Homeಮುಖಪುಟಆಂಧ್ರಪ್ರದೇಶ: ಸಂಪುಟ ಸಭೆಯಲ್ಲಿ ಜಾತಿಗಣತಿಗೆ ಅನುಮೋದನೆ

ಆಂಧ್ರಪ್ರದೇಶ: ಸಂಪುಟ ಸಭೆಯಲ್ಲಿ ಜಾತಿಗಣತಿಗೆ ಅನುಮೋದನೆ

- Advertisement -
- Advertisement -

ಆಂಧ್ರಪ್ರದೇಶದಲ್ಲಿ ಜಾತಿಗಣತಿ ನಡೆಸುವ ಪ್ರಸ್ತಾವನೆಗೆ ಆಂಧ್ರಪ್ರದೇಶದ ಸಂಪುಟ ಸಭೆಯಲ್ಲಿ ಅನುಮೋದನೆಯನ್ನು ನೀಡಲಾಗಿದೆ.

ಜಾತಿಗಣತಿ ಕುರಿತ ನಿರ್ಧಾರದ ಬಗ್ಗೆ ಸಚಿವ ಚೆಲುಬೋಯಿನ ಶ್ರೀನಿವಾಸ ವೇಣುಗೋಪಾಲ ಕೃಷ್ಣ ಅವರು ಮಾಹಿತಿಯನ್ನು ನೀಡಿದ್ದಾರೆ. ಜಾತಿಗಣತಿ ಮೂಲಕ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ವೈದ್ಯಕೀಯ ದತ್ತಾಂಶವನ್ನು ಲೆಕ್ಕಹಾಕುವ ಗುರಿಯನ್ನು ಹೊಂದಿದೆ. ಈ ಮೂಲಕ ಹಿಂದುಳಿದ ಸಮುದಾಯಗಳಿಗೆ ಭದ್ರತೆಯನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಆಂಧ್ರಪ್ರದೇಶದಲ್ಲಿ ಮತ್ತು ಭಾರತದಾದ್ಯಂತ ಜಾತಿ ಗಣತಿಗೆ ಒತ್ತಾಯಿಸುತ್ತಿರುವ ಎಲ್ಲರ ಸಲಹೆಗಳನ್ನು ಪರಿಗಣಿಸಲು ಸರ್ಕಾರ ತೀರ್ಮಾನಿಸಿದೆ. ಜಿಲ್ಲಾಧಿಕಾರಿಗಳ ವ್ಯಾಪ್ತಿಯಲ್ಲಿ ವಿವಿಧ ಜಾತಿ ಸಂಘಗಳ ಅಭಿಪ್ರಾಯಗಳನ್ನು ಕೂಡ ಪರಿಗಣಿಸಲಾಗುವುದು. ಜಾತಿಗಣತಿ ಕೋರಿ ವಿವಿಧ ಜಾತಿ ಸಂಘಗಳಿಂದ ಮಾಹಿತಿ ಪಡೆಯಲು ಐದು ಸ್ಥಳಗಳಲ್ಲಿ ದುಂಡು ಮೇಜಿನ ಚರ್ಚೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ವೇಣುಗೋಪಾಲ ಕೃಷ್ಣ ಅವರು ಭಾರತದಲ್ಲಿ ಜಾತಿಗಣತಿಯು ಬಹಳ ಹಿಂದೆ ನಡೆಸಿರುವುದು ಎಂಬವುದನ್ನು  ಉಲ್ಲೇಖಿಸಿದ್ದು, ರಾಜ್ಯದಲ್ಲಿ ಜಾತಿಗಣತಿ ನಡೆಸುವ ಸಂಪುಟದ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಸಚಿವ ಸಂಪುಟದಲ್ಲಿ ಇದಲ್ಲದೆ 6,790 ಸರ್ಕಾರಿ ಪ್ರೌಢಶಾಲೆಗಳಲ್ಲಿ ಕೌಶಲ್ಯ ತಜ್ಞರ ನೇಮಕಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಪೋಲಾವರಂ ಯೋಜನೆಯ ಭಾಗವಾಗಿ ಪ್ರವಾಹಕ್ಕೆ ಒಳಗಾದ ಗ್ರಾಮಗಳ ಪುನರ್ವಸತಿ ಪ್ರಯತ್ನಗಳ ಭಾಗವಾಗಿ ಏಲೂರು ಜಿಲ್ಲೆಯ ಪೊಲಾವರಂ, ವೇಲೇರುಪಾಡು ಮತ್ತು ಕುಕುನೂರ್ ಮಂಡಲಗಳಲ್ಲಿ 12,984 ಕುಟುಂಬಗಳಿಗೆ ಉಚಿತ ಭೂ ಹಕ್ಕು ನೋಂದಣಿ ನೀಡುವ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಹೆಚ್ಚುವರಿಯಾಗಿ ರಾಜಮಹೇಂದ್ರವರಂ ಜಿಲ್ಲೆಯ ದೇವಿಪಟ್ಟಣಂ, ಕುನವರಂ ಮತ್ತು ವರ ರಾಮಚಂದ್ರಪುರಂ ಮಂಡಲಗಳಲ್ಲಿ 3,823 ಕುಟುಂಬಗಳಿಗೆ ಪರ್ಯಾಯ ಭೂಮಿ ಪತ್ರಗಳನ್ನು ನೀಡಲು ಸಂಪುಟದಲ್ಲಿ ನಿರ್ಧರಿಸಲಾಗಿದೆ.

ಅಕ್ಟೋಬರ್ 30ರಂದು ನಡೆದ ಹೂಡಿಕೆ ಕುರಿತ ಸಭೆಯ ಭಾಗವಾಗಿ ರಾಜ್ಯದಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಸಂಪುಟ ಅನುಮೋದನೆ ನೀಡಿದೆ. ಎರಡು ಆಹಾರ ಸಂಸ್ಕರಣಾ ಘಟಕಗಳಿಗೆ ವಿಶೇಷ ಪ್ಯಾಕೇಜ್ ನೀಡುವ SIPB ನಿರ್ಧಾರವನ್ನು ಅನುಮೋದಿಸಿದೆ. ರಸ್ತೆ ಮತ್ತು ಕಟ್ಟಡಗಳ ಇಲಾಖೆಯಲ್ಲಿ 467 ಹುದ್ದೆಗಳನ್ನು ಹೊರಗುತ್ತಿಗೆ ಮೂಲಕ ಭರ್ತಿ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಇದನ್ನು ಓದಿ: ಇಸ್ರೇಲ್‌ ವೈಮಾನಿಕ ದಾಳಿಗೆ ‘ಪ್ಯಾಲೆಸ್ತೀನ್‌ ಟಿವಿ’ ವರದಿಗಾರ ಅಬು ಹತಾಬ್ ಸೇರಿ ಕುಟುಂಬದ 12 ಮಂದಿ ಬಲಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...