Homeರಂಜನೆಕ್ರೀಡೆಏಷ್ಯನ್ ಗೇಮ್ಸ್‌: ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ಚಿನ್ನದ ಪದಕ

ಏಷ್ಯನ್ ಗೇಮ್ಸ್‌: ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ಚಿನ್ನದ ಪದಕ

- Advertisement -
- Advertisement -

19ನೇ ಏಷ್ಯನ್ ಕ್ರೀಡಾಕೂಟದಲ್ಲಿ ಮಧ್ಯಮವೇಗಿ ಟೈಟಸ್ ಸಾಧು ಅವರ ಅಮೋಘ ಬೌಲಿಂಗ್ ಬಲದಿಂದ ಭಾರತ ಮಹಿಳಾ ಕ್ರಿಕೆಟ್ ತಂಡವು ಚಿನ್ನದ ಪದಕ ತನ್ನದಾಗಿಸಿಕೊಂಡಿದೆ.

ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಟೈಟಸ್ (6ಕ್ಕೆ3) ದಾಳಿಯ ಬಲದಿಂದ ಭಾರತ ತಂಡವು ಶ್ರೀಲಂಕಾ ಎದುರು 19 ರನ್‌ಗಳಿಂದ ಜಯಿಸಿತು. ಟೈಟಸ್ ಇದೇ 29ರಂದು ಹತ್ತೊಂಬತ್ತು ವರ್ಷದ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ, ಜೂಲನ್ ಗೋಸ್ವಾಮಿ ಅವರ ಅನುಪಸ್ಥಿತಿಯಲ್ಲಿ ಟೈಟಸ್ ಭರವಸೆ ಮೂಡಿಸಿದ್ದಾರೆ.

ಟಾಸ್ ಗೆದ್ದ ಭಾರತ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಎರಡು ಪಂದ್ಯಗಳ ಅಮಾನತು ಶಿಕ್ಷೆ ಮುಗಿಸಿ ಮರಳಿದ ಹರ್ಮನ್‌ ಪ್ರೀತ್ ಕೌರ್ ಈ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದರು.

ಆರಂಭಿಕ ಬ್ಯಾಟರ್ ಸ್ಮೃತಿ ಮಂದಾನ (46 ರನ್) ಮತ್ತು ಜೆಮಿಮಾ ರಾಡ್ರಿಗಸ್ (42 ರನ್) ಅವರ ಉತ್ತಮ ಬ್ಯಾಟಿಂಗ್ ಬಲದಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 116 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 97 ರನ್‌ ಗಳಿಸಿ ಸೋಲಿಗೆ ಶರಣಾಯಿತು. ಮಧ್ಯಮ ಕ್ರಮಾಂಕದ ಬ್ಯಾಟರ್ ಹಾಸಿನಿ ಪೆರೆರಾ (25; 22ಎಸೆತ) ಮತ್ತು ವಿಕಾಶಿ ಡಿಸಿಲ್ವಾ (23; 34ಎಸೆತ) ಅವರ ಹೋರಾಟ ಫಲ ನೀಡಲಿಲ್ಲ.

ಇದನ್ನೂ ಓದಿ: ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಶುಭಾರಂಭ: ನೇಪಾಳದ ವಿರುದ್ಧ ಮಹಿಳಾ ಟೇಬಲ್ ಟೆನಿಸ್ ಪಟುಗಳಿಗೆ ಗೆಲುವು

ಟೈಟಸ್ ಪ್ರಮುಖ ಮೂವರು ಬ್ಯಾಟ‌ರ್‌ಗಳ ವಿಕೆಟ್ ಗಳಿಸಿದರು. ವಿಜಯಪುರದ ರಾಜೇಶ್ವರಿ ಗಾಯಕವಾಡ (20ಕ್ಕೆ 2) ಅವರು ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಪೆಟ್ಟು ನೀಡಿದರು. ದೀಪ್ತಿ ಶರ್ಮಾ, ಪೂಜಾ ವಸ್ತ್ರಕ‌ರ್ ಮತ್ತು ದೇವಿಕಾ ವೈದ್ಯ ತಲಾ ಒಂದು ವಿಕೆಟ್ ಗಳಿಸಿದರು.

ಭಾರತ ತಂಡವು ಕೂಟದ ಆರಂಭದಿಂದಲೂ ಚಿನ್ನ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ ಇಲ್ಲಿಯ ಕ್ರಿಕೆಟ್ ಮೈದಾನ ಮತ್ತು ಪಿಚ್‌ಗಳು ಕಳಪೆಮಟ್ಟದಾಗಿದ್ದವು. ಕಳೆದ ವರ್ಷ ನಡೆದಿದ್ದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ತಂಡವು ಬೆಳ್ಳಿ ಪದಕ ಜಯಿಸಿತ್ತು.

ಸಂಕ್ಷಿಪ್ತ ಸೋರು:

ಭಾರತ:- 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 116 (ಹರ್ಮನ್ ಪ್ರೀತ್ ಕೌರ್ 46, ಜೆಮಿಮಾ ರಾಡ್ರಿಗಸ್ 42)

ಶ್ರೀಲಂಕಾ:- 20 ಓವ‌ರ್‌ಗಳಲ್ಲಿ 8 ವಿಕೆಟ್‌ಗಳಿಗೆ 97 (ಹಸಿನಿ ಪೆರೆರಾ 25, ಟೈಟಸ್ ಸಾಧು 6ಕ್ಕೆ3)

ಫಲಿತಾಂಶ: ಭಾರತ ತಂಡಕ್ಕೆ 19 ರನ್‌ ಗಳ ಜಯ ಮತ್ತು ಚಿನ್ನದ ಪದಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...