳಿಸಬಹುದು” ಎಂದು ಎಚ್ಚರಿಸಿದರು.

ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ಮುಮ್ತಾಜ್ ಬಲೂಚ್ ಅವರು ಪ್ರತಿಕ್ರಿಯಿಸಿ, “ಜೋಶಿಯವರ ಹೇಳಿಕೆಯಿಂದ ಆಘಾತವಾಗಿದೆ. ‘ಅಖಂಡ ಭಾರತ’ದ ಅನಪೇಕ್ಷಿತ ಪ್ರತಿಪಾದನೆಯು ಪರಿಷ್ಕರಣೆ ಮತ್ತು ವಿಸ್ತರಣಾವಾದಿ ಮನಸ್ಥಿತಿಯ ದ್ಯೋತಕವಾಗಿದೆ. ಇದು ಭಾರತದ ನೆರೆಯ ರಾಷ್ಟ್ರಗಳ ಗುರುತು ಮತ್ತು ಸಂಸ್ಕೃತಿಯನ್ನು ಅಧೀನಗೊಳಿಸಲು ಪ್ರಯತ್ನಿಸುತ್ತಿದೆ. ಆದರೆ ತನ್ನದೇ ದೇಶದ ಧಾರ್ಮಿಕ ಅಲ್ಪಸಂಖ್ಯಾತರನ್ನೂ ಅಧೀನಗೊಳಿಸಲು ಯತ್ನಿಸಲಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿರಿ: ವಿಶ್ಲೇಷಣೆ: ಜಾತಿಗಣತಿ ಜಾರಿಗೊಳಿಸುವ ಸಿಎಂ ನಿರ್ಧಾರ ಸ್ವಾಗತಾರ್ಹವೇಕೆ?

ಕಳೆದ ವಾರ ಭಾರತೀಯ ವಿದೇಶಾಂಗ ವಕ್ತಾರ ಅರಿಂದಮ್ ಬಾಗ್ಚಿ ಪ್ರತಿಕ್ರಿಯಿಸಿ, “ಸದರಿ ಭಿತ್ತಿಚಿತ್ರವು ‘ಅಖಂಡ ಭಾರತ’ದ ಬಗ್ಗೆ ಇಲ್ಲ. ಪ್ರಾಚೀನ ಮೌರ್ಯ ಸಾಮ್ರಾಜ್ಯದಲ್ಲಿನ ಸಾಮ್ರಾಜ್ಯ ವಿಸ್ತರಣೆಗೆ ಸಂಬಂಧಿಸಿದೆ” ಎಂದಿದ್ದರು.

“ಟೀಕೆಗೆ ಗುರಿಯಾಗಿರುವ ಚಿತ್ರವು ಅಶೋಕ ಸಾಮ್ರಾಜ್ಯ, ಆತನ ಚಿಂತನೆ, ಆಡಳಿತದ ಸುಧಾರಣೆಗೆ ಸಂಬಂಧಿಸಿದೆ. ಚಿತ್ರದ ಮುಂಭಾಗದಲ್ಲಿರುವ ಫಲಕವು ಅದನ್ನೇ ಹೇಳುತ್ತದೆ. ಮತ್ತೇನೂ ಅಲ್ಲ” ಬಾಗ್ಚಿ ಸ್ಪಷ್ಟಪಡಿಸಿದ್ದರು.

ಜೋಶಿಯವರ ಟ್ವೀಟ್ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಅವರು, “ಇತರ ರಾಜಕೀಯ ನಾಯಕರು ನೀಡಬಹುದಾದ ಹೇಳಿಕೆಗಳ ಬಗ್ಗೆ ನಾನು ಖಂಡಿತವಾಗಿಯೂ ಪ್ರತಿಕ್ರಿಯಿಸುವುದಿಲ್ಲ” ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...