Homeಮುಖಪುಟಅಮಿತ್‌ ಶಾ ಮಹಾರಾಷ್ಟ್ರ ಭೇಟಿ ಬೆನ್ನಲ್ಲೆ BJP ತೊರೆದು ಶಿವಸೇನೆ ಸೇರಿದ 7 ಕೌನ್ಸಿಲರ್‌ಗಳು

ಅಮಿತ್‌ ಶಾ ಮಹಾರಾಷ್ಟ್ರ ಭೇಟಿ ಬೆನ್ನಲ್ಲೆ BJP ತೊರೆದು ಶಿವಸೇನೆ ಸೇರಿದ 7 ಕೌನ್ಸಿಲರ್‌ಗಳು

- Advertisement -
- Advertisement -

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಮಹಾರಾಷ್ಟ್ರಕ್ಕೆ ಭೇಟಿ ನೀಡಿದ ಎರಡು ದಿನದಲ್ಲಿ ಕನಿಷ್ಠ 7 ಕೌನ್ಸಿಲರ್‌ಗಳು ಬಿಜೆಪಿ ಪಕ್ಷ ತೊರೆದು ಶಿವಸೇನೆ ಸೇರಿದ್ದಾರೆ ಎಂದು ಪಕ್ಷದ ನಾಯಕರು ಮಂಗಳವಾರ ಹೇಳಿದ್ದಾರೆ. 7 ಕೌನ್ಸಿಲರ್‌ಗಳು ವೈಭವ್ ನಗರದ ನಗರ ಪಂಚಾಯತ್‌ ಸದಸ್ಯರಾಗಿದ್ದಾರೆ.

ಅಲ್ಲಿ ಬಿಜೆಪಿ ರಾಜ್ಯಸಭಾ ಸಂಸದ, ಪಕ್ಷದ ಪ್ರಬಲ ನಾಯಕರಾದ ನಾರಾಯಣ್ ರಾಣೆಯ ಬೆಂಬಲಿಗರು ಅಧಿಕಾರದಲ್ಲಿದ್ದಾರೆ. ರಾಣೆ ಕುಟುಂಬ ಸದಸ್ಯರು ತಮಗೆ ‘ಕಿರುಕುಳ’ ನೀಡುತ್ತಿದ್ದು, ಅದಕ್ಕಾಗಿ ತಾವು ಬಿಜೆಪಿಯನ್ನು ತೊರೆಯುತ್ತಿದ್ದೇವೆ ಎಂದು ಹೇಳಿದ್ದಾರೆ. ಇವರು ಮುಂಬಯಿಯಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸಮ್ಮುಖದಲ್ಲಿ ಶಿವಸೇನೆಗೆ ಸೇರಿದ್ದಾರೆ.

ಇದನ್ನೂ ಓದಿ: ‘ಡಿಜಿಟಲ್ ಕುದುರೆಯ ಮೇಲೆ ಕನಸಿನ ಪ್ರವಾಸ’ ಬಜೆಟ್ ಟೀಕಿಸಿದ ಶಿವಸೇನೆ

ಬಿಜೆಪಿ ನಾಯಕ ನಾರಾಯಣ್ ರಾಣೆ, “ಅಮಿತ್‌ ಷಾ ಅವರ ಮಹಾರಾಷ್ಟ್ರದ ಭೇಟಿಯು ಉತ್ತಮ ಶಕುನವೆಂದು ಸಾಬೀತಾಗಲಿ, ಮಹಾ ವಿಕಾಸ್ ಅಘಾಡಿ ಸರ್ಕಾರದ ಪತನ ಪ್ರಾರಂಭವಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದರು.

ಬಿಜೆಪಿ ಕೌನ್ಸಿಲರ್‌ಗಳು ಶಿವಸೇನೆಗೆ ಸೇರ್ಪಡೆಯಾದ ನಂತರ ಮಹಾರಾಷ್ಟ್ರದ ಸಚಿವ ಉದಯ್ ಸಾಮಂತ್ ಇದಕ್ಕೆ ಪ್ರತ್ಯುತ್ತರ ನೀಡಿದ್ದು, “ಅಮಿತ್ ಶಾ ಅವರ ಭೇಟಿಯ ನಂತರ, ಮಹಾರಾಷ್ಟ್ರದ ಸರ್ಕಾರ ಪತನವಾಗುತ್ತದೆ ಎಂದು ನಾರಾಯಣ್ ರಾಣೆ ಹೇಳಿದ್ದಾರೆ. ಆದರೆ ಅದಕ್ಕೆ ವಿರುದ್ಧವಾಗಿ, ಬಿಜೆಪಿ ಕಾರ್ಪೊರೇಟರ್‌ಗಳು ಪಕ್ಷವನ್ನು ತೊರೆದು ಶಿವಸೇನೆ ಸೇರುತ್ತಿದ್ದಾರೆ. ಈ ಪ್ರದೇಶದ ಅಂತಹ ಹೆಚ್ಚಿನ ಬಿಜೆಪಿ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ” ಎಂದು ಹೇಳಿದ್ದಾರೆ.

ಇದಕ್ಕೆ ಬಿಜೆಪಿ ನಾಯಕ, ಇದು ಶಿವಸೇನೆ ನಾಶವಾಗುತ್ತಿರುವುದಕ್ಕೆ ನಾವು ಶಿವಸೇನೆಗೆ ನೀಡಿರುವ ವ್ಯಾಲೆಂಟೀನ್ ‌ದಿನದ ಉಡುಗೊರೆ ಎಂದು ವ್ಯಂಗ್ಯವಾಗಿ ಉತ್ತರಿಸಿದ್ದಾರೆ.


ಇದನ್ನೂ ಓದಿ: ರಾಕೇಶ್ ಟಿಕಾಯತ್ ಭೇಟಿಯಾಗಿ ಬೆಂಬಲ ಘೋಷಿಸಿದ ಶಿವಸೇನೆಯ ಸಂಜಯ್ ರಾವತ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಎಕ್ಸಿಟ್ ಪೋಲ್ ಪ್ರಸಾರ ಮಾಡದಂತೆ ನಿಷೇಧ ವಿಧಿಸಿದ ಚುನಾವಣಾ ಆಯೋಗ

0
ಲೋಕಸಭೆ ಚುನಾವಣೆ ಮತ್ತು ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಹಿನ್ನೆಲೆ ಏಪ್ರಿಲ್ 19ರಂದು ಬೆಳಿಗ್ಗೆ 7ರಿಂದ ಜೂನ್ 1ರ ಸಂಜೆ 6.30ರವರೆಗೆ ಸಮೀಕ್ಷೆಗಳನ್ನು ನಡೆಸುವುದು ಮತ್ತು ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಪ್ರಕಟಿಸುವುದನ್ನು ನಿಷೇಧಿಸಿ...