Homeಮುಖಪುಟ‘ಬಿಹಾರಿಗಳ ಮೇಲೆ ತಮಿಳುನಾಡಿನಲ್ಲಿ ಹಲ್ಲೆ’ ಎಂದು ಸುಳ್ಳು ಸುದ್ದಿ ಪ್ರಕಟ; ಒಪಿಇಂಡಿಯಾ ಎಡಿಟರ್‌, ಸಿಇಒ ವಿರುದ್ಧ...

‘ಬಿಹಾರಿಗಳ ಮೇಲೆ ತಮಿಳುನಾಡಿನಲ್ಲಿ ಹಲ್ಲೆ’ ಎಂದು ಸುಳ್ಳು ಸುದ್ದಿ ಪ್ರಕಟ; ಒಪಿಇಂಡಿಯಾ ಎಡಿಟರ್‌, ಸಿಇಒ ವಿರುದ್ಧ ಎಫ್‌ಐಆರ್‌

- Advertisement -
- Advertisement -

ಬಿಜೆಪಿಯ ಪ್ರೊಪಗಾಂಡ ಮೀಡಿಯಾ ಎಂದೇ ಖ್ಯಾತವಾಗಿರುವ ‘ಒಪಿ ಇಂಡಿಯಾ ಇಂಡಿಯಾ’ದ ಮುಖ್ಯ ಸಂಪಾದಕಿ ನೂಪುರ್ ಜೆ ಶರ್ಮಾ ಮತ್ತು ವೆಬ್‌ಸೈಟ್‌ನ ಸಿಇಒ ರಾಹುಲ್ ರೋಷನ್ ವಿರುದ್ಧ ಚೆನ್ನೈನ ತಿರುನಿನ್ರವೂರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ತಮಿಳುನಾಡಿನಲ್ಲಿ ಹಿಂದಿ ಮಾತನಾಡುವ, ವಿಶೇಷವಾಗಿ ಬಿಹಾರದ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿ ಕೊಲ್ಲಲಾಗುತ್ತಿದೆ ಎಂದು ‘ಒಪಿ ಇಂಡಿಯಾ’ ಹರಡುತ್ತಿರುವ ಸುಳ್ಳು ಸುದ್ದಿಗಳ ವಿರುದ್ಧ ಪೊಲೀಸರು ಕ್ರಮ ಜರುಗಿಸಿದ್ದಾರೆ.

ಅಂತಹ ದಾಳಿಗಳಿಗೆ ಸಾಕ್ಷಿಗಳೆಂದು ಹರಿಬಿಡಲಾಗಿರುವ ಹಲವಾರು ವೀಡಿಯೊಗಳ ಅಸಲಿ ಸತ್ಯವನ್ನು ಫ್ಯಾಕ್ಟ್‌ಚೆಕ್‌ ವೆಬ್‌ಸೈಟ್‌ ‘ಆಲ್ಟ್ ನ್ಯೂಸ್’ ಬಯಲಿಗೆಳೆದಿದೆ.

ತಮಿಳುನಾಡು ಕಾರ್ಮಿಕ ಕಲ್ಯಾಣ ಮತ್ತು ಕೌಶಲ್ಯ ಅಭಿವೃದ್ಧಿ ಸಂಸ್ಥೆಯು ಈ ವಾರದ ಆರಂಭದಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿ, ಇಂತಹ ದಾಳಿಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಇದಲ್ಲದೆ ಬಿಹಾರ ರಾಜ್ಯ ಸರ್ಕಾರವು ಈ ಕುರಿತು ತನಿಖೆ ಮಾಡಲು ತಂಡವೊಂದನ್ನು ಕಳಿಸಿತ್ತು. ಈ ಆರೋಪಗಳಲ್ಲಿ ಸತ್ಯವಿಲ್ಲ ಎಂಬುದನ್ನು ತಂಡವು ಕಂಡುಕೊಂಡಿದೆ.

ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಸೂರ್ಯಪ್ರಕಾಶ್ ಅವರು ನೀಡಿದ ದೂರಿನ ಆಧಾರದ ಮೇಲೆ ನೂಪುರ್ ಜೆ ಶರ್ಮಾ ಮತ್ತು ಒಪಿ ಇಂಡಿಯಾ ಸಿಇಒ ವಿರುದ್ಧ ಐಪಿಸಿ ಸೆಕ್ಷನ್ 153 ಎ (ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 505 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಕನಿಷ್ಠ 15 ವಲಸೆ ಕಾರ್ಮಿಕರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ ಮತ್ತು ಕೊಲೆಯಾದ ಕಾರ್ಮಿಕರ ಶವಗಳನ್ನು ಬಿಹಾರದ ಹಲವು ಜಿಲ್ಲೆಗಳಿಗೆ ಹಿಂತಿರುಗಿಸಲಾಗುತ್ತಿದೆ ಎಂದು ಒಪಿಇಂಡಿಯಾ ಹೇಳಿಕೊಂಡಿತ್ತು. ಈ ಆರೋಪಗಳನ್ನು ಮಾಡುತ್ತಿರುವ ಬಿಹಾರಿ ಕಾರ್ಮಿಕರೊಂದಿಗೆ ಮಾತನಾಡಿರುವುದಾಗಿ ಒಪಿ ಇಂಡಿಯಾ ಬಿಂಬಿಸಿಕೊಂಡಿತ್ತು. ಇದೇ ರೀತಿಯ ವರದಿಗಳನ್ನು ಪ್ರಕಟಿಸಿರುವ ‘ದೈನಿಕ್ ಭಾಸ್ಕರ್’ ಮಾಧ್ಯಮದ ವರದಿಗಳನ್ನು ಒಪಿಇಂಡಿಯಾ ವೆಬ್‌ಸೈಟ್ ಉಲ್ಲೇಖಿಸಿದೆ.

ತಾಲಿಬಾನಿ ಶೈಲಿಯ ದಾಳಿಯನ್ನು ಬಿಹಾರಿಗಳು ತಮಿಳುನಾಡಿನಲ್ಲಿ ಎದುರಿಸುತ್ತಾರೆ ಎಂದು ಪ್ರಮುಖ ಹಿಂದಿ ದಿನಪತ್ರಿಕೆ ‘ದೈನಿಕ್ ಭಾಸ್ಕರ್‌‌’ ಆರೋಪಿಸಿತ್ತು. ತಮಿಳುನಾಡಿನ ದಕ್ಷಿಣ ಭಾಗದಲ್ಲಿ 15 ಮಂದಿ ಬಿಹಾರಿಗಳಿಗೆ ಜೀವ ಬೆದರಿಕೆ ಇದೆ  ಎಂದು ವ್ಯಕ್ತಿಯೊಬ್ಬರು ಹೇಳಿರುವುದಾಗಿ ವರದಿ ಉಲ್ಲೇಖಿಸಿತ್ತು.

ವರದಿಯೊಂದಿಗೆ ವಿಡಿಯೊ ಲಗತ್ತಿಸಲಾಗಿದ್ದು, ಎರಡು ಗುಂಪಿನ ಪುರುಷರ ನಡುವೆ ವಾಗ್ವಾದಗಳು ನಡೆಯುತ್ತಿರುವುದನ್ನು ಅಲ್ಲಿ ಕಾಣಬಹುದಿತ್ತು. ವರದಿ ಪ್ರಕಟವಾದ ಬಳಿಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಜೊತೆಯಲ್ಲಿ ಕಳವಳ ವ್ಯಕ್ತಪಡಿಸಿವ ಘಟನೆಯೂ ನಡೆದಿದೆ.

ದೈನಿಕ್ ಭಾಸ್ಕರ್‌ ವರದಿಗೆ ಸಂಬಂಧಿಸಿದಂತೆ ಆಲ್ಟ್‌ನ್ಯೂಸ್‌ ವರದಿ ಮಾಡಿದ್ದು, “ವ್ಯಯಕ್ತಿಕ ಅಂದರೆ ವಿವಾಹೇತರ ಸಂಬಂಧದ ಕಾರಣ ನಡೆದಿರುವ ಕೊಲೆಗಳನ್ನು ಬಿಹಾರಿ ಕಾರ್ಮಿಕರ ಕೊಲೆಗೆ ಥಳುಕು ಹಾಕಲಾಗಿದೆ” ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿರಿ: ‘ಹಮ್ ಕಾಗಜ್ ನಹಿ ದಿಖಾಯೇಂಗೆ’: ‘ಸ್ವರಾ ಭಾಸ್ಕರ್‌- ಫಹಾದ್‌’ ಪ್ರೇಮಕತೆ ಬಿಚ್ಚಿಟ್ಟ ವಿನೂತನ ವೆಡ್ಡಿಂಗ್‌ ಕಾರ್ಡ್

ಮುಖ್ಯವಾಗಿ ವೈರಲ್ ಆದ ಐದು ವಿಡಿಯೊಗಳನ್ನು ಫ್ಯಾಕ್ಟ್‌ಚೆಕ್‌ ಮಾಡಿರುವ ಆಲ್ಟ್‌ನ್ಯೂಸ್‌, ಇಲ್ಲಿನ ನಾಲ್ಕು ವಿಡಿಯೊಗಳು ದಾಳಿಯ ಉದ್ದೇಶವನ್ನು ಹೊಂದಿಲ್ಲ. ವಲಸೆ ಕಾರ್ಮಿಕರಿಗೆ ಸಂಬಂಧಪಡದ ಬೇರ್‍ಯಾವುದೋ ಹಳೆಯ ವಿಡಿಯೊಗಳನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ಬಯಲಿಗೆಳೆದಿದೆ.

ಆಲ್ಟ್ ನ್ಯೂಸ್ ಪರಿಶೀಲಿಸಿದ ಎರಡು ವೀಡಿಯೊಗಳು ತಮಿಳುನಾಡಿನ ಹೊರಗೆ ನಡೆದ ಘಟನೆಗಳಿಗೆ ಸಂಬಂಧಿಸಿವೆ. ಐದನೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸೈಲೇಂದ್ರ ಬಾಬು ಅವರು ಹೇಳಿಕೆ ನೀಡಿದ್ದು, “ನಕಲಿ” ಎಂದು ಸ್ಪಷ್ಟಪಡಿಸಿದ್ದಾರೆ.

ಸ್ವತಂತ್ರ ಮಾಧ್ಯಮವಾದ ‘ಆಲ್ಟ್‌ನ್ಯೂಸ್’ ಮಾಡಿರುವ ವರದಿಗಳಿಗೆ ತಮಿಳುನಾಡಿನ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ‘ತಮಿಳುನಾಡಿನ ಕುರಿತು ಹಬ್ಬಿಸಲಾಗುತ್ತಿರುವ ಸುಳ್ಳು ಸುದ್ದಿಗಳಿಂದ ಬೇಸರವಾಗಿತ್ತು. ಆಲ್ಟ್‌ನ್ಯೂಸ್ ಸತ್ಯಗಳನ್ನು ಬಯಲಿಗೆಳೆದು ತಮಿಳು ಜನತೆಯ ಮೇಲಿನ ಅಪವಾದಗಳಿಗೆ ಉತ್ತರ ಕೊಟ್ಟಿದೆ’ ಎಂಬ ಶ್ಲಾಘನೆಯನ್ನು ಟ್ವೀಟರ್‌ನಲ್ಲಿ ವ್ಯಕ್ತಪಡಿಸಲಾಗುತ್ತಿದೆ. ಜೊತೆಗೆ ‘ಆಲ್ಟ್‌ನ್ಯೂಸ್‌’ಗೆ ಸ್ವಯಂಪ್ರೇರಣೆಯಿಂದ ದೇಣಿಗೆಯನ್ನೂ ತಮಿಳುನಾಡಿನ ಜನತೆ ನೀಡಲಾರಂಭಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...