Homeಕರ್ನಾಟಕಅಪಘಾನಿಸ್ತಾನಕ್ಕೆ ನೆರವು ನೀಡಿದ ಭಾರತ

ಅಪಘಾನಿಸ್ತಾನಕ್ಕೆ ನೆರವು ನೀಡಿದ ಭಾರತ

- Advertisement -
- Advertisement -

ಕಳೆದ ಆಗಸ್ಟ್‌ನಲ್ಲಿ ಕಾಬೂಲ್ಅನ್ನು ತಾಲಿಬಾನ್‌ ವಶಪಡಿಸಿಕೊಂಡ ನಂತರ ಮೊದಲ ಬಾರಿಗೆ ಭಾರತವು ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವನ್ನು ನೀಡಲು ಮುಂದಾಗಿದೆ. ಮಕ್ಕಳ ರಕ್ಷಣೆಗಾಗಿ ಮಕ್ಕಳ ಆಸ್ಪತ್ರೆಗಳಿಗೆ 1.6 ಟನ್ ತುರ್ತು ಔಷಧಿಗಳನ್ನು ಕಳುಹಿಸಿದೆ.

ಶುಕ್ರವಾರ ಕಾಬೂಲ್‌ನಿಂದ ದೆಹಲಿಗೆ 10 ಭಾರತೀಯರು ಮತ್ತು 94 ಅಫಘನ್ನರನ್ನು ಕರೆತಂದಿದ್ದ ರಿಟರ್ನ್ ವಿಮಾನದಲ್ಲಿ ಈ ಔಷಧಿಗಳನ್ನು ಕಳುಹಿಸಲಾಗಿದೆ.

ಭಾರತ ಮತ್ತು ಪಾಕಿಸ್ತಾನವು 50,000 ಮೆಟ್ರಿಕ್ ಟನ್ ಗೋಧಿಯನ್ನು ಪಾಕಿಸ್ತಾನದ ರಸ್ತೆ ಮೂಲಕ ಆಫ್ಘಾನಿಸ್ತಾನಕ್ಕೆ ಕಳುಹಿಸಲು ಚಿಂತನೆ ನಡೆಸುತ್ತಿದ್ದವು. ಈ ನಡುವೆಯೇ ಅಫ್ಘಾನ್‌ ವಿಮಾನ ಭಾರತಕ್ಕೆ ಬಂದಿದ್ದರಿಂದಾಗಿ ಆ ವಿಮಾನದಲ್ಲೇ ಔಷಧಿಯನ್ನು ರವಾನಿಸಿದೆ.

ಕಾಬೂಲ್‌ನಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಪ್ರತಿನಿಧಿಗಳಿಗೆ ಔಷಧಿಗಳನ್ನು ಹಸ್ತಾಂತರಿಸಲಾಗುವುದು ಮತ್ತು ಕಾಬೂಲ್‌ನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಅವುಗಳನ್ನು ಹಂಚಿಕೆ ಮಾಡಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶನಿವಾರ ತಿಳಿಸಿದೆ.

ಅಫಘಾನ್‌‌ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಸೇರಿದಂತೆ ಭಾರತೀಯರು ಮತ್ತು 94 ಅಫಘನ್ನರನ್ನು ವಿಶೇಷ ವಿಮಾನವು ಕಾಬೂಲ್‌ನಿಂದ ನವದೆಹಲಿಗೆ ಶುಕ್ರವಾರ ಕರೆತಂದಿತು.

ಇದನ್ನೂ ಓದಿ: ಈ ಮಧುರ ದಾಂಪತ್ಯಕ್ಕೆ ‘ಎನ್‌ಆರ್‌ಸಿ’ ಏಕೆ?

ಇಲ್ಲಿಯವರೆಗೆ, ಅಫ್ಘಾನಿಸ್ತಾನದಿಂದ ಒಟ್ಟು 669 ಜನರನ್ನು ಸ್ಥಳಾಂತರಿಸಲಾಗಿದೆ. ಅವರಲ್ಲಿ 448 ಭಾರತೀಯರು ಮತ್ತು 206 ಅಘಫನ್ನರಿದ್ದಾರೆ. ಈ ಪೈಕಿ, ಆಫ್ಘನ್ ಹಿಂದೂ/ಸಿಖ್ ಅಲ್ಪಸಂಖ್ಯಾತ ಸಮುದಾಯದ ಜನರು ಸೇರಿದ್ದಾರೆ.

ಭೂ ಮಾರ್ಗದ ಮೂಲಕ ಅಫ್ಘಾನಿಸ್ತಾನಕ್ಕೆ 50,000 ಮೆಟ್ರಿಕ್ ಟನ್ ಗೋಧಿಯನ್ನು ಸಾಗಿಸಲು ಯೋಜಿಸಲಾಗಿದೆ. ಇದಕ್ಕಾಗಿ, ಪಾಕಿಸ್ತಾನದ ರಸ್ತೆಯ ಮೂಲಕ 5,000 ಟ್ರಕ್‌ಗಳು ಹೋಗಬೇಕಾಗುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಘಾ-ಅಟ್ಟಾರಿ ಗಡಿಯಲ್ಲಿರುವ ಝೀರೋ ಪಾಯಿಂಟ್‌ನಲ್ಲಿ ಭಾರತೀಯ ಟ್ರಕ್‌ಗಳಿಂದ ಗೋಧಿಯನ್ನು ಇಳಿಸಿ, ಅವುಗಳನ್ನು ಅಫ್ಘಾನ್ ಟ್ರಕ್‌ಗಳಿಗೆ ಲೋಡ್ ಮಾಡಬೇಕಾಗುತ್ತದೆ ಎಂದು ಲಾಜಿಸ್ಟಿಕ್ಸ್ ಸೂಚಿಸುತ್ತದೆ.

“ಪಾಕಿಸ್ತಾನದ ಮೂಲಕ ಭಾರತವು ನೀಡುವ ಗೋಧಿಯನ್ನು ಸಾಗಿಸಲು “ಅಫಘಾನ್ ಸಹೋದರರ” ಮನವಿಯನ್ನು “ಅನುಕೂಲಕರವಾಗಿ ಪರಿಗಣಿಸುತ್ತೇವೆ” ಎಂದು ಕಳೆದ ತಿಂಗಳು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಇಸ್ಲಾಮಾಬಾದ್‌ಗೆ ಭೇಟಿ ನೀಡಿದ್ದ ತಾಲಿಬಾನ್ ನಿಯೋಗಕ್ಕೆ ತಿಳಿಸಿದ್ದಾರೆ.

ತಾಲಿಬಾನ್‌ನ ಹಣಕಾಸು, ವಾಣಿಜ್ಯ ಮತ್ತು ಕೈಗಾರಿಕೆ ಸಚಿವರು ಹಾಗೂ ನಿಯೋಗದ ಹಿರಿಯ ಸದಸ್ಯರೊಂದಿಗೆ ಬಂದಿದ್ದ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುಟ್ಟಾಕಿ ಅವರಿಗೆ ಇಮ್ರಾನ್ ಖಾನ್ ಇದನ್ನು ತಿಳಿಸಿದ್ದಾರೆ.


ಇದನ್ನೂ ಓದಿ: ಮನುಷ್ಯ ವಿರೋಧಿಗಳೊಂದಿಗೆ ಹೋಗದಿರಿ: ನಿರ್ಮಲಾನಂದನಾಥ ಶ್ರೀಗಳಿಗೆ ಬಹಿರಂಗ ಪತ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...