ಬ್ರಿಟನ್ ಆಯ್ತು; ಈಗ ಜಪಾನ್‌ನಲ್ಲಿ ಮತ್ತೊಂದು ಹೊಸ ವೈರಸ್ ಪತ್ತೆ!

ಈಗಾಗಲೇ ಆವರಿಸಿರುವ ಕೊರೊನಾ ವೈರಸ್‌ನಿಂದಲೆ ಇನ್ನೂ ಬಿಡುಗಡೆ ಸಿಕ್ಕಿಲ್ಲ. ಹೀಗಿರುವಾಗ ಬ್ರಿಟನ್‌ನಲ್ಲಿ ಪತ್ತೆಯಾದ ರೂಪಾಂತರ ಕೊರೊನಾ ವೈರಸ್ ಆತಂಕಕ್ಕೆ ಕಾರಣವಾಗಿತ್ತು. ಆದರೆ ಈಗ ಜಪಾನ್‌ನಲ್ಲಿ ಕೂಡ ಇಂತಹುದೇ ರೂಪದ ಮತ್ತೊಂದು ಕೊರೊನಾ ವೈರಸ್‌ನ ಹೊಸ ತಳಿ ಪತ್ತೆಯಾಗಿದೆ ಎಂದು ಜಪಾನ್‌ನ ಸಾಂಕ್ರಾಮಿಕ ರೋಗಗಳ ಸಂಸ್ಥೆ ತಿಳಿಸಿದೆ.

“ಅಲ್ಲಿನ ಅಧಿಕಾರಿಗಳು ಬ್ರೆಝಿಲ್‌ನಿಂದ ಬಂದ ನಾಲ್ವರು ಪ್ರಯಾಣಿಕರಲ್ಲಿ ಹೊಸರೂಪದ ಕೊರೊನಾ ವೈರಸ್ ಪತ್ತೆಹಚ್ಚಿದ್ದಾರೆ” ಎಂದು ಜಪಾನ್ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫೆಕ್ಷಿಯಸ್ ಡಿಸೀಸಸ್ ಹೇಳಿಕೆ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ರೈತರು ಬಿರಿಯಾನಿ ತಿಂದು ಹಕ್ಕಿ ಜ್ವರ ಹರಡುತ್ತಿದ್ದಾರೆ: ನಾಲಿಗೆ ಹರಿಯಬಿಟ್ಟ ಬಿಜೆಪಿ ಶಾಸಕ

“ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ರೂಪಾಂತರೀ ಮಾದರಿಯಲ್ಲಿಯೇ ಈ ಹೊಸ ಕೊರೊನಾ ವೈರಸ್ ಕೂಡ ವಿಭಿನ್ನ ಲಕ್ಷಣಗಳನ್ನು ಹೊಂದಿದೆ. ಇದು ರೂಪಾಂತರಗೊಂಡ ವೈರಸ್ ತಳಿ ಆಗಿರಲು ಸಾಧ್ಯತೆಯಿದೆ. ಆದರೆ ಈಗಲೇ ಈ ಕುರಿತು ಖಚಿತವಾಗಿ ಹೇಳಲಾಗದು. ಅಲ್ಲದೆ ಹೊಸ ವೈರಸ್ ಕುರಿತು ಅಧ್ಯಯನ ನಡೆಸಲಾಗುತ್ತಿದೆ” ಎಂದು ಮಿಂಟ್ ವರದಿ ಮಾಡಿದೆ.

ಜಪಾನ್ ಆರೋಗ್ಯ ಸಚಿವಾಲಯ ಕೂಡ ಪ್ರತ್ಯೇಕ ಹೇಳಿಕೆ ಬಿಡುಗಡೆ ಮಾಡಿದ್ದು, “ಜನವರಿ 2 ರಂದು ಬ್ರೆಝಿಲ್‌ನಿಂದ ಜಪಾನ್ ಹನೇಡಾ ವಿಮಾನ ನಿಲ್ದಾಣಕ್ಕೆ ಬಂದಿರುವ ನಾಲ್ಕು ಪ್ರಯಾಣಿಕರಲ್ಲಿ ಹೊಸ ರೂಪದ ವೈರಸ್ ಕಾಣಿಸಿಕೊಂಡಿದೆ. ಈ ಪೈಕಿ 40 ವರ್ಷದ ಪುರುಷನೋರ್ವನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಹೇಳಿದೆ.


ಇದನ್ನೂ ಓದಿ: ಬೆಂಗಳೂರು: ದಲಿತ ಮುಖಂಡ ಶ್ರೀನಿವಾಸ್ ಕೊಲೆ – ಪೊಲೀಸರ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ

LEAVE A REPLY

Please enter your comment!
Please enter your name here