Homeರಂಜನೆಕ್ರೀಡೆಏಷ್ಯಾ ಕಪ್: ಇಂದು ಶ್ರೀಲಂಕಾ ವಿರುದ್ಧ ದೊಡ್ಡ ಅಂತರದಲ್ಲಿ ಗೆದ್ದರಷ್ಟೆ ಭಾರತದ ಫೈನಲ್ ಕನಸಿಗೆ ಜೀವ

ಏಷ್ಯಾ ಕಪ್: ಇಂದು ಶ್ರೀಲಂಕಾ ವಿರುದ್ಧ ದೊಡ್ಡ ಅಂತರದಲ್ಲಿ ಗೆದ್ದರಷ್ಟೆ ಭಾರತದ ಫೈನಲ್ ಕನಸಿಗೆ ಜೀವ

- Advertisement -
- Advertisement -

ಏಷ್ಯಾ ಕಪ್ ಕ್ರಿಕೆಟ್‌ನ ಸೂಪರ್ 4 ಹಂತದ ಮಹತ್ವದ  ಪಂದ್ಯ ಇಂದು ದುಬೈನಲ್ಲಿ ನಡೆಯಲಿದ್ದು ಭಾರತ ತಂಡವು ಶ್ರೀಲಂಕಾ ವಿರುದ್ಧ ಕಣಕ್ಕಿಳಿಯಲಿದೆ. ಭಾರತ ಫೈನಲ್ ತಲುಪುವ ಕನಸಿಗೆ ಜೀವ ಬರಬೇಕಾದರೆ ಇಂದಿನ ಪಂದ್ಯದಲ್ಲಿ ಗೆಲುವು ಮಾತ್ರವಲ್ಲ ದೊಡ್ಡ ಅಂತರದ ಗೆಲುವು ಬೇಕಾಗಿದೆ. ಇಲ್ಲದಿದ್ದಲ್ಲಿ ಟೂರ್ನಿಯಿಂದ ಹೊರಬೀಳುವ ಒತ್ತಡದಲ್ಲಿದೆ ಭಾರತ ತಂಡ.

ಭಾರತ ಫೈನಲ್ ತಲುಪಲು ಇರುವ ಸಾಧ್ಯತೆಗಳು

ಏಷ್ಯಾ ಕಪ್‌ ಟೂರ್ನಿಯ ನಿಯಮದ ಪ್ರಕಾರ ಸೂಪರ್ 4 ಹಂತದಲ್ಲಿ 4 ತಂಡಗಳಲ್ಲಿ ಮೊದಲ ಎರಡು ಸ್ಥಾನ ಗಳಿಸಿದ ತಂಡಗಳು ನೇರವಾಗಿ ಫೈನಲ್‌ಗೆ ತಲುಪುತ್ತವೆ. ಭಾರತ ತಂಡವು ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಎದುರು ಸೋಲು ಕಂಡಿದೆ. ಈಗ ಅದು ಫೈನಲ್ ಪ್ರವೇಶಿಸಬೇಕಾದರೆ ತನ್ನ ಉಳಿದ 2 ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲಬೇಕಿದೆ. ಒಂದು ವೇಳೆ ಸಣ್ಣ ಅಂತರದಲ್ಲಿ ಗೆದ್ದರೆ ಉಳಿದ ತಂಡಗಳ ಸೋಲು-ಗೆಲುವುಗಳನ್ನು ನೋಡುತ್ತಾ ಅದೃ‍ಷ್ಟ ಪರೀಕ್ಷೆ ಮಾಡಬೇಕಿದೆ. ಭಾರತ ಫೈನಲ್ ತಲುಪಲು ಇರುವ ಸಾಧ್ಯತೆಗಳ ಈ ಕೆಳಗಿನಂತಿವೆ.

ಸಾಧ್ಯತೆ 1

ಭಾರತ ತಂಡವು ಇಂದು ಶ್ರೀಲಂಕಾ ವಿರುದ್ಧ ಮತ್ತು ಸೆಪ್ಟಂಬರ್ 8 ರಂದು ಆಫ್ಘಾನಿಸ್ತಾನ ತಂಡದ ಎದುರು ದೊಡ್ಡ ಅಂತರದಲ್ಲಿ ಗೆಲ್ಲಬೇಕು. ಆನಂತರ ಪಾಕಿಸ್ತಾನವು ಶ್ರೀಲಂಕಾ ತಂಡವನ್ನು ಸೋಲಿಸಿದರೆ ಶ್ರೀಲಂಕಾ ಮತ್ತು ಆಫ್ಘಾನಿಸ್ತಾನ ತಂಡಗಳರೆಡು ತಲಾ ಎರಡು ಸೋಲುಗಳೊಂದಿಗೆ ಟೂರ್ನಿಯಿಂದ ಹೊರಬೀಳುತ್ತವೆ. ಪಾಕಿಸ್ತಾನ ಮತ್ತು ಭಾರತ ಫೈನಲ್ ಪ್ರವೇಶಿಸುತ್ತವೆ. ಒಂದು ವೇಳೆ ಪಾಕಿಸ್ತಾನ ತನ್ನ ಮುಂದಿನ ಎರಡು ಪಂದ್ಯಗಳನ್ನು ಸೋತರೆ ಅದು ಟೂರ್ನಿಯಿಂದ ಹೊರಬೀಳುತ್ತದೆ. ಭಾರತದ ಸಾಧ್ಯತೆ ತೆರೆದುಕೊಳ್ಳುತ್ತದೆ.

ಸಾಧ್ಯತೆ 2

ಶ್ರೀಲಂಕಾ ತಂಡವು ಭಾರತದ ಎದುರು ಸೋತು ಮತ್ತು ಪಾಕಿಸ್ತಾನದ ಎದುರು ಗೆದ್ದರೆ ಆಗ ನೆಟ್ ರನ್ ರೇಟ್ ಲೆಕ್ಕಕ್ಕೆ ಬರುತ್ತದೆ. ಏಕೆಂದರೆ ಆಗ ಪಾಕಿಸ್ತಾನ, ಭಾರತ ಮತ್ತು ಶ್ರೀಲಂಕಾ ಮೂರು ತಂಡಗಳು ಸಹ ತಲಾ ಎರಡೆರಡು ಪಂದ್ಯಗಳನ್ನು ಗೆದ್ದಿರುತ್ತವೆ. ಹಾಗಾಗಿ ಭಾರತವು ಮುಂದಿನ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲಬೇಕಾಗಿದೆ ಮತ್ತು ತನ್ನ ನೆಟ್ ರನ್‌ ರೇಟ್ ಅನ್ನು ಹೆಚ್ಚಿಸಿಕೊಳ್ಳಬೇಕಾಗಿದೆ.

ಸದ್ಯ ಭಾರತದ ನೆಟ್ ರನ್‌ರೇಟ್ -0.126 ಇದೆ. ಶ್ರೀಲಂಕಾ ತಂಡವು +0.589 ಮತ್ತು ಪಾಕಿಸ್ತಾನ ತಂಡವು +0.126 ರನ್ ರೇಟ್ ಹೊಂದಿದೆ. ಆಫ್ಘಾನಿಸ್ತಾನವು -0.589 ನೆಟ್ ರನ್ ರೇಟ್ ಹೊಂದಿದೆ. ಹಾಗಾಗಿ ಅದಕ್ಕೆ ಸಾಧ್ಯತೆಗಳು ಕಡಿಮೆ ಇವೆ.

ಶ್ರೀಲಂಕಾ ತಂಡವು ಸೂಪರ್ 4 ಹಂತದಲ್ಲಿ ಆಫ್ಘಾನಿಸ್ತಾನ ತಂಡದ ಎದುರು ಗೆದ್ದು ವಿಶ್ವಾಸ ಹೆಚ್ಚಿಸಿಕೊಂಡಿದೆ. ಹಾಗಾಗಿ ಇಂದಿನ ಪಂದ್ಯವು ಮಹತ್ವ ಪಡೆದಿದೆ.

ಇದನ್ನೂ ಓದಿ: ಕ್ಯಾಚ್ ಬಿಟ್ಟಿದ್ದಕ್ಕೆ ಅರ್ಶದೀಪ್‌ ವಿರುದ್ಧ ಟ್ರೋಲ್: ಬೆಂಬಲಕ್ಕೆ ನಿಂತ ಹಿರಿಯ ಆಟಗಾರರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...