Homeಮುಖಪುಟಎಸ್ಸಿ-ಎಸ್ಟಿ ಕಾಯ್ದೆಯ ದುರ್ಬಳಕೆ: ಪ್ರಾಧ್ಯಾಪಕಿಗೆ 15 ಲಕ್ಷ ದಂಡ ವಿಧಿಸಿದ ಕೋರ್ಟ್‌

ಎಸ್ಸಿ-ಎಸ್ಟಿ ಕಾಯ್ದೆಯ ದುರ್ಬಳಕೆ: ಪ್ರಾಧ್ಯಾಪಕಿಗೆ 15 ಲಕ್ಷ ದಂಡ ವಿಧಿಸಿದ ಕೋರ್ಟ್‌

- Advertisement -
- Advertisement -

ಸಹೋದ್ಯೋಗಿಗಳ ವಿರುದ್ಧ ಎಸ್ಸಿ-ಎಸ್ಟಿ ಕಾಯ್ದೆಯಡಿ ಕ್ಷುಲ್ಲಕ ಪ್ರಕರಣಗಳನ್ನು ದಾಖಲಿಸಿದ್ದಾರೆಂದು ಅಲಹಾಬಾದ್ ವಿಶ್ವವಿದ್ಯಾಲಯದ ಶಿಕ್ಷಕಿಯೊಬ್ಬರಿಗೆ ಅಲಹಾಬಾದ್ ಹೈಕೋರ್ಟ್ ಶುಕ್ರವಾರ 15 ಲಕ್ಷ ರೂಪಾಯಿ ದಂಡ ವಿಧಿಸಿದೆ ಮತ್ತು ಅವರು ದಾಖಲಿಸಿದ್ದ ಎಫ್‌ಐಆರ್‌ಗಳನ್ನು ರದ್ದುಗೊಳಿಸಿದೆ.

ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ದೂರುದಾರರಿಗೆ ಕಾನೂನು ಚೆನ್ನಾಗಿ ತಿಳಿದಿದೆ ಮತ್ತು ವೈಯಕ್ತಿಕ ಲಾಭಕ್ಕಾಗಿ ಕಾನೂನಿನ ನಿಬಂಧನೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ನ್ಯಾಯಾಲಯ ತೀರ್ಪಿನ ವೇಳೆ ಹೇಳಿದೆ. ತಮ್ಮ ಮೇಲೆ ಸಹೋದ್ಯೋಗಿ ಮಹಿಳಾ ಶಿಕ್ಷಕಿ ದಾಖಲಿಸಿದ್ದ ದೂರಿನ ವಿರುದ್ಧ ಪ್ರಾಧ್ಯಾಪಕರಾದ ಮನಮೋಹನ್ ಕೃಷ್ಣ, ಪ್ರಹ್ಲಾದ್ ಕುಮಾರ್ ಮತ್ತು ಜಾವೇದ್ ಅಖ್ತರ್ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಅವರ ಪೀಠ ಈ ಮಹತ್ವದ ತೀರ್ಪನ್ನು ನೀಡಿದೆ.

ಇದು ಕಾನೂನಿನ ಪ್ರಕ್ರಿಯೆಯ ದುರುಪಯೋಗದ ಪ್ರಕರಣವಾಗಿದ್ದು, ದೂರುದಾರರು ಇಲಾಖೆಯ ಮುಖ್ಯಸ್ಥರ ವಿರುದ್ಧ ವೈಯಕ್ತಿಕ ಸೇಡು ತೀರಿಸಿಕೊಳ್ಳಲು ಸುಳ್ಳು ಮತ್ತು ಕ್ಷುಲ್ಲಕ ಪ್ರಕರಣಗಳನ್ನು ದಾಖಲಿಸುವ ಮೂಲಕ ಸಹೋದ್ಯೋಗಿಗಳನ್ನು ಸಿಲುಕಿಸಲು ಪ್ರಯತ್ನಿಸಿದ್ದಾರೆ ಎಂದು ಕಕ್ಷಿದಾರರನ್ನು ಆಲಿಸಿದ ನಂತರ ನ್ಯಾಯಾಲಯವು ಹೇಳಿಕೊಂಡಿದೆ.

ವಿಭಾಗದ ಮುಖ್ಯಸ್ಥರು ಮತ್ತು ಇತರ ಪ್ರೊಫೆಸರ್‌ಗಳು ಆಕೆಯನ್ನು ನಿಯಮಿತವಾಗಿ ತರಗತಿಗಳನ್ನು ತೆಗೆದುಕೊಳ್ಳುವಂತೆ ಕೇಳಿದಾಗ, ಅವರು ಅವರ ವಿರುದ್ಧ ದೂರು ದಾಖಲಿಸುತ್ತಾರೆ. ಇದು ಮೊದಲ ಪ್ರಕರಣವಲ್ಲ. ದೂರುದಾರರು, ಸುಶಿಕ್ಷಿತ ಮಹಿಳೆ, ಕಾನೂನಿನ ನಿಬಂಧನೆಗಳನ್ನು ಚೆನ್ನಾಗಿ ತಿಳಿದಿದೆ ಮತ್ತು ಅವರು ವೈಯಕ್ತಿಕ ಲಾಭಕ್ಕಾಗಿ ಕಾನೂನಿನ ನಿಬಂಧನೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.

ಪ್ರತಿ ಪ್ರಕರಣದಲ್ಲಿ 5 ಲಕ್ಷ ರೂಪಾಯಿ ವೆಚ್ಚವನ್ನು ವಿಧಿಸಿದ ನ್ಯಾಯಾಲಯ, ಕ್ಷುಲ್ಲಕ ಪ್ರಕರಣಗಳನ್ನು ದಾಖಲಿಸಿದ ಕಾರಣ ಆರೋಪಿತ ಪ್ರಾಧ್ಯಾಪಕರ ಪ್ರತಿಷ್ಠೆ ಮತ್ತು ಸಾರ್ವಜನಿಕ ಇಮೇಜ್‌ಗೆ ಕಳಂಕ ಉಂಟಾಗಿದೆ. ತಮ್ಮನ್ನು ರಕ್ಷಿಸಿಕೊಳ್ಳಲು ಅವರು ಪೊಲೀಸ್ ಠಾಣೆಯಿಂದ ನ್ಯಾಯಾಲಯಕ್ಕೆ ಅಲೆದಾಡಬೇಕಾಯಿತು ಎಂದು ಕೋರ್ಟ್‌ ದೂರುದಾರೆಗೆ 15 ಲಕ್ಷ ರೂ. ದಂಡವನ್ನು ವಿಧಿಸಿದೆ.

ಆಗಸ್ಟ್ 4, 2016ರಂದು ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರು ತನಗೆ ಕಿರುಕುಳ, ಅವಮಾನ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಮೂವರು ಪ್ರಾಧ್ಯಾಪಕರಾದ ಮನಮೋಹನ್ ಕೃಷ್ಣ, ಪ್ರಹ್ಲಾದ್ ಕುಮಾರ್ ಮತ್ತು ಜಾವೇದ್ ಅಖ್ತರ್ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ನಂತರ, ಪೊಲೀಸರು ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ನಂತರ ನ್ಯಾಯಾಲಯವು ಪ್ರಾಧ್ಯಾಪಕರ ವಿರುದ್ಧ ಸಮನ್ಸ್ ಜಾರಿ ಮಾಡಿತ್ತು, ಅದನ್ನು ಪ್ರಾಧ್ಯಾಪಕರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಇದನ್ನು ಓದಿ: ಬಿಲ್ಕೀಸ್‌ ಬಾನು ಪ್ರಕರಣ: ಪೆರೋಲ್‌ ಮೇಲೆ ಹೊರ ಬರುತ್ತಿರುವ ಅಪರಾಧಿಗಳು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read