Homeಮುಖಪುಟ2002 ರಲ್ಲಿ ಗುಜರಾತ್‌ನಲ್ಲಿ ಮುಸ್ಲಿಂ ವಿರೋಧಿ ಹಿಂಸಾಚಾರ ಯಾವ ಸರ್ಕಾರದ ಅಡಿಯಲ್ಲಿ ನಡೆಯಿತು?: CBSE ಪ್ರಶ್ನೆ!

2002 ರಲ್ಲಿ ಗುಜರಾತ್‌ನಲ್ಲಿ ಮುಸ್ಲಿಂ ವಿರೋಧಿ ಹಿಂಸಾಚಾರ ಯಾವ ಸರ್ಕಾರದ ಅಡಿಯಲ್ಲಿ ನಡೆಯಿತು?: CBSE ಪ್ರಶ್ನೆ!

- Advertisement -
- Advertisement -

“2002 ರಲ್ಲಿ ಗುಜರಾತ್‌ನಲ್ಲಿ ಅಪಾರ ಪ್ರಮಾಣದ ಮುಸ್ಲಿಂ ವಿರೋಧಿ ಹಿಂಸಾಚಾರ ಯಾವ ಸರ್ಕಾರದ ಅಡಿಯಲ್ಲಿ ನಡೆಯಿತು?” ಇದು ಡಿಸೆಂಬರ್ 1ರ ಬುಧವಾರದಂದು CBSE 12 ನೇ ತರಗತಿಯ ಸಮಾಜಶಾಸ್ತ್ರದ ಅವಧಿ 1 ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆ!

ವಿದ್ಯಾರ್ಥಿಗಳಿಗೆ ಉತ್ತರಿಸಲು ನೀಡಲಾದ ಆಯ್ಕೆಗಳು ಇಂತಿವೆ..

(ಎ) ಕಾಂಗ್ರೆಸ್

(ಬಿ) ಬಿಜೆಪಿ

(ಸಿ) ಡೆಮಾಕ್ರಟಿಕ್

(ಡಿ) ರಿಪಬ್ಲಿಕನ್

ಇದಕ್ಕೆ ಬಿಜೆಪಿ ಎಂದು ಬಹುತೇಕ ವಿದ್ಯಾರ್ಥಿಗಳು ಉತ್ತರಿಸಿರಬಹುದು. ಆದರೆ ಪರೀಕ್ಷೆ ಆರಂಭವಾದ ಕೆಲವೇ ಸಮುಯದಲ್ಲಿ, CBSEಯು ಈ ಪ್ರಶ್ನೆಯನ್ನು ಅಸಮರ್ಪಕ ಮತ್ತು CBSE ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂದು ಅಧಿಕೃತ ಹೇಳಿಕೆ ನೀಡಿದೆ ಎಂದು ದಿ ಕ್ವಿಂಟ್ ವರದಿ ಮಾಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಸಿಬಿಎಸ್ಸಿ “ಇಂದಿನ 12 ನೇ ತರಗತಿಯ ಸಮಾಜಶಾಸ್ತ್ರದ ಅವಧಿ 1 ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಯು ಅಸಮರ್ಪಕವಾಗಿದೆ ಮತ್ತು CBSE ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತದೆ. ಇದು ವಿಷಯಕ್ಕೆ ಸಂಬಂಧಿಸಿಲ್ಲವಾದರೂ ಪ್ರಶ್ನೆ ಪತ್ರಿಕೆ ಹೊಂದಿಸುವವರು ಎಸಗಿರುವ ಪ್ರಮಾದವಾಗಿದ್ದು, ಈ ದೋಷವನ್ನು ಸಿಬಿಎಸ್‌ಸಿ ಒಪ್ಪಿಕೊಂಡಿದೆ ಮತ್ತು ಇದಕ್ಕೆ ಕಾರಣರಾದ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ” ಎಂದು ತಿಳಿಸಿದೆ.

ಆದರೆ ಸಿಬಿಎಸ್‌ಸಿ ತನ್ನ ಟ್ವೀಟ್‌ ನಲ್ಲಿ ಯಾವ ಪ್ರಶ್ನೆ ಎಂದು ಉಲ್ಲೇಖಿಸಿಲ್ಲ. ಈ ಕುರಿತು ಕ್ವಿಂಟ್ ಸಿಬಿಎಸ್‌ಸಿಯನ್ನು ಸಂಪರ್ಕಿಸಿದಾಗ “2002 ರಲ್ಲಿ ಗುಜರಾತ್‌ನಲ್ಲಿ ಅಪಾರ ಪ್ರಮಾಣದ ಮುಸ್ಲಿಂ ವಿರೋಧಿ ಹಿಂಸಾಚಾರ ಯಾವ ಸರ್ಕಾರದ ಅಡಿಯಲ್ಲಿ ನಡೆಯಿತು?” ಎಂಬ ಪ್ರಶ್ನೆಗೆ ಸಂಬಂಧಿಸಿದ ಸ್ಪಷ್ಟೀಕರಣ ಎಂದು ದೃಢಪಡಿಸಿದೆ.

ಇದು ಮೋದಿ ಸರ್ಕಾರಕ್ಕಾದ ಬಹುದೊಡ್ಡ ಮುಜುಗರ. ಆ ಪ್ರಶ್ನೆ ಕೇಳಿದವರಿಗೆ, ಅವರ ಧೈರ್ಯಕ್ಕೆ ಒಂದು ಸಲಾಂ ಎಂಬ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


ಇದನ್ನೂ ಓದಿ: ಜೇನುಕುರುಬ ಆದಿವಾಸಿ ಯುವಕನಿಗೆ ಅರಣ್ಯ ಸಿಬ್ಬಂದಿಯಿಂದ ಗುಂಡೇಟು: ಭುಗಿಲೆದ್ದ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಕಾಂಗ್ರೆಸ್‌ನಲ್ಲಿ ನಿಲ್ಲದ ರಾಜೀನಾಮೆ ಪರ್ವ; ಎಎಪಿ ಮೈತ್ರಿ ವಿರೋಧಿಸಿ ಪಕ್ಷ ತೊರೆದ ಮತ್ತಿಬ್ಬರು...

0
ದೆಹಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅರವಿಂದ್ ಸಿಂಗ್ ಲವ್ಲಿ ನಂತರ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು, ರಾಷ್ಟ್ರ ರಾಜಧಾನಿಯ ಎರಡು ಲೋಕಸಭಾ ಸ್ಥಾನಗಳಿಗೆ ನೇಮಿಸಿದ್ದ ಅದರ ಇಬ್ಬರು ನಾಯಕರು, ವೀಕ್ಷಕರಾದ ನೀರಜ್ ಬಸೋಯಾ ಮತ್ತು ನಸೀಬ್...